ರಾಜ್ಯ ರೈತ ನಾಯಕ ಕುರುಬೂರು ಶಾಂತಕುಮಾರ್ ಕಾರು ಅಪಘಾತ, ಆಸ್ಪತ್ರೆ ದಾಖಲು
ಕರ್ನಾಟಕದ ರೈತ ಮುಖಂಡನಾಗಿ ಹಲವು ರೈತ ಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ ನಾಯಕ ಕುರುಬೂರು ಶಾಂತಕುಮಾರ್ ಸಂಚರಿಸುತ್ತಿದ್ದ ಕಾರು ಅಪಘಾಕ್ಕೀಡಾಗಿದೆ. ಪಂಜಾಬ್‌ನಲ್ಲಿ ಆಯೋಜಿಸಿದ್ದ ರೈತ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಹಲವು ಕಾರುಗಳ ನಡುವೆ ಅಪಘಾತ ಸಂಭವಿಸಿದೆ. ಇದರ ಪರಿಣಾಮ ಕುರುಬೂರು ಶಾಂತಕುಮಾರ್ ಗಾಯಗೊಂಡಿದ್ದಾರೆ. ತಕ್ಷಣವೇ ಕುರುಬೂರು ಶಾಂತಕುಮಾರ್ ಅವರನ್ನು ಪಂಜಾಬ್‌ನ ಪಟಿಯಾಲದ ರಾಜೇಂದ್ರ ಆಸ್ಪತ್ರೆಗೆ ದಾಖಲಿಸಲಾಗಿದೆ. ದೆಹಲಿಯಿಂದ ಪಂಜಾಬ್ ಕಡೆ ಪ್ರಯಾಣಿಸುವಾಗ ಈ ಘಟನೆ ನಡೆದಿದೆ. ಹಲವು ಕಾರುಗಳ ನಡುವೆ ಅಪಘಾತವಾಗಿರುವ ಕಾರಣ ಶಾಂತಕಮಾರ್ ಅವರ ಎಡಗೈ, ಎಡ ಕಾಲಿಗೆ ಗಾಯವಾಗಿದೆ. ಜೊತೆಗೆ ಸ್ಪೈನಲ್ ಕಾರ್ಡ್ ಕೂಡ ಗಾಯಗೊಂಡಿದೆ.
ಮಹಾಕುಂಭದಲ್ಲಿ 50 ಕೋಟಿ ಭಕ್ತರಿಂದ ಪುಣ್ಯಸ್ನಾನ, ಯುಪಿ ಸರ್ಕಾರ
ಮಹಾಕುಂಭ ಮೇಳದಲ್ಲಿ ಇದುವರಗೆ ಬರೋಬ್ಬರಿ 50 ಕೋಟಿ ಭಕ್ತರು ಪುಣ್ಯಸ್ನಾನ ಮಾಡಿದ್ದಾರೆ ಎಂದು ಉತ್ತರ ಪ್ರದೇಶ ಸರ್ಕಾರ ಅಂಕಿ ಅಂಶ ನೀಡಿದೆ. 40 ರಿಂದ 45 ಕೋಟಿ ಭಕ್ತರನ್ನು ಯುಪಿ ಸರ್ಕಾರ ನಿರೀಕ್ಷಿಸಿತ್ತು. ಆದರೆ ಫೆಬ್ರವರಿ 14ರ ವೇಳೆಗೆ 50 ಕೋಟಿ ತಲುಪಿದೆ.
ಉದಯಗಿರಿ ದಾಳಿ ಪ್ರಕರಣ, ಸಿಎಂ ಸಿದ್ದರಾಮಯ್ಯ ನೇತತ್ವದದಲ್ಲಿ ಸಭೆ
ಮೈಸೂರು ಉದಯಗಿರಿ ದಾಳಿ ಪ್ರಕರಣ ಸಂಬಂಧ ಸಿಎಂ ಸಿದ್ದರಾಮಯ್ಯ ಸಭೆ ನಡೆಸಿದ್ದಾರೆ. ತಪ್ಪುತಸ್ಥರು ಯಾರೇ ಇದ್ದರೂ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸಬೇಕು ಎಂದು ಸಿಎಂ ಸೂಚಿಸಿದ್ದಾರೆ. ಕಾನೂನು ಕೈಗೆ ಎತ್ತಿಕೊಂಡ ಪ್ರತಿಯೊಬ್ಬರನ್ನೂ ಪತ್ತೆಹಚ್ಚಿ ಕಾನೂನು ಕ್ರಮಕ್ಕೆ ಒಳಪಡಿಸಬೇಕು ಎಂದಿದ್ದಾರೆ.
