2 ದಿನ ಮಳೆ ಭೀತಿಯಲ್ಲಿ ಕರ್ನಾಟಕ , ಓಮಿಕ್ರಾನ್‌ನಿಂದ ಶಾಲೆ ಮುಚ್ಚುವ ಆತಂಕ; ಡಿ.6ರ ಟಾಪ್ 10 ಸುದ್ದಿ!

ಏಷ್ಯಾದ ನಾಲ್ಕನೇ ಶಕ್ತಿಶಾಲಿ ದೇಶವಾಗಿ ಭಾರತ ಹೊರಹೊಮ್ಮಿದೆ. ಇತ್ತ ಶಿಯಾ ಬೋರ್ಡ್ ಮಾಜಿ ಅಧ್ಯಕ್ಷ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಬಂಡೆದ್ದ ಕಾಂಗ್ರೆಸ್ ನಾಯಕನ ಹೊಸ ಪಕ್ಷದ ಸುಳಿವು ನೀಡಿದ್ದಾರೆ. ಇನ್ನೆರಡು ದಿನ ರಾಜ್ಯದಲ್ಲಿ ಮಳೆ ಮುಂದುವರಿಯಲಿದೆ. ಭಾರತಕ್ಕೆ ಟೆಸ್ಟ್ ಸರಣಿ ಗೆಲುವು, ಪುನೀತ್ ರಾಜ್‌ಕುಮಾರ್ ಕನಸು ನನಸು ಸೇರಿದಂತೆ ಡಿಸೆಂಬರ್ 6ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
 
Karnataka Rain alert to Omicron Guidelines to School top 10 News of december 6 ckm

Powerful countries in Asia: ಏಷ್ಯಾದ ಅತೀ ಶಕ್ತಿಶಾಲಿ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತಕ್ಕೆ ನಾಲ್ಕನೇ ಸ್ಥಾನ!

Karnataka Rain alert to Omicron Guidelines to School top 10 News of december 6 ckm

ಭಾರತವು ಏಷ್ಯಾದ ನಾಲ್ಕನೇ ಅತ್ಯಂತ ಶಕ್ತಿಶಾಲಿ ರಾಷ್ಟ್ರವಾಗಿದೆ. ಲೋವಿ ಇನ್ಸ್ಟಿಟ್ಯೂಟ್ ಏಷ್ಯಾ ಪವರ್ ಇಂಡೆಕ್ಸ್ 2021 ಏಷ್ಯಾದ ಅತ್ಯಂತ ಶಕ್ತಿಶಾಲಿ ದೇಶಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ, ಅದರಲ್ಲಿ ಭಾರತವನ್ನು ನಾಲ್ಕನೇ ಸ್ಥಾನದಲ್ಲಿ ಇರಿಸಿದೆ.

Love on Hinduism:ಹಿಂದೂ ಧರ್ಮಕ್ಕೆ ಮಾತಾಂತರಗೊಂಡ ಯುಪಿ ಶಿಯಾ ಬೋರ್ಡ್‌ ಮಾಜಿ ಅಧ್ಯಕ್ಷ

Karnataka Rain alert to Omicron Guidelines to School top 10 News of december 6 ckm

ಉತ್ತರ ಪ್ರದೇಶದ ಶಿಯಾ ಕೇಂದ್ರೀಯ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ವಸೀಮ್ ರಿಜ್ವಿ ಇಸ್ಲಾಂ ಧರ್ಮವನ್ನು ತೊರೆದು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎಂದು ಕೆಲ ಮೂಲಗಳು ವರದಿ ಮಾಡಿವೆ. ಈ ಹಿಂದೆ ಹಲವಾರು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದ ರಿಜ್ವಿ, ತಮ್ಮ ಸಾವಿನ ನಂತರ ತನ್ನ ದೇಹವನ್ನು ಸಮಾಧಿ ಮಾಡಬಾರದು. ಆದರ ಬದಲು ಹಿಂದೂ ಸಂಪ್ರದಾಯದಂತೆ ಅಂತ್ಯಕ್ರಿಯೆ ಮಾಡಬೇಕೆಂದು ಘೋಷಿಸಿದ್ದಾರೆ. 

Karnataka Rain : ರಾಜ್ಯದಲ್ಲಿ 2 ದಿನ ಮತ್ತೆ ಮಳೆ : ಎಲ್ಲೆಲ್ಲಿ..?

