Asianet Suvarna News Asianet Suvarna News

ಭಾರತದಲ್ಲಿ 3ನೇ ಮಂಕಿಪಾಕ್ಸ್ ಪ್ರಕರಣ ದೃಢ, ಕೇರಳದಲ್ಲಿ ಹೈ ಅಲರ್ಟ್!

ಭಾರತದಲ್ಲಿ ಕೋವಿಡ್ ಪ್ರಕರಣ ಏರಿಕೆ ಜೊತೆ ಮಂಕಿಪಾಕ್ಸ್ ಪ್ರಕರಣ ಆತಂಕ ಹೆಚ್ಚಾಗಿದೆ. ಇದೀಗ ಭಾರತದಲ್ಲಿ 3ನೇ ಮಂಕಿಪಾಕ್ಸ್ ಪ್ರಕರಣ ಖಚಿತಗೊಂಡಿದೆ. ಇದೀಗ 3ನೇ ಪ್ರಕರಣವೂ ಕೇರಳದಲ್ಲೇ ಪತ್ತೆಯಾಗಿದೆ.

Kerala reports 3rd monkeypox case health minister announces high alert on state ckm
Author
Bengaluru, First Published Jul 22, 2022, 3:45 PM IST

ಕೇರಳ(ಜು.22):  ಭಾರತದಲ್ಲಿ ಕೋವಿಡ್ ನಿಧಾನಗತಿಯಲ್ಲಿ ಏರಿಕೆಯಾಗುತ್ತಿದೆ. ಇದರೊಂದಿಗೆ ಮಂಕಿಪಾಕ್ಸ್ ಪ್ರಕರಣ ಭಾರತದಲ್ಲಿ ಏರಿಕೆಯತ್ತ ಸಾಗಿದೆ. ಇದೀಗ ಕೇರಳದಲ್ಲಿ 3ನೇ ಮಂಕಿಪಾಕ್ಸ್ ಪ್ರಕರಣ ದೃಢಪಟ್ಟಿದೆ. ಈ ಕುರಿತು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಮಾಹಿತಿ ನೀಡಿದ್ದಾರೆ. ಜುಲೈ ಆರಂಭದಲ್ಲಿ ಯುಎಇನಿಂದ ಕೇರಳಕ್ಕೆ ಆಗಮಿಸಿದ 35 ವರ್ಷದ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ರೋಗ ಲಕ್ಷಣ ಕಾಣಿಸಿಕೊಂಡಿತ್ತು. ಹೀಗಾಗಿ ಆಸ್ಪತ್ರೆ ದಾಖಲಾಗಿದ್ದರು. ಈ ವ್ಯಕ್ತಿಯ ಮಾದರಿ ಸಂಗ್ರಹಿಸಿ ಪರೀಕ್ಷೆಗಾಗಿ ಪುಣೆಗೆ ಕಳುಹಿಸಿಕೊಡಲಾಗಿತ್ತು. ಇದೀಗ ವರದಿ ಬಂದಿದ್ದು, 3ನೇ ಮಂಕಿಪಾಕ್ಸ್ ಪ್ರಕರಣ ಖಚಿತಗೊಂಡಿದೆ. ಕೇರಳದಲ್ಲಿ ಮಂಕಿಪಾಕ್ಸ್ ಪ್ರಕರಣ ಸಂಖ್ಯೆ ಮೂರಕ್ಕೇರಿದೆ. ಇದೀಗ ಕೇರಳದ ಎಲ್ಲಾ ವಿಮಾನ ನಿಲ್ದಾಣದಲ್ಲಿ ವಿದೇಶಗಳಿಂದ ಆಗಮಿಸುವ ಪ್ರಯಾಣಿಕರ ತಪಾಸಣೆ ನಡೆಸಲು ಸರ್ಕಾರ ಸೂಚಿಸಿದೆ. 

