'ಅರೆಬೆತ್ತಲೆ ದೇಹದ ಮೇಲೆ ತನ್ನದೇ ಮಕ್ಕಳಿಂದ ಆರ್ಟ್' ರೆಹಾನಾ ಫಾತಿಮಾ ವಿರುದ್ಧ ಪೋಕ್ಸೋ ಕೇಸ್ ರದ್ದು ಮಾಡಿದ ಹೈಕೋರ್ಟ್!
ಅರೆಬೆತ್ತಲೆ ದೇಹದ ಮೇಲೆ ತನ್ನದೇ ಮಕ್ಕಳು ಚಿತ್ರ ಬಿಡಿಸಿದ್ದನ್ನು ವಿಡಿಯೋ ಮಾಡಿ ಶೇರ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೇರಳದ ಕಾರ್ಯಕರ್ತೆ ರೆಹನಾ ಫಾತಮಾ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು. ಈ ಕುರಿತಾಗಿ ರೆಹನಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಆಕೆಯ ವಿರುದ್ಧದ ಪೋಕ್ಸೋ ಕೇಸ್ ರದ್ದು ಮಾಡುವಂತೆ ತಿಳಿಸಿದೆ.

ಕೊಚ್ಚಿ (ಜೂ.5): ಮಹಿಳೆಯರ ಸೊಂಟಕ್ಕಿಂತ ಮೇಲ್ಬಾಗದ ನಗ್ನತೆಯನ್ನು ನೇರವಾಗಿ ನ್ಯೂಡಿಟಿ ಹಾಗೂ ಅಶ್ಲೀಲ ಎಂದು ಪರಿಗಣನೆ ಮಾಡಬಾರದು ಎಂದು ಹೇಳಿರುವ ಕೇರಳ ಹೈಕೋರ್ಟ್, ಸಾಮಾಜಿಕ ಕಾರ್ಯಕರ್ತೆ ಹಾಗೂ ಮಾಡೆಲ್ ಕೂಡ ಅಗಿರುವ ರೆಹನಾ ಫಾತಿಮಾ ವಿರುದ್ಧ ದಾಖಲಾಗಿರುವ ಪೋಕ್ಸೋ ಕೇಸ್ ರದ್ದು ಮಾಡುವಂತೆ ಹೇಳಿದೆ. ಅದರೊಂದಿಗೆ ಈ ಕೇಸ್‌ನಲ್ಲಿ ಮುಂದೆ ಯಾವುದೇ ವಿಚಾರಣೆಗಳೂ ಇರೋದಿಲ್ಲ ಎಂದು ಹೇಳಿದೆ. ಆ ಮೂಲಕ ಬೆತ್ತಲೆ ದೇಹದ ಮೇಲೆ ತನ್ನದೇ ಮಕ್ಕಳು ಚಿತ್ರ ಬಿಡಿಸಿದ್ದನ್ನು ವಿಡಿಯೋ ಮಾಡಿ ಶೇರ್ ಮಾಡಿಕೊಂಡಿದ್ದ ರೆಹನಾ ಫಾತಿಮಾಗೆ ಕೇಸ್‌ನಿಂದ ನಿರಾಳ ಸಿಕ್ಕಿದೆ. ಮಹಿಳೆಯ ಬೆತ್ತಲೆ ದೇಹದ ಚಿತ್ರಣವನ್ನು ಯಾವಾಗಲೂ ಲೈಂಗಿಕ ಅಥವಾ ಅಶ್ಲೀಲ ಎಂದೇ ಪರಿಗಣಿಸಬಾರದು ಎಂದು ಕೇರಳ ಹೈಕೋರ್ಟ್ ಹೇಳಿದ್ದಲ್ಲದೆ, ಆಕೆಯ ಮೇಲಿನ ಕ್ರಿಮಿನಲ್ ಪ್ರಕರಣದ ದಾಖಲಿಸಬಾರದು ಎಂದು ತಿಳಿಸಿದೆ. ಮಹಿಳೆಯ ದೇಹದ ಕುರಿತ ಹಿಂದಿನವರ ಕಲ್ಪನೆಗಳನ್ನು ಪ್ರಶ್ನಿಸಲು ಮತ್ತು ತನ್ನ ಮಕ್ಕಳಿಗೆ ಸರಿಯಾದ ಲೈಂಗಿಕ ಶಿಕ್ಷಣವನ್ನು ನೀಡಲು ವೀಡಿಯೊವನ್ನು ಮಾಡಲಾಗಿದೆ ಎಂಬ ಮಹಿಳೆಯ ವಿವರಣೆಯನ್ನು ಗಮನಿಸಿದ ಹೈಕೋರ್ಟ್, ವೀಡಿಯೊವನ್ನು ಅಶ್ಲೀಲವೆಂದು ಪರಿಗಣಿಸಲಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಇದರಿಂದಾಗಿ ಆಕೆಯ ವಿರುದ್ಧದ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ, 2012 (ಪೋಕ್ಸೊ), ಮಾಹಿತಿ ತಂತ್ರಜ್ಞಾನ ಕಾಯಿದೆ, ಮಕ್ಕಳ ರಕ್ಷಣೆ ಕಾಯಿದೆ, 2015 (ಜೆಜೆ ಕಾಯಿದೆ), 2000 ರ ಸೆಕ್ಷನ್ 67 ಬಿ (ಡಿ) ಮತ್ತು ಬಾಲಾಪರಾಧಿ ನ್ಯಾಯದ (ಕೇರ್ ಮತ್ತು ಸೆಕ್ಷನ್ 75) ಸೆಕ್ಷನ್ 13, 14 ಮತ್ತು 15 ರ ಅಡಿಯಲ್ಲಿ ಅಪರಾಧಗಳಿಗಾಗಿ ಆಕೆಯನ್ನು ಚಾರ್ಜ್‌ಶೀಟ್ ಮಾಡಲಾಗಿತ್ತು. ಈಗ ಈ ಎಲ್ಲಾ ಕೇಸ್‌ಗಳ ವಿಚಾರಣೆಯಿಂದ ಕೋರ್ಟ್ ಆಕೆಗೆ ಮುಕ್ತಿ ನೀಡಿದೆ. ಕೇರಳ ಪೊಲೀಸರು ರೆಹನಾ ವಿರುದ್ಧ ಪೋಕ್ಸೊ ಮತ್ತು ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ರಹನಾ ಫಾತಿಮಾ ಸಲ್ಲಿಸಿದ್ದ ಅರ್ಜಿಯ ಮೇರೆಗೆ ನ್ಯಾಯಮೂರ್ತಿ ಕೌಸರ್ ಎಡಪ್ಪಗಾಟ್ ಪ್ರಕರಣವನ್ನು ವಜಾಗೊಳಿಸಿದ್ದಾರೆ.
ತಿರುವಲ್ಲಾ ಮತ್ತು ಎರ್ನಾಕುಲಂ ಸೌತ್ ಠಾಣೆಗಳಲ್ಲಿ ರಹಾನಾ ವಿರುದ್ಧ ಬಂದ ದೂರುಗಳ ಆಧಾರದ ಮೇಲೆ ಪ್ರಕರಣ ದಾಖಲಾಗಿತ್ತು. ಮಕ್ಕಳಿಂದ ಅರೆನಗ್ನ ದೇಹದ ಮೇಲೆ ಚಿತ್ರಗಳನ್ನು ಬಿಡಿಸಿಕೊಂಡಿದ್ದಾರೆ ಎನ್ನುವುದು ರಹಾನಾ ವಿರುದ್ಧದ ಪ್ರಕರಣ. ಈ ಪ್ರಕರಣದಲ್ಲಿ ಪೋಕ್ಸೋ ಕೇಸ್ ಅನ್ನು ದಾಖಲಿಸಲಾಗಿತ್ತು. ಲೈಂಗಿಕ ವಿಡಿಯೋಗಳನ್ನು ಹರಡಿದ ಹಿನ್ನೆಲೆಯಲ್ಲಿ ಪೊಲೀಸರು ಐಟಿ ಕಾಯ್ದೆಯ ಸೆಕ್ಷನ್ 67 ಮತ್ತು ಬಾಲಾಪರಾಧಿ ಕಾಯ್ದೆಯ ಸೆಕ್ಷನ್ 75 ರ ಅಡಿಯಲ್ಲಿ ಪ್ರಕರಣ ದಾಖಲು ಮಾಡಿದ್ದರು.
