ದೇಶದಲ್ಲಿ ಕೊರೋನಾ 4ನೇ ಅಲೆ ಆತಂಕ ಗಣನೀಯ ಏರಿಕೆ ಕಾಣುತ್ತಿರುವ ಕೋವಿಡ್ ಪ್ರಕರಣ ಸಂಖ್ಯೆ ಶಾಲೆಗಳಲ್ಲಿ ಸಭೆ, ಸೇರಿದಂತೆ ಚಟುವಟಿಕೆ ನಿಷೇಧ  

ಜಾರ್ಖಂಡ್(ಏ.25): ದೇಶದಲ್ಲಿ ಕೊರೋನಾ ಪ್ರಕರಣ ಸಂಖ್ಯೆ ಗಣನೀಯ ಏರಿಕೆಯಾಗುತ್ತಿದೆ. ಒಂದೊಂದೆ ರಾಜ್ಯಗಳಲ್ಲಿ ಕಠಿಣ ನಿರ್ಬಂಧಗಳು ಜಾರಿಯಾಗುತ್ತಿದೆ.ಜಾರ್ಖಂಡ್‌ನಲ್ಲಿ ಕೊರೋನಾ ಪ್ರಕರಣ ಹೆಚ್ಚಾಗಿದೆ. ಇದರ ಬೆನ್ನಲ್ಲೇ ನಿರ್ಬಂಧ ಜಾರಿಗೊಳಿಸಿದೆ. ಮಾಸ್ಕ್ , ಸಾಮಾಜಿಕ ಅಂತರ ಸೇರಿದಂತೆ ಹಲವು ಸೂಚನೆ ನೀಡಿರುವ ಜಾರ್ಖಂಡ್ ಇದೀಗ ಶಾಲೆಗಳಲ್ಲಿ ಸಭೆ, ಕ್ರೀಡಾ ಚಟುವಟಿಕೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ನಿಷೇಧಿಸಿದೆ.

ಜಾರ್ಖಂಡ್ ಶಿಕ್ಷಣ ಸಚಿವಾಲಯ ಮಹತ್ವದ ಮಾರ್ಗಸೂಚಿ ಪ್ರಕಟಿಸಿದೆ. ಶಾಲೆಗಳಲ್ಲಿ ಆರೋಗ್ಯ ತಪಾಸಣೆ ಕಡ್ಡಾಯ ಮಾಡಲಾಗಿದೆ. ಸ್ಥಳೀಯ ಆರೋಗ್ಯ ಕೇಂದ್ರಗಳ ಸಹಾಯದೊಂದಿಗೆ ಮಕ್ಕಳ ಆರೋಗ್ಯ ತಪಾಸಣೆ ಮಾಡಬೇಕು. ಇನ್ನು ಜಿಲ್ಲಾಡಳಿತ ಶಾಲೆಗಳಲ್ಲಿ ಯಾದೃಚ್ಛಿಕ COVID-19 ಪರೀಕ್ಷೆ ಮಾಡಬೇಕು ಎಂದು ಮಾರ್ಗಸೂಚಿ ಪ್ರಕಟಿಸಿದೆ.

Covid 19 cases ದೇಶದಲ್ಲಿ ಕೋವಿಡ್ ಹೆಚ್ಚಳ, ಏ.27ಕ್ಕೆ ಎಲ್ಲಾ ರಾಜ್ಯ ಸಿಎಂ ಜೊತೆ ಮೋದಿ ಸಭೆ!

ಶಾಲೆಗಳಲ್ಲಿ ಬೆಳಗಿನ ಸಭೆ, ಇತರ ಸಭಾ ಕಾರ್ಯಕ್ರಮಗಳು, ಕ್ರೀಡಾ ಚಟುವಟಿಕೆಗಳು, ಸಾಂಸ್ಕೃತಿಕ ಚಟುವಟಿಗಳನ್ನು ಆಯೋಜಿಸದಂತೆ ಮಾರ್ಗಸೂಚಿಯಲ್ಲಿ ಉಲ್ಲೇಖಿಸಿದೆ. ಶಾಲೆಗಳಲ್ಲಿ ತೀವ್ರ ಮುನ್ನಚ್ಚರಿಕೆ ತೆಗೆದುಕೊಳ್ಳಲು ಶಾಲಾ ಆಡಳಿತ ಮಂಡಳಿಗಳಿಗೆ ಸೂಚನೆ ನೀಡಲಾಗಿದೆ.