ಕೇರಳದ ಮಲಪ್ಪುರಂ ಜಿಲ್ಲೆಯ(Kerala Monkeypox) ವ್ಯಕ್ತಿ ಜುಲೈ 6 ರಂದು ಯುಎಇನಿಂದ ಕೇರಳಕ್ಕೆ ಆಗಮಿಸಿದ್ದರು. ತವರಿಗೆ ಆಗಮಿಸಿದ ಒಂದು ವಾರದಲ್ಲಿ ತೀವ್ರ ಜ್ವರ ಹಾಗೂ ಮಂಕಿಪಾಕ್ಸ್ ರೋಗಲಕ್ಷಣಗಳು(monkeypox symptoms) ಕಾಣಿಸಿಕೊಂಡಿದೆ. ಹೀಗಾಗಿ ಮಂಜೇರಿ ಮೆಡಿಕಲ್ ಕಾಲೇಜು ಆಸ್ಪತ್ರೆ ದಾಖಲಾಗಿದ್ದಾರೆ. ಮಂಕಿಪಾಕ್ಸ್ ಲಕ್ಷಣಗಳ ಕಾರಣ ಪರೀಕ್ಷೆ ನಡೆಸಲಾಗಿತ್ತು. 3ನೇ ಮಂಕಿಪಾಕ್ಸ್ ಪ್ರಕರಣ ಖಚಿತಗೊಳ್ಳುತ್ತಿದ್ದಂತೆ ವೀಣಾ ಜಾರ್ಜ್ (Kerala Health Minister) ಆಸ್ಪತ್ರೆಗೆ ಧಾವಿಸಿದ್ದಾರೆ. ಸೋಂಕಿತನ ಆರೋಗ್ಯ ವಿಚಾರಿಸಿದ್ದಾರೆ. ಸದ್ಯ ಸೋಂಕಿತನ ಆರೋಗ್ಯ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. 

ಇಡೀ ದೇಶಕ್ಕೇ ವ್ಯಾಪಿಸುತ್ತಾ ಮಂಕಿಪಾಕ್ಸ್‌? ICMR ವಿಜ್ಞಾನಿ ಹೇಳಿದ್ದೇನು?

ಯುಎಇನಿಂದ ಕೇರಳಕ್ಕೆ ಆಗಮಿಸಿದ ವಿಮಾನದಲ್ಲಿದ್ದ ಇತರರ ಮಾಹಿತಿ ಕಲೆಹಾಕಲಾಗಿದೆ. ಇದೀಗ ಇತರ ಪ್ರಯಾಣಿಕರ ಮೇಲೆ ನಿಗಾವಹಿಸಲಾಗುತ್ತದೆ. ಜ್ವರ ಸೇರಿದಂತೆ ಯಾವುದೇ ಆರೋಗ್ಯ ಸಮಸ್ಸೆ ಇದ್ದರೆ ತಕ್ಷಣ ಮಾಹಿತಿ ನೀಡಲು ಸೂಚಿಸಲಾಗಿದೆ. ಇಷ್ಟೇ ಅಲ್ಲ ಇತರ ಪ್ರಯಾಣಿಕರ ಮಾದರಿ ಸಂಗ್ರಹಿಸಲು ಸೂಚಿಸಲಾಗಿದೆ. 

