ಮಹಾರಾಷ್ಟ್ರದ ನಾಸಿಕ್‌ನ ಶಾಲೆಯೊಂದರಲ್ಲಿ ಮಕ್ಕಳ ಬ್ಯಾಗ್‌ಗಳನ್ನು ಪರಿಶೀಲಿಸಿದಾಗ ಕಾಂಡೋಮ್, ಚಾಕು ಮತ್ತು ಇಸ್ಪೀಟ್‌ ಕಾರ್ಡ್‌ಗಳು ಪತ್ತೆಯಾಗಿವೆ. ಈ ಘಟನೆಯಿಂದ ಪೋಷಕರು ಮತ್ತು ಶಿಕ್ಷಕರು ಆಘಾತಕ್ಕೊಳಗಾಗಿದ್ದಾರೆ. 

ನಮ್ಮ ಕಾಲದಲ್ಲೆಲ್ಲಾ ಶಾಲೆ ಮಕ್ಕಳ ಬ್ಯಾಗ್‌ನಲ್ಲಿ ಪುಸ್ತಕ ಬಿಟ್ಟರೆ, ಹೆಚ್ಚೆಂದರೆ ನವಿಲುಗರಿ, ಪುಸ್ತಕದ ಒಳಗೆ ಇಟ್ಟರೆ ಬೇರು ಬಿಡುವ ಗಿಡಗಳ ಎಲೆಗಳು, ಆ ಕಡೆ ಈ ಕಡೆ ಎರಡೂ ಕಡೆ ಚೂಪು ಮಾಡಿದ ಪೆನ್ಸಿಲ್, ಕಂಪಾಸ್, ಕೈವಾರ್, ತುಂಡ್ಡಾದ ರಬ್ಬರ್‌, ಸ್ಲೇಟ್‌, ಕಡ್ಡಿ , ಟೀಚರ್‌ ಬರೆಯಲಾಗದೇ ಎಸೆದ ಚಾಕ್‌ಪೀಸ್‌ ಇವೇ ತುಂಬಿರುತ್ತಿದ್ದವು. ಆದರೆ ಈಗ ಮಹಾರಾಷ್ಟ್ರದ ನಾಸಿಕ್‌ನಲ್ಲಿ ಮಕ್ಕಳ ಶಾಲೆ ಬ್ಯಾಗ್ ಚೆಕ್ ಮಾಡಿದ ಶಿಕ್ಷಕರಿಗೆ ಹಾಗೂ ಪೋಷಕರಿಗೆ ಒಳಗಿರುವುದನ್ನು ನೋಡಿ ಆಘಾತ ಕಾದಿದೆ. ಹಾಗಿದ್ರೆ ಒಳಗಿದ್ದಿದ್ದು ಏನು ಎಂಬುದನ್ನು ನೋಡೋಣ...