ಮತ್ತೆ 119 ಭಾರತೀಯರನ್ನು ಅಮೆರಿಕದಿಂದ ಗಡೀಪಾರು
ಪ್ರಧಾನಿ ಮೋದಿ ಅಮೆರಿಕ ಬೇಟಿ ಬೆನ್ನಲ್ಲೇ ಇತ್ತ ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿರುವ 119 ಭಾರತೀಯರನ್ನು ಭಾರತಕ್ಕೆ ಗಡೀಪಾರು ಮಾಡುತ್ತಿದೆ. ಇದೀಗ ಮತ್ತೆ ಗಡೀಪಾರಾಗಿರುವ 119 ಮಂದಿ ಫೆಬ್ರವರಿ 15, 16ಕ್ಕೆ ಭಾರತಕ್ಕೆ ಆಗಮಿಸಲಿದ್ದರೆ. ಅಮೆರಿಕದ ಯುದ್ಧ ವಿಮಾನ ಅಮೃತರದಲ್ಲಿ ಲ್ಯಾಂಡ್ ಆಗಲಿದೆ.
ರಾಜ್ಯಾಧ್ಯಕ್ಷರಾಗಿ ಮುಂದುವರಿಯುತ್ತಾರಾ? ಎಲ್ಲರಿಗೂ ಒಳ್ಳೇದಾಗುತ್ತೆ ಎಂದ ವಿಜಯೇಂದ್ರ
ಪಕ್ಷದ ಚೌಕಟ್ಟು ಮೀರಿ ಮಾತನಾಡಿದವರಿಗೆ ಕೇಂದ್ರ ಶಿಸ್ತು ಸಮಿತಿ ನೋಟಿಸ್ ನೀಡಿದೆ. ಇದರಲ್ಲಿ ನನ್ನ ಪಾತ್ರ ಇಲ್ಲ. ಎಲ್ಲರೂ ಪಕ್ಷದ ಶಿಸ್ತು ಪಾಲಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ. ರಾಜ್ಯಾಧ್ಯಕ್ಷನಾಗಿ ಮುಂದುವರೆಯುತ್ತೀರ ಪ್ರಶ್ನೆಗೆ , ದೆಹಲಿಗೆ ಹೋಗಿ ಬಂದಿದ್ದೇನೆ, ಅದರ ಜೊತೆ ಕುಂಬ ಮೇಳಕ್ಕೂ ಹೋಗಿ ಬಂದೆ. ಎಲ್ಲರಿಗೂ ಮುಂದೆ ಒಳ್ಳೆಯದಾಗುತ್ತೆ ಎಂದು ವಿಜಯೇಂದ್ರ ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಪಟ್ಟಕ್ಕೆ ಹೈಕಮಾಂಡ್ ಮುಂದೆ ಪ್ರಸ್ತಾಪವಿಟ್ಟ ಸತೀಶ್ ಜಾರಕಿಹೊಳಿ
ಹೈಕಮಾಂಡ್ ಮುಂದೆ ಮೊದಲ ಬಾರಿ ಸತೀಶ್ ಜಾರಕೊಹೊಳಿ ಬೇಡಿಕೆ ಇಟ್ಟಿದ್ದಾರೆ. ಮಂತ್ರಿ ಸ್ಥಾನದ ಜತೆಗೆ ಅಧ್ಯಕ್ಷ ಸ್ಥಾನ ನೀಡಿದರೆ ನಾನು ರೆಡಿ ಎಂದಿದ್ದಾರೆ. ಡಿಕೆ ಶಿವಕುಮಾರ್‌ಗೆ ಕೊಟ್ಟಂತೆ ನನಗೂ ಮೂರು ವರ್ಷ ಮಂತ್ರಿ ಸ್ಥಾನದ ಜತೆ ಅಧ್ಯಕ್ಷ ಗಾದಿ ನೀಡಿ ಎಂದು ಸತೀಶ್ ಜಾರಕಿಹೊಳಿ ಬೇಡಿಕೆ ಇಟ್ಟಿದ್ದಾರೆ.
