Asianet Suvarna News Asianet Suvarna News

ರಸ್ತೆ ಬದಿಯ ಸ್ಟಾಲ್‌ಗೆ ಭೇಟಿ ನೀಡಿ ಬೃಹತ್ ಸಾರಂಗ: ಅಪರೂಪದ ದೃಶ್ಯ ಸೆರೆ

ಸಾರಂಗವೊಂದು ಕಾಡಿನ ಮಧ್ಯೆ ರಸ್ತೆ ಬದಿ ಇರುವ ಸಣ್ಣದಾದ ಅಂಗಡಿಯೊಂದಕ್ಕೆ ಬಂದು ಸುತ್ತಮುತ್ತ ಕುತೂಹಲದಿಂದ ವೀಕ್ಷಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

Kerala mejestic sambar deer visits roadside stall watch rare scene of wildlife akb
Author
First Published Nov 21, 2022, 3:54 PM IST

ಕೇರಳ: ಸಾರಂಗವೊಂದು ಕಾಡಿನ ಮಧ್ಯೆ ರಸ್ತೆ ಬದಿ ಇರುವ ಸಣ್ಣದಾದ ಅಂಗಡಿಯೊಂದಕ್ಕೆ ಬಂದು ಸುತ್ತಮುತ್ತ ಕುತೂಹಲದಿಂದ ವೀಕ್ಷಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಉದ್ಯಮಿ ಆನಂದ್ ಮಹೀಂದ್ರಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. 

ಅಂದಹಾಗೆ ಮೂಲತಃ ಈ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆ (IFS) ಅಧಿಕಾರಿ ಸಮರ್ಥ್ ಗೌಡ ಪೋಸ್ಟ್ ಮಾಡಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ಪ್ರಾಣಿಗಳು ಹಾಗೂ ಮಾನವ ಸಂಘರ್ಷದ (Human Wildlife conflict)ಬಗ್ಗೆ ಚರ್ಚೆ ಸೃಷ್ಟಿ ಮಾಡಿದೆ. ಈ ವೈರಲ್ ವಿಡಿಯೋದಲ್ಲಿ ಸಧೃಡ ಕಾಯದ ಸಾರಂಗವೊಂದು ಕಾಡಿನ ನಡುವಿನ ರಸ್ತೆ ಸಮೀಪವಿರುವ ಅಂಗಡಿಯೊಂದರ ಬಳಿ ಬಂದು ಅಂಗಡಿಯವರು ಏನಾದರೂ ತಿನ್ನಲು ಕೊಡುವರೋ ಎಂದು ನೋಡುತ್ತಾ ನಿಂತಿದೆ. ಅಲ್ಲಿದ್ದ ವೃದ್ಧರೊಬ್ಬರು ಅದಕ್ಕೆ ಆಹಾರ ನೀಡಿದರೆ ಮತ್ತೆ ಕೆಲ ಯುವಕರು ಚಹಾದ ಕಪ್ ನೀಡಿದ್ದಾರೆ. ವೃದ್ಧ ನೀಡಿದ ಆಹಾರವನ್ನು ತಿಂದ ಸಾರಂಗ ಇವರು ನೀಡಿದ ಟೀ ಕಪ್‌ನ್ನು ಒಮ್ಮೆ ಮೂಸಿನೋಡಿ ಸುಮ್ಮನಾಗಿದೆ. 

ಈ ವಿಡಿಯೋವನ್ನು ಮೊದಲಿಗೆ ಶೇರ್ ಮಾಡಿರುವ ಸಮರ್ಥ್‌ಗೌಡ, ಈ ಸಾರಂಗ (Samber Deer) ಸ್ಥಳೀಯ ಹೊಟೇಲ್‌ಗೆ ಭೇಟಿ ನೀಡಿದರೆ ಅವರೇನು ಆಹಾರ ಕೊಡಬಹುದು. ಕಾಡುಪ್ರಾಣಿಗಳು ಮಾನವ ವಾಸಸ್ಥಾನಕ್ಕೆ ಒಗ್ಗಿಕೊಳ್ಳುವುದು ಒಳ್ಳೆಯ ಲಕ್ಷಣ ಅಲ್ಲ ಎಂದು ಬರೆದುಕೊಂಡಿದ್ದಾರೆ.

