ಬೈಕ್ ಸವಾರ ದುರಂತ ಸಾವು ಬೆಟ್ಟದಿಂದ ಹಾರಿ ಬಂದು ಬೈಕ್‌ಗೆ ಬಡಿದ ಕಲ್ಲು ಕೇರಳದ ತಾಮರಸ್ಸೆರಿಯಲ್ಲಿ ಘಟನೆ

ತಿರುವನಂತಪುರ: ಬೆಟ್ಟದಿಂದ ಬಿದ್ದ ಬೃಹತ್‌ ಬಂಡೆಯೊಂದು ರಸ್ತೆಯಲ್ಲಿ ಸಾಗುತ್ತಿದ್ದ ಬೈಕ್‌ಗೆ ಬಡಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕೇರಳದ ತಾಮರಸ್ಸೆರಿಯಲ್ಲಿ ನಡೆದಿದೆ. ಈ ದೃಶ್ಯ ಆತನ ಹಿಂದೆಯೇ ಚಲಿಸುತ್ತಿದ್ದ ಮತ್ತೊಬ್ಬ ಬೈಕ್ ಸವಾರನ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಲ್ಲು ಬಡಿಯುತ್ತಿದ್ದಂತೆ ಬೈಕ್ ಸವಾರ ನಿಯಂತ್ರಣ ಕಳೆದುಕೊಂಡು ಎಡಬದಿಯ ಕಮರಿಗೆ ಬೀಳುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. 

ಈ ದೃಶ್ಯವೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಭಯಾನಕ ದೃಶ್ಯ ಕಂಡು ಜನ ಶಾಕ್ ಆಗಿದ್ದಾರೆ. ಸಾವು ಹೇಗೆ ಬೇಕಾದರೂ ಯಾವಾಗ ಬೇಕಾದರೂ ಸಂಭವಿಸಬಹುದು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಕಲ್ಲು ಬಂದು ಸವಾರನಿಗೆ ಬಡೆಯುತ್ತಿದ್ದಂತೆ ಆತ ಬೈಕ್‌ ಮೇಲಿನ ನಿಯಂತ್ರಣ ಕಳೆದುಕೊಂಡು ಕೆಳಗೆ ಬಿದ್ದಿದ್ದು ಸಾವನ್ನಪ್ಪಿದ್ದಾನೆ. ಅವನ ಹಿಂದೆ ಇದ್ದ ಇನ್ನೊಬ್ಬ ಬೈಕರ್ ಅಪಘಾತವನ್ನು ನೋಡಿದ ನಂತರ ವಿಡಿಯೋ ರೆಕಾರ್ಡ್‌ ಅನ್ನು ಥಟ್ಟನೆ ನಿಲ್ಲಿಸಿದ್ದಾನೆ. ಮೃತ ವ್ಯಕ್ತಿಯನ್ನು ಮಲಪ್ಪುರಂ ಮೂಲದ 20 ವರ್ಷದ ಯುವಕ ಎಂದು ಗುರುತಿಸಲಾಗಿದೆ.


ಪೊಲೀಸರಿಗೇ ಗುದ್ದಿದ ಬೈಕ್ ಸವಾರ.
ಬೈಕ್ ಸವಾರನೊಬ್ಬ ಮದ್ಯಪಾನ ಮಾಡಿ ಟ್ರಾಫಿಕ್(Traffic Police) ಎಎಸ್‌ಐಗೆ ಗುದ್ದಿದ ಘಟನೆ ನಗರದ ಪೀಣ್ಯ ಫ್ಲೈ ಓವರ್ ಬಳಿ ನಡೆದಿದೆ. ಪ್ಲೈ ಓವರ್ ಕ್ಲೋಸ್ ಇದ್ದಿದ್ದು ತಿಳಿಯದೇ ವೇಗವಾಗಿ ಬಂದು ಕರ್ತವ್ಯದಲ್ಲಿದ್ದ ಎಎಸ್‌ಐ ರಾಜಶೇಖರಯ್ಯ ಅವರಿಗೆ ಗುದ್ದಿದ್ದಾನೆ. ಅತನನ್ನ ನಿಲ್ಲಿಸಲು ಹೋದಾಗ ಎಎಸ್‌ಐ ರಾಜಶೇಖರಯ್ಯಗೆ ಬೈಕ್ ಡಿಕ್ಕಿ ಹೊಡೆದಿದೆ. ಎಎಸ್‌ಐ ರಾಜಶೇಖರಯ್ಯ ಅವರ ಕೈಗೆ ಗಂಭೀರವಾದ ಗಾಯವಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ರಾಜಶೇಖರಯ್ಯಗೆ ಚಿಕಿತ್ಸೆ(Treatment) ಕೊಡಿಸಲಾಗುತ್ತಿದೆ. ಯಶವಂತಪುರ ಸಂಚಾರ ಪೊಲೀಸರು(Police) ಬೈಕ್ ಸವಾರನನ್ನ ವಶಕ್ಕೆ ಪಡೆದಿದ್ದಾರೆ. 

