ಗ್ಲೋಬಲ್ ಪೀಸ್ ಆನರ್ಸ್ 2026 ಕಾರ್ಯಕ್ರಮದಲ್ಲಿ ಶಾರುಖ್ ಖಾನ್, ಅನಂತ್ ಅಂಬಾನಿ ಮತ್ತು ಸದ್ಗುರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು. ಶಾರುಖ್ ಮಧ್ಯ ಪ್ರವೇಶಿಸಿದಾಗ ಅನಂತ್ ಅಂಬಾನಿ ಮಾಡಿದ ಸನ್ನೆ ಇಂಟರ್ನೆಟ್‌ನಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಮುಂಬೈ: ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್, ಉದ್ಯಮಿ ಅನಂತ್ ಅಂಬಾನಿ ಹಾಗೂ ಆಧ್ಯಾತ್ಮಿಕ ಗುರು ಸದ್ಗುರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಕಾಡ್ಗಿಚ್ಚಿನಂತೆ ಹರಿದಾಡ್ತಿದೆ. ವೇದಿಕೆಯ ಮೇಲೆ ನಡೆದ ಒಂದು Awkward Moment ಇಂಟರ್ನೆಟ್‌ನಲ್ಲಿ ಹಲ್‌ಚೆಲ್ ಎಬ್ಬಿಸಿದೆ.

ವೇದಿಕೆಯಲ್ಲಿ ಆಗಿದ್ದೇನು?

ಇತ್ತೀಚೆಗೆ ಮುಂಬೈನ ಗೇಟ್‌ವೇ ಆಫ್ ಇಂಡಿಯಾದಲ್ಲಿ Global Peace Honours 2026 ಕಾರ್ಯಕ್ರಮ ನಡೆಯಿತು. ವೇದಿಕೆಯ ಮೇಲೆ ಅನಂತ್ ಅಂಬಾನಿ ಅವರು ಸದ್ಗುರು ಜೊತೆ ಮಾತಾಡ್ತಿದ್ದರು. ಇದೇ ವೇಳೆ ಅಲ್ಲಿಗೆ ಬಂದ ಶಾರುಖ್ ಖಾನ್.. ಇಬ್ಬರ ನಡುವಿನ ಮಾತುಕತೆಯಲ್ಲಿ ಪಾಲ್ಗೊಳ್ಳಲು ಮುಂದಾಗುತ್ತಾರೆ.

ಶಾರುಖ್ ಖಾನ್ ಮಧ್ಯ ಪ್ರವೇಶಿಸಿದ ನಂತರ ಅನಂತ್ ಅಂಬಾನಿ 'ಸುಮ್ಮನಿರಿ' (Stay quiet) ಎಂದು ಬೆರಳಿನಲ್ಲಿ ಸನ್ನೆ ಮಾಡ್ತಾರೆ. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅನಂತ್ ಅಂಬಾನಿ ರಿಯಾಕ್ಷನ್ ನೋಡಿ ಶಾರುಖ್ ಖಾನ್, ಒಂದು ಕ್ಷಣ ಆಘಾತಕ್ಕೊಳಗಾದಂತೆ ಕಂಡುಬಂದರು. ಶಾರುಖ್ ಪ್ರತಿಕ್ರಿಯೆ ನೋಡಿ ನೆಟ್ಟಿಗರು ದಿಗ್ಭ್ರಮೆಗೊಂಡಿದ್ದಾರೆ. ಒಂದು ಕ್ಷಣ ಡಲ್ ಆದ ಶಾರುಖ್ ನಂತರ ಸುಧಾರಿಸಿಕೊಂಡು ವೇದಿಕೆ ಮೇಲೆ ಬರುತ್ತಿದ್ದ ಇತರೆ ಗಣ್ಯರೊಂದಿಗೆ ಮಾತನಾಡಲು ಮುಂದಾಗಿದ್ದಾರೆ.

ಏನು ಚರ್ಚೆ ಆಗ್ತಿದೆ?

