FIR Against Prashanth Sambargi: ಪ್ರಶಾಂತ್ ಸಂಬರಗಿ  ಮತ್ತೆ ಸುದ್ದಿಯಲ್ಲಿ

* ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ  ಮತ್ತೆ ಸುದ್ದಿಯಲ್ಲಿ 
* ವಿವಾದ ಹುಟ್ಟುಹಾಕಿ ಸದಾ ಸುದ್ದಿಯಾಗುವ ಪ್ರಶಾಂತ್ ಸಂಬರಗಿ
* ಬೆಂಗಳೂರು ದಕ್ಷಿಣ ಸೈಬರ್ ಪೊಲೀಸ್ ​ ಠಾಣೆಯಲ್ಲಿ ಸಂಬರಗಿ ದೂರು ದಾಖಲು

advocate Files complaint against prashanth sambargi for post on social media on DK Brothers rbj

ಬೆಂಗಳೂರು, (ಡಿ.27): ಸಾಮಾಜಿಕ ಜಾಲತಾಣದಲ್ಲಿ ಒಂದಲ್ಲ ಒಂದು ವಿಚಾರದ ಬಗ್ಗೆ ವಿವಾದ ಹುಟ್ಟುಹಾಕಿ ಸದಾ ಸುದ್ದಿಯಾಗುವ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ(Prashanth Sambaragi) ವಿರುದ್ಧ ಎಫ್​ಐಆರ್​ ದಾಖಲಾಗಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್9DK Shivakumar) ಹಾಗೂ ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್(DK Suresh) ಬಗ್ಗೆ ಅವಹೇಳನಕಾರಿ ಪೋಸ್ಟ್​ ಹಾಗೂ ಸಾಮಾಜಿಕ ಜಾಲತಾಣದಲ್ಲಿ (Social Media) ಪ್ರಚೋದನಕಾರಿ ಪೋಸ್ಟ್​ ಆರೋಪ ಹಿನ್ನೆಲೆಯಲ್ಲಿ ದೂರು ​ ದಾಖಲು ಮಾಡಲಾಗಿದೆ.

ಸಂಬರಗಿ ವಿರುದ್ಧ ಚಂದ್ರಚೂಡ್‌ ಪೊಲೀಸ್‌ ಆಯುಕ್ತರಿಗೆ ದೂರು

ಬೆಂಗಳೂರು ದಕ್ಷಿಣ ಸೈಬರ್ ಪೊಲೀಸ್ ​ ಠಾಣೆಯಲ್ಲಿ ಪ್ರಕರಣ​ ದಾಖಲಾಗಿದೆ. ಪ್ರಶಾಂರ್ ಸಂಬರಗಿ ವಿರುದ್ಧ ಕೋಮುಭಾವನೆ ಕೆರಳಿಸುವ ಪೋಸ್ಟ್​ ಹಾಕಿರುವ ಆರೋಪ ಕೇಳಿಬಂದಿದೆ. ವಕೀಲ ಸಿ. ಲಕ್ಷ್ಮೀ ನಾರಾಯಣ ಎನ್ನುವವರ ದೂರಿನ ಮೇರೆಗೆ ಎಫ್​ಐಆರ್​ ದಾಖಲಾಗಿದೆ.

ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿಯವರು ಡಿಕೆ ಶಿವಕುಮಾರ್ ಉರೂಪ್ ಡಿಕೆಎಸ್ ದೊಡ್ಡ ದೊಡ್ಡ ಬಂಡೆಗಳನ್ನೇ ಒಡೆದು ಹಾಕಿದವನಿಗೆ Anti Conversion ಬಿಲ್ಲು ಹರಿಯೋದು ಕಷ್ಟವೇನಲ್ಲ ಬಿಡಿ ಎಂಬುದಾಗಿ ಕೋಮುಭಾವನೆ ಕೆರಳಿಸುವಂತ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದರು.

ಈ ದೂರಿನ ಬಗ್ಗೆಯೂ ಫೇಸ್ ಬುಕ್ ನಲ್ಲಿ ಪ್ರತಿಕ್ರಿಯಿಸಿರುವ ಪ್ರಶಾಂತ್ ಸಂಬರಗಿ, ದುರಾದೃಷ್ಠಕರ ಸಂಗತಿ ನೋಡಿ.. ಕಾಂಗ್ರೆಸ್ ಗುಲಾಮರೊಬ್ಬರು ನನ್ನ ವಿರುದ್ಧ ದೂರು ದಾಖಲಿಸಿದ ಪರಿಣಾಮ, ಎಫ್ಐಆರ್ ದಾಖಲಿಸಲಾಗಿದೆ. ಇದು ನಾನು ಡಿಕೆ ಶಿವಕುಮಾರ್ ವಿರುದ್ಧ ಧ್ವನಿ ಎತ್ತಿದ ಕಾರಣದಿಂದ ಆಗಿದೆ ಎಂದಿದ್ದಾರೆ.

 ಸಂಬರಗಿ ವಿರುದ್ಧ ದೂರು ನೀಡಿದ್ದ ಜಮೀರ್
 ಡ್ರಗ್ಸ್ ಪ್ರಕರಣದಲ್ಲಿ ಶಾಸಕ ಜಮೀರ್ ಅಹಮ್ಮದ್ ಖಾನ್ ಅವರ ವಿರುದ್ಧ ಅನುಮಾನ ಬರುವಂತೆ ಹೇಳಿಕೆಗಳನ್ನು ನೀಡಿದ್ದ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ವಿರುದ್ಧ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ.

ಪ್ರಶಾಂತ್ ಸಂಬರಗಿ ಅವರು ಪತ್ರಿಕಾಗೋಷ್ಠಿ ನಡೆಸಿ ಶಾಸಕ ಜಮೀರ್ ಅಹಮ್ಮದ್‍ಖಾನ್ ವಿರುದ್ಧ ಹೇಳಿಕೆಗಳನ್ನು ನೀಡಿದ್ದರು.

ಈ ಸಂಬಂಧಪಟ್ಟಂತೆ ಜಮೀರ್ ಅಹಮ್ಮದ್ ಖಾನ್ ಅವರು ತಮ್ಮ ವಕೀಲರ ಮೂಲಕ ಚಾಮರಾಜಪೇಟೆ ಠಾಣೆಗೆ ದೂರು ನೀಡಿದ್ದರು. ಆದರೆ, ಕೇಸು ದಾಖಲಾಗಿರಲಿಲ್ಲ. ಹೀಗಾಗಿ ಎಸಿಎಂಎಂ ನ್ಯಾಯಾಲಯದ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು, ಪ್ರಶಾಂತ್ ಸಂಬರಗಿ ವಿರುದ್ಧ ಕೇಸು ದಾಖಲಿಸಿ ವಿಚಾರಣೆ ನಡೆಸುವಂತೆ ಸೂಚನೆ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಚಾಮರಾಜಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಐಪಿಸಿ 120ಬಿ(ಸಂಚು), 504 (ಉದ್ದೇಶ ಪೂರ್ವಕವಾಗಿ ಅವಮಾನ ಮಾಡಿ ಸಾರ್ವಜನಿಕ ಶಾಂತಿ ಭಂಗ ಮಾಡುವುದು), 463 ( ವಿದ್ಯುನ್ಮಾನ ದಾಖಲೆಗಳನ್ನು ತಿರುಚುವುದು), 465 (ನಕಲು ದಾಖಲೆಗಳನ್ನು ಸೃಷ್ಟಿಸುವುದು), 506 (ಬೆದರಿಕೆ ಹಾಕುವುದು) ಆರೋಪದಡಿ ಪ್ರಕರಣಗಳನ್ನು ದಾಖಲಿಸಲಾಗಿತ್ತು.

ಇತ್ತೀಚಿನ ದಿನಗಳಲ್ಲಿ ಪ್ರಶಾಂತ್ ಸಂಬರಗಿ ಹೆಚ್ಚು ಸುದ್ದಿಯಲ್ಲಿದ್ದು, ಡ್ರಗ್ಸ್ ಪ್ರಕರಣದಲ್ಲಿ ಕನ್ನಡ ಚಿತ್ರರಂಗದ ಅನೇಕರು ಭಾಗವಹಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಶಾಸಕ ಜಮೀರ್ ಅಹಮ್ಮದ್ ಖಾನ್ ಹೆಸರು ಹೇಳದೆ ಡ್ರಗ್ಸ್ ಪೆಡ್ಲರ್‍ಗಳೊಂದಿಗೆ ಸಂಬಂಧ ಹೊಂದಿರುವುದಾಗಿ ಪರೋಕ್ಷ ಆರೋಪ ಮಾಡಿದ್ದರು.

ದೂರು ನೀಡಿದ್ದ ಪತ್ರಕರ್ತ ಚಂದ್ರಚೂಡ್
ಸ್ಯಾಂಡಲ್‌ವುಡ್ ಡ್ರಗ್ ಪ್ರಕರಣದ 'ಮಾಹಿತಿದಾರ' ಎಂದೆನಿಸಿಕೊಂಡು ಸುದ್ದಿ ಕೇಂದ್ರಕ್ಕೆ ಬಂದಿದ್ದ ಪ್ರಶಾಂತ್ ಸಂಬರಗಿ ವಿರುದ್ಧ ಪತ್ರಕರ್ತ ಚಕ್ರವರ್ತಿ ಚಂದ್ರಚೂಡ್ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು.

ಸಂಬರಗಿ ಎಂಬ ವ್ಯಕ್ತಿ ರಾಜಕಾರಣಿಗಳು ಹಾಗೂ ನಟಿಯರನ್ನು ಗುರಿಯಾಗಿಸಿಕೊಂಡು ಸಾಕ್ಷಿಗಳು ಇಲ್ಲದೇ ಸುಳ್ಳು ಆರೋಪ ಮಾಡಿ ದಾಖಲಾತಿ ಮಾಡುವುದಾಗಿ ಬೆದರಿಕೆ ಹಾಕಿ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ಹೀಗಾಗಿ ಸಂಬರಗಿಯನ್ನು ವಿಚಾರಣೆಗೆ ನಡೆಸಿ ಕಾನೂನು ಕ್ರಮ ಜರುಗಿಸಬೇಕು ಎಂದು ದೂರುದಾರ ಮನವಿ ಮಾಡಿದ್ದರು.

ಕುಸುಮಾ ತಂಟೆಗೆ ಹೋಗಿದ್ದ ಸಂಬರಗಿ
ಕಾಂಗ್ರೆಸ್‌ಗೆ ಸೇರ್ಪಡೆಗೊಂಡ ಕುಸುಮಾ ಅವರ ತಲೆ ಮೇಲೆ ಕೈಯಿಟ್ಟು ಡಿಕೆ ಶಿವಕುಮಾರ್‌ ಆಶೀರ್ವಾದ ಮಾಡುವ ಫೋಟೋ ವೈರಲ್ ಆಗಿತ್ತು. ಇದನ್ನು ಫೇಸ್‌ಬುಕ್‌ನಲ್ಲಿ ಅಪ್ಲೋಡ್‌ ಮಾಡಿರುವ ಪ್ರಶಾಂತ್ ಸಂಬರಗಿ 'ಕುಸುಮಾ ಅವರ ಬ್ಯಾಡ್‌ ಲಕ್‌ ಡಿಕೆ ರವಿಯಿಂದ ಡಿಕೆ ಶಿವಕುಮಾರ್‌ಗೆ ಹಸ್ತಾಂತರ ಆಗುತ್ತಿದೆ' ಎಂದಿದ್ದರು.

ಮಹಿಳೆಯರ ಬಗ್ಗೆ ಈ ರೀತಿಯ ಸ್ಟೇಟಸ್‌ ಹಾಕಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತವಾಗಿತ್ತು. ಇದಕ್ಕೆ ಸ್ವತಃ ಕುಸುಮಾ ಫೇಸ್‌ಬುಕ್‌ನಲ್ಲಿ ಪ್ರತಿಕ್ರಿಯಿಸಿ, ಯಾರನ್ನೋ ಮೆಚ್ಚಿಸುವ ಭರದಲ್ಲಿ ನನ್ನ ಅದೃಷ್ಟ(Luck) ವಿಷಯವನ್ನು ಪ್ರಸ್ತಾಪಿಸಿದ್ದೀರಿ. ಎಲ್ಲರ ಬದುಕಿನಲ್ಲಿ ಇಣುಕುವ ನೀವು ಹಿಂದೆ-ಮುಂದೆ ತಿಳಿಯದೇ ಇನ್ನೊಬ್ಬರ ಚಾರಿತ್ರ್ಯವಧೆಗೆ ಇಳಿಯುವುದು ನಿಮ್ಮ ಘನತೆಗೆ ಶೋಭೆ ತರುವಂತದಲ್ಲ ಎಂಬುದು ನನ್ನ ಅನಿಸಿಕೆ ಎಂದು ತಿರುಗೇಟು ಕೊಟ್ಟಿದ್ದರು.

Latest Videos
Follow Us:
Download App:
  • android
  • ios