Bengaluru: ವಿದೇಶಿ ವಿದ್ಯಾರ್ಥಿಯ ಬೈಕ್‌ ಡಿಕ್ಕಿ: ಸವಾರ, ಯೋಧ ಸಾವು

ರಸ್ತೆ ಮಧ್ಯೆ ಒಂಟಿ ಸಲಗ ಸವಾರ ಪರಾರಿ
ಗುಂಡ್ಲುಪೇಟೆ (Gundlupete) ತಾಲೂಕಿನ ಮೂಲೆಹೊಳೆ ಚೆಕ್‌ಪೋಸ್ಟ್‌ (Check Post) ಬಳಿ ಬೈಕ್ ಸವಾರನ ಮೇಲೆ ಆನೆಯೊಂದು (Elephant) ದಾಳಿ ಮಾಡಿರುವ ವಿಡಿಯೋ ವೈರಲ್ ಆಗಿದೆ. ರಸ್ತೆಯಲ್ಲಿ ಆನೆ ನೋಡಿ ಭಯಭೀತನಾದ ಸವಾರ, ಕೆಳಗೆ ಬಿದ್ದಿದ್ದಾನೆ. ಆಗ ಸವಾರನನ್ನು ಆನೆ ಅಟ್ಟಾಡಿಸಿಕೊಂಡು ಹೋಗಿದೆ. ಬೈಕ್ ಬಿಟ್ಟು ಓಡಿ ಹೋಗಿದ್ದಾನೆ. 

ಜಲಮಂಡಳಿ ಅಗೆದಿದ್ದ ರಸ್ತೆ ಗುಂಡಿಗೆ ಸವಾರ ಬಲಿ
ಜಲಮಂಡಳಿ ಅಗೆದಿದ್ದ ರಸ್ತೆ ಗುಂಡಿಗೆ ಬಿದ್ದು ಬೈಕ್ ಸವಾರ ಸಾವನ್ನಪ್ಪಿದ್ದಾನೆ. ಎಂಎಸ್ ಪಾಳ್ಯದ ಮುನೇಶ್ವರ ಲೇಔಟ್‌ನಲ್ಲಿ ಈ ಘಟನೆ ನಡೆದಿದೆ. ಹಾವೇರಿ ಮೂಲದ ಅಶ್ವಿನ್ ಮೃತ ದುರ್ದೈವಿ. ಖಾಸಗಿ ಕಂಪನಿಯೊಂದರಲ್ಲಿ ಇವರು ಕೆಲಸ ಮಾಡುತ್ತಿದ್ದಾರೆ. ರಸ್ತೆ ಗುಂಡಿಗೆ ಬಿದ್ದ ಕೂಡಲೇ, ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. 


ಬೆಂಗಳೂರು: ಮಳೆಯಲ್ಲಿ ಬೈಕ್ ಸ್ಕಿಡ್, ಯುವಕ ಸಾವು, ಮತ್ತೋರ್ವನ ಸ್ಥಿತಿ ಗಂಭೀರ

ವಿದೇಶಿ ವಿದ್ಯಾರ್ಥಿಯ ಬೈಕ್‌ ಡಿಕ್ಕಿ
ರಸ್ತೆ ದಾಟುತ್ತಿದ್ದಾಗ ಬೈಕ್‌ ಡಿಕ್ಕಿಯಾಗಿ ಸಿಆರ್‌ಪಿಎಫ್‌ ಸಬ್‌ ಇನ್‌ಸ್ಪೆಕ್ಟರ್‌(CRPF Sub Inspector) ಹಾಗೂ ಬೈಕ್‌ ಸವಾರ ವಿದೇಶಿ ವಿದ್ಯಾರ್ಥಿ(Foreign Student) ಮೃತಪಟ್ಟಿರುವ ಘಟನೆ ಯಲಹಂಕ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹಾಸನ(Hassan) ಜಿಲ್ಲೆ ಅರಕಲಗೂಡು ಮೂಲದ ಸಿಆರ್‌ಪಿಎಫ್‌ನ ಸಬ್‌ಇನ್‌ಸ್ಪೆಕ್ಟರ್‌ ಸ್ವಾಮಿಗೌಡ (54), ಬೈಕ್‌ ಸವಾರ ಯಮನ್‌ ದೇಶದ ಪ್ರಜೆ ಅಮ್ಮರ್‌ ಸುಲೇಹ (22) ಮೃತಪಟ್ಟವರು(Death). 

ಸಬ್‌ಇನ್‌ಸ್ಪೆಕ್ಟರ್‌ ಸ್ವಾಮಿಗೌಡ ಮಾ.30ರಂದು ರಾತ್ರಿ 10.30ರ ಸುಮಾರಿಗೆ ಯಲಹಂಕ ಸಿಆರ್‌ಪಿಎಫ್‌ ಕ್ಯಾಂಪಸ್‌ನ ಪ್ರವೇಶದ್ವಾರ 1ರ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಗಸ್ತು ತಿರುವಾಗ ರಸ್ತೆ ದಾಟಲು ಮುಂದಾಗಿದ್ದಾರೆ. ಈ ವೇಳೆ ಯಲಹಂಕ ಕಡೆಯಿಂದ ದೊಡ್ಡಬಳ್ಳಾಪುರದ ಕಡೆಗೆ ಬೈಕ್‌ನಲ್ಲಿ ವೇಗವಾಗಿ ಬಂದಿರುವ ಸುಲೇಹ ಏಕಾಏಕಿ ಸ್ವಾಮಿಗೌಡರಿಗೆ ಗುದ್ದಿದ್ದಾನೆ. ಈ ವೇಳೆ ಸ್ವಾಮಿಗೌಡ ಹಾಗೂ ಸುಲೇಹ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಸ್ಥಳೀಯರು ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಿಸದೆ ಇಬ್ಬರೂ ಮಾ.31ರ ಬೆಳಗ್ಗೆ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.