ದಾಳಿಯ ಸುಳಿವು, ತಮಿಳು ನಟ ವಿಜಯ್‌ಗೆ Y ಕೆಟಗರಿ ಭದ್ರತೆ!
ತಮಿಳಗ ವೆಟ್ರಿ ಕಳಗಂ ಎಂಬ ರಾಜಕೀಯ ಪಕ್ಷವನ್ನು 2024 ರ ಫೆಬ್ರವರಿ 2 ರಂದು ನಟ ವಿಜಯ್ ಸ್ಥಾಪಿಸಿದರು. ನಂತರ, ಕಳೆದ ವರ್ಷ ವಿಜಯ್ ವಿ.ಸಾಲೆಯಲ್ಲಿ, ವಿಕ್ರವಾಂಡಿ ಬಳಿ ಒಂದು ಸಮಾವೇಶವನ್ನು ನಡೆಸಿದರು. ಆಡಳಿತಾರೂಢ DMK ಸರ್ಕಾರವನ್ನು ತೀವ್ರವಾಗಿ ಟೀಕಿಸಿದರು.
ನ್ಯೂ ಇಂಡಿಯಾ ಕೋಆಪರೇಟೀವ್ ಬ್ಯಾಂಕ್‌ಗೆ ಮೇಲೆ RBI ನಿರ್ಬಂಧ, ಹಣ ವಿಥ್‌ಡ್ರಾಗೂ ಅವಕಾಶವಿಲ್ಲ
ಈ ಕೋ-ಆಪರೇಟೀವ್ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದೀರಾ? ಇದ್ದರೆ ಹಣ ವಿಥ್‌ಡ್ರಾ ಮಾಡಲು, ಹಣ ವರ್ಗಾವಣೆ ಮಾಡಲು ಸೇರಿದಂತೆ ಯಾವುದೇ ಬ್ಯಾಂಕಿಂಗ್ ವ್ಯವಹಾರಕ್ಕೆ ಅವಕಾಶವಿಲ್ಲ. ಕಾರಣ ಆರ್‌ಬಿಐ ಕಠಿಣ ನಿರ್ಬಂಧ ಹೇರಿದೆ.
ನ್ಯೂ ಇಂಡಿಯಾ ಕೋಆಪರೇಟೀವ್ ಬ್ಯಾಂಕ್‌ಗೆ ಮೇಲೆ RBI ನಿರ್ಬಂಧ, ಹಣ ವಿಥ್‌ಡ್ರಾಗೂ ಅವಕಾಶವಿಲ್ಲ
ಪುಲ್ವಾಮಾ ಯೋಧರಿಗೆ ಪುಷ್ಪನಮನ
2019 ರಲ್ಲಿ ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಯೋಧರಿಗೆ ಕಾಶ್ಮೀರ ಬಿಜೆಪಿ ಕಾರ್ಯಕರ್ತರು ಲೆಥ್‌ಪೋರಾ ಗ್ರಾಮದಲ್ಲಿ ಪುಷ್ಪ ನಮನ ಸಲ್ಲಿಸಿದರು.
#WATCH | Pulwama, J&K | The workers of Kashmir BJP pay floral tribute at Lethpora village to the jawans who lost their lives in the Pulwama Terror Attack in 2019. pic.twitter.com/6wuj2OBHRc
— ANI (@ANI) February 14, 2025
CBSE ಪರೀಕ್ಷೆ ಬಗ್ಗೆ ಬಿಗ್ ಅಪ್ಡೇಟ್, ಡ್ರೆಸ್ ಕೋಡ್, ನಿಯಮಗಳು, ಮಾರ್ಗಸೂಚಿ ಇಲ್ಲಿದೆ
CBSE ಬೋರ್ಡ್ ಪರೀಕ್ಷೆ 2025, ಫೆಬ್ರವರಿ 15 ರಿಂದ ಶುರುವಾಗುತ್ತಿದೆ. ಈ ಬಾರಿ 10ನೇ, 12ನೇ ಬೋರ್ಡ್ ಪರೀಕ್ಷೆಯಲ್ಲಿ 44 ಲಕ್ಷ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ. ಪರೀಕ್ಷಾ ದಿನದ ಮಾರ್ಗಸೂಚಿಗಳು, ಡ್ರೆಸ್ ಕೋಡ್ ಮತ್ತು ಪರೀಕ್ಷಾ ಕೇಂದ್ರಕ್ಕೆ ಏನು ತೆಗೆದುಕೊಂಡು ಹೋಗಬಹುದು, ಏನು ತೆಗೆದುಕೊಂಡು ಹೋಗಬಾರದು ಎಂಬುದನ್ನು ಇಲ್ಲಿ ನೋಡಿ.