ವಿಡಿಯೋ ನೋಡಿದ ನೆಟ್ಟಿಗರು ಅನಂತ್ ಅಂಬಾನಿ ಹಾಗೂ ಶಾರುಖ್ ಖಾನ್ ಅವರನ್ನು ಟ್ರೋಲ್ ಮಾಡ್ತಿದ್ದಾರೆ. ಅನಂತ್ ಅಂಬಾನಿಯ ಅಸಲಿ ಔರಾ ಫಾರ್ಮಿಂಗ್ (Proper Aura Farming) ಎನ್ನುತ್ತಿದ್ದಾರೆ. ಸದ್ಗುರು ಜೊತೆ ಮಾತನಾಡುತ್ತಿದ್ದಾಗ ಮಧ್ಯೆ ಬಾರದಂತೆ ಅನಂತ್ ಕೇವಲ 'ಒಂದು ನಿಮಿಷ ತಾಳಿ' ಎಂದು ಸನ್ನೆ ಮಾಡಿರಬಹುದು ಅಷ್ಟೇ ಎಂದು ಕೆಲವರು ಹೇಳ್ತಿದ್ದಾರೆ. ಆದರೆ ಶಾರುಖ್ ಅಭಿಮಾನಿಗಳು ಅನಂತ್ ಅಂಬಾನಿ ವರ್ತನೆಯ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸೂಪರ್‌ಸ್ಟಾರ್‍‌ಗೆ ಸೌಜನ್ಯ ತೋರದೆ ಹೀಗೆ ಬೆರಳು ತೋರಿಸಿದ್ದು ಸರಿಯಲ್ಲ. ಇದು 'ಹಣದ ಪವರ್' ಎಂದು ಟ್ರೋಲ್ ಮಾಡ್ತಿದ್ದಾರೆ. ಅನಂತ್ ಅಂಬಾನಿ, ಶಾರುಖ್ ಖಾನ್ ಮತ್ತು ಸದ್ಗುರು ನಡುವಿನ ಈ ಕೆಲವೇ ಸೆಕೆಂಡುಗಳ ವಿಡಿಯೋ ಸದ್ಯ ಇಂಟರ್ನೆಟ್‌ನಲ್ಲಿ ಸಖತ್ ಸೌಂಡ್ ಮಾಡ್ತಿದೆ.

Scroll to load tweet…

Global Peace Honours 2026 ಎಂಬುದು 26/11 ಮುಂಬೈ ಭಯೋತ್ಪಾದಕ ದಾಳಿಯ ಹುತಾತ್ಮರಿಗೆ ಗೌರವ ಸಲ್ಲಿಸಲು ಹಾಗೂ ಶಾಂತಿ, ಧೈರ್ಯ ಮತ್ತು ಮಾನವೀಯತೆ ಸಂಭ್ರಮಿಸಲು ಆಯೋಜಿಸಲಾದ ವಾರ್ಷಿಕ ಕಾರ್ಯಕ್ರಮ. ಈ ಕಾರ್ಯಕ್ರಮವು ನಿನ್ನೆ ನಡೆದಿತ್ತು. ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಪತ್ನಿ ಅಮೃತಾ ಫಡ್ನವಿಸ್ ಸ್ಥಾಪಿಸಿರುವ Divyaj Foundation ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿತ್ತು.

ಕಾರ್ಯಕ್ರಮದ ಉದ್ದೇಶ 2008ರ 26/11 ಮುಂಬೈ ದಾಳಿಯ 18ನೇ ವರ್ಷದ ಸ್ಮರಣಾರ್ಥವಾಗಿ, ಭಯೋತ್ಪಾದನೆಯ ವಿರುದ್ಧ ಹೋರಾಡಿದ ವೀರರು, ಭದ್ರತಾ ಸಿಬ್ಬಂದಿ ಹಾಗೂ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಅಮಾಯಕರಿಗೆ ಶ್ರದ್ಧಾಂಜಲಿ ಸಲ್ಲಿಸುವುದು ಮತ್ತು ಶಾಂತಿಯ ಸಂದೇಶ ಸಾರುವುದು ಇದರ ಮುಖ್ಯ ಉದ್ದೇಶವಾಗಿದೆ.