ಕಲ್ಲಂಗಡಿ ಹಣ್ಣಿನೊಂದಿಗೆ ಟಾಪ್‌ಲೆಸ್, ಕೆಣಕುತ್ತಿದ್ದ ಫಾತಿಮಾ ಜಾಬ್ ಲೆಸ್!
ನವದೆಹಲಿ(ಮೇ 14) ಕೇರಳದ ಶಬರಿಮೆಲೆ ಅಯ್ಯಪ್ಪಸ್ವಾಮಿ ದೇವಾಲಯ ಪ್ರವೇಶ ಮಾಡಲು ಯತ್ನಿಸಿ ದೊಡ್ಡ ಸುದ್ದಿ ಮಾಡೊಇದ್ದ ರೆಹಾನಾ ಫಾತಿಮಾ ಈಗ ಮತ್ತೆ ಸುದ್ದಿಗೆ ಬಂದಿದ್ದಾರೆ.
ಬಿಎಸ್ ಎನ್ ಎಲ್ ರೆಹನಾ ಅವರನ್ನು ಮನೆಗೆ ಕಳಿಸಿದೆ. ತಮ್ಮ ಸೋಶಿಯಲ್ ಮೀಡಿಯಾ ಪೇಜ್ ಮುಖೇನ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರುತ್ತಿದ್ದ ಫಾತಿಮಾ ಮನೆ ದಾರಿ ಹಿಡಿಯುವಂತೆ ಆಗಿದೆ.
ಬಿಎಸ್ ಎನ್ ಎಲ್ ನಲ್ಲಿ ಫಾತಿಮಾ ಕೆಲಸ ಮಾಡುತ್ತಿದ್ದರು.
ಧಾರ್ಮಿಕ ನಂಬಿಕೆಗೆ ಧಕ್ಕೆ ತರುತ್ತಿದ್ದಾರೆ ಎಂದು ಫಾತಿಮಾ ಮೇಲೆ ಬಿಎಸ್ ಎನ್ ಎಲ್ ಗೆ ನಿರಂತರ ದೂರುಗಳು ಬಂದಿದ್ದವು.
ಶಬರಿಮಲೆ ವಿಚಾರದಲ್ಲಿ ಈ ಹಿಂದೆ ಫಾತಿಮಾ ಬಂಧನಕ್ಕೆ ಒಳಗಾಗಿದ್ದರು .
ಶಬರಿಮಲೆ ವಿಚಾರಕ್ಕೆ ಸಂಬಂಧಿಸಿ ಹಿಂದೆ ಫಾತಿಮಾ ಅವರನ್ನು ಸಸ್ಪೆಂಡ್ ಮಾಡಲಾಗಿತ್ತು.
ಬಿಎಸ್ ಎನ್ ಎಲ್ ಟೆಕ್ನಿಕಲ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು.
2018ರಲ್ಲಿ ಶಬರಿಮಲೆ ಪ್ರವೇಶಕ್ಕೆ ಯತ್ನ ಮಾಡಿದ್ದರು.
ಮಾರಲ್ ಪೊಲೀಸ್ ವಿರುದ್ಧ 2014ರಲ್ಲಿ ಗಂಡನೊಂದಿಗೆ ಸೇರಿ ಹೋರಾಟ ಮಾಡಿದ್ದರು.
ಮಹಿಳೆಯರ ಸ್ತನಗಳು ಕಲ್ಲಂಗಡಿ ಹಣ್ಣು ಎಂದು ಪ್ರೋಫೆಸರ್ ಒಬ್ಬರು ನೀಡಿದ್ದ ಹೇಳಿಕೆ ಖಂಡಿಸಿ 2018ರಲ್ಲಿ ಟಾಪ್ ಲೆಸ್ ಫೋಟೋ ಶೇರ್ ಮಾಡಿ ಸುದ್ದಿ ಮಾಡಿದ್ದರು.
ಇದೀಗ ಬಿಎಸ್ ಎನ್ ಎಲ್ ಅವರನ್ನು ಮನೆಗೆ ಕಳಿಸಿದೆ