Asianet Suvarna News Asianet Suvarna News

ಪಾಕ್ ಮಹಿಳಾ​ ಏಜೆಂಟ್ ಜೊತೆ ಹನಿಟ್ರ್ಯಾಪ್‌ಗೆ ಒಳಗಾದ ಭಾರತೀಯ ಯೋಧನ ಸೆರೆ!

ತಾನು ಬೆಂಗಳೂರಲ್ಲಿ ಸೇನಾ ನರ್ಸ್‌ ಎಂದು ಹೇಳಿಕೊಂಡ ಪಾಕಿಸ್ತಾನಿ ಸೇನಾ ಏಜೆಂಟಳ ಹನಿಟ್ರ್ಯಾಪ್‌ಗೆ ಒಳಗಾಗಿ, ಸೇನೆಯ ಗೌಪ್ಯ ಹಾಗೂ ಕಾರ್ಯತಂತ್ರದ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದ ಯೋಧನನ್ನು ಬಂಧಿಸಲಾಗಿದೆ.

honey trapped army soldier caught sharing info with pakistani agent gvd
Author
Bangalore, First Published May 22, 2022, 3:00 AM IST | Last Updated May 22, 2022, 3:00 AM IST

ಜೈಪುರ (ಮೇ.22): ತಾನು ಬೆಂಗಳೂರಲ್ಲಿ ಸೇನಾ ನರ್ಸ್‌ ಎಂದು ಹೇಳಿಕೊಂಡ ಪಾಕಿಸ್ತಾನಿ ಸೇನಾ ಏಜೆಂಟಳ ಹನಿಟ್ರ್ಯಾಪ್‌ಗೆ ಒಳಗಾಗಿ, ಸೇನೆಯ ಗೌಪ್ಯ ಹಾಗೂ ಕಾರ್ಯತಂತ್ರದ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದ ಯೋಧನನ್ನು ಬಂಧಿಸಲಾಗಿದೆ. ಜೋಧಪುರದಲ್ಲಿ ಸೇವೆ ಸಲ್ಲಿಸುತ್ತಿದ್ದ ಉತ್ತರಾಖಂಡ ಮೂಲದ ಯೋಧ ಪ್ರದೀಪ್‌ ಕುಮಾರ್‌ ಎಂಬಾತ ಪಾಕಿಸ್ತಾನಿ ಗುಪ್ತಚರ ಇಲಾಖೆಗಾಗಿ ಕೆಲಸ ಮಾಡುತ್ತಿರುವ ಮಹಿಳಾ ಏಜೆಂಟ್‌ಳೊಂದಿಗೆ ಫೇಸ್‌ಬುಕ್‌ ಹಾಗೂ ವಾಟ್ಸಾಪ್‌ ಮುಖಾಂತರ ಸಂಪರ್ಕ ಹೊಂದಿದ್ದ. ಆಕೆಗೆ ಸೇನೆಯ ಗೌಪ್ಯ ಹಾಗೂ ಕಾರ್ಯತಂತ್ರದ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದು ತಿಳಿದುಬಂದಿದೆ. 

ಈ ಹಿನ್ನೆಲೆಯಲ್ಲಿ ಕುಮಾರ್‌ನನ್ನು ಬಂಧಿಸಿಲಾಗಿದೆ. 6 ತಿಂಗಳ ಹಿಂದೆ ಮಹಿಳೆಯು ಕುಮಾರ್‌ ಪೋನಿಗೆ ಕರೆ ಮಾಡಿದ್ದಳು. ಬೆಂಗಳೂರಿನಲ್ಲಿ ಸೇನೆಯ ನರ್ಸಿಂಗ್‌ ಸೇವಾ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುವುದಾಗಿ ಹೇಳಿಕೊಂಡಿದ್ದಳು. ಕುಮಾರ್‌ನನ್ನು ಪುಸಲಾಯಿಸಿ ದೆಹಲಿಗೆ ಬಂದು ಭೇಟಿಯಾಗಲು ಒತ್ತಾಯಿಸಿದ್ದಳಲ್ಲದೇ, ಆತನಿಗೆ ವಿವಾಹ ಪ್ರಸ್ತಾಪವನ್ನು ಸಲ್ಲಿಸಿದ್ದಳು. ನಂತರ ಆಕೆ ಕೇಳಿದಕ್ಕೆ ಗೌಪ್ಯ ಮಾಹಿತಿ ಹಂಚಿಕೊಂಡಿದ್ದಾಗಿ ಕುಮಾರ್‌ ತನಿಖೆಯ ವೇಳೆ ಬಾಯ್ಬಿಟ್ಟಿದ್ದಾನೆ. ಕುಮಾರ್ ವಿರುದ್ಧ ಅಧಿಕೃತ ರಹಸ್ಯಗಳ ಕಾಯ್ದೆ 1923 ಅಡಿಯಲ್ಲಿ ಪ್ರಕರಣ ದಾಖಲಿಸಿ, ಮುಂದಿನ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಬೆಂಗಳೂರು ಬಿಜೆಪಿ ಮುಖಂಡ ಆತ್ಮಹತ್ಯೆಗೆ ಬಿಗ್ ಟ್ವಿಸ್ಟ್, ಡೆತ್​ನೋಟ್​ನಲ್ಲಿ ಹೆಣ್ಣಿನ ರಹಸ್ಯ ಬಯಲು

