ಕೇರಳದಲ್ಲಿ ಹೆಲ್ಮೆಟ್ ಇಲ್ಲದೆ ಸಿಕ್ಕಿಬಿದ್ದ ಸಂಗೀತಗಾರನಿಗೆ ಟ್ರಾಫಿಕ್ ಪೊಲೀಸ್ ಅನಿರೀಕ್ಷಿತವಾಗಿ ಮೃದಂಗ ನುಡಿಸಿ ಸಾಥ್ ನೀಡಿದ್ದಾರೆ. ಈ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇಂದಿನ ವೇಗದ ಜಗತ್ತಿನಲ್ಲಿ, ನೆಮ್ಮದಿಯ ಕ್ಷಣಗಳನ್ನು ಕಂಡುಕೊಳ್ಳುವುದೇ ಒಂದು ಹೊರಾಟ. ಅದೃಷ್ಟವಶಾತ್, ಇಂಟರ್ನೆಟ್ ಕೆಲವು ಸಾಂತ್ವನ ಮತ್ತು ವಿಶ್ರಾಂತಿಯ ಕ್ಷಣಗಳನ್ನು ತರುತ್ತದೆ. ಇಂತಹ ಹೃದಯಸ್ಪರ್ಶಿ ಕ್ಲಿಪ್‌ಗಳು ಸಾಕಷಟು ವೈರಲ್ ಕೂಡ ಆಗುತ್ತವೆ. ಇತ್ತೀಚೆಗೆ ಕೇರಳ ಮೂಲದ ಇಂಥದ್ದೇ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸಂತೋಷಭರಿತ ಕ್ಷಣದಲ್ಲಿ, ಕೇರಳಲ್ಲಿ ದಿನನಿತ್ಯದ ಸಂಚಾರ ತಪಾಸಣೆ ಅನಿರೀಕ್ಷಿತವಾಗಿ ಸಂಗೀತ ಸಮಯವಾಗಿ ಬದಲಾಯಿತು. ಹೆಲ್ಮೆಟ್ ಇಲ್ಲದೆ ಬೈಕ್ ರೈಡ್ ಮಾಡುತ್ತಿದ್ದ ಕರ್ನಾಟಿಕ್ ಸಂಗೀತಗಾರನನ್ನು ಟ್ರಾಫಿಕ್ ಪೊಲೀಸ್ ತಡೆದಿದ್ದರು. ಆದರೆ, ಮುಂದೆ ನಡೆದಿದ್ದು ಸಾಮಾನ್ಯ ದಂಡ ಪಾವತಿಗಿಂತ ಬಹಳ ಭಿನ್ನವಾಗಿತ್ತು.
ಸಂಗೀತಗಾರನಿಗೆ ಅಚ್ಚರಿ ಎನ್ನುವಂತೆ ಪೊಲೀಸ್ ಇನ್ಸ್‌ಪೆಕ್ಟರ್ ತಾವೊಬ್ಬ ಅದ್ಭುತ ಮೃದಂಗ ವಾದಕ ಅನ್ನೋದನ್ನು ತೋರಿಸಿಕೊಟ್ಟರು. ಸಂಗತಗಾರನಿಗೆ ಫೈನ್ ಹಾಕುವ ಬದಲು, ರಸ್ತೆಯ ನಡುವೆಯ ಸಂಗೀತಗಾರನ ಜೊತೆ ಹಾಡಿನ ಜುಗುಲ್‌ಬಂಧಿಯಲ್ಲಿ ಭಾಗಿಯಾದರು. ಗಾಯಕ ಅದ್ಭು ಗೀತೆಯನ್ನು ಹಾಡಲು ಮುಂದಾದಾ ಪೊಲೀಸ್ ಇನ್ಸ್‌ಪೆಕ್ಟರ್ ಅಚ್ಚರಿ ಎನ್ನುವಂತೆ ಅದ್ಭುತವಾಗಿ ಮೃದಂಗ ಭಾರಿ ಎಲ್ಲರನ್ನೂ ಮೂಕವಿಸ್ಮಿತರನ್ನಾಗಿ ಮಾಡಿದರು.
ಈ ಪೂರ್ವಸಿದ್ಧತೆಯಿಲ್ಲದ ಸಂಗೀತ ಕಚೇರಿಯು ಪ್ರಶಾಂತ ಮತ್ತು ಸಾಂಸ್ಕೃತಿಕವಾಗಿ ಶ್ರೀಮಂತ ವಾತಾವರಣವನ್ನು ಸೃಷ್ಟಿಸಿತು, ಅನಿರೀಕ್ಷಿತ ಸಂಗೀತ ವಿನಿಮಯದಿಂದ ಆಕರ್ಷಿತರಾದ ಇಂಟರ್ನೆಟ್ ಯೂಸರ್‌ಗಳ ಗಮನವನ್ನು ಸೆಳೆಯಿತು.
