Asianet Suvarna News Asianet Suvarna News

ವೈರಲ್ ಚೆಕ್: ಅಫ್ಜಲ್‌ ಗುರು ಫೋಟೋ ಹಿಡಿದು ಕನ್ಹಯ್ಯ ಪ್ರಚಾರ ಮಾಡಿದ್ರಾ?

ಸಿಪಿಐ ಬೇಗುಸರಾಯ್‌ ಆಭ್ಯರ್ಥಿ ಕನ್ಹಯ್ಯ ಕುಮಾರ್‌ 2001ರ ಸಂಸತ್‌ ದಾಳಿ ರೂವಾರಿ ಅಫ್ಜಲ್‌ ಗುರು ಫೋಟೋ ಹಿಡಿದು ಚುನಾವಣಾ ಪ್ರಚಾರ ಮಾಡುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? ಇಲ್ಲಿದೆ ಓದಿ 

Fact check of Kanhaiya kumar campaign with image of Afzal Guru
Author
Bengaluru, First Published May 3, 2019, 9:40 AM IST

ಸಿಪಿಐ ಬೇಗುಸರಾಯ್‌ ಆಭ್ಯರ್ಥಿ ಕನ್ಹಯ್ಯ ಕುಮಾರ್‌ 2001ರ ಸಂಸತ್‌ ದಾಳಿ ರೂವಾರಿ ಅಫ್ಜಲ್‌ ಗುರು ಫೋಟೋ ಹಿಡಿದು ಚುನಾವಣಾ ಪ್ರಚಾರ ಮಾಡುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

ಟ್ವೀಟರ್‌ನಲ್ಲಿ ಈ ಫೋಟೋ ಪೋಸ್ಟ್‌ ಮಾಡಿ, ‘ಈ ಫೋಟೋ ನೋಡಲು ಮತ್ತು ಪ್ರತಿಕ್ರಿಯಿಸದಿರಲು ಅದೆಷ್ಟುತಾಳ್ಮೆ ಬೇಕು? ನನಗೆ ಅಷ್ಟೊಂದು ತಾಳ್ಮೆ ಇಲ್ಲ. ನಾನು ಅಸಹಿಷ್ಣು ಭಾರತೀಯ!!! ಈ ಬಗ್ಗೆ ಹೆಮ್ಮೆಯೂ ಇದೆ!’ ಎಂದು ಒಕ್ಕಣೆ ಬರೆಯಲಾಗಿದೆ. ಈ ಫೋಟೋ ಸದ್ಯ ಟ್ವೀಟರ್‌, ಫೇಸ್‌ಬುಕ್‌ಗಳಲ್ಲಿ ವೈರಲ್‌ ಆಗಿದೆ. ನೆಟ್ಟಿಗರು ಕನ್ಹಯ್ಯ ಕುಮಾರ್‌ ಅವರನ್ನು ಟೀಕಿಸಿದ್ದಾರೆ.

Fact check of Kanhaiya kumar campaign with image of Afzal Guru

ಆದರೆ ನಿಜಕ್ಕೂ ಕನ್ಹಯ್ಯ, ಅಫ್ಜಲ್‌ ಗುರು ಫೋಟೋ ಹಿಡಿದು ಚುನಾವಣೆ ಪ್ರಚಾರ ಕಾರ‍್ಯದಲ್ಲಿ ತೊಡಗಿದ್ದರೇ ಎಂದು ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ, ಫೋಟೋಶಾಪ್‌ ಮೂಲಕ ಎಡಿಟ್‌ ಮಾಡಿ ಈ ರೀತಿಯ ಚಿತ್ರ ಸೃಷ್ಟಿಲಾಗಿದೆ ಎಂದು ತಿಳಿದುಬಂದಿದೆ. ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಹುಡುಕಹೊರಟಾಗ ಮೂಲ ಚಿತ್ರ ಪತ್ತೆಯಾಗಿದೆ.

ಮೂಲ ಚಿತ್ರವನ್ನು ಯೂಟ್ಯೂಬ್‌ನಲ್ಲಿ ಅಪ್ಲೋಡ್‌ ಮಾಡಲಾಗಿದ್ದು, ಅದರಲ್ಲಿ ಕಮ್ಯುನಿಷ್ಟಪಾರ್ಟಿ ಆಫ್‌ ಇಂಡಿಯಾ(ಸಿಪಿಐ) ಚಿಹ್ನೆಯ ಹಿಂದೆ ಕನ್ಹಯ್ಯ ಕುಮಾರ್‌ ನಿಂತಿದ್ದಾರೆ. ವೈರಲ್‌ ಆಗಿರುವ ಚಿತ್ರ ಮತ್ತು ಮೂಲ ಚಿತ್ರವನ್ನು ಹಿಡಿದು ನೀಡಿದಾಗ ವಾಸ್ತವ ಏನೆಂದು ಸ್ಪಷ್ಟವಾಗಿ ಗೋಚರಿಸುತ್ತದೆ.

- ವೈರಲ್ ಚೆಕ್ 

 

Follow Us:
Download App:
  • android
  • ios