Asianet Suvarna News Asianet Suvarna News

ರಾಮ-ಲಕ್ಷ್ಮಣರಿಗೆ ಸೀತೆಯಿಂದ ಮಾಂಸದಡುಗೆ: ವಿವಾದ ಸೃಷ್ಟಿಸಿದ ಕೇರಳ ಸಿಪಿಐ ಶಾಸಕನ ಪೋಸ್ಟ್

ವನವಾಸದ ವೇಳೆ ರಾಮ-ಲಕ್ಷ್ಮಣರಿಗೆ ಸೀತಾಮಾತೆ ಪರೋಟ ಮತ್ತು ಮಾಂಸದಡುಗೆ ಮಾಡಿ ಉಣಬಡಿಸುತ್ತಿದ್ದಳು ಎಂದು ಕೇರಳ ಸಿಪಿಐ ಶಾಸಕ ಬಾಲಚಂದ್ರನ್ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿ ವಿವಾದ ಸೃಷ್ಟಿಸಿದ್ದಾರೆ. ಬಾಲಚಂದ್ರನ್ ಪೋಸ್ಟ್ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.

Kerala CPI MLA Balachandran has created a controversy by posting on Facebook that Godess Sita used to cook meat for Rama and Lakshmana during their Vanvas akb
Author
First Published Jan 26, 2024, 9:29 AM IST

ತ್ರಿಶೂ‌ರ್: ವನವಾಸದ ವೇಳೆ ರಾಮ-ಲಕ್ಷ್ಮಣರಿಗೆ ಸೀತಾಮಾತೆ ಪರೋಟ ಮತ್ತು ಮಾಂಸದಡುಗೆ ಮಾಡಿ ಉಣಬಡಿಸುತ್ತಿದ್ದಳು ಎಂದು ಕೇರಳ ಸಿಪಿಐ ಶಾಸಕ ಬಾಲಚಂದ್ರನ್ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿ ವಿವಾದ ಸೃಷ್ಟಿಸಿದ್ದಾರೆ. ಬಾಲಚಂದ್ರನ್ ಪೋಸ್ಟ್ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಕೇರಳ ಬಿಜೆಪಿ ಘಟಕ, ಕಮ್ಯುನಿಸ್ಟರು ಮಾತ್ರವೇ ಈ ರೀತಿ ಕೋಟ್ಯಂತರ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ತುಳಿಯಲು ಸಾಧ್ಯವಿದೆ. ಅವರು ಹಾಕಿರುವ ಪೋಸ್ಟ್ ಅಸಂಖ್ಯಾತ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ಯುಂಟಾದ ಹಿನ್ನೆಲೆಯಲ್ಲಿ ಅವರ ವಿರುದ್ದ ಪ್ರಕರಣ ದಾಖಲಿಸುತ್ತೇವೆ ಎಂದು ತಿಳಿಸಿದೆ. 

ವಿವಾದ ಭುಗಿಲೇಳುತ್ತಿದ್ದಂತೆ ಶಾಸಕ ಬಾಲಚಂದ್ರನ್ ಕ್ಷಮೆಯಾಚಿಸಿದ್ದು, ನಾನು ಕೇಳಲ್ಪಟ್ಟ ರಾಮಾಯಣದ ಕತೆಯನ್ನು ನಾನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದೇನೆ. ಇದರಿಂದಾಗಿ ರಾಮಭಕ್ತರಿಗೆ ನೋವುಂಟಾಗಿದ್ದರ ಕುರಿತು ಅವರಲ್ಲಿ ಕ್ಷಮೆಯಾಚಿಸುತ್ತೇನೆ ಎಂದು ತಿಳಿಸಿ ಪೋಸ್ಟ್ ಡಿಲೀಟ್ ಮಾಡಿದ್ದಾರೆ.

ಗುರುವಾಯೂರು ದೇವಸ್ಥಾನಕ್ಕೆ ಮೋದಿ ಭೇಟಿ, ಬಿಜೆಪಿ ನಾಯಕ ನಟ ಸುರೇಶ್‌ ಗೋಪಿ ಪುತ್ರಿ ಮದುವೆಯಲ್ಲಿ ಭಾಗಿ!

ಒಂದೂವರೆ ನಿಮಿಷದಲ್ಲಿ ಸರ್ಕಾರಿ ಭಾಷಣ ಓದಿ ತೆರಳಿದ ಕೇರಳ ರಾಜ್ಯಪಾಲ

ತಿರುವನಂತಪುರ: ಕೇರಳ ವಿಧಾನಸಭೆಯ ಬಜೆಟ್‌ ಅಧಿವೇಶನದ ಮೊದಲ ದಿನವಾದ ಗುರುವಾರ ಅಪರೂಪದ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ. ವಿಧಾನಸಭೆಯ ಮೊದಲ ದಿನ ಸರ್ಕಾರ ಸಿದ್ಧಪಡಿಸಿದ ಭಾಷಣ ಓದುವ ಸಂಪ್ರದಾಯವನ್ನು ರಾಜ್ಯಪಾಲ ಆರಿಫ್ ಮೊಹಮ್ಮದ್‌ ಖಾನ್‌ ಕೇವಲ ಒಂದೂವರೆ ನಿಮಿಷದಲ್ಲಿ ಮುಗಿಸಿ ತೆರಳಿದ್ದಾರೆ.

ರಾಮಭಕ್ತಿಯ ವಿಡಿಯೋ ಮಾಡಿದ್ದಕ್ಕೆ ಖ್ಯಾತ ಗಾಯಕಿ ಕೆಎಸ್‌ ಚಿತ್ರಾ ವಿರುದ್ಧ ಎಡಪಂಥೀಯರ ಸೈಬರ್‌ ದಾಳಿ!

ಬೆಳಗ್ಗೆ 9 ಗಂಟೆಗೆ ವಿಧಾನಸಭೆಗೆ ಬಂದ ರಾಜ್ಯಪಾಲರು, 9.02ಕ್ಕೆ ಭಾಷಣ ಓದಲು ಆರಂಭಿಸಿ 9.04ಕ್ಕೆ ಮೊದಲೇ ಭಾಷಣ ಮುಗಿಸಿ ತೆರಳಿದರು. ಸರ್ಕಾರ ಸಿದ್ಧಪಡಿಸಿದ 62 ಪುಟಗಳ ಭಾಷಣದ ಮೊದಲ ಮತ್ತು ಕೊನೆಯ ಪ್ಯಾರಾವನ್ನು ಮಾತ್ರವೇ ಅವರು ಓದಿದರು. ರಾಜ್ಯದಲ್ಲಿ ಆಡಳಿತಾರೂಢ ಎಲ್‌ಡಿಎಫ್‌ ಮತ್ತು ರಾಜ್ಯಪಾಲರ ನಡುವೆ ಹಲವು ಸಮಯದಿಂದ ಸಂಘರ್ಷ ನಡೆಯುತ್ತಿದ್ದು, ಗುರುವಾರದ ಘಟನೆಯೊಂದಿಗೆ ಅದು ಮತ್ತಷ್ಟು ತೀವ್ರಗೊಂಡಿದೆ.

'ಕೇರಳ ತಾಲಿಬಾನ್‌ ಆಗೋಕೆ ಬಿಡೋದಿಲ್ಲ..' ಕೆಎಸ್‌ ಚಿತ್ರಾ ಬೆಂಬಲಿಸಿದ ಕೇಂದ್ರ ಸಚಿವ

Follow Us:
Download App:
  • android
  • ios