Asianet Suvarna News Asianet Suvarna News

Top 10 News ಹೊಸ ವರ್ಷಕ್ಕೂ ಮುನ್ನ ಕಮಿಷನರ್ ವಾರ್ನಿಂಗ್, ಮೋದಿ ಘನತೆ ಹಾಳುಮಾಡಲ್ಲ ಎಂದ ಟಿಕಾಯತ್!

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಮತಾಂತರ ನಿಷೇಧ ಮಸೂದೆ ಕಿತ್ತೊಗೆಯುವುದಾಗಿ ಭರವಸೆ ನೀಡಿದೆ. ಇದ್ದ ಪ್ರಧಾನಿ ಮೋದಿ ವರ್ಚಸ್ಸು ಹಾಳು ಮಾಡಲು ಯತ್ನಿಸುವುದಿಲ್ಲ ಎಂದು ರಾಕೇಶ್ ಟಿಕಾಯತ್ ಹೇಳಿದ್ದಾರೆ. ಹೊಸ ವರ್ಷ ಸಂಭ್ರಮದಿನ ಸುಮ್ಮನೆ ಓಡಾಡಲು ಬಿಡುವುದಿಲ್ಲ ಎಂದು ಕಮಿನಷರ್ ಎಚ್ಚರಿಸಿದ್ದಾರೆ. ಪ್ರಶಾಂತ್ ಸಂಬರ್ಗಿ ವಿರುದ್ಧ ದೂರು, ಹೊಸ ವರ್ಷಕ್ಕೆ ಟಾಟಾ ನೆಕ್ಸಾನ್ ಇವಿ ಕಾರು ಬಿಡುಗಡೆ ಸೇರಿದಂತೆ ಡಿಸೆಂಬರ್ 27ರ ಟಾಪ್ 10 ಸುದ್ದಿ ವಿವಿರ.

Karnataka New Year Guidelines to rakesh tikait on PM modi top 10 news of December 27 ckm
Author
Bengaluru, First Published Dec 27, 2021, 5:01 PM IST
  • Facebook
  • Twitter
  • Whatsapp

ಕಾಂಗ್ರೆಸ್ ಸರಕಾರ ಬಂದರೆ ವಾರದಲ್ಲಿ Anti-Conversion Act ಇರೋಲ್ಲ: ಸಿದ್ದರಾಮಯ್ಯ

Karnataka New Year Guidelines to rakesh tikait on PM modi top 10 news of December 27 ckm

ನಮ್ಮ ಸರ್ಕಾರ (Congress Govt) ಅಧಿಕಾರಕ್ಕೆ ಬಂದರೆ ಒಂದೇ ವಾರದಲ್ಲಿ ಮತಾಂತರ ವಿಧೇಯಕ ಹಿಂಪಡೆಯುತ್ತೇವೆ.  ಮತಾಂತರ ನಿಷೇಧ ಕಾಯ್ದೆ (anti conversion Bill) ಕಿತ್ತೆಸೆಯುತ್ತೇವೆ ಎಂದು ವಿಪಕ್ಷ ನಾಯಕ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದರು. ಬೆಂಗಳೂರಿನಲ್ಲಿಂದು (Bengaluru ) ಮಾತನಾಡಿದ ಮಾಜಿ ಸಿಎಂ ಮೊದಲ ಅಧಿವೇಶನದಲ್ಲೇ ಕಾಯ್ದೆ ಹಿಂಪಡೆದು ಎಸೆಯುತ್ತೇವೆ.

ದಾರಿ ತಪ್ಪಿದ CM Bommai ಕಾರು : ಕೊಂಕಣ ಸುತ್ತಿ ಮೈಲಾರಕ್ಕೆ ಬಂದ ಮುಖ್ಯಮಂತ್ರಿ

Karnataka New Year Guidelines to rakesh tikait on PM modi top 10 news of December 27 ckm

 ಕೊಂಕಣ ಸುತ್ತಿ‌ ಮೈಲಾರಕ್ಕೆ ಬಂದ ಹಾಗೇ ಬಸವನ ಗುಡಿಯ ಕಾರ್ಯಕ್ರಮಕ್ಕೆ  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಆಗಮಿಸಿದರು.  ಬಸವನಗುಡಿ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಕೋವಿಡ್ ಮೃತರಿಗೆ ಪರಿಹಾರ ಹಂಚಿಕೆ ಕಾರ್ಯಕ್ರಮ ಏರ್ಪಡಿಸಿದ್ದು ಕಾರ್ಯಕ್ರಮಕ್ಕೆ ತೆರಳುವಾದ ಸಿಎಂ (CM) ಇದ್ದ ವಾಹನ (Vehicle) ದಾರಿ ತಪ್ಪಿದ ಪ್ರಸಂಗ ಜರುಗಿತು. 