CBSE ಪರೀಕ್ಷೆ ಬಗ್ಗೆ ಬಿಗ್ ಅಪ್ಡೇಟ್, ಡ್ರೆಸ್ ಕೋಡ್, ನಿಯಮಗಳು, ಮಾರ್ಗಸೂಚಿ ಇಲ್ಲಿದೆ
ಇಂಡೋ-ಯುಎಸ್ ಟ್ರೇಡ್ ಡೀಲ್: ಹಸಿರಾದ ಸೆನ್ಸೆಕ್ಸ್, ನಿಫ್ಟಿ, ರೂಪಾಯಿ..
ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಿ, ಭಾರತ ಮತ್ತು ಅಮೆರಿಕ ನಡುವಿನ ಪರಸ್ಪರ ಪ್ರಯೋಜನಕಾರಿ ವ್ಯಾಪಾರ ಒಪ್ಪಂದದ ಬಗ್ಗೆ ಮಾತನಾಡಿದರು. ಇದು ಮಾರುಕಟ್ಟೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ.
ಇಂಡೋ-ಯುಎಸ್ ಟ್ರೇಡ್ ಡೀಲ್: ಹಸಿರಾದ ಸೆನ್ಸೆಕ್ಸ್, ನಿಫ್ಟಿ, ರೂಪಾಯಿ..
ಮೆಟ್ರೋ ಇನ್ನೂ ಖಾಲಿ ಖಾಲಿ, ನೆಪಮಾತ್ರದ ದರ ಇಳಿಕೆಗೆ ಜನರ ಬೇಸರ..
ಮೆಟ್ರೋ ದರ ದುಪ್ಪಟ್ಟಾದ ಹಿನ್ನಲೆ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಮೆಟ್ರೋ ಬದಲಾಗಿ ಬಿಎಂಟಿಸಿಯತ್ತ ಪ್ರಯಾಣಿಕರು ಮುಖ ಮಾಡಿದ್ದಾರೆ. ಸಮಯ ಉಳಿಸಲು ಕಾಲೇಜು ವಿದ್ಯಾರ್ಥಿಗಳು ಮೆಟ್ರೋ ಬಳಕೆ ಮಾಡುತ್ತಿದ್ದರು. ದರ ಏರಿಕೆ ಹಿನ್ನಲೆ ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರ. ಮೆಟ್ರೋ ದರ ಏರಿಕೆ ಹಿನ್ನಲೆ ಪ್ರಯಾಣಿಕರು ಮೆಟ್ರೋ ದಿಂದ ದೂರವಾಗಿದ್ದಾರೆ. ಮೆಟ್ರೋ ಬದಲಾಗಿ ಸ್ವಂತ ವಾಹನ ಏಕೆ ಬಳಸಬಾರದು ಎನ್ನುವ ಯೋಚನೆ ಬಂದಿದೆ. ದರ ದುಪ್ಪಟ್ಟಾದ ಹಿನ್ನಲೆ ಮೆಟ್ರೋ ಪ್ರಯಾಣಿಕರಲ್ಲಿ ಇಳಿಕೆಯಾಗಿದೆ. ಪ್ರಯಾಣಿಕರ ಆಕ್ರೋಶದ ಬಳಿಕ ಮೆಟ್ರೋ ದರ ಕೊಂಚ ಇಳಿಕೆಯಾಗಿದ್ದರೂ, ಇದು ಜನರಿಗೆ ಸಮಾಧಾನ ತಂದಿಲ್ಲ.
Modi-Trump meet: 'ನಾವು ತಟಸ್ಥರಲ್ಲ, ಶಾಂತಿಯ ಪರ..' ರಷ್ಯಾ-ಉಕ್ರೇನ್ ಯುದ್ಧದ ಬಗ್ಗೆ ಟ್ರಂಪ್‌ಗೆ ತಿಳಿಸಿದ ಮೋದಿ!
