ಇಡೀ ದೇಶಕ್ಕೇ ವ್ಯಾಪಿಸುತ್ತಾ ಮಂಕಿಪಾಕ್ಸ್‌? ICMR ವಿಜ್ಞಾನಿ ಹೇಳಿದ್ದೇನು?

ಕೇರಳದಲ್ಲಿ ಮಂಗನ ಜ್ವರದ ಎರಡು ಪ್ರಕರಣಗಳು ದೃಢಪಟ್ಟ ಬೆನ್ನಲ್ಲೇ ಕೇಂದ್ರ ಸರ್ಕಾರ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದೆ. ವಿಮಾನ ನಿಲ್ದಾಣಗಳು ಮತ್ತು ಬಂದರುಗಳಲ್ಲಿ ಹೊರಗಿನಿಂದ ಬರುವ ಪ್ರಯಾಣಿಕರಿಗೆ ತೀವ್ರ ಆರೋಗ್ಯ ತಪಾಸಣೆಗೆ ಆದೇಶಿಸಲಾಗಿದೆ. ಏತನ್ಮಧ್ಯೆ, ಪ್ರಸ್ತುತ ಪರಿಸ್ಥಿತಿ ನಿಯಂತ್ರಣದಲ್ಲಿದೆ ಮತ್ತು ಈ ಬಗ್ಗೆ ಭಯಪಡುವ ಅಗತ್ಯವಿಲ್ಲ ಎಂದು ಐಸಿಎಂಆರ್‌ನ ಹಿರಿಯ ವಿಜ್ಞಾನಿ ಪ್ರಜ್ಞಾ ಯಾದವ್ ಹೇಳಿದ್ದಾರೆ.

Second case of monkeypox  Detected is there a risk of an outbreak in India what ICMR says pod

ತಿರುವನಂತಪುರಂ(ಜು.19): ಕೇರಳದಲ್ಲಿ ಮಂಗನ ಕಾಯಿಲೆಯ ಎರಡು ಪ್ರಕರಣಗಳ ನಂತರ, ದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಇನ್ನು ಈ ರೋಗದ ಬಗ್ಗೆ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡಿದ್ದು, ರಾಜ್ಯಗಳಿಗೂ ಈ ಬಗ್ಗೆ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದೆ. ಇದಲ್ಲದೆ, ವಿಮಾನ ನಿಲ್ದಾಣಗಳು ಮತ್ತು ಬಂದರುಗಳಲ್ಲಿ ಹೊರಗಿನಿಂದ ಬರುವ ಪ್ರಯಾಣಿಕರಿಗೆ ತೀವ್ರ ಆರೋಗ್ಯ ತಪಾಸಣೆಗೆ ಆದೇಶಿಸಲಾಗಿದೆ. ಈ ಮಧ್ಯೆ, ಈ ರೋಗವು ಇಡೀ ದೇಶದಲ್ಲಿ ಕೊರೊನಾ ರೀತಿಯಲ್ಲಿ ಹರಡುತ್ತದೆಯೇ ಎಂಬ ಭಯ ಜನರಲ್ಲಿ ಇದೆ. ಪುಣೆ ಮೂಲದ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್, ಅಂದರೆ ಐಸಿಎಂಆರ್ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯ ಹಿರಿಯ ವಿಜ್ಞಾನಿ ಡಾ.ಪ್ರಜ್ಞಾ ಯಾದವ್, ಪ್ರಸ್ತುತ ಈ ರೋಗವು ದೇಶದಲ್ಲಿ ನಿಯಂತ್ರಣದಲ್ಲಿದೆ ಮತ್ತು ಈ ಬಗ್ಗೆ ಭಯಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಇಲ್ಲಿಯವರೆಗೆ ಎರಡು ಪ್ರಕರಣಗಳು ದೃಢಪಟ್ಟಿವೆ ಎಂದು ಡಾ.ಪ್ರಜ್ಞಾ ಯಾದವ್ ಹೇಳಿದ್ದಾರೆ. ಸರ್ಕಾರ ಈಗಾಗಲೇ ಎಚ್ಚೆತ್ತುಕೊಂಡಿದ್ದು, ಎಲ್ಲಾ ರೀತಿಯ ಚಟುವಟಿಕೆಗಳ ಮೇಲೆ ನಿಗಾ ಇಡಲಾಗಿದೆ.