Farmer Protest Issues: ಪ್ರಧಾನಿ ಕ್ಷಮೆ ಯಾಚಿಸುವುದನ್ನು ರೈತರು ಬಯಸುವುದಿಲ್ಲ : ರಾಕೇಶ್‌ ಟಿಕಾಯತ್‌

Karnataka New Year Guidelines to rakesh tikait on PM modi top 10 news of December 27 ckm

ರೈತರು ಪ್ರಧಾನಿಯವರಿಂದ ಕ್ಷಮೆ ಯಾಚನೆಯನ್ನು ಬಯಸುವುದಿಲ್ಲ. ಹಾಗೆಯೇ ವಿದೇಶದಲ್ಲಿ ಅವರ ಘನತೆಯನ್ನು ಹಾಳು ಮಾಡಲು ಬಯಸುವುದಿಲ್ಲ ಎಂದು ಭಾರತೀಯ ಕಿಸಾನ್ ಯೂನಿಯನ್‌ ನಾಯಕ ರಾಕೇಶ್‌ ಟಿಕಾಯತ್‌ ಹೇಳಿದ್ದಾರೆ. 

Vishnuvardhan ಮತ್ತು ಕ್ರಿಕೆಟರ್ Anil Kumble ಸಂಬಂಧಿಕರು!

Karnataka New Year Guidelines to rakesh tikait on PM modi top 10 news of December 27 ckm

ಇಡೀ ವಿಶ್ವವೇ ಮೆಚ್ಚಿ ಮೆರೆಸಿರುವ ಭೂಮಿ ತೂಕದ ಮನುಷ್ಯ, ಸ್ಪಿನ್ ಮಾಂತ್ರಿಕ, ಕ್ರಿಕೆಟ್ ದಿಗ್ಗಜ, ನಮ್ಮೆಲ್ಲರ ಪ್ರೀತಿಯ ಹೆಮ್ಮೆಯ ಕನ್ನಡಿಗ ಜಂಬೋ ಅನಿಲ್ ಕುಂಬ್ಳೆ (Anil Kumble) ಮತ್ತು ಅವರ ಪತ್ನಿ ಚೇತನಾ (Chetana) ಕೆಲವು ದಿನಗಳ ಹಿಂದೆ ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸರಿಗಮಪ ಚಾಂಪಿಯನ್ ಶಿಪ್ ವೇದಿಕೆಯಲ್ಲಿ (Saregamapa Championship) ಭಾಗಿಯಾಗಿದ್ದರು. ಈ ವೇಳೆ ತಮ್ಮ ನೆಚ್ಚಿನ ಹಾಡುಗಳನ್ನು ಹಾಡುತ್ತಾ, ಸಿನಿ ಜಗತ್ತಿನ ಜೊತೆಗಿರುವ ಸಂಬಂಧದ ಬಗ್ಗೆ ಹಂಚಿಕೊಂಡಿದ್ದಾರೆ

ನನ್ನ ಮಗ Rashmika Mandanna ಒಟ್ಟಿಗೆ ಜಿಮ್ ಮಾಡ್ತಾರೆ, ಬಿಟ್ಬಿಟಿಯಲ್ಲೋ ಅಂದೆ!: ಕ್ರೇಜಿಸ್ಟಾರ್

Karnataka New Year Guidelines to rakesh tikait on PM modi top 10 news of December 27 ckm

ಕಿರಿಕ್ ಪಾರ್ಟಿ' (Kirik Party) ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ (Sandalwood) ಜರ್ನಿ ಆರಂಭಿಸಿದ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಇದೀಗ ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ. 

FIR Against Prashanth Sambargi: ಪ್ರಶಾಂತ್ ಸಂಬರಗಿ  ಮತ್ತೆ ಸುದ್ದಿಯಲ್ಲಿ

Karnataka New Year Guidelines to rakesh tikait on PM modi top 10 news of December 27 ckm

ಸಾಮಾಜಿಕ ಜಾಲತಾಣದಲ್ಲಿ ಒಂದಲ್ಲ ಒಂದು ವಿಚಾರದ ಬಗ್ಗೆ ವಿವಾದ ಹುಟ್ಟುಹಾಕಿ ಸದಾ ಸುದ್ದಿಯಾಗುವ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ(Prashanth Sambaragi) ವಿರುದ್ಧ ಎಫ್​ಐಆರ್​ ದಾಖಲಾಗಿದೆ.

Realme 9i Leak: 50MP ಪ್ರೈಮರಿ ಕ್ಯಾಮೆರಾ, 5000mAh ಬ್ಯಾಟರಿಯೊಂದಿಗೆ ಶೀಘ್ರದಲ್ಲೇ ಬಿಡುಗಡೆ?