ತನ್ನ ದೇಹವನ್ನೇ ಮಕ್ಕಳಿಗೆ ಚಿತ್ರವನ್ನು ಬಿಡಿಸಲು ಕ್ಯಾನ್‌ವಾಸ್ ಆಗಿ ಮಾಡಿದ್ದರಲ್ಲಿ ನಮಗೆ ಯಾವುದೇ ತಪ್ಪು ಕಾಣುತ್ತಿಲ್ಲ. ಬೆತ್ತಲೆ ದೇಹವನ್ನು ನೋಡುವುದು ಸಾಮಾನ್ಯ ಸಂಗತಿ ಎನ್ನುವ ಅಂಶವನ್ನು ಮಕ್ಕಳಿಗೆ ತಿಳಿಸುವ ನಿಟ್ಟಿನಲ್ಲಿ ಆಕೆ ಈ ರೀತಿ ಮಾಡಿದ್ದಾರೆ. 'ತನ್ನದೇ ದೇಹದ ಸೊಂಟಕ್ಕಿಂತ ಮೇಲಿನ ಭಾಗದಲ್ಲಿ ಚಿತ್ರ ಬಿಡಿಸಲು ಮಕ್ಕಳಿಗೆ ಅನುವು ಮಾಡಿಕೊಟ್ಟಿದ್ದರಲ್ಲಿ ತಾಯಿಯ ತಪ್ಪು ಕಾಣುತ್ತಿಲ್ಲ. ಇದನ್ನು ನ್ಯೂಡಿಟಿ ಅಥವಾ ಲೈಂಗಿಕ ದೃಷ್ಟಿಯಿಂದ ನೋಡಬಾರದು. ಪೋರ್ನ್ ಚಿತ್ರಗಳನ್ನು ಮಾಡಲು ಮಕ್ಕಳನ್ನು ಬಳಸಿಕೊಂಡಿದ್ದಾರೆ ಎಂದು ಹೇಳುವುದೂ ಸರಿಯಲ್ಲ. ಮಹಿಳೆಯರ ದೇಹವನ್ನು ಲೈಂಗಿಕ ದೃಷ್ಟಿಯಿಂದಲೇ ನೋಡುವ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ರೀತಿ ಮಾಡಿದ್ದರಿರಬಹುದು ಎಂದು ಹೇಳಿದೆ.
ಅರೆನಗ್ನ ದೇಹದ ಮೇಲೆ ಮಗನಿಂದ ಚಿತ್ರ ಬರೆಸಿಕೊಂಡ ಅಯ್ಯಪ್ಪ ಹೋರಾಟಗಾತಿ ರೆಹನಾ!