ಮಹಾರಾಷ್ಟ್ರದ ನಾಸಿಕ್‌ನ ಘೋಟಿ ಎಂಬಲ್ಲಿರುವ ಶಾಲೆಯೊಂದರಲ್ಲಿ ಶಾಲಾ ಮಕ್ಕಳ ಬ್ಯಾಗ್‌ಗಳನ್ನು ಪರಿಶೀಲಿಸಲು ಶಾಲೆಯಲ್ಲಿ ಶಿಕ್ಷಕರು ಮುಂದಾಗಿದ್ದರು. ಈ ವೇಳೆ ಶಾಲಾ ಬ್ಯಾಗ್‌ನಲ್ಲಿ ಆಕ್ಷೇಪಾರ್ಹವಾದ ವಸ್ತುಗಳು ಸಿಕ್ಕಿವೆ ಎಂದು ವರದಿಯಾಗಿದೆ. ಕಾಂಡೋಮ್ ಪ್ಯಾಕೇಟ್ಗಳು, ಚಾಕುಗಳು, ಇಸ್ಪೀಟ್‌ ಕಾರ್ಡ್‌ಗಳು ಸೇರಿದಂತೆ ಹಲವು ರೀತಿಯ ಒಪ್ಪಿಕೊಳ್ಳಲಾಗದ ವಸ್ತುಗಳು ಪತ್ತೆಯಾಗಿವೆ ಎಂದು ವರದಿಯಾಗಿದೆ. 7 ರಿಂದ 10ನೇ ತರಗತಿಯಲ್ಲಿ ಕಲಿಯುತ್ತಿರುವ ಶಾಲಾ ಮಕ್ಕಳ ಬ್ಯಾಗ್ ಚೆಕ್ ಮಾಡಿದ ವೇಳೆ ಈ ವಿಚಾರ ಬೆಳಕಿಗೆ ಬಂದಿದೆ. ಈ ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಮಾಧ್ಯಮಗಳೊಂದಿಗೆ ಮಾತನಾಡಿದ ಶಾಲೆಯ ಉಪ ಪ್ರಾಂಶುಪಾಲರು, ತಪಾಸಣೆ ಕಾರ್ಯಾಚರಣೆಯ ಸಮಯದಲ್ಲಿ ಈ ವಸ್ತುಗಳು ಪತ್ತೆಯಾಗಿವೆ. ಮಕ್ಕಳ ಶಾಲಾ ಬ್ಯಾಗ್‌ನಲ್ಲಿ ಕಂಡುಬಂದ ಈ ಆಕ್ಷೇಪಾರ್ಹ ವಸ್ತುಗಳು ಒಂದೇ ಬಾರಿಗೆ ಪತ್ತೆಯಾಗಿಲ್ಲ. ಕಳೆದ ಹಲವಾರು ದಿನಗಳಿಂದ ವಿವಿಧ ವಿದ್ಯಾರ್ಥಿಗಳ ಬ್ಯಾಗ್‌ಗಳಲ್ಲಿ ವಿಭಿನ್ನ ವಸ್ತುಗಳು ಕಂಡು ಬಂದಿವೆ. ವಿದ್ಯಾರ್ಥಿಗಳು ಅಪರಾಧ ಪ್ರವೃತ್ತಿಯನ್ನು ಬೆಳೆಸಿಕೊಳ್ಳುವುದನ್ನು ತಡೆಯಲು, ನಾವು ಪ್ರತಿದಿನ ಅವರ ಬ್ಯಾಗ್‌ಗಳನ್ನು ಪರಿಶೀಲಿಸುತ್ತೇವೆ ಎಂದು ಉಪ ಪ್ರಾಂಶುಪಾಲರು ಹೇಳಿದರು.

ಸೊಸೆಗೆ ಠಕ್ಕರ್‌ ಕೊಡೋ ಥರ ವೆಸ್ಟರ್ನ್‌ ಡ್ಯಾನ್ಸ್‌ ಮಾಡಿದ ʼಲಕ್ಷ್ಮೀ ನ ...

ಈ ವಿಚಾರ ತಿಳಿದ ಪೋಷಕರು ಕೂಡ ಶಾಕ್ ಆಗಿದ್ದು, ಬ್ಯಾಗ್ ಪರಿಶೀಲಿಸಿದ ಶಾಲೆಯ ಕಾರ್ಯವನ್ನು ಪೋಷಕರು ಸ್ವಾಗತಿಸಿದ್ದಾರೆ. ಒಬ್ಬ ಪೋಷಕರು ಶಾಲೆಯ ಶಿಕ್ಷಕರು ಮತ್ತು ಪ್ರಾಂಶುಪಾಲರು ಜಾರಿಗೆ ತಂದಿರುವ ಉಪಕ್ರಮ ಸರಿಯಾಗಿದೆ ಏಕೆಂದರೆ ಇದು ತಪ್ಪು ಮಾರ್ಗದರ್ಶನದ ಯುಗ. ಪೋಷಕರ ನಂತರ ಶಿಕ್ಷಕರು ಮಾತ್ರ ಮಕ್ಕಳಲ್ಲಿ ಉತ್ತಮ ನೈತಿಕತೆಯನ್ನು ತುಂಬಬಲ್ಲರು, ಆದ್ದರಿಂದ ನಾವು ಈ ಉಪಕ್ರಮವನ್ನು ಬೆಂಬಲಿಸುತ್ತೇವೆ ಎಂದು ಹೇಳಿದ್ದಾರೆ ಎಂದು ವರದಿ ಆಗಿದೆ.

Scroll to load tweet…