ಮದುವೆ ಸೇರಿದಂತೆ ಕೆಲ ಕಾರ್ಯಕ್ರಮಗಳಲ್ಲಿ ಸಿಎಂ ವಿಜಯ್ ಜೊಸೆಫ್ ಹಾಗೂ ನಟಿ ತ್ರಿಶಾ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಆದರೆ ಅನಿರುದ್ಧ್ ಕಾವ್ಯ ಮಾರನ್ ಮದುವೆಯಲ್ಲಿ ವಿಜಯ್ ಏಕಾಂಗಿಯಾಗಿ ಕಾಣಿಸಿಕೊಂಡಿದ್ದಾರೆ. ಇದಕ್ಕೆ ಕಾರಣ ಪತ್ನಿ ಸಂಗೀತಾ

ಚೆನ್ನೈ (ನ.22) ಸಂಗೀತ ನಿರ್ದೇಶಕ ಅನಿರುದ್ದ್ ರವಿಚಂದರ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡದ ಮಾಲಕಿ ಕಾವ್ಯಾ ಮಾರನ್ ಮದುವೆ ರಿಸೆಪ್ಶನ್ ಚೆನ್ನೈನಲ್ಲಿ ಅದ್ಧೂರಿಯಾಗಿ ನಡೆದಿದೆ. ಈ ಮದುವೆಗ ತಮಿಳುನಾಡು ಮುಖ್ಯಮಂತ್ರಿ ಜೊಸೆಫ್ ವಿಜಯ್ ಪಾಲ್ಗೊಂಡು ನವಜೋಡಿಗಳಿಗೆ ಶುಭ ಹಾರೈಸಿದ್ದರು. ಇತ್ತೀಚಿನ ದಿನಗಳಲ್ಲಿ ಮದುವೆ ಸೇರಿದಂತೆ ಖಾಸಗಿ ಕಾರ್ಯಕ್ರಮಗಳಲ್ಲಿ ವಿಜಯ್ ಹಾಗೂ ನಟಿ ತ್ರಿಶಾ ಜೊತೆಯಾಗಿ ಕಾಣಿಸಿಕೊಂಡಿದ್ದರು. ಆದರೆ ಅನಿರುದ್ಧ್ ಹಾಗೂ ಕಾವ್ಯ ಮದುವೆಯಲ್ಲಿ ವಿಜಯ್ ಜೊಸೆಫ್ ಏಕಾಂಗಿಯಾಗಿ ತೆರಳಿ ಶುಭಕೋರಿದ್ದಾರೆ.ಇದಕ್ಕೆ ಕಾರಣ ಇದೇ ಮದುವೆಗೆ ವಿಜಯ್ ಪತ್ನಿ ಸಂಗೀತಾ ಕೂಡ ಹಾಜರಿದ್ದರು.

ಪ್ರತ್ಯೇಕವಾಗಿ ಶುಭಕೋರಿದ ಜೋಡಿ

ಅನಿರುದ್ಧ ಹಾಗೂ ಕಾವ್ಯ ಮಾರಾನ್ ಮದುವೆ ರೆಸೆಪ್ಶನ್‌ಗೆ ಸಿಎಂ ಜೊಸೆಫ್ ವಿಜಯ್ ಹಾಗೂ ಪತ್ನಿ ಸಂಗೀತಾ ಹಾಜರಾಗಿದ್ದರು. ಆದರೆ ಇಬ್ಬರು ಜೊತೆಯಾಗಿ ಕಾಣಿಸಿಕೊಂಡಿಲ್ಲ. ಇಷ್ಟೇ ಅಲ್ಲ ಜೊತೆಯಾಗಿ ತೆರಳಿ ನವಜೋಡಿಗಳಿಗೆ ಶುಭಕೋರಿಲ್ಲ. ಇಬ್ಬರು ಪ್ರತ್ಯೇಕವಾಗಿ ವೇದಿಕೆಗೆ ತೆರಳಿ ನವಜೋಡಿಗಳಿಗೆ ಶುಭ ಹಾರೈಸಿದ್ದಾರೆ.

