ಪಂಚಾಯತ್ ಚುನಾವಣೆ ಗೆದ್ದು ಪಾಕಿಸ್ತಾನ ಪರ ಘೋಷಣೆ ದೇಶದ ಅಭಿವೃದ್ಧಿಗಾಗಿ ಚುನಾವಣೆ, ಪಾಕಿಸ್ತಾನ ಅಭಿವೃದ್ಧಿ ಗುರಿ ದೇಶದ್ರೋಹಿಗಳ ವಿರುದ್ಧ ದಾಖಲಾಯ್ತು ಕೇಸ್
ಹಜರಿಬಾದ್(ಮೇ.22): ಭಾರತದಲ್ಲಿ ಪ್ರತಿಯೊಂದು ಗ್ರಾಮದ ಅಭಿವೃದ್ಧಿ, ಅಲ್ಲಿ ಸಮಸ್ಯೆಗಳನ್ನು ಅಲಿಸಲು ಜನಪ್ರತಿಧನಿಗಳಿದ್ದಾರೆ. ಇದೇ ಕಾರಣಕ್ಕೆ ಭಾರತ ಅತೀ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ತೆ ಎಂದು ಗುರುತಿಸಿಕೊಂಡಿದೆ. ಗ್ರಾಮದ ಅಭಿವೃದ್ಧಿಗಾಗಿ ಚುನಾವಣೆಗೆ ಸ್ಪರ್ಧಿಸಿ, ಬಳಿಕ ಪಾಕಿಸ್ತಾನ ಜಿಂದಾಬಾದ್, ಪಾಕಿಸ್ತಾನ ಪರ ಘೋಷಣೆ ಕೂಗಿದ ಘಟನೆ ಜಾರ್ಖಂಡ್‌ನ ಹಜರಿಬಾದ್‌ನಲ್ಲಿ ನಡೆದಿದೆ.
ಪಂಚಾಯತ್ ಚುನಾವಣೆ ಗೆದ್ದ ಸಂಭ್ರಮದಲ್ಲಿ ಮೆರವಣಿಗೆ ಮಾಡಲಾಗಿದೆ. ಈ ಮೆರವಣಿಗೆಯಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಲಾಗಿದೆ. ಬಜಾರ್ ಸಮಿತಿ ಮುಂಭಾಗದಲ್ಲಿ ವಿಜಯೋತ್ಸವ ಆಚರಿಸಿ ಮೆರವಣಿ ಮಾಡಲಾಗಿದಿ. ಈ ವಿಡಿಯೋ ವೈರಲ್ ಆಗಿದೆ.
ಪಾಕ್ ಮಹಿಳಾ ಏಜೆಂಟ್ ಜೊತೆ ಹನಿಟ್ರ್ಯಾಪ್‌ಗೆ ಒಳಗಾದ ಭಾರತೀಯ ಯೋಧನ ಸೆರೆ!
ಈ ವಿಡಿಯೋ ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಒಟ್ಟು 62 ಮಂದಿ ವಿರುದ್ದ ಕೇಸ್ ದಾಖಲಾಗಿದೆ. ಇದರಲ್ಲಿ 12 ಮಂದಿಯನ್ನು ಗುರುತಿಸಲಾಗಿದೆ. ಇನ್ನುಳಿದ ಮಂದಿಯ ಗುರುತು ಪತ್ತೆಯಾಗಿಲ್ಲ. ಈ ವೈರಲ್ ವಿಡಿಯೋ ಸತ್ಯಾಸತ್ಯತೆ ಕುರಿತು ಪರಿಶೀಲನೆ ನಡೆಸಲಾಗುತ್ತದೆ. ತಪ್ಪು ಮಾಡಿದ್ದರೆ ಕಠಿಣ ಶಿಕ್ಷೆ ನೀಡಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.
ಎಪ್ರಿಲ್ 21 ರಿಂದ ಆರಂಭಗೊಂಡಿರುವ ಜಾರ್ಖಂಡ್ 4 ಹಂತದ ಪಂಚಾಯತ್ ಚುನಾವಣೆಯಲ್ಲಿ ಇದು ಎರಡನೇ ಪ್ರಕರಣವಾಗಿದೆ. ಇದಕ್ಕೂ ಮೊದಲು ಪಾಕ್ ಪರ ಘೋಷಣೆ ಕೂಗಿದ ಪಂಚಾಯತ್ ಅಭ್ಯರ್ಥಿ ಸೇರಿ ಇಬ್ಬರು ಬೆಂಬಲಿಗರನ್ನು ಪೊಲೀಸರು ಬಂಧಿಸಿದ್ದಾರೆ.
