ನ್ಯೂ ಇಂಡಿಯಾ ಕೋಆಪರೇಟೀವ್ ಬ್ಯಾಂಕ್‌ಗೆ ಮೇಲೆ RBI ನಿರ್ಬಂಧ, ಹಣ ವಿಥ್‌ಡ್ರಾಗೂ ಅವಕಾಶವಿಲ್ಲ

ಈ ಕೋ-ಆಪರೇಟೀವ್ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದೀರಾ? ಇದ್ದರೆ ಹಣ ವಿಥ್‌ಡ್ರಾ ಮಾಡಲು, ಹಣ ವರ್ಗಾವಣೆ ಮಾಡಲು ಸೇರಿದಂತೆ ಯಾವುದೇ ಬ್ಯಾಂಕಿಂಗ್ ವ್ಯವಹಾರಕ್ಕೆ ಅವಕಾಶವಿಲ್ಲ. ಕಾರಣ ಆರ್‌ಬಿಐ ಕಠಿಣ ನಿರ್ಬಂಧ ಹೇರಿದೆ.
 

RBI impose restriction on New India Co operative Bank due to irregularities

ನವದೆಹಲಿ(ಫೆ.14) ಭಾರತೀಯ ರಿಸರ್ವ್ ಬ್ಯಾಂಕ್ ಇದೀಗ ಭಾರತದ ಪ್ರಮುಖ ಕೋ-ಆಪರೇಟೀವ್ ಬ್ಯಾಂಕ್ ಮೇಲೆ ಕಠಿ ನಿರ್ಬಂಧ ಹೇರಿದೆ. ದರ ಪರಿಣಾಮ ಇದೀಗ ಬ್ಯಾಂಕ್ ಗ್ರಾಹಕರು ಪರದಾಡುವಂತಾಗಿದೆ. ಗ್ರಾಹಕರಿಗೆ ಬ್ಯಾಂಕಿಂಗ್ ವ್ಯವಹಾರಗಳಿಗೆ ನಿರ್ಬಂಧ ವಿಧಿಸಲಾಗಿದೆ. ಕನಿಷ್ಠ ಹಣ ವಿಥ್‌ಡ್ರಾ ಮಾಡಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ. ಕೋ-ಆಪರೇಟೀವ್ ಬ್ಯಾಂಕ್‌ನಲ್ಲಿ ಕೆಲ ಅವ್ಯವಹಾರ ನಡೆದಿರುವ ಕಾರಣ ಭಾರತೀಯ ರಿಸರ್ವ್ ಬ್ಯಾಂಕ್ ಈ ಕ್ರಮ ಕೈಗೊಂಡಿದೆ. ಹೌದು, ನ್ಯೂ ಇಂಡಿಯಾ ಕೋ-ಆಪರೇಟೀವ್ ಬ್ಯಾಂಕ್ ಮೇಲೆ ಆರ್‌ಬಿಐ ನಿರ್ಬಂಧ ಹೇರಿದೆ. 

ಮುಂಬೈನ ನ್ಯೂ ಇಂಡಿಯಾ ಕೋಆಪರೇಟೀವ್ ಬ್ಯಾಂಕ್ ಇದೀಗ ಸಂಕಷ್ಟದಲ್ಲಿದೆ. ನ್ಯೂ ಇಂಡಿಯಾ ಕೋಆಪರೇಟೀವ್ ಬ್ಯಾಂಕ್‌ನಲ್ಲಿ ನಡದಿರುವ ಅವ್ಯವಹಾರಗಳನ್ನು ಆರ್‌ಬಿಐ ಪತ್ತೆ ಹಚ್ಚಿದೆ. ಕೋಟ್ಯಾಂತಾರ ರೂಪಯಿಗಳ ಅವ್ಯವಹಾರ ನಡೆದಿರುವುದು ಪತ್ತೆಯಾದ ಹಿನ್ನಲೆಯಲ್ಲಿ ಆರ್‌ಬಿಐ ಮಧ್ಯಪ್ರವೇಶಿಸಿದೆ. ಇದೀಗ ಬ್ಯಾಂಕ್‌ನಲ್ಲಿ ಗ್ರಾಹಕರು ಯಾವುದೇ ಡೆಪಾಸಿಟ್ ಮಾಡಲು ಸಾಧ್ಯವಿಲ್ಲ. ಸಾಲ ಸೌಲಭ್ಯಗಳು ಸಿಗುವುದಿಲ್ಲ. ಇತ್ತ ಹಣ ವಿಥ್‌ಡ್ರಾ ಅಥವಾ ಬೇರೆ ಬ್ಯಾಂಕ್‌ಗೆ ವರ್ಗಾವಣೆ ಕೂಡ ಸಾಧ್ಯವಿಲ್ಲ. ಅವ್ಯಹಾರದ ಮೊತ್ತ, ಪ್ರಮಾಣ ಹೆಚ್ಚಾಗಿ ಆರ್‌ಬಿಐ ದಂಡ ಹಾಗೂ ಮತ್ತಷ್ಟು ಕಠಿಣ ನಿಮಯ ವಿಧಿಸಿದರೆ ಬ್ಯಾಂಕ್ ಮುಚ್ಚಲಿದೆ. ಹೀಗಾದಲ್ಲಿ ಠೇವಣಿ ಇಟ್ಟ ಅಥವಾ ಇತರ ರೂಪದಲ್ಲಿ ಬ್ಯಾಂಕ್‌ನಲ್ಲಿ ಹಣ ಉಳಿತಾಯ ಮಾಡಿರುವ ಗ್ರಾಹಕರಿಗೆ ಗರಿಷ್ಠ 5 ಲಕ್ಷ ರೂಪಾಯಿ ವರೆಗೆ ಮಾತ್ರ ಮರಳಿ ಪಡೆಯಲಿದ್ದಾರೆ. ಇದು ವಿಮಾ ರೂಪದಲ್ಲಿ ಸಿಗುವ ಮೊತ್ತವಾಗಿದೆ.