ರಷ್ಯಾ-ಉಕ್ರೇನ್ ಸಂಘರ್ಷವನ್ನು ಪರಿಹರಿಸುವ ನಿಟ್ಟಿನಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿದ ಪ್ರಯತ್ನಗಳನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದರು ಮತ್ತು ಸಂಘರ್ಷವನ್ನು ಮಾತುಕತೆಯ ಮೂಲಕ ಪರಿಹರಿಸಬೇಕೆಂಬ ಭಾರತದ ನಿಲುವನ್ನು ಪುನರುಚ್ಚರಿಸಿದರು.
'ನಾವು ತಟಸ್ಥರಲ್ಲ, ಶಾಂತಿಯ ಪರ..' ರಷ್ಯಾ-ಉಕ್ರೇನ್ ಯುದ್ಧದ ಬಗ್ಗೆ ಟ್ರಂಪ್‌ಗೆ ತಿಳಿಸಿದ ಮೋದಿ!
ಭೀಮಾತೀರದ ಬಾಗಪ್ಪ ಹರಿಜನ್ ಹತ್ಯೆ ಪ್ರಕರಣ
ಬಾಗಪ್ಪ ಹರಿಜನ್ ಹತ್ಯೆ ಪ್ರಕರಣ ಬೇಧಿಸಿದ ವಿಜಯಪುರ ಪೊಲೀಸರು. ಎಸ್ಪಿ ಲಕ್ಷ್ಮಣ ನಿಂಬರಗಿ, ಎಎಸ್ಪಿ ಶಂಕರ್ ಮಾರಿಹಾಳ, ಎಎಸ್ಪಿ ಹಟ್ಟಿ, ಡಿವೈಎಸ್ಪಿ ಬಸವರಾಜ್ ಎಲಿಗಾರ್, ಸಿಪಿಐ ಪ್ರದೀಪ್ ತಳಕೇರಿ, ಪಿಎಸ್‌ಐ ರಾಜು ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿತ್ತು. ಕೇವಲ 24 ಗಂಟೆಯಲ್ಲಿ ಪ್ರಕರಣದ ಆರೋಪಿಗಳನ್ನ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.ಪಿಂಟ್ಯಾ ಅಗರಖೇಡ್ ಸೇರಿ ಒಟ್ಟು ನಾಲ್ವರ ಬಂಧನವಾಗಿದೆ. ಕಳೆದ ಅಕ್ಟೊಬರ್ 8ರಂದು ಬಾಗಪ್ಪನ ಶಿಷ್ಯನಿಂದ ಹತನಾಗಿದ್ದ ರವಿ ಅಗರಖೇಡ್ ತಮ್ಮ ಪಿಂಟ್ಯಾ. A1 ಪ್ರಕಾಶ ಅಲಿಯಾಸ್ ಪಿಂಟ್ಯಾ ಅಗರಖೇಡ್ (25), A2 ರಾಹುಲ್ ತಳಕೇರಿ (20), A3 ಗದಿಗೆಪ್ಪ ಅಲಿಯಾಸ್ ಮನಿಕಂಠ ದನಕೊಪ್ಪ (27), A4 ಸುದೀಪ್ ಕಾಂಬಳೆ (23) ಬಂಧಿತ ಆರೋಪಿಗಳು. ಪಿಂಟ್ಯಾ ಸೇರಿ ಬಂಧಿತರೆಲ್ಲರು ಗೆಳೆಯರಾಗಿದ್ದಾರೆ.
'ಬಾಂಗ್ಲಾದೇಶದ ಬಗ್ಗೆ ಮೋದಿಯೇ ಉತ್ತರಿಸ್ತಾರೆ..' ಡೊನಾಲ್ಡ್ ಟ್ರಂಪ್ ಮಾತಿಗೆ ನೆರೆಯ ರಾಷ್ಟ್ರದಲ್ಲಿ ನಡುಕ!
ಬಾಂಗ್ಲಾದೇಶ ಬಿಕ್ಕಟ್ಟಿನ ಕುರಿತ ಪ್ರಶ್ನೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮೋದಿಗೆ ಬಿಟ್ಟುಕೊಟ್ಟರು . "ನಾನು ಬಾಂಗ್ಲಾದೇಶವನ್ನು ಪ್ರಧಾನಿ ಮೋದಿಗೆ ಬಿಡುತ್ತೇನೆ" ಎಂದು ಹೇಳಿದರು
'ಬಾಂಗ್ಲಾದೇಶದ ಬಗ್ಗೆ ಮೋದಿಯೇ ಉತ್ತರಿಸ್ತಾರೆ..' ಡೊನಾಲ್ಡ್ ಟ್ರಂಪ್ ಮಾತಿಗೆ ನೆರೆಯ ರಾಷ್ಟ್ರದಲ್ಲಿ ನಡುಕ!
