Vishnuvardhan ಮತ್ತು ಕ್ರಿಕೆಟರ್ Anil Kumble ಸಂಬಂಧಿಕರು!

ಸರಿಗಮಪ ವೇದಿಕೆ ಮೇಲೆ ಡಾ.ವಿಷ್ಣುವರ್ಧನ್ ಹಾಡುಗಳನ್ನು ಎಂಜಾಯ್ ಮಾಡಿದ ಅನಿಲ್ ಕುಂಬ್ಳೆ
 

Kannada Cricketer Anil Kumble share memories with cousin late actor Vishnuvardhan vcs

ಇಡೀ ವಿಶ್ವವೇ ಮೆಚ್ಚಿ ಮೆರೆಸಿರುವ ಭೂಮಿ ತೂಕದ ಮನುಷ್ಯ, ಸ್ಪಿನ್ ಮಾಂತ್ರಿಕ, ಕ್ರಿಕೆಟ್ ದಿಗ್ಗಜ, ನಮ್ಮೆಲ್ಲರ ಪ್ರೀತಿಯ ಹೆಮ್ಮೆಯ ಕನ್ನಡಿಗ ಜಂಬೋ ಅನಿಲ್ ಕುಂಬ್ಳೆ (Anil Kumble) ಮತ್ತು ಅವರ ಪತ್ನಿ ಚೇತನಾ (Chetana) ಕೆಲವು ದಿನಗಳ ಹಿಂದೆ ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸರಿಗಮಪ ಚಾಂಪಿಯನ್ ಶಿಪ್ ವೇದಿಕೆಯಲ್ಲಿ (Saregamapa Championship) ಭಾಗಿಯಾಗಿದ್ದರು. ಈ ವೇಳೆ ತಮ್ಮ ನೆಚ್ಚಿನ ಹಾಡುಗಳನ್ನು ಹಾಡುತ್ತಾ, ಸಿನಿ ಜಗತ್ತಿನ ಜೊತೆಗಿರುವ ಸಂಬಂಧದ ಬಗ್ಗೆ ಹಂಚಿಕೊಂಡಿದ್ದಾರೆ. 

ಸಿನಿಮಾ (Film), ಕ್ರಿಕೆಟ್ (Cricket) ಬಗ್ಗೆ ಮಾತನಾಡಿದ ಅನಿಲ್ ಕುಂಬ್ಳೆ ಅವರು  ಸಾಹಸ ಸಿಂಹ ವಿಷ್ಣುವರ್ಧನ್ (Dr Vishnuvardhan) ಜೊತೆಗಿರುವ ಸಂಬಂಧದ ಬಗ್ಗೆ ಹಂಚಿಕೊಂಡಿದ್ದಾರೆ.  ಡಾ.ವಿಷ್ಣುವರ್ಧನ್ ಅವರು ಸ್ವಂತ ಅನಿಲ್ ಕುಂಬ್ಳೆ ಅವರ ತಾಯಿಯ ಕಸಿನ್ (Mother cousine) ಅಂತೆ. ಕ್ರಿಕೆಟ್ ಕ್ಷೇತ್ರದಲ್ಲಿ ಅನಿಲ್ ಅವರ ಸಾಧನೆ ಕಂಡು ಅವರನ್ನು ಗೌರವಿಸಬೇಕೆಂದು ವಿಷ್ಣುವರ್ಧನ್ ಅವರು ವಿಶೇಷ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದ್ದರಂತೆ. ಅನಿಲ್ ಅವರಿಗೆ ತಿಳಿಯದಂತೆ ಇಡೀ ಕುಟುಂಬದವರನ್ನು ಕರೆಯಿಸಿ ಎಲ್ಲರ ಎದುರು ಸನ್ಮಾನಿಸಿ ಗೌರವಿಸಿದ್ದರು ಎನ್ನಲಾಗಿದೆ. ಈ ವೇಳೆ ಅನಿಲ್ ಅವರಿಗೆ ಒಂದು ಕ್ರಿಕೆಟ್ ಬ್ಯಾಟನ್ನು ಗಿಫ್ಟ್‌ (Cricket Bat gift) ಆಗಿ ನೀಡಿದ್ದರಂತೆ.ಈ ಬ್ಯಾಟ್ ಮೇಲೆ ಇಡೀ ಕುಟುಂಬಸ್ಥರು ಸಾಲುಗಳನ್ನು ಬರೆದು ಹಾರೈಸಿದ್ದಾರೆ. ಈದೆಲ್ಲಾ ಸಾಧ್ಯವಾಗಿದ್ದು ವಿಷ್ಣು ಅಂಕಲ್‌ ಅವರಿಂದ ಮಾತ್ರ ಈಗಲ್ಲೂ ನನ್ನ ಬಳಿ ಆ ಬ್ಯಾಟ್ ಇದೆ ಎಂದು ಮಾತನಾಡಿದ್ದಾರೆ. 

