ಅರೆನಗ್ನ ದೇಹದ ಮೇಲೆ ಮಗನಿಂದ ಚಿತ್ರ ಬರೆಸಿಕೊಂಡ ಅಯ್ಯಪ್ಪ ಹೋರಾಟಗಾತಿ ರೆಹನಾ!
2018ರಲ್ಲಿ ಶಬರಿಮಲೆ ಅಯ್ಯಪ್ಪ ಸನ್ನಿಧಾನ ಪ್ರವೇಶಕ್ಕೆ ಪಟ್ಟು ಹಿಡಿದು ವಿವಾದ ಸೃಷ್ಟಿಸಿದ ರೆಹಾನಾ ಫಾತಿಮಾ ಮತ್ತೆ ಸುದ್ದಿಯಲ್ಲಿದ್ದಾಳೆ. ಪ್ರತಿ ಬಾರಿಯೂ ಬರೀ ವಿವಾದಾತ್ಮಕವಾಗಿಯೇ ಸುದ್ದಿಯಾಗುವ ಈಕೆ ಈ ಬಾರಿ ಮಾಡಿರೋ ಕೆಲಸಕ್ಕೆ ಜನ ಛೀ, ಥೂ ಅಂತ ಉಗಿದಿದ್ದಾರೆ. ಆಕೆಯ ಮೇಲೆ ಪ್ರಕರಣವೂ ದಾಖಲಾಗಿದೆ. ರೆಹಾನಾ ಮಾಡಿದ್ದೇನು..? ಇಲ್ಲಿ ನೋಡಿ.

ಎಲ್ಲರೂ ಮಕ್ಕಳಿಗೆ ಚಿತ್ರ ಮಾಡಲು ಕ್ಯಾನ್ವಾಸ್ ಕೊಟ್ಟರೆ, ರೆಹಾನಾ ಮಾತ್ರ ತನ್ನ ಅರೆ ನಗ್ನ ದೇಹವನ್ನೇ ಅಪ್ರಾಪ್ತ ಮಕ್ಕಳ ಮುಂದೆ ಕ್ಯಾನ್ವಾಸ್‌ನಂತೆ ತೆರೆದಿಟ್ಟಿದ್ದಾಳೆ.

ಮಕ್ಕಳ ಕೈಗೆ ಪೈಂಟ್ ಬ್ರಶ್ ಕೊಟ್ಟು ಚಿತ್ರ ಬಿಡಿಸಿ ಎಂದು ಮಂಚಕ್ಕೊರಗಿದ್ದಾಳೆ. ಇವೆಲ್ಲವನ್ನೂ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿಯೂ ಹಂಚಿಕೊಂಡಿದ್ದಾಳೆ.

ಪ್ರತಿ ಬಾರಿ ಒಂದಲ್ಲ ಒಂದು ವಿವಾದ ಸೃಷ್ಟಿಸುವ ರೆಹಾನಾ ಪ್ರತಿ ಬಾರಿ ಜನರ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ಉಂಟು ಮಾಡುತ್ತಲೇ ಇರುತ್ತಾರೆ. ಈಓ ಬಾರಿ ಅತಿರೇಕಕ್ಕೆ ಹೋಗಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಯಾವ ನಟಿಗೂ ಕಮ್ಮಿ ಇಲ್ಲ ಎಂಬಂತೆ ನಗ್ನ ಫೋಟೋಗಳು, ಟಾಪ್ ಲೆಸ್ ಫೋಟೋಗಳನ್ನು ಶೇರ್ ಮಾಡುವ ಈಕೆ ಈಗ ಮಾಡಿದ ಅವಾಂತರ ಮಾತ್ರ ವಿವಾದ ಸೃಷ್ಟಿಸಿದೆ.

