Asianet Suvarna News Asianet Suvarna News

ಮಹಾರಾಷ್ಟ್ರದ ಕೃಷಿ ಮೇಳದಲ್ಲಿ ಮಿರಿಮಿರಿ ಮಿಂಚಿದ ಕರ್ನಾಟಕದ ಕೋಣ...!

ಹಾಗೆಯೇ ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿಯೂ ಕೂಡ ಕೃಷಿಕರಿಗಾಗಿ ಕೃಷಿ ಮೇಳವನ್ನು ಆಯೋಜಿಸಲಾಗಿತ್ತು.  ಅದರಲ್ಲಿ ಎಲ್ಲರ ಗಮನ ಸೆಳೆದಿದ್ದು, ಅಪರೂಪದ ಕೋಣ ಗಜೇಂದ್ರ. 

Karnataka Buffalo worth Rs 1.5 cr shines in agricultural festival at Maharashtras Gevrai, some interesting point of this Buffalo akb
Author
First Published Jan 31, 2023, 3:22 PM IST

ಬೀಡ್ ಮಾಹಾರಾಷ್ಟ್ರ:  ರೈತರಿಗೆ ಹೊಸ ತಂತ್ರಜ್ಞಾನ, ಹೊಸ ಬಗೆಯ ಇಳುವರಿ, ಕೃಷಿಯಲ್ಲಿ ಆಗಿರುವ ಹೊಸ ಬದಲಾವಣೆ ಬಗ್ಗೆ ಆಗಾಗ ಗಮನ ಸೆಳೆಯುವ ಸಲುವಾಗಿ ಸಂಘ ಸಂಸ್ಥೆಗಳು ಆಗಾಗ ಅಲ್ಲಲ್ಲಿ ಕೃಷಿ ಮೇಳಗಳನ್ನು ಆಯೋಜಿಸುತ್ತಾರೆ. ಇದರಲ್ಲಿ ಹಲವು ಬಗೆಯ ಕೃಷಿ ಉಪಕರಣಗಳು ಸೇರಿದಂತೆ ಹಲವು ತಳಿಯ ಪ್ರಾಣಿಗಳು,  ಹಸುಗಳು ಎಮ್ಮೆಗಳು ಕೋಣಗಳು ಸೇರಿದಂತೆ ರೈತರ ಕೆಲಸವನ್ನು ಸುಗಮಗೊಳಿಸುವ ತಂತ್ರಜ್ಞಾನಗಳು ಹಾಗೂ ಹಲವು ವಿಭಿನ್ನ ಹಾಗೂ ಅಪರೂಪದ ವಸ್ತುಗಳು ಕಾಣಸಿಗುತ್ತವೆ. ಹಾಗೆಯೇ ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿಯೂ ಕೂಡ ಕೃಷಿಕರಿಗಾಗಿ ಕೃಷಿ ಮೇಳವನ್ನು ಆಯೋಜಿಸಲಾಗಿತ್ತು.  ಅದರಲ್ಲಿ ಎಲ್ಲರ ಗಮನ ಸೆಳೆದಿದ್ದು, ಅಪರೂಪದ ಕೋಣ ಗಜೇಂದ್ರ. 

ಹೌದು ಈ ಭಾರಿ ಗಾತ್ರದ ಕೋಣವನ್ನು ನೋಡುವುದಲ್ಲದೇ ಅದರ ಜೊತೆ ಸೆಲ್ಫಿ ತೆಗೆದುಕೊಳ್ಳಲು ಜನ ಮುಗಿಬಿದ್ದಿದ್ದರು. ಇದು ಕೃಷಿ ಮೇಳದ ಆಕರ್ಷಣೆಯ ಕೆಂದ್ರಬಿಂದುವಾಗಿತ್ತು. ಅಂದಹಾಗೆ ಈ ಕೋಣದ ಬೆಲೆಗೆ ನೀವು ಒಂದು ದೊಡ್ಡ ಕೃಷಿ ಭೂಮಿಯನ್ನೇ ಖರೀದಿಸಬಹುದು. ಇದರ ಬೆಲೆ ಸುಮಾರು 1.5 ಕೋಟಿ, ಜೊತೆಗೆ ಇದು 1500 ಕೆಜಿ ತೂಕವಿದೆ.  ಅಂದ ಹಾಗೆ ಮಹಾರಾಷ್ಟ್ರದಲ್ಲಿ ಗಮನ ಸೆಳೆದ ಈ ಕೋಣ ಕರ್ನಾಟಕದ್ದು..!


ಬೀಡ್ (Beed) ಜಿಲ್ಲೆಯ ಗೆವ್ರಾಯಿನಲ್ಲಿ (Gevrai) ಕಳೆದ 15 ವರ್ಷಗಳಿಂದಲೂ ಪ್ರತಿ ವರ್ಷವೂ ಕಿಶಾನ್ ಕೃಷಿ ಪ್ರತಿಷ್ಠಾನದ ವತಿಯಿಂದ ಈ ಕೃಷಿ ಮೇಳವನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನದ ಬಗ್ಗೆ ಮರಾಠವಾಡದ ರೈತರಿಗೆ ಅರಿವು ಮೂಡಿಸುವ ಸಲುವಾಗಿ ಈ ಕೃಷಿ ಮೇಳವನ್ನು ಆಯೋಜಿಸಲಾಗುತ್ತದೆ.  ಹಾಗೆಯೇ ಆಯೋಜಿಸಲಾಗಿದ್ದ ಈ ಕೃಷಿ ಮೇಳದಲ್ಲಿ ಕರ್ನಾಟಕದ ಬೆಳಗಾವಿಯ ಭೀಮನಂತಹ ಕೋಣನ ಪರಿಚಯ ಮರಾಠವಾಡದ ಜನರಿಗಾಯ್ತು.