Karnataka Rain alert to Omicron Guidelines to School top 10 News of december 6 ckm

 ರಾಜ್ಯದ (Karnataka)  ಕೆಲ ಭಾಗದಲ್ಲಿ ಮಳೆ ಮುಂದುವರಿದಿದ್ದು, ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಸೋಮವಾರ ಹಾಗೂ ಮಂಗಳವಾರ ಹಗುರದಿಂದ ಸಾಧಾರಣ ಮಳೆಯಾಗಲಿದೆ (Rain) ಎಂದು ಹವಾಮಾನ ಇಲಾಖೆ (Weather Department) ಮುನ್ಸೂಚನೆ ನೀಡಿದೆ

Jammu Kashmir Politics: ಬಂಡೆದ್ದ ಗುಲಾಂ ನಬಿ ಆಜಾದ್‌ ಶೀಘ್ರ ಹೊಸ ಪಕ್ಷ ಸ್ಥಾಪನೆ ಸುಳಿವು!

Karnataka Rain alert to Omicron Guidelines to School top 10 News of december 6 ckm

ಕಾಂಗ್ರೆಸ್ಸಿನ ಹಿರಿಯ ನಾಯಕ ಗುಲಾಂ ನಬಿ ಆಜಾದ್‌ (Ghulam Nabi Azad) ಅವರು ಶೀಘ್ರದಲ್ಲೇ ಪಕ್ಷ ತೊರೆಯುವ ಸಾಧ್ಯತೆ ಕಂಡುಬರುತ್ತಿದೆ. ಜಮ್ಮು-ಕಾಶ್ಮೀರದಲ್ಲಿ (Jammu Kashmir) ಅವರು ಹಲವು ಸರಣಿ ಸಭೆಗಳನ್ನು ನಡೆಸುತ್ತಿದ್ದು, ಹೊಸ ಪಕ್ಷ ಸ್ಥಾಪಿಸುವ ಕುರಿತು ದಟ್ಟವದಂತಿ ಹಬ್ಬಿದೆ. 

Ind vs NZ Mumbai Test: ಕಿವೀಸ್‌ ಬಗ್ಗುಬಡಿದು ಟೆಸ್ಟ್ ಸರಣಿ ಗೆದ್ದ ಟೀಂ ಇಂಡಿಯಾ

Karnataka Rain alert to Omicron Guidelines to School top 10 News of december 6 ckm

ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್‌ನಲ್ಲಿ ಸಂಘಟಿತ ಪ್ರದರ್ಶನ ತೋರಿದ ಟೀಂ ಇಂಡಿಯಾ (Team India) ಮುಂಬೈ ಟೆಸ್ಟ್ (Mumbai Test) ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ದ 372 ರನ್‌ಗಳ ಅಂತರದ ಭರ್ಜರಿ ಗೆಲುವು ಸಾಧಿಸಿದೆ.  ಇದೀಗ ತವರಿನಲ್ಲಿ ಟೀಂ ಇಂಡಿಯಾ ಸತತವಾಗಿ 14ನೇ ಟೆಸ್ಟ್ ಸರಣಿಯನ್ನು ಜಯಿಸಿದೆ ಇದರೊಂದಿಗೆ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಟೀಂ ಇಂಡಿಯಾ 1-0 ಅಂತರದಿಂದ ಕೈವಶ ಮಾಡಿಕೊಂಡಿದೆ.

Omicron Threat: ಶಾಲೆ ಬಂದ್ ಮಾಡುವ ಪರಿಸ್ಥಿತಿ ಬಂದ್ರೆ ಸರ್ಕಾರ ಸಿದ್ಧ, ಆತಂಕ ಬೇಡ: ಬಿ ಸಿ ನಾಗೇಶ್

Karnataka Rain alert to Omicron Guidelines to School top 10 News of december 6 ckm

ರಾಜ್ಯದಲ್ಲಿ ಕೊರೋನಾ ಸೋಂಕು (Covid 19) ಹೆಚ್ಚಾಗುತ್ತಿದೆ. ಓಮಿಕ್ರಾನ್ ಭೀತಿಯೂ ಹೆಚ್ಚಾಗಿದೆ. ಶಾಲಾ-ಕಾಲೇಜುಗಳನ್ನು ಆರಂಭಿಸಲಾಗಿದೆ. ಮಕ್ಕಳ ಮೇಲೆ ಪರಿಣಾಮ ಬೀರಬಹುದಾ ಎಂಬ  ಆತಂಕ ಶುರುವಾಗಿದೆ.

Gandhada Gudi Teaser: ಪುನೀತ್ ರಾಜ್‌ಕುಮಾರ್ ಕನಸು ನನಸಾಗಿಸಿದ ಪತ್ನಿ!