ಪರಿಸ್ಥಿತಿ ನಿಯಂತ್ರಣದಲ್ಲಿದೆ

ಕೊರೋನಾ ಸಾಂಕ್ರಾಮಿಕ ಸಮಯದಲ್ಲಿ ವ್ಯವಸ್ಥೆಯು ಬಹಳಷ್ಟು ಕಲಿತಿದೆ ಎಂದು ಡಾ ಪ್ರಜ್ಞಾ ಯಾದವ್ ಹೇಳಿದ್ದಾರೆ. ಸಾಮಾನ್ಯ ಜನರು ಸಹ ಈಗ ಸಾಕಷ್ಟು ತರಬೇತಿ ಪಡೆದಿದ್ದಾರೆ ಮತ್ತು ವೈರಸ್ ಮಾದರಿಗಳು ಮತ್ತು ರೋಗಿಗಳನ್ನು ಹೇಗೆ ನಿರ್ವಹಿಸಬೇಕೆಂದು ಅವರಿಗೆ ತಿಳಿದಿದೆ. ವಿಶ್ವದಲ್ಲೇ ಮೊಟ್ಟಮೊದಲ ಬಾರಿಗೆ ಮಂಗನ ಕಾಯಿಲೆ ಬೆಳಕಿಗೆ ಬಂದಿದ್ದರಿಂದ ಸರಕಾರ ಕಣ್ತೆರೆದಿದೆ ಎಂದರು. ಈ ಸಂಬಂಧ ಕೇಂದ್ರ ಆರೋಗ್ಯ ಸಚಿವಾಲಯ ಪತ್ರ ಬರೆದು ಎಲ್ಲ ರಾಜ್ಯಗಳಿಗೆ ಮಾಹಿತಿ ನೀಡಿದೆ. ಅಂದಿನಿಂದ, ಇದಕ್ಕಾಗಿ ರಾಜ್ಯಗಳಲ್ಲಿ ಪ್ರತ್ಯೇಕ ವಾರ್ಡ್‌ಗಳನ್ನು ಸಹ ಮಾಡಲಾಗಿದೆ. ಹಾಗಾಗಿ ಗಾಬರಿಯಾಗುವ ಅಗತ್ಯವಿಲ್ಲ. ಎರಡು ಪ್ರಕರಣಗಳ ಹೊರತಾಗಿಯೂ, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದಿದ್ದಾರೆ.

ಜುಲೈ 14 ರಂದು ಕೇರಳದಲ್ಲಿ ಮೊದಲ ಪ್ರಕರಣ

ಜುಲೈ 14 ರಂದು ಕೇರಳದಲ್ಲಿ ದೇಶದ ಮೊದಲ ಮಂಗನ ಕಾಯಿಲೆ ಪ್ರಕರಣ ದಾಖಲಾಗಿತ್ತು. ವ್ಯಕ್ತಿ ಯುಎಇಯಿಂದ ಹಿಂದಿರುಗಿದ್ದು, ವೈರಸ್ ಸೋಂಕಿಗೆ ಒಳಗಾಗಿರುವುದು ಕಂಡುಬಂದಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಮಂಕಿಪಾಕ್ಸ್ ಝೂನೊಸಿಸ್ ವೈರಲ್ (ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ವೈರಸ್) ಸಿಡುಬಿನಂತೆಯೇ ರೋಗಲಕ್ಷಣಗಳನ್ನು ಹೊಂದಿದೆ.ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ವಿಶ್ವದಾದ್ಯಂತ 63 ದೇಶಗಳಲ್ಲಿ ಮಂಕಿಪಾಕ್ಸ್ ವೈರಸ್ ದೃಢಪಟ್ಟಿದೆ. . ಜುಲೈ 12 ರ ಹೊತ್ತಿಗೆ, ಈ 63 ದೇಶಗಳಲ್ಲಿ 9,200 ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿವೆ. ವೇಗವಾಗಿ ಹೆಚ್ಚುತ್ತಿರುವ ಪ್ರಕರಣಗಳಿಂದ ಜಗತ್ತು ತೊಂದರೆಗೀಡಾಗಿದೆ.

Latest Videos
Follow Us:
Download App:
  • android
  • ios