ಬಹುತೇ ಕಡೆಗಳಲ್ಲಿ ಶಾಲಾ ರಿಲಸ್ಟ್ ಇಂದು ಪ್ರಕಟಗೊಂಡಿದೆ. ಇದೇ ದಿನ ಶಾಲೆಗೆ ಅಡ್ಮಿಷನ್ ಪಡೆಯಲು ಹೊಸ ವಿದ್ಯಾರ್ಥಿ ತರಗತಿಗೆ ಎಂಟ್ರಿಕೊಟ್ಟಿದ್ದಾರೆ. ವಿದ್ಯಾರ್ಥಿ ನೋಡಿ ಟೀಚರ್, ಮಕ್ಕಳು ಎಲ್ಲರು ಬೆಚ್ಚಿ ಬಿದ್ದಿದ್ದಾರೆ. ಅಡ್ಮಿಷನ್ ಪಡೆಯಲು ಬಂದಿದ್ದು ದೈತ್ಯ ಕಾಡಾನೆ.
ಗುವ್ಹಾಟಿ(ಏ.09) ಹಲವು ಶಾಲೆಗಳಲ್ಲಿ ಪ್ರಮುಖವಾಗಿ ಎಲ್‌ಕೆಜಿ, ಯುಕೆಜಿ ಸೇರಿದಂತೆ ಕಿರಿಯ ಪ್ರಾಥಮಿಕ ಶಾಲೆಗಳ ಫಲಿತಾಂಶ ಎಪ್ರಿಲ್ 9 ಹಾಗೂ 10ಕ್ಕೆ ಪ್ರಕಟಗೊಳ್ಳಲಿದೆ. ಫಲಿತಾಂಶದ ಬೆನ್ನಲ್ಲೇ ವಿದ್ಯಾರ್ಥಿಗಳು ಮುಂದಿನ ತರಗತಿಗೆ ಅಡ್ಮಿಷನ್, ಬೇರೆ ಶಾಲೆಯಲ್ಲಿ ಅಡ್ಮಿಷನ್‌ಗಾಗಿ ಅಲೆದಾಟಗಳು ಆರಂಭಗೊಳ್ಳುತ್ತಿದೆ. ವಿಶೇಷ ಆಂದರೆ ಆರ್ಮಿ ಶಾಲೆಗೆ ಹೊಸ ಅಡ್ಮಿಷನ್‌ಗೆ ವಿದ್ಯಾರ್ಥಿಯೊಬ್ಬರು ಎಂಟ್ರಿಕೊಟ್ಟಿದ್ದರು. ಈ ವಿದ್ಯಾರ್ಥಿ ನೋಡಿದ ಶಿಕ್ಷಕರು, ಮಕ್ಕಳು, ಶಾಲಾ ಸಿಬ್ಬಂದಿಗಳು ಬೆಚ್ಚಿ ಬಿದ್ದಿದ್ದಾರೆ. ವಿದ್ಯಾರ್ಥಿ ನಡೆ ಹಾವ ಭಾವ ಸೈಲೆಂಟ್ ಆಗಿತ್ತು. ಆದರೂ ಎಲ್ಲರೂ ಭಯದಿಂದಲೇ ಇರಬೇಕಾದ ಪರಿಸ್ಥಿತಿ ಎದುರಾಗಿತ್ತು. ಕಾರಣ ಈ ಸೇನಾ ಶಾಲೆಗೆ ಎಂಟ್ರಿಕೊಟ್ಟ ವಿದ್ಯಾರ್ಥಿ ಕಾಡಿನ ದೈತ್ಯ ಆನೆ.
ಗುವ್ಹಾಟಿಯ ನರೇಂಗಿಯಲ್ಲಿರುವ ಆರ್ಮಿ ಸ್ಕೂಲ್‌ಗೆ ಕಾಡಾನೆಯೊಂದು ಎಂಟ್ರಿಕೊಟ್ಟಿದೆ. ಶಾಲಾ ತರಗತಿ, ಲ್ಯಾಬ್ ಹೀಗೆ ಇಡೀ ಕ್ಯಾಂಪಸ್ ತಿರುಗಾಡಿದ ಈ ಆನೆ ಎಲ್ಲರ ಆತಂಕ ಹೆಚ್ಚಿಸಿತ್ತು. ವಿಶೇಷ ಅಂದರೆ ಈ ಆನೆಯ ಯಾವುದೇ ರೀತಿಯಲ್ಲಿ ಯಾರಿಗೂ ಸಮಸ್ಯೆ ಮಾಡಿಲ್ಲ. ಶಾಲೆಯ ಒಂದೇ ಒಂದು ವಸ್ತುಗಳನ್ನು ಮುಟ್ಟಿಲ್ಲ. ಆದರೆ ಇಡೀ ಕ್ಯಾಂಪಸ್ ಓಡಾಡಿ ಬಳಿಕ, ಈಜುಕೊಳದಲ್ಲಿ ಸ್ವಲ್ಪಹೊತ್ತು ಈಜಾಡಿ ಬಳಿಕ ತೆರಳಿದೆ.
ರಜೆ ಶುರುವಾಯ್ತು..ಆನೆ ನೋಡಲು ಮಕ್ಕಳನ್ನು ಈ ಜಾಗಕ್ಕೆ ಕರ್ಕೊಂಡು ಹೋಗಿ!