Karnataka New Year Guidelines to rakesh tikait on PM modi top 10 news of December 27 ckm

ಅಲಿ ಎಕ್ಸ್‌ಪ್ರೆಸ್ ಲೀಕ್‌ ಪ್ರಕಾರ Realme 9i, 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 16-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿರಬಹುದು ಎಂದು ಹೇಳಲಾಗಿದೆ.

IT Return 2021: ಈ 5 ಮಾಹಿತಿಗಳನ್ನು ಉಲ್ಲೇಖಿಸದಿದ್ರೆ ತೊಂದರೆ ಗ್ಯಾರಂಟಿ!

Karnataka New Year Guidelines to rakesh tikait on PM modi top 10 news of December 27 ckm

2020-21ನೇ ಸಾಲಿನ ಆದಾಯ ತರಿಗೆ  ರಿಟರ್ನ್ಸ್ (Income Tax Returns) ಸಲ್ಲಿಕೆಗೆ ಡಿಸೆಂಬರ್ 31 ಕೊನೆಯ ದಿನವಾಗಿದೆ.  ಆದಾಯ ತೆರಿಗೆ ಇಲಾಖೆ (Income Tax Department)ಇಂದು (ಡಿ.27) ನೀಡಿರೋ ಮಾಹಿತಿ ಪ್ರಕಾರ ಈ ತನಕ 4.50ಕೋಟಿಗೂ ಅಧಿಕ ಜನರು ಐಟಿ ರಿಟರ್ನ್ಸ್ ಸಲ್ಲಿಕೆ ಮಾಡಿದ್ದಾರೆ.

Electric Cars ಹೊಸ ವರ್ಷಕ್ಕೆ ಟಾಟಾದಿಂದ ಗೂಡ್ ನ್ಯೂಸ್, 400+ ಮೈಲೇಜ್ ಟಾಟಾ ನೆಕ್ಸಾನ್ EV ಬಿಡುಗಡೆ ರೆಡಿ!

Karnataka New Year Guidelines to rakesh tikait on PM modi top 10 news of December 27 ckm

ಟಾಟಾ ಮೋಟಾರ್ಸ್ ಭಾರತದ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯನ್ನು ಆಕ್ರಮಿಸಿಕೊಳ್ಳುತ್ತಿದೆ. ಸದ್ಯ ಕಡಿಮೆಗೆ ಬೆಲೆಗೆ ಅತ್ಯುತ್ತಮ ಎಲೆಕ್ಟ್ರಿಕ್ ಕಾರು ನೀಡುತ್ತಿರುವ ಟಾಟಾ ಮೋಟಾರ್ಸ್ ಇದೀಗ ಮತ್ತೊಂದು ಸಿಹಿ ಸುದ್ದಿ ನೀಡಿದೆ. ಟಾಟಾ ಮೋಟಾರ್ಸ್ ಅಮೆರಿಕದ ಟೆಸ್ಲಾ ಕಾರುಗಳಿಗೆ ಪೈಪೋಟಿ ನೀಡಲು ಇದೀಗ 500ಕ್ಕಿಂತ ಹೆಚ್ಚು ಕಿಲೋಮೀಟರ್ ಮೈಲೇಜ್ ನೀಡಬಲ್ಲ ಕಾರು ಬಿಡುಗಡೆ ಮಾಡಲು ಸಜ್ಜಾಗಿದೆ. ಹೊಸ ವರ್ಷದಲ್ಲಿ ನೂತನ ಟಾಟಾ ನೆಕ್ಸಾನ್ ಇವಿ ಕಾರು ಬಿಡುಗಡೆಯಾಗಲಿದೆ.

New Year 2022: ಪಾಸ್ ಕೊಡಲ್ಲ, ಸುಮ್ಮನೆ ಓಡಾಡಿದ್ರೆ ಬಿಡಲ್ಲ, ಕಮಿಷನರ್ ಪಂತ್ ಆದೇಶ

Karnataka New Year Guidelines to rakesh tikait on PM modi top 10 news of December 27 ckm

ರಾಜ್ಯ ಸರ್ಕಾರದ ಮಾರ್ಗಸೂಚಿ ಅನ್ವಯ ಈ ಬಾರಿ ಹೊಸ ವರ್ಷಾಚರಣೆ (New Year 2022) ಮಾಡಬೇಕು. ಸಾರ್ವಜನಿಕ ಸ್ಥಳದಲ್ಲಿ ಸಂಭ್ರಮಾಚರಣೆ ಕಾರ್ಯಕ್ರಮ ಆಯೋಜನೆಗೆ ಅವಕಾಶವಿಲ್ಲ ಎಂದು ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ (Kamal Panth) ತಿಳಿಸಿದ್ದಾರೆ.
 
Follow Us:
Download App:
  • android
  • ios