ವ್ಯಾಟ್ಸಾಪ್ ಬಳಸುವ ಎಲ್ಲರಿಗೂ ಆರ್‌ಬಿಐ ಎಚ್ಚರಿಕೆ, ನೀವು ಈ ತಪ್ಪು ಮಾಡಬೇಡಿ

ಫೆಬ್ರವರಿ 13ಕ್ಕೆ ಆರ್‌ಬಿಐ ಈ ನಿರ್ಬಂಧ ವಿಧಿಸಿದೆ. 6 ತಿಂಗಳ ಕಾಲ ನ್ಯೂ ಇಂಡಿಯಾ ಕೋಆಪರೇಟೀವ್ ಬ್ಯಾಂಕ್ ಏನೂ ಮಾಡುವಂತಿಲ್ಲ. ಅಕ್ಷರಶಃ ಮುಚ್ಚಬೇಕು. ಈ ಬ್ಯಾಂಕ್‌ನಲ್ಲಿ ನಡೆದಿರುವ ಅವ್ಯವಹಾರಗಳಿಂದ ಸದ್ಯ ಬ್ಯಾಂಕ್‌ನಲ್ಲಿ ನಿಗದಿತ ಮೊತ್ತವಿಲ್ಲ. ಸಾರ್ವಜನಿಕರ ಠೇವಣಿ ಇಟ್ಟ ಹಣದಲ್ಲೇ ಅವ್ಯವಹಾರ ಮಾಡಲಾಗಿದೆ. ಹೀಗಾಗಿ ಗ್ರಾಹಕರ ಭದ್ರತೆಗಾಗಿ ಈ ನಿರ್ಬಂಧವನ್ನು ಆರ್‌ಬಿಐ ಹೇರಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಬಂಧ ವಿಧಿಸುತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿ ಗ್ರಾಹಕರು ಬ್ಯಾಂಕ್ ಶಾಖೆಗೆ ಆಗಮಿಸಿದ್ದಾರೆ. ತಮ್ಮ ಹಣ ವಾಪಸ್ ಪಡೆಯಲು ಬಯಸಿದ್ದಾರೆ. ಆದರೆ ನಿರ್ಬಂಧ ಕಾರಣ ಸಾಧ್ಯವಾಗಿಲ್ಲ. ಹೀಗಾಗಿ ಬ್ಯಾಂಕ್ ಮುಂದೆ ಗ್ರಾಹಕರು ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ತಮ್ಮ ಹಣ ಸುರಕ್ಷಿತವಾಗಿ ಮರಳಿಸುವಂತೆ ಬ್ಯಾಂಕ್ ಆಗ್ರಹಿಸಿದ್ದಾರೆ. ಸದ್ಯ ಬ್ಯಾಂಕ್ ಮುಚ್ಚಲಾಗಿದೆ. ಆದರೆ ಗ್ರಾಹಕರು ಆತಂಕಗೊಂಡಿದ್ದಾರೆ. ನ್ಯೂ ಇಂಡಿಯಾ ಕೋಆಪರೇಟೀವ್ ಬ್ಯಾಂಕ್ ಸಹವಾಸವೇ ಬೇಡ. ನಾವು ಕಷ್ಟಪಟ್ಟು ದುಡಿದು ಉಳಿತಾಯ ಮಾಡಿದ ಹಣ ವಾಪಸ್ ನೀಡಲಿ ಎಂದು ಮನವಿ ಮಾಡಿದ್ದಾರೆ.

ಎಟಿಂ ಹಣ ಡ್ರಾಕ್ಕೆ ಶುಲ್ಕ ಏರಿಸಿದ ಆರ್‌ಬಿಐ, ಯುಪಿಐ ಪಾವತಿಯಲ್ಲೂ ಬದಲಾವಣೆ
 

Latest Videos
Follow Us:
Download App:
  • android
  • ios