ಕೇರಳದ ಪತ್ತನಂತಿಟ್ಟ ಜಿಲ್ಲೆಯ ತಿರುವಲ್ಲ ಪೊಲೀಸ್ ಠಾಣೆಯಲ್ಲಿ ರೆಹಾನಾ ಫಾತಿಮ ವಿರುದ್ಧ ಐಟಿ ಆ್ಯಕ್ಟ್, ಬಾಲಾಪರಾಧಿ ನ್ಯಾಯ ಕಾಯ್ದೆ,ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಬಿಜೆಪಿ ಒಬಿಸಿ ಮೋರ್ಚಾ ಮುಖಂಡ ಎವಿ ಅರುಣ್ ಪ್ರಕಾಶ್ ರೆಹಾನಾ ವಿರುದ್ಧ ದೂರು ನೀಡಿದ್ದಾರೆ. ಬಾಡಿ & ಪಾಲಿಟಿಕ್ಸ್(ದೇಹ ಮತ್ತು ರಾಜಕೀಯ) ಎಂಬ ತಲೆಬಹರದೊಂದಿಗೆ ರೆಹಾನಾ ಪೋಸ್ಟ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಕೇರಳ ರಾಜ್ಯ ಮಕ್ಕಳ ಹಕ್ಕು ಸಂರಕ್ಷಣಾ ಆಯೋಗ ಮುಂದಿನ 10 ದಿನಗಳೊಳಗಾಗಿ ಘಟನೆ ಸಂಬಂಧ ವರದಿ ನೀಡುವಂತೆ ಪತ್ತನಂತಿಟ್ಟ ಜಿಲ್ಲಾ ಪೊಲೀಸರಿಗೆ ತಿಳಿಸಿದೆ. ಪೋಸ್ಕೋ ಕಾಯ್ದೆ ಸೇರಿದಂತೆ ಮಕ್ಕಳ ಹಕ್ಕು ಬಾಧಿಸುವ ಇತರ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ಆಯೋಗ ಆದೇಶಿಸಿದೆ.

ಮಹಿಳೆಯರಿಗೂ ಶಬರಿಮಲೆ ಪ್ರವೇಶಕ್ಕೆ ಸಮ್ಮತಿಸಿದ್ದ ಸುಪ್ರೀಂ ಕೋರ್ಟ್ ಆದೇಶ ಹೊರಬೀಳುತ್ತಿದ್ದಂತೆ ರೆಹಾನಾ ಶಬರಿಮಲೆ ಪ್ರವೇಶಿಸಲು ಪ್ರಯತ್ನಿಸಿದ್ದಳು. ಈ ಸಂದರ್ಬ ಭಾರೀ ಪ್ರತಿಭಟನೆಗಳೂ ನಡೆದಿದ್ದವು.

ಘಟನೆಗೆ ಸಂಬಂಧಿಸಿ ರೆಹಾನಾಳನ್ನು ಬಂಧಿಸಲಾಗಿತ್ತು. ಆಂತರಿಕ ತನಿಖೆಯೂ ನಡೆದಿತ್ತು.

ಸೋಷಿಯಲ್ ಮೀಡಿಯಾ ಮೂಲಕ ಜನರ ಧಾರ್ಮಿಕ ಭಾವನೆಗೆಳಿಗೆ ಧಕ್ಕೆ ತರುವ ಕಾರಣಕ್ಕೆ 2020 ಮೇಯಲ್ಲಿ ಈಕೆ BSNL ಉದ್ಯೋಗವನ್ನೂ ಕಳೆದುಕೊಂಡಿದ್ದಳು.

ಮಹಿಳಾ ಸ್ತನಗಳನ್ನು ಕಲ್ಲಂಗಡಿಗೆ ಹೋಲಿಸಿ ಮಾತನಾಡಿದ ನಾಯಕನನ್ನು ವಿರೋಧಿಸಿ, ಕಲ್ಲಂಗಡಿ ಹಣ್ಣನ್ನೇ ಎದೆ ಮೇಲೆ ಇಟ್ಟುಕೊಂಡು ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಸೃಷ್ಟಿಸಿದ್ದರು ಈ ಫಾತಿಮಾ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