ಕೇರಳದಿಂದಲೇ ಸೃಷ್ಟಿಯಾಗುತ್ತಾ ಮಂಕಿಪಾಕ್ಸ್ ಅಲೆ?
ಕೇರಳದಿಂದ ಭಾರತದಲ್ಲಿ ಮಂಕಿ ಪಾಕ್ಸ್ ಅಲೆ(Monkeypox wave) ಸೃಷ್ಟಿಯಾಗುತ್ತಾ ಅನ್ನೋ ಆತಂಕ ಎದುರಾಗಿದೆ. ಸದ್ಯ ಪತ್ತೆಯಾಗಿರುವ ಮೂರು ಪ್ರಕರಣಗಳು ಕೇರಳದಲ್ಲೇ ಪತ್ತೆಯಾಗಿದೆ. ಇದರಿಂದ ದೇಶದ ಇತರ ಭಾಗಗಕ್ಕೂ ಮಂಕಿಪಾಕ್ಸ್ ಪ್ರಕರಣ ಹರಡುವ ಸಾಧ್ಯತೆ ಹೆಚ್ಚಾಗಿದೆ.  ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ದೇಶದ ಮೊದಲ ಮಂಕಿಪಾಕ್ಸ್‌ ಪ್ರಕರಣ ಪತ್ತೆಯಾಗಿತ್ತು. ಹೀಗಾಗಿ ಅಲ್ಲಿಗೆ ಕೇಂದ್ರ ಆರೋಗ್ಯ ಸಚಿವಾಲಯ ತಂಡವೊಂದನ್ನು ರವಾನಿಸಿ, ಕೇರಳದ ಆರೋಗ್ಯ ಅಧಿಕಾರಿಗಳಿಗೆ ಸಹಕಾರ ನೀಡಲು ಸೂಚಿಸಿತ್ತು.

ಎರಡನೇ ಪ್ರಕರಣ ಕೇರಳದ ಕಣ್ಣೂರು ಜಿಲ್ಲೆಯ 31 ವರ್ಷದ ವ್ಯಕ್ತಿ ಸೋಂಕಿತನಾಗಿದ್ದು, ಆತನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ದುಬೈನಿಂದ ಜು.13ರಂದು ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ ಈ ವ್ಯಕ್ತಿಗೆ ನಂತರ ಸೋಂಕಿನ ಲಕ್ಷಣ ಕಂಡುಬಂದಿದ್ದವು. ಹೀಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆತನ ಮಾದರಿಯನ್ನು ಪುಣೆಯ ವೈರಾಣು ಸಂಸ್ಥೆಗೆ ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಅಲ್ಲಿ ಮಂಕಿಪಾಕ್ಸ್‌ ದೃಢಪಟ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದುಬೈನಿಂದ ಆಗಮಿಸಿದ ಈ ವಿಮಾನದಲ್ಲಿ 191 ಪ್ರಯಾಣಿಕರಿದ್ದರು. ಇದರಲ್ಲಿ ದ.ಕ ಜಿಲ್ಲೆಯ 15, ಉಡುಪಿಯ 6, ಕಾಸರಗೋಡು 13, ಕಣ್ಣೂರು ಒಬ್ಬರು ಪ್ರಯಾಣಿಕರು ಇದ್ದರು.

ಮಂಕಿಪಾಕ್ಸ್‌ ಪತ್ತೆಗೆ ಏರ್ಪೋರ್ಟ್‌, ಬಂದರಲ್ಲೇ ಪರೀಕ್ಷೆ ನಡೆಸಿ: ತಜ್ಞರು

ಪ್ರಾಣಿಗಳಿಂದ ಮಾನವರಿಗೆ ಹಬ್ಬುವ ವೈರಸ್‌ನಿಂದ ಮಂಕಿಪಾಕ್ಸ್‌ ಹರಡುತ್ತದೆ. ಸಿಡುಬಿನ (ಸ್ಮಾಲ್‌ಪಾಕ್ಸ್‌) ಲಕ್ಷಣಗಳನ್ನೇ ಇದು ಹೊಂದಿರುತ್ತದೆ. ಆದರೆ ಇದು ಹೆಚ್ಚು ಅಪಾಯಕಾರಿಯಲ್ಲ. ದೇಶದಲ್ಲಿ 1980ರಲ್ಲಿ ಸಿಡುಬು ನಿರ್ಮೂಲನೆಯಾಗಿತ್ತು. ಆನಂತರ ಸಿಡುಬು ನಿಗ್ರಹ ಲಸಿಕಾ ಅಭಿಯಾನ ಕೂಡ ಸ್ಥಗಿತಗೊಂಡಿತ್ತು. ಇದೀಗ ಮಂಕಿಪಾಕ್ಸ್‌ ತಲೆಬೇನೆ ಆರಂಭವಾಗಿದೆ.

Follow Us:
Download App:
  • android
  • ios