JNU ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್ ಕಾಂಗ್ರೆಸ್ ಸೇರ್ಪಡೆ ಸಿಪಿಐ ಪಕ್ಷ ತೊರೆದು ಕಾಂಗ್ರೆಸ್ ಸೇರಿದ ಕನ್ಹಯ್ಯ ಕುಮಾರ್ ಕನ್ಹಯ್ಯ ಜೊತೆ ಕಾಂಗ್ರೆಸ್ ಸೇರಿದ RDAM ಜಿಗ್ನೇಶ್ ಮೇವಾನಿ ಕಾಂಗ್ರೆಸ್ ಸೇರಿದ ಬೆನ್ನಲ್ಲೇ ಬಿಜೆಪಿ ವಿರುದ್ದ ಗುಡುಗಿದ ಕನ್ಹಯ್ಯ
ನವದೆಹಲಿ(ಸೆ.28): ಕಾಂಗ್ರೆಸ್(Congress) ದೇಶದಲ್ಲಿ ಮತ್ತೆ ಮೈಕೊಡವಿ ನಿಲ್ಲಲು ಹಲವು ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದೆ. ಇದೀಗ JNU ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ, ಕಮ್ಯೂನಿಸ್ಟ್ ಪಕ್ಷದ ಕನ್ಹಯ್ಯ ಕುಮಾರ್(Kanhaiya Kumar) ಇದೀಗ ಕಾಂಗ್ರೆಸ್ ಸೇರಿಕೊಂಡಿದ್ದಾರೆ. ಇನ್ನು ರಾಷ್ಟ್ರೀಯ ಅಧಿಕಾರ್ ಮಂಚ್ ಪಕ್ಷದ ಜಿಗ್ನೇಶ್ ಮೇವಾನಿ(Jignesh Mevani) ಕೂಡ ಕಾಂಗ್ರೆಸ್ ಸೇರಿಕೊಂಡಿದ್ದಾರೆ. ಪಕ್ಷ ಸೇರಿದ ಬೆನ್ನಲ್ಲೇ ಕನ್ಹಯ್ಯ ಕುಮಾರ್ ಕಾಂಗ್ರೆಸ್ ಹೊಗಳಿ ಅಟ್ಟಕ್ಕೇರಿಸಿದ್ದಾರೆ.
RSSನವರನ್ನು ಚಡ್ಡಿಗಳು ಅಂತಾರೆ: ಆ ಚಡ್ಡಿನೇ ಮೊನ್ನೇ ಸಿದ್ದರಾಮಯ್ಯನ ಮಾನ ಕಾಪಾಡಿದ್ದು
ಕಾಂಗ್ರೆಸ್ ಸೇರಿದ ಬಳಿಕ ಸುದ್ಧಿಗೋಷ್ಠಿ ನಡೆಸಿದ ಕನ್ಹಯ್ಯ ಕುಮಾರ್, ಚುನಾವಣೆಗೆ ಸ್ಪರ್ಧಿಸಲು ನಾನು ಕಾಂಗ್ರೆಸ್ ಪಕ್ಷ ಸೇರುತ್ತಿಲ್ಲ. ಕಾಂಗ್ರೆಸ್ ಕೇವಲ ಪಕ್ಷವಲ್ಲ, ಒಂದು ಸಿದ್ಧಾಂತ, ದೇಶದ ಅತೀ ಹಳೆ ಪಕ್ಷ. ಇಷ್ಟೇ ಅಲ್ಲ ಪ್ರಜಾಪ್ರಭುತ್ವವನ್ನು ಎತ್ತಿಹಿಡಿದ ಏಕೈಕ ಪಕ್ಷ ಕಾಂಗ್ರೆಸ್. ಕಾಂಗ್ರೆಸ್ ಇಲ್ಲದೆ ಭಾರತ ಉಳಿಯುವುದಿಲ್ಲ ಎಂದು ಕನ್ಹಯ್ಯು ಕುಮಾರ್ ಹೇಳಿದ್ದಾರೆ.
ಬೆಗುಸರೈನಲ್ಲಿ ಕನ್ಹಯ್ಯಾ ಕೈ ಹಿಡಿಯದ ಮತದಾರ: ಗಿರಿರಾಜ್ ಸಿಂಗ್ ಮುನ್ನಡೆ!
ಗುಜರಾತ್‌ನ(Gujarat) ವಡ್ಗಾಮ್ ಕ್ಷೇತ್ರದ ಶಾಸಕರಾಗಿರುವ ಜಿಗ್ನೇಶ್ ಮೇವಾನಿ , ರಾಷ್ಟ್ರೀಯ ದಲಿತ ಅಧಿಕಾರ್ ಮಂಚ್ ಸಂಚಾಲಕರಾಗಿದ್ದಾರೆ. ಮಾಜಿ ಪತ್ರಕರ್ತ, ವಕೀಲನಾಗಿರುವ ಮೇವಾನಿ ಕಾಂಗ್ರೆಸ್ ಸೇರಿಕೊಂಡಿರುವುದು ದಲಿತ ಸಮುದಾಯದ(Dalit Community) ಮತಗಳನ್ನು ಸುಲಭವಾಗಿ ಪಡೆಯಲು ನೆರವಾಗಲಿದೆ ಅನ್ನೋದು ಕಾಂಗ್ರೆಸ್ ಅಭಿಪ್ರಾಯ.
ವೈರಲ್ ಚೆಕ್: ಅಫ್ಜಲ್ ಗುರು ಫೋಟೋ ಹಿಡಿದು ಕನ್ಹಯ್ಯ ಪ್ರಚಾರ ಮಾಡಿದ್ರಾ?
ಪಂಜಾಬ್‌ನಲ್ಲಿ ದಲಿತ ನಾಯಕನನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿದ ಕಾಂಗ್ರೆಸ್ ನಿರ್ಧಾರ ನನಗೆ ಹೆಚ್ಚು ಹಿತವೆನಿಸಿದೆ. ಹೀಗಾಗಿ ಕಾಂಗ್ರೆಸ್ ಸೇರಿಕೊಂಡಿದ್ದೇನೆ ಎಂದು ಮೇವಾನಿ ಹೇಳಿದ್ದಾರೆ.
ದೇಶವನ್ನು ಆಳುತ್ತಿರುವ ಫ್ಯಾಸಿಸ್ಟ್ ಆಡಳಿತ ಅಂತ್ಯಗೊಳಿಸಲು ಯುವ ನಾಯಕರಾಗಿ ಕನ್ಹಯ್ಯ ಕುಮಾರ್ ಹಾಗೂ ಜಿಗ್ನೇಶ್ ಮೇವಾನಿ ಜೊತೆ ಕೆಲಸ ಮಾಡಲು ಉತ್ಸುಕರಾಗಿದ್ದೇವೆ. ಯುವ ನಾಯಕರ ಆಗಮನದಿಂದ ಕೆಟ್ಟ ಆಡಳಿತಕ್ಕೆ ಅಂತ್ಯಹಾಡಲಿದ್ದೇವೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಹೇಳಿದ್ದಾರೆ.