ಪಾಕ್ ಪರ ಘೋಷಣೆ: ಆರ್‌ಎಲ್‌ಡಿ ಅಭ್ಯರ್ಥಿ ವಿರುದ್ಧ ದೇಶದ್ರೋಹ ಕೇಸ್
ಉತ್ತರ ಪ್ರದೇಶ ಚುನಾವಣಾ ಪ್ರಚಾರದ ವೇಳೆ ಪಾಕಿಸ್ತಾನ ಪರವಾಗಿ ಘೋಷಣೆ ಕೂಗಿದ್ದಾರೆ ಎನ್ನುವ ಕಾರಣಕ್ಕೆ ರಾಷ್ಟ್ರೀಯ ಲೋಕದಳ ಪಕ್ಷದ (ಆರ್‌ಎಲ್‌ಡಿ) ಬಿಜ್ನೋರ್ ಕ್ಷೇತ್ರದ ಅಭ್ಯರ್ಥಿ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಲಾಗಿದೆ.
ಕಾಶ್ಮೀರಕ್ಕೆ ನುಸುಳಲು ಗಡಿಯಲ್ಲಿ ಕಾದಿದ್ದಾರೆ 200 ಪಾಕ್ ಉಗ್ರರು
ಕೆಲವು ದಿನಗಳ ಹಿಂದೆ ಆರ್‌ಎಲ್‌ಡಿ ಅಭ್ಯರ್ಥಿ ನೀರಜ್ ಚೌಧರಿ ನಡೆಸಿದ ಮನೆ ಮನೆ ಪ್ರಚಾರದ ವಿಡಿಯೋ ವೈರಲ್ ಆಗಿದ್ದು, ಇದರಲ್ಲಿ ಕೆಲವರು ಪಾಕಿಸ್ತಾನ ಜಿಂದಾಬಾದ್ ಎಂಬ ಘೋಷಣೆ ಕೂಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ನೀರಜ್ ಚೌಧರಿ ಮತ್ತು ಇತರ 20 ಜನರ ವಿರುದ್ಧ ಐಪಿಸಿ ಸೆಕ್ಷನ್ 124-ಎ ಮತ್ತು 295-ಎಗಳಡಿ ಪ್ರಕರಣ ದಾಖಲಿಸಲಾಗಿದೆ. ಗುರುವಾರವೇ ಪ್ರಕರಣ ದಾಖಲಿಸಲಾಗಿದ್ದರೂ ಈವರೆಗೂ ಯಾರನ್ನೂ ಬಂಧಿಸಿಲ್ಲ ಎಂದು ಅವರು ಹೇಳಿದ್ದಾರೆ.
ಪಾಕ್ ಪರ ವಾಟ್ಸಪ್ ಸ್ಟೇಟಸ್ ಹಾಕಿದ್ದವನ ಸೆರೆ
ಪಾಕಿಸ್ತಾನ ಪರ ಘೋಷಣೆ ಕೂಗಿ ವಾಟ್ಸಪ್ ಸ್ಟೇಟಸ್ ಇಟ್ಟುಕೊಂಡಿದ್ದ ಸಿರುಗುಪ್ಪ ನಗರದ ನಿವಾಸಿ 28 ವರ್ಷದ ಹುಸೇನ್ ಎಂಬ ಯುವಕನನ್ನು ಪಟ್ಟಣ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಪಾಕಿಸ್ತಾನದ ಧ್ವಜ ಎದೆಯ ಮೇಲೆ ಹೊತ್ತು ಸ್ಲೋ ಮೋಷನ್‌ನಲ್ಲಿ ಓಡುತ್ತ ಕಾಲುವೆಯೊಂದರ ಮೇಲೆ ಹಾರುತ್ತಿರುವ ದೃಶ್ಯ ವಿಡಿಯೋದಲ್ಲಿ ಕಂಡು ಬರುತ್ತಿದ್ದು, ಈತನ ಹಿಂದೆ ನಿಂತಿರುವ ಇಬ್ಬರ ಪೈಕಿ ಓರ್ವ ಪಾಕಿಸ್ತಾನದ ಧ್ವಜ ಹಿಡಿದುಕೊಂಡಿದ್ದಾನೆ. ಪಾಕಿಸ್ತಾನ ಪರ ಘೋಷಣೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದ್ದು, ಯುವಕರ ವರ್ತನೆ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
