ಚಲಿಸುತ್ತಿರುವ ರೈಲಿನಲ್ಲಿ ದುಷ್ಕರ್ಮಿಯೋರ್ವ ಪ್ರಯಾಣಿಕನೋರ್ವನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದು, ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. 8ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ತಿರುವನಂತಪುರ: ಚಲಿಸುತ್ತಿರುವ ರೈಲಿನಲ್ಲಿ ದುಷ್ಕರ್ಮಿಯೋರ್ವ ಪ್ರಯಾಣಿಕನೋರ್ವನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದು, ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. 8ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಭಾನುವಾರ ರಾತ್ರಿ 10 ಗಂಟೆ ಸುಮಾರಿಗೆ ಚಲಿಸುತ್ತಿದ್ದ ರೈಲಿನಲ್ಲಿ ಈ ಘಟನೆ ನಡೆದಿದೆ. ಕೋಝಿಕೋಡ್‌ ನಗರವನ್ನು ದಾಟಿ ರೈಲು ಕೊರಪುಝ ರೈಲ್ವೆ ಬ್ರಿಡ್ಜ್‌ ತಲುಪಿದಾಗ ಈ ಘಟನೆ ನಡೆದಿದೆ. ಅಲಫುಜ-ಕಣ್ಣೂರು ಎಕ್ಸ್‌ಪ್ರೆಸ್ ರೈಲಿನಲ್ಲಿ ಈ ಅನಾಹುತ ನಡೆದಿದೆ. ಘಟನೆಯ ಬಳಿಕ ಒಂದು ವರ್ಷದ ಮಗು, ಮಹಿಳೆ ಹಾಗೂ ವ್ಯಕ್ತಿಯೊಬ್ಬರು ಆ ರೈಲಿನಿಂದ ನಾಪತ್ತೆಯಾಗಿದ್ದರು. ಇವರ ಶವಗಳು ಈಗ ಇಲ್ಲತ್ತೂರು ರೈಲ್ವೆ ನಿಲ್ದಾಣದ ಸಮೀಪದ ಹಳಿಯಲ್ಲಿ ಪತ್ತೆಯಾಗಿದೆ. ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ರೈಲಿನಿಂದ ಕೆಳಗೆ ಬಿದ್ದಿರಬಹುದು. ಅಥವಾ ರೈಲಿನಿಂದ ಅವರು ಹಾರಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. 

ಆರೋಪಿ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದ್ದು ತನಿಖೆ ನಡೆಯುತ್ತಿದೆ. ಘಟನಾ ಸ್ಥಳಕ್ಕೆ ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದ್ದಾರೆ ಎಂದು ರೈಲ್ವೆ ಪೊಲೀಸ್ ಅಧಿಕಾರಿಗಳು ಸುದ್ದಿಸಂಸ್ಥೆ ಪಿಟಿಐಗೆ ಹೇಳಿದ್ದಾರೆ. ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ ಆರೋಪಿಯ ಲಗೇಜ್‌ನ್ನು ರೈಲಿನಿಂದ ವಶಕ್ಕೆ ಪಡೆಯಲಾಗಿದ್ದು, ಅದರಲ್ಲಿ ಪೆಟ್ರೋಲ್ ಇದ್ದ ಬಾಟಲ್ ಇತ್ತು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. 

ಲೆಲೆಲೈಸಾ ಐಸಾ... ಬೆಂಕಿ ಬಿದ್ದ ರೈಲಿನಿಂದ ಬೋಗಿ ಬೇರ್ಪಡಿಸಿದ ಪ್ರಯಾಣಿಕರು

ಅದರ ಹೊರತಾಗಿ ಬ್ಯಾಗ್‌ನಲ್ಲಿ ಮತ್ತೆ ಯಾವುದೇ ಅಂಶಗಳು ದೊರಕಿಲ್ಲ, ಇದೊಂದು ಭಯೋತ್ಪಾದಕ ಕೃತ್ಯ ಎಂದು ಹೇಳಲು ಸಾಧ್ಯವಿಲ್ಲ ಏಕೆಂದರೆ ಅಂತಹ ಯಾವುದೇ ಮಾಹಿತಿ ಹಾಗೂ ಲಿಂಕ್‌ಗಳು ಪ್ರಸ್ತುತ ಸಿಕ್ಕಿಲ್ಲ ಎಂದು ಅಧಿಕಾರಿ ಹೇಳಿದ್ದಾರೆ. ಹೊತ್ತಿ ಉರಿಯಬಲ್ಲ ದ್ರವ ಅಂಶವನ್ನು ಸಹ ಪ್ರಯಾಣಿಕನ ಮೇಲೆ ದುಷ್ಕರ್ಮಿ ಚೆಲ್ಲಿ ಬೆಂಕಿ ಹಚ್ಚಿದ್ದಾನೆ. ಇದರಿಂದ ಒಟ್ಟು 9 ಪ್ರಯಾಣಿಕರು ಗಾಯಗೊಂಡಿದ್ದಾರೆ. ಅದರಲ್ಲೂ ಕೆಲವರಿಗೆ ಶೇ. 50 ರಷ್ಟು ಸುಟ್ಟಗಾಯಗಳಾಗಿವೆ. ಪ್ರಸ್ತುತ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಮತ್ತೊಬ್ಬ ರೈಲ್ವೆ ಅಧಿಕಾರಿ ಹೇಳಿದ್ದಾರೆ. ಆದರೆ ರೈಲ್ವೆ ಟ್ರಾಕ್‌ನಲ್ಲಿ ಸಿಕ್ಕ ಮೃತದೇಹಗಳಲ್ಲಿ ಯಾವುದೇ ಸುಟ್ಟ ಗಾಯದ ಗುರುತಿಲ್ಲ ಎಂದು ಅವರು ಹೇಳಿದರು. 

ಕಲಬುರಗಿ: ಗೂಡ್ಸ್ ರೈಲಿನಲ್ಲಿ ಬೆಂಕಿ ಅವಘಡ, ತಪ್ಪಿದ ಭಾರೀ ದುರಂತ

Scroll to load tweet…
Scroll to load tweet…