Karnataka Rain alert to Omicron Guidelines to School top 10 News of december 6 ckm

ಕನ್ನಡ ಚಿತ್ರರಂಗ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಏನೇ ಮಾಡಿದ್ದರೂ ಸೂಪರ್. ವ್ಯಕ್ತಿ ಸೂಪರ್, ವ್ಯಕ್ತಿತ್ವ ಸೂಪರ್ ಅವರು ಮಾಡಿದ ಸಮಾಜ ಸೇವೆ (Social Work) ಸೂಪರ್ ಅಂತ ಈಗnt ಸಮಾಧಿ ನೋಡಲು ಬರುತ್ತಿರುವ 20 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಹೇಳುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅಪ್ಪು ಫೋಟೋ ನೋಡಿದರೆ ಇಲ್ಲಿಯೇ ಎಲ್ಲೋ ಚಿತ್ರೀಕರಣ ಮಾಡುತ್ತಿದ್ದಾರೆ, ಆಗ ಸೆರೆ ಹಿಡಿದ ಫೋಟೋ ಎನಿಸುತ್ತದೆ.

Bidar: ನಮ್ಮ ಕಾರ್ಯಕರ್ತರು ನೋಡ್ಕೋತಾರೆ, ನಿಮ್ಮ ಅಗತ್ಯವಿಲ್ಲ, ಲೇಡಿ ಪಿಎಸ್ಐಗೆ ಗೆಟೌಟ್ ಎಂದ ಸಿಎಂ

Karnataka Rain alert to Omicron Guidelines to School top 10 News of december 6 ckm

ಬೀದರ್ (Bidar) ಪರಿಷತ್ ಅಖಾಡದಲ್ಲಿ ಸಂಬಂಧಿಕರ ನಡುವೆ ಬಿಗ್ ಫೈಟ್ ಶುರುವಾಗಿದೆ. ಬಿಜೆಪಿಯಿಂದ ಪ್ರಕಾಶ್ ಖಂಡ್ರೆ (Prakash Khandre) ಕಣಕ್ಕಿಳಿದರೆ, ಭೀಮರಾವ್ ಪಾಟೀಲ್ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಪರ ಸಿಎಂ ಬೊಮ್ಮಾಯಿ ಪ್ರಚಾರಕ್ಕಿಳಿದಿದ್ದಾರೆ. 

Petrol Rate:ಇಂದು ರಾಜ್ಯದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಾಗಿದೆಯಾ? ಇಲ್ಲಿದೆ ಮಾಹಿತಿ

Karnataka Rain alert to Omicron Guidelines to School top 10 News of december 6 ckm

ವಾಹನ ಸವಾರರಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರ ಇಳಿಕೆ ನಿರೀಕ್ಷೆ ಮುಂದುವರಿದಿರೋ ಬೆನ್ನಲ್ಲೇ ರಾಜ್ಯದಲ್ಲಿ ಇಂಧನ ದರ ಕಳೆದ ಕೆಲವು ದಿನಗಳಿಂದ ಸ್ಥಿರತೆ ಕಾಯ್ದುಕೊಂಡಿದೆ.

Car Prices: ಹೊಸ ವರ್ಷದಿಂದ ಕಾರು ಖರೀದಿದಾರರಿಗೆ ಶಾಕ್!

Karnataka Rain alert to Omicron Guidelines to School top 10 News of december 6 ckm

 ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ (Petrol, Diesel Price Hike) ಬರೆ ನಡುವೆಯೇ ಹೊಸ ವರ್ಷದಿಂದ ಕಾರುಗಳ ಬೆಲೆಯೂ ಏರಿಕೆಯಾಗಲಿದೆ. ಹೌದು, ಕಾರು ತಯಾರಿಕೆಗೆ ಅಗತ್ಯವಿರುವ ಕಚ್ಚಾ ಸಾಮಗ್ರಿಗಳ ಬೆಲೆ ಹೆಚ್ಚಳವಾಗಿರುವುದರಿಂದ ಮಾರುತಿ, ಟಾಟಾ ಮೋಟಾ​ರ್‍ಸ್ನಿಂದ ಮರ್ಸಿಡಿಸ್‌ ಮತ್ತು ಆಡಿ ವರೆಗೆ ಎಲ್ಲಾ ಕಾರುಗಳ ಬೆಲೆಯನ್ನು ಹೆಚ್ಚಿಸಲು ತಯಾರಿಕಾ ಕಂಪನಿಗಳು ನಿರ್ಧರಿಸಿವೆ. ಕಚ್ಚಾ ಸಾಮಗ್ರಿಗಳ ಬೆಲೆ ಏರಿಕೆ, ದುಬಾರಿ ತೆರಿಗೆ, ಸೆಮಿಕಂಡಕ್ಟರ್‌ಗಳ ಕೊರತೆ ಮುಂತಾದ ಕಾರಣಗಳಿಂದ ಬೆಲೆ ಹೆಚ್ಚಳಕ್ಕೆ ನಿರ್ಧರಿಸಿವೆ.

Latest Videos
Follow Us:
Download App:
  • android
  • ios