ಸಮಾಜದ ದ್ವಂದ್ವ ನೀತಿಗಳ ಕುರಿತಾಗಿ ಇರುವ ವಿಡಿಯೋ: ಕೇರಳದ ತ್ರಿಶೂರ್‌ನಲ್ಲಿ 'ಪುಲಿಕಲಿ' ಹಬ್ಬಗಳ ಸಂದರ್ಭದಲ್ಲಿ ಪುರುಷರ ಮೇಲೆ ದೇಹವನ್ನು ಚಿತ್ರಿಸುವುದು ಒಂದು ಒಪ್ಪಿತ ಸಂಪ್ರದಾಯವಾಗಿದೆ. ದೇವಾಲಯದಲ್ಲಿ 'ತೆಯ್ಯಂ' ಮತ್ತು ಇತರ ಆಚರಣೆಗಳನ್ನು ನಡೆಸಿದಾಗ, ಪುರುಷ ಕಲಾವಿದರ ದೇಹದ ಮೇಲೆ ಚಿತ್ರಕಲೆ ನಡೆಸಲಾಗುತ್ತದೆ. ಪುರುಷ ದೇಹವನ್ನು ಸಿಕ್ಸ್ ಪ್ಯಾಕ್ ಆಬ್ಸ್, ಬೈಸೆಪ್ಸ್ ಇತ್ಯಾದಿ ರೂಪದಲ್ಲಿ ಪ್ರದರ್ಶಿಸಲಾಗುತ್ತದೆ.ಆಗಾಗ ಪುರುಷರು ಶರ್ಟ್ ಧರಿಸದೆ ತಿರುಗಾಡುವುದನ್ನು ಕಾಣುತ್ತೇವೆ. ಆದರೆ ಈ ಕೃತ್ಯಗಳನ್ನು ಎಂದಿಗೂ ಅಶ್ಲೀಲ ಅಥವಾ ಅಸಭ್ಯವೆಂದು ಪರಿಗಣಿಸಲಾಗುವುದಿಲ್ಲ. ಪುರುಷನ ಅರೆ-ನಗ್ನ ದೇಹವು ಸಾಮಾನ್ಯವಾಗಿದೆ ಮತ್ತು ಲೈಂಗುಕ ದೃಷ್ಟಿಯಲ್ಲಿ ನೋಡಲಾಗುವುದಿಲ್ಲ. ಆದರೆ, ಮಹಿಳೆಯರು ದೇಹವನ್ನು ಅದೇ ರೀತಿಯಲ್ಲಿ ಪರಿಗಣಿಸಲಾಗುವುದಿಲ್ಲ. ಕೆಲವು ಜನರು ಮಹಿಳೆಯ ಬೆತ್ತಲೆ ದೇಹವನ್ನು ಅತಿಯಾದ ಲೈಂಗಿಕತೆ ಅಥವಾ ಕೇವಲ ಬಯಕೆಯ ವಸ್ತು ಎಂದು ಪರಿಗಣಿಸುತ್ತಾರೆ. ಸ್ತ್ರೀ ನಗ್ನತೆಯ ಬಗ್ಗೆ ಮತ್ತೊಂದು ಆಯಾಮದ ದೃಷ್ಟಿಕೋನವಿದೆ. ಅದೇನೆಂದರೆ, ಸ್ತ್ರೀ ನಗ್ನತೆಯು ನಿಷೇಧವಾಗಿದೆ ಏಕೆಂದರೆ ಬೆತ್ತಲೆ ಸ್ತ್ರೀ ದೇಹವು ಕಾಮಪ್ರಚೋದಕ ಉದ್ದೇಶಗಳಿಗಾಗಿ ಮಾತ್ರ. ಸಮಾಜದಲ್ಲಿ ಚಾಲ್ತಿಯಲ್ಲಿರುವ ಈ ದ್ವಂದ್ವ ನೀತಿಯನ್ನು ಬಹಿರಂಗಪಡಿಸುವುದು ಅರ್ಜಿದಾರರ ಉದ್ದೇಶ ಹಾಗಾಗಿಯೇ ವೀಡಿಯೊವನ್ನು ಅಪ್‌ಲೋಡ್ ಮಾಡಿದ್ದಾರೆ ಎಂದು ಕೋರ್ಟ್ ಹೇಳಿದೆ.
ಕಲ್ಲಂಗಡಿ ಹಣ್ಣಿನೊಂದಿಗೆ ಟಾಪ್‌ಲೆಸ್, ಕೆಣಕುತ್ತಿದ್ದ ಫಾತಿಮಾ ಜಾಬ್ ಲೆಸ್!