*  ಬೈಕ್‌ ಡಿಕ್ಕಿಯಾಗಿ ಸಿಆರ್‌ಪಿಎಫ್ ಎಸ್‌ಐ, ವಿದೇಶಿ ವಿದ್ಯಾರ್ಥಿ ಸಾವು* ಬೆಂಗಳೂರಿನ ಯಲಹಂಕದ ಬಳಿ ನಡೆದ ಘಟನೆ*  ಅತೀ ವೇಗವಾಗಿ ಬಂದ ಬೈಕ್‌ ಡಿಕ್ಕಿ 

ಬೆಂಗಳೂರು(ಏ.02): ರಸ್ತೆ ದಾಟುತ್ತಿದ್ದಾಗ ಬೈಕ್‌ ಡಿಕ್ಕಿಯಾಗಿ ಸಿಆರ್‌ಪಿಎಫ್‌ ಸಬ್‌ ಇನ್‌ಸ್ಪೆಕ್ಟರ್‌(CRPF Sub Inspector) ಹಾಗೂ ಬೈಕ್‌ ಸವಾರ ವಿದೇಶಿ ವಿದ್ಯಾರ್ಥಿ(Foreign Student) ಮೃತಪಟ್ಟಿರುವ ಘಟನೆ ಯಲಹಂಕ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಹಾಸನ(Hassan) ಜಿಲ್ಲೆ ಅರಕಲಗೂಡು ಮೂಲದ ಸಿಆರ್‌ಪಿಎಫ್‌ನ ಸಬ್‌ಇನ್‌ಸ್ಪೆಕ್ಟರ್‌ ಸ್ವಾಮಿಗೌಡ (54), ಬೈಕ್‌ ಸವಾರ ಯಮನ್‌ ದೇಶದ ಪ್ರಜೆ ಅಮ್ಮರ್‌ ಸುಲೇಹ (22) ಮೃತಪಟ್ಟವರು(Death). ಸಬ್‌ಇನ್‌ಸ್ಪೆಕ್ಟರ್‌ ಸ್ವಾಮಿಗೌಡ ಮಾ.30ರಂದು ರಾತ್ರಿ 10.30ರ ಸುಮಾರಿಗೆ ಯಲಹಂಕ ಸಿಆರ್‌ಪಿಎಫ್‌ ಕ್ಯಾಂಪಸ್‌ನ ಪ್ರವೇಶದ್ವಾರ 1ರ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಗಸ್ತು ತಿರುವಾಗ ರಸ್ತೆ ದಾಟಲು ಮುಂದಾಗಿದ್ದಾರೆ. ಈ ವೇಳೆ ಯಲಹಂಕ ಕಡೆಯಿಂದ ದೊಡ್ಡಬಳ್ಳಾಪುರದ ಕಡೆಗೆ ಬೈಕ್‌ನಲ್ಲಿ ವೇಗವಾಗಿ ಬಂದಿರುವ ಸುಲೇಹ ಏಕಾಏಕಿ ಸ್ವಾಮಿಗೌಡರಿಗೆ ಗುದ್ದಿಸಿದ್ದಾನೆ. ಈ ವೇಳೆ ಸ್ವಾಮಿಗೌಡ ಹಾಗೂ ಸುಲೇಹ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಸ್ಥಳೀಯರು ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಿಸದೆ ಇಬ್ಬರೂ ಮಾ.31ರ ಬೆಳಗ್ಗೆ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಪಘಾತದಲ್ಲಿ ಗಾಯಗೊಂಡಿದ್ದವರ ನೆರವಿಗೆ ಧಾವಿಸಿ ಮಾನವೀಯತೆ ಮೆರೆದ ಹೆಚ್.ಡಿ.ರೇವಣ್ಣ

ಸುಲೇಹ ವೇಗವಾಗಿ ಬೈಕ್‌(Bike) ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಸ್ವಾಮಿಗೌಡಗೆ ಗುದ್ದಿರುವುದು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸುಲೇಹ ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ. ಸಾವಿನ ಬಗ್ಗೆ ಯಮನ್‌ ದೇಶದಲ್ಲಿರುವ ಆತನ ಪಾಲಕರಿಗೆ ಮಾಹಿತಿ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಸಂಬಂಧ ಯಲಹಂಕ ಸಂಚಾರ ಪೊಲೀಸ್‌(Poilice) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಸ್‌-ಬೈಕ್‌ ಡಿಕ್ಕಿ: ಇಬ್ಬರ ಸಾವು

ಬಸವನಬಾಗೇವಾಡಿ: ಬಸ್‌-ಬೈಕ್‌ ಪರಸ್ಪರ ಮುಖಾಮುಖಿ ಡಿಕ್ಕಿ(Collision) ಹೊಡೆದ ಪರಿಣಾಮ ಬೈಕ್‌ ಸವಾರಿಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ತಾಲೂಕಿನ ನಂದಿಹಾಳ ಕ್ರಾಸ್‌ ಸಮೀಪ ಶುಕ್ರವಾರ ಸಂಜೆ ಸಂಭವಿಸಿದೆ.
ಜುಮನಾಳದ ರವಿ ಮರಿಯಪ್ಪ ಚಲವಾದಿ (23) ಚಂದ್ರಕಾಂತ ಹುಚ್ಚಪ್ಪ ಗೊಳಸಂಗಿ (20) ಬೈಕ್‌ ಸವಾರರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ವಿಜಯಪುರದಿಂದ(Vijayapura) ತಾಳಿಕೋಟಿ ಕಡೆಗೆ ಹೊರಟ್ಟಿದ್ದ ಬಸ್‌ಗೆ ಬಸವನಬಾಗೇವಾಡಿಯಿಂದ ವಿಜಯಪುರಕ್ಕೆ ಕಡೆಗೆ ಹೋಗುತ್ತಿದ್ದ ಬೈಕ್‌ ನಡುವೆ ಅಪಘಾತ ಸಂಭವಿಸಿದೆ. ಘಟನಾ ಸ್ಥಳಕ್ಕೆ ಮನಗೂಳಿ ಪಿಎಸೈ ಭೇಟಿ ನೀಡಿ ಪರಿಶೀಲಿಸಿದರು. ಈ ಕುರಿತು ಮನಗೂಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಸ್‌-ಬೈಕ್‌ ಡಿಕ್ಕಿ: ಪೊಲೀಸ್‌ ಸಿಬ್ಬಂದಿ ಗಂಭೀರ