ಇದೊಂದೇ ಅಲ್ಲದೇ ಈ ಕೃಷಿ ಮೇಳದಲ್ಲಿ  ಒಟ್ಟು  ವಿವಿಧ ಕೃಷಿ ಉಪಕರಣಗಳ 180 ಮಳಿಗೆಗಳನ್ನು ತೆರೆಯಲಾಗಿತ್ತು. ರೈತರಿಗೆ ಉಪಯೋಗವಾಗುವಂತಹ ಹಲವು ಉಪಕರಣಗಳು ಈ ಕೃಷಿ ಮೇಳದಲ್ಲಿ ಇದ್ದವು. ಈ ಬಗ್ಗೆ ಮಾತನಾಡಿದ ಕೃಷಿ ಮೇಳದ ಸಂಘಟಕ ಮಹೇಶ್ ಬೇಂದ್ರೆ (Mahesh Bendre) ಈ ಮೇಳದಲ್ಲಿ ಭಾಗವಹಿಸಿದ ಕೋಣ ಗಜೇಂದ್ರ (Gajendra) ಕರ್ನಾಟಕದ (Karnataka) ಬೆಳಗಾವಿಯ (Belgaum) ರೈತರೊಬ್ಬರದ್ದು.  ಜಾನುವಾರು ಹಾಗೂ ಹೈನುಗಾರಿಕೆಯ ಬಗ್ಗೆ ರೈತರಲ್ಲಿ ಆಸಕ್ತಿ ಮೂಡಿಸುವ ಸಲುವಾಗಿ ಈ ಕೋಣವನ್ನು ಈ ಕೃಷಿ ಮೇಳಕ್ಕೆ ಕರೆಸಲಾಗಿತ್ತು ಎಂದರು.

Krishi Mela Bengaluru: ಕೃಷಿ ಮೇಳಕ್ಕೆ 17.35 ಲಕ್ಷ ಜನ ಭೇಟಿ ದಾಖಲೆ

ಈ ಕೋಣವೂ 1500 ಕೇಜಿ ತೂಗುತ್ತಿದ್ದು, ಈತನಿಗೆ ದಿನಕ್ಕೆ 15 ಲೀಟರ್ ಹಾಲು ಹಾಗೂ ದಿನಕ್ಕೆ 3 ಕೇಜಿ ಸೇಬು ನೀಡುತ್ತೇವೆ. ಇದಲ್ಲದೇ ಪ್ರತ್ಯೇಕವಾಗಿ ಮೇವನ್ನು ಕೂಡ ನೀಡುತ್ತೇವೆ. 2 ಕೆಜಿ ಅಕ್ಕಿ ಹಿಟ್ಟು,  ಮೂರು ಕೇಜಿ ಇತರ ಆಹಾರ ಕೂಡ ನೀಡುತ್ತೇವೆ ಎಂದು ಈ ಕೋಣದ ಮಾಲೀಕ ಹೇಳಿದರು. ಈ ಕೋಣದ ಬೆಲೆ 1.5 ಕೋಟಿ ಎಂದು ಅವರು ಹೇಳಿದರು.  ನಾವು ಒಂದು ಕೋಣಕ್ಕೆ 2 ಸಾವಿರ ರೂಪಾಯಿ ವೆಚ್ಚ ಮಾಡುತ್ತೇವೆ.  ಹಾಗೆಯೇ 5 ಎಮ್ಮೆಗಳಿಗೆ 10 ಸಾವಿರ ರೂಪಾಯಿ ವೆಚ್ಚ ಮಾಡುತ್ತೇವೆ. ನಮ್ಮ ಮನೆಯಲ್ಲಿ ಒಟ್ಟು 50 ಎಮ್ಮೆಗಳಿದ್ದು,  ನೂರರಿಂದ 150 ಲೀಟರ್ ಹಾಲು ಉತ್ಪಾದನೆ ಮಾಡುತ್ತವೆ ಎಂದು ಈ ಕೋಣದ ಮಾಲೀಕರು ಹೇಳಿದರು. 

ಒಟ್ಟು 4 ದಿನಗಳ ಕಾಲ ನಡೆದ ಈ ಕೃಷಿ ಮೇಳದಲ್ಲಿ ರಾಜ್ಯಮಟ್ಟದ ಕೃಷಿ ಕಮ್ಮಟಗಳು ನಡೆದವು. ಪಂಜಾಬ್ (Punjab), ಹರ್ಯಾಣ (Haryana)ಸೇರಿದಂತೆ ದೇಶದ ಬೇರೆ ಬೇರೆ ರಾಜ್ಯಗಳ ರೈತರು ಬಳಸುವ ಆಧುನಿಕ ತಂತ್ರಜ್ಞಾನದ (modern technology) ಬಗ್ಗೆ ಇಲ್ಲಿ ಬೀಡ್ ಜಿಲ್ಲೆಯ ರೈತರಿಗೆ ತಿಳಿಸಲಾಯಿತು.  ಅಲ್ಲದೇ ಹೊಸ ತಂತ್ರಜ್ಞಾನದ ಪ್ರಾತ್ಯಕ್ಷಿಕೆ ಹಾಗೂ ಲಾಭಗಳ ಬಗ್ಗೆ ತಿಳಿಸಲಾಯಿತು.

Follow Us:
Download App:
  • android
  • ios