ಒಂದು ಆನೆಯ ಕತೆ
ಗೌವ್ಹಾಟಿಯ ನರೇಂಗಿಯಲ್ಲಿರುವ ಆರ್ಮಿ ಸ್ಕೂಲ್ ಹಾಗೂ ಆನೆಗೂ ಅವಿನಾಭ ಸಂಬಂಧವಿದೆ. ಅಸ್ಸಾಂ ರಾಜ್ಯದಲ್ಲಿ ಹೆಚ್ಚು ಆನೆಗಳಿದೆ. ಈ ಶಾಲಾ ಪಕ್ಕದಲ್ಲಿ ದಟ್ಟ ಕಾಡಿದೆ. ಈ ಕಾಡು ಆನೆಗಳ ವಾಸಸ್ಥಾನವಾಗಿದೆ. ಆರ್ಮಿ ಸ್ಕೂಲ್‌ಗೆ ಈ ದೈತ್ಯ ಆನೆ ಪದೇ ಪದೇ ಎಂಟ್ರಿಕೊಡುತ್ತದೆ. ಇದು ಹೊಸದೇನಲ್ಲ.ಪ್ರತಿ ಬಾರಿ ಈ ದೈತ್ಯ ಆನೆ ಎಂಟ್ರಿಕೊಟ್ಟು ಆವರಣದಲ್ಲಿ ಸುತ್ತಾಡಿ ತೆರಳುತ್ತದೆ. ಆದರೆ ಈ ಬಾರಿ ಆನೆ ತರಗತಿಗೂ ಎಂಟ್ರಿಕೊಟ್ಟಿದೆ.
ಆನೆಗಾಗಿ ವಿಶೇಷ ಆಹಾರ
ಆರ್ಮಿ ಸ್ಕೂಲ್‌ಗೆ ಈ ದೈತ್ಯ ಆನೆ ಪದೇ ಪದೇ ಎಂಟ್ರಿಕೊಡುತ್ತದೆ. ಹೀಗಾಗಿ ಆರ್ಮಿ ಶಾಲೆಯ ಸಿಬ್ಬಂದಿಗಳು ಶಾಲಾ ಆವರಣದ ಹೊರಭಾಗದಲ್ಲಿ ಆನೆಗಾಗಿ ವಿಶೇಷ ಆಹಾರ ಇಡಲಾಗುತ್ತದೆ. ಪ್ರತಿ ದಿನ ಆನೆಗೆ ಆಹಾರ ಇಡಲಾಗುತ್ತದೆ. ಹಣ್ಣು ಸೇರಿದಂತೆ ಹಲವು ಆನೆಯ ಆಹಾರಗಳನ್ನು ಇಲ್ಲಿ ಇಡಲಾಗುತ್ತದೆ. ಈ ಆನೆ ಆಹಾರನ್ನು ಸವಿದು ಬಳಿಕ ಕಾಡಿಗೆ ಮರಳುತ್ತದೆ. ಇದು ಎಂದು ನಡೆದುಕೊಂಡು ಬರುತ್ತಿದೆ. ಕೆಲವೊಮ್ಮೆ ಶಾಲಾ ಆವರಣದಲ್ಲಿರುವ ಈಜುಕೊಳಕ್ಕೆ ಬಂದು ಒಂದಷ್ಟು ಕಾಲ ನೀರಿನಲ್ಲಿ ಈಜಾಡಿ ಬಳಿಕ ತೆರಳುತ್ತದೆ. ಆದರೆ ಇದೇ ಮೊದಲ ಬಾರಿಗೆ ಆನೆ ತರಗತಿ, ಲ್ಯಾಪ್ ಸೇರಿದಂತೆ ಎಲ್ಲಾ ಕಡೆಗೂ ಎಂಟ್ರಿಕೊಟ್ಟಿದೆ.
ಆನೆ ತರಗತಿಗೆ ಎಂಟ್ರಕೊಡುತ್ತಿದ್ದಂತೆ ಸೈನಿಕ್ ಶಾಲೆಯ ಯೋಧರು ಆತಂಕಗೊಂಡಿಲ್ಲ. ಶಾಲೆ ತರಗತಿ, ಸೇರಿದಂತೆ ಒಂದಷ್ಟು ಆವರಣದಲ್ಲಿ ಸುತ್ತಾಡಿದ ಆನೆಯನ್ನು ಯೋಧರು ನಾಜೂಕಾಗಿ ಕಾಡಿಗೆ ತೆರಳುವಂತೆ ಮಾಡಿದ್ದಾರೆ. ಈ ಆನೆಗೂ ಯಾವುದೇ ರೀತಿಯ ಆತಂಕ ಎದುರಾಗಿಲ್ಲ. ಹೀಗಾಗಿ ಆನೆ ಯಾರ ಮೇಲೂ ದಾಳಿ ಮಾಡದೆ, ಶಾಲೆಯ ಒಂದು ವಸ್ತುಗಳನ್ನು ಹಾಳುಮಾಡದೆ ಸಾಗಿದೆ. ಈ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ.
ಆನೆ ತರಗತಿಗೆ ಎಂಟ್ರಿಕೊಡುತ್ತಿರುವ ದೃಶ್ಯ ಮೊಬೈಲ್ ಮೂಲಕ ಸೆರೆ ಹಿಡಿಯಲಾಗಿದೆ. ಈ ದೃಶ್ಯಗಳು ಸೋಶಿಯಲ್ ಮೀಡಿಯಾ ಮೂಲಕ ಹರಿದಾಡಿದೆ.
ಆನೆ ನಡೆದಿದ್ದೇ ದಾರಿ ಎನ್ನೋ ಕಾಲ ಹೋಯ್ತು! ಇನ್ಮೇಲೇನಿದ್ದರೂ ನಾವು ತೋರ್ಸಿದ ದಾರಿಗೆ ಆನೆ ಹೋಗಬೇಕು!