ಪ್ರಧಾನಿ ಮೋದಿ ಬಗ್ಗೆ ಡೊನಾಲ್ಡ್ ಟ್ರಂಪ್ ಹೇಳಿದ 7 ಮಾತುಗಳು..
ಪ್ರಧಾನಿ ನರೇಂದ್ರ ಮೋದಿ ಹಾಗೂ ಡೊನಾಲ್ಡ್ ಟ್ರಂಪ್ ನಡುವೆ ವಾಷಿಂಗ್ಟನ್ ಡಿಸಿಯಲ್ಲಿ ಪ್ರಮುಖ ದ್ವಿಪಕ್ಷೀಯ ಸಭೆ ನಡೆದಿದೆ. ಇದರಲ್ಲಿ ಪ್ರಮುಖವಾಗಿ 26/11 ಮುಂಬೈ ದಾಳಿಯ ಆರೋಪಿ ತಹಾವೂರ್ ರಾಣಾನನ್ನು ಭಾರತಕ್ಕೆ ಗಡೀಪಾರು ಮಾಡಲು ಟ್ರಂಪ್ ಒಪ್ಪಿದ್ದಾರೆ ಎನ್ನಲಾಗಿದೆ. ಅದರೊಂದಿಗೆ ವಿಶ್ವದ ಅತ್ಯಾಧುನಿಕ ಯುದ್ಧವಿಮಾನಗಳಲ್ಲಿ ಒಂದಾಗಿರುವ ಎಫ್-35 ಜೆಟ್ ಡೀಲ್‌ಗೂ ಉಭಯ ನಾಯಕರು ಒಪ್ಪಿದ್ದಾರೆ. ಇದೆಲ್ಲದರ ನಡುವೆ ಪ್ರಧಾನಿ ಮೋದಿ ಬಗ್ಗೆ ಡೊನಾಲ್ಡ್ ಟ್ರಂಪ್ ಆಡಿರುವ ಮಾತುಗಳು ರಾಜಕೀಯ ವಲಯದಲ್ಲಿ ಚರ್ಚೆ ಆಗುತ್ತಿದೆ. ಉಭಯ ನಾಯಕರ ಚರ್ಚೆಯ ವೇಳೆ ಟ್ರೇಡ್, ರಕ್ಷಣೆ ಹಾಗೂ ವಲಸೆ ನೀತಿಗಳ ಬಗ್ಗೆ ಪ್ರಮುಖ ಚರ್ಚೆಯಾಯಿತು.
ರಾಷ್ಟ್ರಕವಿ ಜಿಎಸ್ ಶಿವರುದ್ರಪ್ಪ ಮೊಮ್ಮಗಳ ಮಹಾ ಸಮುದ್ರಯಾನ; ಏಕಾಂಗಿಯಾಗಿ ಅಟ್ಲಾಂಟಿಕ್ ಸಾಗರ ದಾಟಿದ ಅನನ್ಯಾ!
ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರ ಮೊಮ್ಮಗಳಾದ ಅನನ್ಯಾ ಪ್ರಸಾದ್, ಅಟ್ಲಾಂಟಿಕ್ ಸಾಗರವನ್ನು ಏಕಾಂಗಿಯಾಗಿ ರೋಯಿಂಗ್ ಮೂಲಕ 52 ದಿನಗಳಲ್ಲಿ 4800 ಕಿ.ಮೀ. ಕ್ರಮಿಸಿ ಹೊಸ ಇತಿಹಾಸ ರಚಿಸಿದ್ದಾರೆ. ಈ ಮೂಲಕ ಇಂಥ ಸಾಧನೆ ಮಾಡಿದ ಮೊದಲ ಶ್ವೇತವರ್ಣೀಯೇತರ ಮಹಿಳೆ ಮತ್ತು ಮೊದಲ ಭಾರತೀಯ ಮಹಿಳೆ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
ರಾಷ್ಟ್ರಕವಿ ಜಿಎಸ್ ಶಿವರುದ್ರಪ್ಪ ಮೊಮ್ಮಗಳ ಮಹಾ ಸಮುದ್ರಯಾನ; ಏಕಾಂಗಿಯಾಗಿ ಅಟ್ಲಾಂಟಿಕ್ ಸಾಗರ ದಾಟಿದ ಅನನ್ಯಾ!