ವಿಜಯ್ ಹೋದ ಬಳಿಕ ವೇದಿಕೆಗೆ ಆಗಮಿಸಿದ ಪತ್ನಿ ಸಂಗೀತಾ

ಸಿಎಂ ವಿಜಯ್ ಮದುವೆ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಂತೆ ರಜನಿಕಾಂತ್ ಸೇರಿದಂತೆ ಪ್ರಮುಖ ನಟರು ವಿಜಯ್ ಜೊತೆ ಸಮಾಲೋಚನೆ ನಡೆಸಿದ್ದಾರೆ. ಸಿಎಂ ವಿಜಯ್ ವೇದಿಕೆಗೆ ತೆರಳಿ ಹೂಗುಚ್ಚ ನೀಡಿ ನವಜೋಡಿಗಳಿಗೆ ಶುಭಕೋರಿದ್ದಾರೆ. ಬಳಿಕ ಪ್ರಮುಖ ನಟರು, ಗಣ್ಯರು ಜೊತೆ ಮಾತನಾಡಿದ್ದಾರೆ. ವಿಶೇಷ ಅಂದರೆ ರಾಜಕೀಯ ಪ್ರಬಲ ವಿರೋಧಿ ಎಂಕೆ ಸ್ಟಾಲಿನ್ ಜೊತೆಗೂ ವಿಜಯ್ ಮಾತನಾಡಿದ್ದಾರೆ. ವಿಜಯ್ ಕಾರ್ಯಕ್ರಮದಿಂದ ನಿರ್ಗಮಿಸಿದ ಬಳಿಕ ವಿಜಯ್ ಪತ್ನಿ ಸಂಗೀತಾ ವೇದಿಕೆಗೆ ಆಗಮಿಸಿ ಅನಿರುದ್ಧ್ ಹಾಗೂ ಕಾವ್ಯಾ ಮಾರನ್‌ಗೆ ಶುಭಕೋರಿದ್ದಾರೆ.

ವಿವಾದ ಬಳಿಕ ಒಂದೇ ಕಾರ್ಯಕ್ರಮದಲ್ಲಿ ವಿಜಯ್ ಹಾಗೂ ಪತ್ನಿ

ವಿಜಯ್ ಹಾಗೂ ಸಂಗೀತಾ ದಾಂಪತ್ಯದಲ್ಲಿ ಬಿರುಗಾಳಿ ಎದ್ದು ಹಲವು ದಿನಗಳಾಗಿದೆ. ಇತ್ತೀಚೆಗೆ ವಿಚ್ಚೇದನಕ್ಕೆ ಸಲ್ಲಿಸಿದ್ದ ಅರ್ಜಿಯನ್ನು ಪತ್ನಿ ಸಂಗೀತಾ ಹಿಂಪಡೆದಿದ್ದಾರೆ. ಕಳೆದ ಐದು ವರ್ಷಗಳಿಂದ ವಿಜಯ್ ಹಾಗೂ ಪತ್ನಿ ಇಬ್ಬರು ಬೇರೇ ಬೇರೆಯಾಗಿ ವಾಸಿಸುತ್ತಿದ್ದಾರೆ. ಐದು ವರ್ಷಗಳ ಬಳಿಕ ಈ ಜೋಡಿ ಒಂದೇ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದೆ. ಆದರೆ ಜೊತೆಯಾಗಿ ಅಲ್ಲ, ಪ್ರತ್ಯೇಕವಾಗಿ ಕಾಣಿಸಿಕೊಂಡಿದ್ದಾರೆ.

ವಿಜಯ್‌ಗೆ ಮತ್ತೊಬ್ಬ ನಟಿ ಜೊತೆ ಸಂಬಂಧ ಇದೆ ಎಂದು ಆರೋಪಿಸಿ ಪತ್ನಿ ಸಂಗೀತಾ ವಿಚ್ಚೇದನ ಅರ್ಜಿ ಸಲ್ಲಿಸಿದ್ದರು. ಈ ಕೋಲಾಹಲ ಕೊಂಚ ತಣ್ಣಗಾಗುತ್ತಿದ್ದಂತೆ ಈ ಜೋಡಿ ಒಂದೇ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದೆ. ವಿಜಯ್ ಜೊತೆಗಿನ ದಾಂಪತ್ಯ ವಿವಾದ ಬಳಿಕ ಸಂಗೀತಾ ಬಹಿರಂಗವಾಗಿ ಕಾಣಿಸಿಕೊಳ್ಳುತ್ತಿರುವ ಎರಡನೇ ಕಾರ್ಯಕ್ರಮ ಇದಾಗಿದೆ. ಇದಕ್ಕೂ ಮೊದಲು ಪುತ್ರ ಜೇಸನ್ ಸಂಜಯ್ ಸಿನಿಮಾ ರಿಲೀಸ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು.