ರಾಷ್ಟ್ರಕವಿ ಜಿಎಸ್ ಶಿವರುದ್ರಪ್ಪ ಮೊಮ್ಮಗಳ ಮಹಾ ಸಮುದ್ರಯಾನ; ಏಕಾಂಗಿಯಾಗಿ ಅಟ್ಲಾಂಟಿಕ್ ಸಾಗರ ದಾಟಿದ ಅನನ್ಯಾ!

ರಾಷ್ಟ್ರಕವಿ ಜಿ.ಎಸ್‌. ಶಿವರುದ್ರಪ್ಪನವರ ಮೊಮ್ಮಗಳಾದ ಅನನ್ಯಾ ಪ್ರಸಾದ್‌, ಅಟ್ಲಾಂಟಿಕ್‌ ಸಾಗರವನ್ನು ಏಕಾಂಗಿಯಾಗಿ ರೋಯಿಂಗ್‌ ಮೂಲಕ 52 ದಿನಗಳಲ್ಲಿ 4800 ಕಿ.ಮೀ. ಕ್ರಮಿಸಿ ಹೊಸ ಇತಿಹಾಸ ರಚಿಸಿದ್ದಾರೆ. ಈ ಮೂಲಕ ಇಂಥ ಸಾಧನೆ ಮಾಡಿದ ಮೊದಲ ಶ್ವೇತವರ್ಣೀಯೇತರ ಮಹಿಳೆ ಮತ್ತು ಮೊದಲ ಭಾರತೀಯ ಮಹಿಳೆ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

Who is Ananya Prasad? Bengaluru native becomes first woman of colour to complete solo row across Atlantic rav

ನವದೆಹಲಿ (ಫೆ.14): ರಾಷ್ಟ್ರಕವಿ ಜಿ.ಎಸ್‌. ಶಿವರುದ್ರಪ್ಪನವರ ಮೊಮ್ಮಗಳಾದ ಅನನ್ಯಾ ಪ್ರಸಾದ್‌, ಅಟ್ಲಾಂಟಿಕ್‌ ಸಾಗರವನ್ನು ಏಕಾಂಗಿಯಾಗಿ ರೋಯಿಂಗ್‌ ಮೂಲಕ ಕ್ರಮಿಸಿ ಮೂಲಕ ಹೊಸ ಇತಿಹಾಸ ರಚಿಸಿದ್ದಾರೆ.

ವಿಶ್ವದ ಅತ್ಯಂತ ಕಠಿಣ ರೋಯಿಂಗ್‌ ರೇಸ್‌ನ ಸೋಲೋ ವಿಭಾಗದಲ್ಲಿ ಭಾಗಿಯಾಗಿದ್ದ ಅನನ್ಯಾ, ಕಳೆದ ಡಿ.12ರಂದು ಸ್ಪೇನ್‌ ಸಮೀಪದ ಲಾ ಗೊಮೆರಾ ಎಂಬ ದ್ವೀಪದಿಂದ ಈ ಮಹಾಯಾನ ಆರಂಭಿಸಿ, ಫೆ.1ರಂದು ಯಾನ ಪೂರ್ಣಗೊಳಿಸಿದ್ದಾರೆ. 52 ದಿನ 5 ಗಂಟೆ, 44 ನಿಮಿಷದಲ್ಲಿ ಅವರು 4800 ಕಿ.ಮೀಗಳ ದೂರವನ್ನು ಕ್ರಮಿಸಿದ್ದಾರೆ. ಈ ಮೂಲಕ ಇಂಥ ಸಾಧನೆ ಮಾಡಿದ ಮೊದಲ ಶ್ವೇತವರ್ಣೀಯೇತರ ಮಹಿಳೆ ಮತ್ತು ಮೊದಲ ಭಾರತೀಯ ಮಹಿಳೆ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

ಇದನ್ನೂ ಓದಿ: ಜಿಎಸ್‌ಎಸ್‌ ಮೊಮ್ಮಗಳು ಅನನ್ಯಾ ಪ್ರಸಾದ್‌ರಿಂದ ಮಹಾ ಸಮುದ್ರಯಾನ

ಜಿಎಸ್ಎಸ್‌ ಶಿವರುದ್ರಪ್ಪನವರರ ಪುತ್ರ ಶಿವಪ್ರಸಾದರ್‌ ಪುತ್ರಿಯಾಗಿರುವ ಅನನ್ಯಾ, ಈ ಯಾನಕ್ಕಾಗಿಯೇ ಕಠಿಣ ಶ್ರಮ ವಹಿಸಿದ್ದರು. ಅದಕ್ಕಾಗಿಯೇ 25 ಅಡಿ ಅಳತೆಯ ಬೋಟ್‌ ತಯಾರಿಸಿದ್ದರು. ಅಲ್ಲದೇ ಬೋಟ್‌ ರಿಪೇರಿಯನ್ನು ಸಹ ಕಲಿತಿದ್ದರು. ಅದಕ್ಕಾಗಿಯೇ ಅವರು ನಿತ್ಯ ಸುಮಾರು 50 ಮೈಲಿಗಳಷ್ಟು ರೋಯಿಂಗ್‌ ಮಾಡಿದ್ದರು 

Latest Videos
Follow Us:
Download App:
  • android
  • ios