ವರ್ಷ ಭವಿಷ್ಯ ನುಡಿದ ಕಾರ್ಣಿಕ, ರೈತರಿಗೆ ಸಂತಸ
ಹಾವನೂರ (ಚಿಕ್ಕ ಮೈಲಾರ)ದಲ್ಲಿ ಮೈಲಾರಲಿಂಗೇಶ್ವರನ ಕಾರ್ಣಿಕ ನುಡಿಯನ್ನು ಗೊರವಪ್ಪ ಆನಂದ ಬಿಲ್ಲರ ಘೋಷಿಸಿದ್ದಾರೆ. 'ಸೃಷ್ಟಿ ಸಿರಿಯಾಗಿ, ಭೂಮಿ ತಂಪಾತಲೇ ಪರಾಕ್' ಎಂಬ ನುಡಿ ಉತ್ತಮ ಮಳೆ, ಬೆಳೆ ಮತ್ತು ಜಗತ್ತಿನ ಸಿರಿತನವನ್ನು ಸೂಚಿಸುತ್ತದೆ ಎಂದು ಭಕ್ತರು ಅರ್ಥೈಸಿದ್ದಾರೆ.
ಸೃಷ್ಟಿ ಸಿರಿಯಾಗಿ, ಭೂಮಿ ತಂಪಾತಲೇ ಪರಾಕ್.., ವರ್ಷ ಭವಿಷ್ಯ ನುಡಿದ ಕಾರ್ಣಿಕ, ರೈತರಿಗೆ ಸಂತಸ!
ಭಾರತಕ್ಕೆ ಬರಲಿದೆ ಎಫ್-35 ಯುದ್ಧವಿಮಾನ
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತಕ್ಕೆ ಶತಕೋಟಿ ಡಾಲರ್‌ಗಳಷ್ಟು ಮಿಲಿಟರಿ ಮಾರಾಟವನ್ನು ಹೆಚ್ಚಿಸುವುದಾಗಿ ಮತ್ತು F-35 ಅತ್ಯಾಧುನಿಕ ಫೈಟರ್‌ಗಳನ್ನು ಒದಗಿಸಲು ಕೆಲಸ ಮಾಡುತ್ತಿರುವುದಾಗಿ ಘೋಷಿಸಿದ್ದಾರೆ.
ಏರೋ ಇಂಡಿಯಾದಲ್ಲಿ ಮಿಂಚಿನ ಪ್ರದರ್ಶನ ನೀಡಿದ ಎಫ್-35 ಭಾರತಕ್ಕೆ, ಮೋದಿ-ಟ್ರಂಪ್ ಒಪ್ಪಂದ!
ಏರೋ ಇಂಡಿಯಾ ಶೋ ಇಂದು ಕೊನೇ ದಿನ
Aero india 2025 ರಲ್ಲಿ ಎಫ್-35, ಎಸ್‌ಯು-57 ಸೇರಿದಂತೆ ಹಲವು ಯುದ್ಧ ವಿಮಾನಗಳು ಗಮನ ಸೆಳೆದವು. ಸೂರ್ಯಕಿರಣ ತಂಡದ ಹೊಸ ವಿನ್ಯಾಸಗಳು ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿದವು. ಬಿ-1ಬಿ ಬಾಂಬರ್ ವಿಮಾನದ ಆಗಮನ ವಿಶೇಷ ಆಕರ್ಷಣೆಯಾಗಿತ್ತು.
Aero india 2025: 5ನೇ ತಲೆಮಾರಿನ ಯುದ್ಧ ವಿಮಾನಗಳ ಜುಗಲ್ ಬಂದಿ ಪ್ರದರ್ಶನ : ಇಂದು ಕೊನೆ ದಿನ ಏನೇನಿರುತ್ತೆ?
ಮೋದಿ-ಟ್ರಂಪ್ ಭೇಟಿಯ ಚಿತ್ರಗಳು..