Kannada Cricketer Anil Kumble share memories with cousin late actor Vishnuvardhan vcs

ಶಿವಣ್ಣ ಫ್ಯಾನ್:
ಅನಿಲ್ ಕುಂಬ್ಳೆ ಅವರು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ (Shivarajkumar) ಅವರ ಅಭಿಮಾನಿಯಂತೆ. ಅವರ ಬಗ್ಗೆನೂ ವೇದಿಕೆ ಮೇಲೆ ನಿರೂಪಕಿ ಅನುಶ್ರೀ (Anushree) ಪ್ರಶ್ನೆ ಮಾಡಿದ್ದಾಗ ಉತ್ತರಿಸಿದ್ದಾರೆ. 'ಅವರು ತುಂಬಾನೇ ಹಂಬಲ್. ಶಿವಣ್ಣ ಅವರನ್ನು ಯಾವಾಗ ಮೀಟ್ ಮಾಡಿದಾಗಸೂ ನಮಗೆ ಅನಿಸೋದೆ ಇಲ್ಲ ಅವರು ಸೂಪರ್ ಸ್ಟಾರ್ ಅಂತ. ಅವರು ಹುಟ್ಟಿದಾಗಲೇ ಸೂಪರ್ ಸ್ಟಾರ್. ಅವರು ಡಾ.ರಾಜ್‌ಕುಮಾರ್ (Dr.Rajkumar) ಅವರ ಮಗ,' ಎಂದು ಮಾತನಾಡುತ್ತಾ ಒಂದು ಘಟನೆ ವಿವರಿಸಿದ್ದಾರೆ. 

Anil Kumble In Saregamapa: ಸರಿಗಮಪ ಚಾಂಪಿಯನ್ ಶಿಪ್ ಸಂಗೀತ ಹಬ್ಬದಲ್ಲಿ ಜಂಬೋ ಸವಾರಿ

'ಎಲ್ಲರಿಗೂ ಈ ಒಂದು ಮ್ಯಾಚ್ ಬಗ್ಗೆ ಚೆನ್ನಾಗಿ ಗೊತ್ತಿದೆ. ಇಲ್ಲೇ ಬೆಂಗಳೂರು ಚಿನ್ನಸ್ವಾಮಿ ಸ್ಟೇಡಿಯಮ್‌ನಲ್ಲಿ (Chinnaswamy Stadium) ನಾನು ಮತ್ತು ಜಾವಗಲ್ ಶ್ರೀನಾಥ್ (Javagal Srinath) ಪಾರ್ಟನರ್‌ಶಿಪ್ ಆಸ್ಟ್ರೇಲಿಯಾ ವಿರುದ್ಧ 55 ರನ್ ಬೇಕಾಗಿತ್ತು. ನಾವಿಬ್ಬರು ಆ ಮ್ಯಾಚ್‌ ಅನ್ನು ಗೆಲ್ಸಿದ್ವಿ. ಆಮೇಲೆ ಶಿವಣ್ಣ ಅವರು ನನಗೆ ಒಂದು ಮಾತು ಹೇಳಿದ್ದರು. ಹೀಗೆ ಕ್ರಿಕೆಟ್ ಬಗ್ಗೆ ಮಾತು ಬಂದಾಗ 'ಸರ್ ತಪ್ಪಾಯ್ತು' ಅಂದ್ರು. ಯಾಕೆ ಏನ್ ಆಯ್ತು ಅಂದೆ. 'ಆ ಮ್ಯಾಚ್‌ನಿಂದ ನೀವು ಸೋಲ್ತೀರಾ ಅಂತ ನಾನು ಎದ್ದು ಹೋರಟೋದೆ ಸರ್,' ಅಂತ ಹೇಳಿದ್ದರು. ಅವರು ಮನೆ ವಾಪಸ್ ಹೋದಾಗ ಅವರ ತಂದೆ ಕೂತ್ಕೊಂಡು ಮ್ಯಾಚ್ ನೋಡುತ್ತಿದ್ದರಂತೆ. 'ಯಾಕಯ್ಯಾ ಬಂದೆ ನೋಡು ನಾವು ಗೆಲ್ತಾ ಇದ್ದೀವಿ' ಅಂದ್ರಂತೆ' ಎಂದು ಆ ಘಟನೆ ಬಗ್ಗೆ ಅನಿಲ್ ಮಾತನಾಡಿದ್ದಾರೆ. 

'ನಾನು ಬ್ಯಾಟ್ ಹಿಡಿದುಕೊಂಡು ಗ್ರೌಂಡ್‌ಗೆ ಹೋಗ್ತಿದ್ದೀನಿ. ಆಕೆ ಈ ಕಡೆ ನೋಡಿದರೆ ಎಲ್ಲರೂ ವಾಪಸ್ ಹೋಗ್ತಿದ್ದಾರೆ ಮನೆಗೆ. ನಾನು ಹೇಳ್ದೆ ಇದೇನಪ್ಪ ಇದು ಬೆಂಗಳೂರಿನಲ್ಲಿ (Bengaluru) ಹುಟ್ಟಿ ಬೆಳೆದು, ಈ ಗ್ರೌಂಡ್‌ನಲ್ಲೇ ಆಟವಾಡಿ, ಇಲ್ಲಿಯೇ ಆಟ ಆಡ್ತಾ ಇದ್ದೀವಿ. ನೋಡು ಎಲ್ಲರೂ ನಮ್ಮ ಬೆಂಗಳೂರಿನವರು ವಾಪಸ್ ಹೋಗ್ತಿದ್ದಾರೆ. ಸರ್ ಬಿಡಿ ಆಯ್ತು ತೋರ್ಸ್ತೀನಿ. ಗೆಲ್ಲಿಸೋಣ ಅಂತ. ಇನ್ನೊಂದು ಕಾರಣಕ್ಕೆ ಯಾಕೆ ಜನ ಅದನ್ನು ನೆನಪಿಸಿಕೊಳ್ಳುತ್ತಾರೆ ಅಂದ್ರೆ ಅದು ಒಂದೇ ಸಾರಿ ಮಾತ್ರ ಅಂತ ಮ್ಯಾಚ್ ಆಗಿದ್ದು,' ಎಂದು ಮಾತನಾಡಿದ್ದಾರೆ.

Latest Videos
Follow Us:
Download App:
  • android
  • ios