ಯಾರದೋ ಶ್ರಮ ಯಾರದೋ ಪಾಲು... ಎರಡು ಚಿರತೆಗಳ ಅಪರೂಪದ ದೃಶ್ಯ ವೈರಲ್

ಆದರೆ ಇದೇ ವಿಡಿಯೋವನ್ನು ಶೇರ್ ಮಾಡಿಕೊಂಡಿರುವ ಉದ್ಯಮಿ ಆನಂದ್ ಮಹೀಂದ್ರಾ(Anand Mahindra), ಈ ಸಾರಂಗ ಆಹಾರಪ್ರಿಯ ಎನಿಸುತ್ತಿದೆ. ಇದು ದೈನಂದಿನ ಶಾಪಿಂಗ್‌ಗಾಗಿ ಕಾಡಿನಿಂದ ನಾಡಿನತ್ತ ಬರುತ್ತಿದೆ.  ಇದೊಂದು ಶಾಂತಿಯುತವಾದ ಸಹಬಾಳ್ವೆ, ಆದರೆ ಈತ ನೈಸರ್ಗಿಕ ಆಹಾರಕ್ಕಾಗಿ ಪ್ರಯತ್ನಿಸದೇ ಸೋಮಾರಿಯಾಗುತ್ತಾನೆ ಎಂದು ನಾನು ಬಯಸುವುದಿಲ್ಲ ಎಂದು ಆನಂದ್ ಮಹೀಂದ್ರಾ ಬರೆದುಕೊಂಡಿದ್ದಾರೆ. 

ತಬ್ಬಿ ಹಿಡಿದು ಜಿಂಕೆಗೆ ಮುತ್ತಿಕ್ಕಿದ ಪೋರ: ವಿಡಿಯೋ ವೈರಲ್

ಇತ್ತ ಈ ವಿಡಿಯೋ ನೋಡಿದ ನೆಟ್ಟಿಗರು ಪ್ರಾಣಿಗಳು ಹಾಗೂ ಮಾನವ ಸಂಘರ್ಷದ ಬಗ್ಗೆ ಚರ್ಚೆ ಶುರು ಮಾಡಿದ್ದು, ಒಮ್ಮೆ ಪ್ರಾಣಿಗಳಿಗೆ ಹೀಗೆ ಆಹಾರ ಕೊಟ್ಟು ಅಭ್ಯಾಸ ಮಾಡಿದರೆ ಅವುಗಳು ಮಾನವ ಪ್ರಾಬಲ್ಯವಿರುವ ಪ್ರದೇಶಕ್ಕೆ ಆಗಾಗ ಭೇಟಿ ನೀಡುತ್ತವೆ. ಕಾಡುಪ್ರಾಣಿಗಳನ್ನು ಅವುಗಳ ನೈಸರ್ಗಿಕ ವಾಸಸ್ಥಾನದಲ್ಲಿ ನೆಮ್ಮದಿಯಾಗಿ ಬದುಕಲು ಬಿಡೋಣ ಎಂದು ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುರೇಂದ್ರ ಮೆಹ್ರಾ (Surender Mehra) ಎಂಬುವವರು ಹೇಳಿದ್ದಾರೆ.

ಜಿಂಕೆ ಮರಿಯ ಕೊಂಬಿನಲ್ಲಿ ಸಿಲುಕಿದ್ದ ಗಿಡ ಕಿತ್ತೆಸೆದ ಜಿರಾಫೆ : ವಿಡಿಯೋ ವೈರಲ್

Follow Us:
Download App:
  • android
  • ios