ಈ ಹೃದಯಸ್ಪರ್ಧಿ ವಿಡಿಯೋಗೆ ಈಗಾಗಲೇ 2 ಲಕ್ಷಕ್ಕೂ ಅಧಿಕ ವೀವ್ಸ್‌ಗಳು ಬಂದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಉತ್ತಮ ಟ್ರ್ಯಾಕ್ಷನ್ ಕೂಡ ಸಿಕ್ಕಿದೆ. ಹಲವರು ಈ ವಿಡಿಯೋವನ್ನು ಇಷ್ಟಪಟ್ಟಿದ್ದಾರೆ. ಕ್ಲಿಪ್ ನೋಡಿದ ನಂತರ, ವೀಕ್ಷಕರ ದಂಡೇ ಪೋಸ್ಟ್‌ನ ಕಾಮೆಂಟ್‌ಗಳ ವಿಭಾಗಕ್ಕೆ ಧಾವಿಸಿ ಹೃದಯಸ್ಪರ್ಶಿ ಕಾಮೆಂಟ್‌ಗಳನ್ನು ಹಾಕಿದ್ದಾರೆ.
ಹೆಚ್ಚಿನ ಯೂಸರ್‌ಗಳು ಇನ್ಸ್‌ಪೆಕ್ಟರ್ ಮತ್ತು ಗಾಯಕನ 'ಜುಗಲ್‌ಬಂದಿ'ಯನ್ನು ಹೊಗಳುವುದನ್ನು ತಡೆಯಲು ಸಾಧ್ಯವಾಗಲಿಲ್ಲ, ಆದರೆ ಇತರರು ಇನ್ಸ್‌ಪೆಕ್ಟರ್ ಚಲನ್ ನೀಡಿದ್ದಾರೆಯೇ ಅಥವಾ ಇಲ್ಲವೇ ಎಂದು ಕೇಳಿದರು.
"ವಾವ್. ಇದು ಅದ್ಭುತ! ಕರ್ನಾಟಕ ಸಂಗೀತವು ಜನರನ್ನು ಒಟ್ಟುಗೂಡಿಸುತ್ತದೆ!" ಎಂದು ಒಬ್ಬ ಯೂಸರ್ ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, "ಇತ್ತೀಚಿನ ವರ್ಷಗಳಲ್ಲಿ ನನ್ನ ಅತ್ಯಂತ ಪ್ರೀತಿಯ ಪೋಸ್ಟ್‌ಗಳಲ್ಲಿ ಇದು ಒಂದು. ನಾನು ಈ ಮಾಧ್ಯಮದಲ್ಲಿದ್ದೇನೆ. ಇಬ್ಬರೂ ಪರ್ಫಾಮರ್‌ಗಳಿಗೆ ಧನ್ಯವಾದಗಳು. ಅವರು ಹೆಚ್ಚು ವಿಶಾಲವಾದ ಪ್ರೇಕ್ಷಕರಿಗೆ ಅರ್ಹರು." ಎಂದು ಬರೆದಿದ್ದಾರೆ.
ಶಾಲಾ ರಿಲಸ್ಟ್ ದಿನವೇ ಹೊಸ ಅಡ್ಮಿಷನ್, ತರಗತಿಗೆ ಹಾಜರಾದ ದೈತ್ಯ ಕಾಡಾನೆ
“ಈ ಪೋಸ್ಟ್ ನಿಜವಾಗಿಯೂ ನನ್ನ ದಿನವನ್ನು ಬದಲಾಯಿಸಿತು” ಎಂದು ಒಬ್ಬ ಬಳಕೆದಾರರು ಹೇಳಿದರು. ಒಬ್ಬ ವ್ಯಕ್ತಿ, “ಪೊಲೀಸರು ಫೈನ್ ಅನ್ನು ಲಲಿತಕಲೆಗಳನ್ನಾಗಿ ಪರಿವರ್ತಿಸಿದ್ದಾರೆ” ಎಂದು ಹೇಳಿದ್ದಾರೆ. “ಇನ್ಸ್‌ಪೆಕ್ಟರ್ ಸಾಬ್ ಪ್ರದರ್ಶನದ ನಂತರ ಚಲನ್ ಹಸ್ತಾಂತರಿಸಬೇಕೆಂದು ಆಶಿಸುತ್ತೇನೆ” ಎಂದು ಎಕ್ಸ್ ಯೂಸರ್ ಬರೆದಿದ್ದಾರೆ. “ಈ ಪೂರ್ವಸಿದ್ಧತೆಯಿಲ್ಲದ ಸಂಗೀತ ಕಚೇರಿ ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತದೆ” ಎಂದು ಖಾತೆಯೊಂದು ಪೋಸ್ಟ್ ಮಾಡಿದೆ.
ಚಾಕು, ಕಾಂಡೋಮ್: ಶಾಲಾ ಮಕ್ಕಳ ಬ್ಯಾಗ್‌ನಲ್ಲಿ ಸಿಕ್ಕ ವಸ್ತುಗಳ ನೋಡಿ ಶಿಕ್ಷಕರೇ ಶಾಕ್