ಬಂಟ್ವಾಳ: ಬಸ್ಸು ಮತ್ತು ದ್ವಿ ಚಕ್ರ ವಾಹನ ನಡುವೆ ಅಪಘಾತ ಸಂಭವಿಸಿ ಪೊಲೀಸ್‌ ಸಿಬ್ಬಂದಿ ಗಂಭೀರ ಗಾಯಗೊಂಡ ಘಟನೆ ಮಾಣಿ- ಮೈಸೂರು ರಾಜ್ಯ ಹೆದ್ದಾರಿಯ ಕೊಡಾಜೆ ಎಂಬಲ್ಲಿ ನಡೆದಿದೆ. ಬೈಕ್‌ನಲ್ಲಿ ಉಪ್ಪಿನಂಗಡಿ ಪೊಲೀಸ್‌ ಠಾಣೆಯ ಹೆಡ್‌ ಕಾನ್‌ಸ್ಟೇಬಲ್‌ ಧರ್ಣಪ್ಪ ಗೌಡ ಅವರು ಗಾಯಗೊಂಡಿದ್ದು, ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Bengaluru: ಪೀಣ್ಯ ಫ್ಲೈಓವರ್ ಮೇಲೆ ಭೀಕರ ಅಪಘಾತ: ಇಬ್ಬರಿಗೆ ಗಂಭೀರ ಗಾಯ

ಧರ್ಣಪ್ಪ ಗೌಡ ಅವರು ಅನಂತಾಡಿ ನಿವಾಸಿಯಾಗಿದ್ದು, ಎಂದಿನಂತೆ ಕರ್ತವ್ಯ ತೆರಳುತ್ತಿದ್ದಾಗ ಮಾಣಿ ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್‌ ಬೈಕ್‌ಗೆ ಡಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ. ಗಂಭೀರ ಗಾಯಗೊಂಡ ಧರ್ಣಪ್ಪ ಅವರನ್ನು ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿತ್ತು. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರಸ್ತೆ ವಿಭಜಕಕ್ಕೆ ಬೈಕ್‌ ಡಿಕ್ಕಿ: ಪ.ಪಂ ಗುತ್ತಿಗೆ ನೌಕರ ಸಾವು

ಚನ್ನಮ್ಮನ ಕಿತ್ತೂರು: ಸ್ಥಳೀಯ ಪಟ್ಟಣ ಪಂಚಾಯಿತಿಯ ಗುತ್ತಿಗೆ ಆಧಾರದ ಮೇಲೆ ವಾಹನ ಚಾಲಕ ಕೆಲಸಕ್ಕೆ ನೇಮಕವಾಗಿದ್ದ ನೌಕರನೋರ್ವ ಶನಿವಾರ ರಾತ್ರಿ ರಸ್ತೆ ಅಪಘಾತದಲ್ಲಿ(Accident) ಮೃತಪಟ್ಟ ಘಟನೆ ನಡೆದಿದೆ. 
ಮಹೇಶ ಡೂಗನವರ (28) ಮೃತ ದುರ್ದೈವಿಯಾಗಿದ್ದು, ಶನಿವಾರ ರಾತ್ರಿ ಕಿತ್ತೂರು ಪಟ್ಟಣದಿಂದ ಎಂ.ಕೆ.ಹುಬ್ಬಳ್ಳಿಗೆ ದ್ವಿಚಕ್ರದ ಮೇಲೆ ತೆರಳುತ್ತಿದ್ದ, ಮಾರ್ಗ ಮಧ್ಯದಲ್ಲಿ ಅಂಬಡಗಟ್ಟಿ ಬಳಿ ನಿಯಂತ್ರಣ ಕಳೆದುಕೊಂಡ ದ್ವೀಚಕ್ರ ವಾಹನ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. 

ಪರಿಣಾಮ ಸ್ಥಳದಲ್ಲಿಯೇ ಈ ಯುವಕ ಕೊನೆಯುಸಿರೆಳದಿದ್ದಾನೆ. ಘಟನಾ ಸ್ಥಳಕ್ಕೆ ಕಿತ್ತೂರು ಪಿಎಸ್‌ಐ ದೇವರಾಜ ಉಳ್ಳೆಗಡ್ಡಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಕಿತ್ತೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತನ ಅಂತ್ಯಕ್ರಿಯೆ ಭಾನುವಾರ ಬೆಳಿಗ್ಗೆ ಜರುಗಿದ್ದು ಅಂತ್ಯಕ್ರಿಯೆಯಲ್ಲಿ ಪ.ಪಂ ಮುಖ್ಯಾಧಿಕಾರಿ ಪ್ರಕಾಶ ಮಠದ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.