ಶಿರಸಿ, ಕೋಣೆಗೆ ಕರೆಸಿ ರಾಸಲೀಲೆ ನಡೆಸಿದಂತೆ ವಿಡಿಯೋ ಮಾಡಿಕೊಂಡರು: ಶಿರಸಿಯಲ್ಲಿ ಹನಿ ಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.  ಹನಿಟ್ರ್ಯಾಪ್ ಮಾಡಿ ಸಂತ್ರಸ್ತನಿಂದ 15 ಲಕ್ಷ ರೂ. ಬೇಡಿಕೆಯಿಟ್ಟಿದ್ದ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಮಾಹಿತಿ ಗೊತ್ತಾಗಿ 24 ಗಂಟೆಗಳ ಒಳಗೆ ಆರೋಪಿಗಳನ್ನು ಬಂಧಿಸಿ ಜೈಲಿಗೆ ಅಟ್ಟಲಾಗಿದೆ.  ಶಿರಸಿ  ಉಂಚಳ್ಳಿಯ ಅಜಿತ್ ಶ್ರೀಕಾಂತ್ ನಾಡಿಗ್ (25), ಬನವಾಸಿ ರಸ್ತೆಯ ಗೊಲಕೇರಿ ಓಣಿಯ ಧನುಷ್ಯ ಕುಮಾರ್ ಯಾನೆ ದಿಲೀಪ್ ಕುಮಾರ್ ಶೆಟ್ಟಿ (25) ಹಾಗೂ ಶಿವಮೊಗ್ಗ ಗೋಪಾಳ ರಂಗನಾಥ್ ಬಡಾವಣೆಯ ಪದ್ಮಜಾ ಡಿ.ಎನ್. (50) ಬಂಧಿತ ಆರೋಪಿಗಳು.

ಆರೋಪಿ ಅಜಿತ್ ಜತೆ ಸಂತ್ರಸ್ತ ಕಳೆದ 5 ವರ್ಷದಿಂದ ಪರಿಚಯ ಹೊಂದಿದ್ದ ಈ ಕಾರಣದಿಂದ ಸರಕಾರಿ ಖಾಯಂ ಉಪನ್ಯಾಸ ಹುದ್ದೆ ಕೊಡಿಸೋದಾಗಿ  ಸಂತ್ರಸ್ತನನ್ನು  ಆರೋಪಿ ಅಜಿತ್ ಹಾಗೂ ಧನುಷ್ಯ ನಂಬಿಸಿದ್ದರು ಜನವರಿ 17ರಂದು ಸಂತ್ರಸ್ತನನ್ನು ಶಿವಮೊಗ್ಗಕ್ಕೆ ಕರೆಯಿಸಿ ಆತನನ್ನು ರೂಂ ಒಂದರಲ್ಲಿ ಕೂಡಿಹಾಕಿದ್ದರು. ಬಳಿಕ ಆತನನ್ನು ನಗ್ನಗೊಳಿಸಿ ಮಹಿಳೆಯ ಜತೆ ರಾಸ ಲೀಲೆ ನಡೆಸಿದಂತೆ ಫೋಟೊ ಹಾಗೂ ವಿಡಿಯೋ ಚಿತ್ರೀಕರಿಸಿದ್ದರು. 15 ಲಕ್ಷ ರೂ.‌ನೀಡದಿದ್ದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಸಿದ್ದರು. ಅಲ್ಲದೇ, ಜನವರಿ 18ರಂದು ಆತನ ತಂದೆಯ ಬಳಿ ತೆರಳಿ ಫೋಟೊ, ವಿಡಿಯೋ ತೋರಿಸಿ ಪುತ್ರ ಜೀವಂತವಾಗಿ ಬೇಕಂದ್ರೆ ಹಣ ನೀಡುವಂತೆ ಧಮ್ಕಿ ಹಾಕಿದ್ದರು.

Honeytrap: ಮಹಿಳೆ ಮಾತು ನಂಬಿ ಲಕ್ಷಾಂತರ ರು. ಕಳಕೊಂಡ ನಿವೃತ್ತ ಪ್ರಾಚಾರ್ಯ..!

ಈ ಸಂದರ್ಭದಲ್ಲಿ ಸುಳ್ಳು ಕರಾರು ಪತ್ರ, ಬ್ಲ್ಯಾಂಕ್ ಚೆಕ್ ಕೂಡಾ ಬರೆಯಿಸಿಕೊಂಡ ಆರೋಪಿಗಳು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಸಂತ್ರಸ್ತನ ದೂರಿನ ಹಿನ್ನೆಲೆ ತನಿಖೆ ಕೈಗೆತ್ತಿಕೊಂಡಿದ್ದ ಶಿರಸಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಡಿ.ಎಸ್.ಪಿ. ರವಿ ನಾಯ್ಕ್ ಮಾರ್ಗದರ್ಶನದಲ್ಲಿ ಸಿ.ಪಿ.ಐ. ರಾಮಚಂದ್ರ ನಾಯಕ ನೇತೃತ್ವದಲ್ಲಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Latest Videos
Follow Us:
Download App:
  • android
  • ios