ಶಾಲೆಗಳಲ್ಲಿ ಶುಚಿತ್ವ ಕಾಪಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ಶಾಲಾ ಅವರಣ, ಗ್ರಂಥಾಲಯ, ಶಾಲಾ ಕೊಠಡಿಗಳಲ್ಲಿ ಸ್ಯಾನಿಟೈಸೇಶನ್ ಮಾಡುವಂತೆ ಸೂಚಿಸಲಾಗಿದೆ.

ಏಪ್ರಿಲ್ 27ಕ್ಕೆ ಎಲ್ಲಾ ರಾಜ್ಯ ಸಿಎಂ ಜೊತೆ ಮೋದಿ ಸಭೆ
ದೇಶದಲ್ಲಿ ಕೋವಿಡ್ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಏಪ್ರಿಲ್ 27 ರಂದು ಪ್ರಧಾನಿ ನರೇಂದ್ರ ಮೋದಿ ಎಲ್ಲಾ ರಾಜ್ಯಗಳ ಸಿಎಂ ಜೊತೆ ಮಹತ್ವದ ಸಭೆ ನಡೆಸಲಿದ್ದಾರೆ. ಕೊರೋನಾ ಪರೀಕ್ಷೆ ಹೆಚ್ಚಳ, ಮುಂಜಾಗ್ರತೆ ವಹಿಸುವಂತೆ ಮೋದಿ ಸೂಚಿಸುವ ಸಾಧ್ಯತೆ ಇದೆ.

ಕೊರೋನಾ ನಾಲ್ಕನೇ ಅಲೆ ಬಗ್ಗೆ ಡಾ. ಸಿ.ಎನ್ ಮಂಜುನಾಥ್‌ ಕೊಟ್ಟ ಎಚ್ಚರಿಕೆ ಇದು..

ದಿಲ್ಲಿಯಲ್ಲಿ ಮತ್ತೆ 1083 ಕೇಸು, 1 ಸಾವು
ದೆಹಲಿಯಲ್ಲಿ ಕೋವಿಡ್‌ ಸೋಂಕು ಸತತ ಏರಿಕೆಯಾಗಿದ್ದು, ಭಾನುವಾರ 1,083 ಹೊಸ ಕೋವಿಡ್‌ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಪಾಸಿಟಿವಿಟಿ ದರವು ಶೇ. 4.48ಕ್ಕೆ ಏರಿಕೆಯಾಗಿದ್ದು, ಒಬ್ಬ ಸೋಂಕಿತ ಸಾವನ್ನಪ್ಪಿದ್ದಾನೆ. ದೆಹಲಿಯಲ್ಲಿ ಈವರೆಗೆ 18.74 ಲಕ್ಷ ಜನರಿಗೆ ಸೋಂಕು ತಗುಲಿದ್ದು, ಸೋಂಕಿತರ ಸಾವಿನ ಸಂಖ್ಯೆ 26,168ಕ್ಕೆ ಏರಿಕೆಯಾಗಿದೆ. ಶನಿವಾರ 1,094 ಕೇಸು ದಾಖಲಾಗಿದ್ದು, ಇಬ್ಬರು ಸೋಂಕಿತರು ಬಲಿಯಾಗಿದ್ದರು.

ಶಾಂಘೈ ಮತ್ತಷ್ಟುಕಠಿಣ ಕೋವಿಡ್‌ ನಿರ್ಬಂಧ
ಚೀನಾದ ವಾಣಿಜ್ಯ ನಗರ ಶಾಂಘೈನಲ್ಲಿ ಒಂದೇ ದಿನ 39 ಕೋವಿಡ್‌ ಸೋಂಕಿತರು ಸಾವಿಗೀಡಾಗಿದ್ದಾರೆ. ಕಳೆದ ಒಂದು ತಿಂಗಳಿನಿಂದ ಒಂದೇ ದಿನ ದಾಖಲಾದ ಅತಿ ಹೆಚ್ಚು ಸಾವು ಇದಾಗಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಹೈ ಅಲರ್ಚ್‌ ಸಾರಲಾಗಿದ್ದು, ಶಾಂಘೈನಲ್ಲಿ ಜನಸಂಚಾರ ನಿರ್ಬಂಧಿಸಲು ಲೋಹದ ತಡೆಗೋಡೆ ನಿರ್ಮಿಸಿ, ಕಠಿಣ ನಿರ್ಬಂಧಗಳನ್ನು ವಿಧಿಸಲಾಗಿದೆ. ಇದು ಕೋವಿಡ್‌ ನಿರ್ಬಂಧಗಳಿಂದ ಜರ್ಜರಿತವಾಗಿದ್ದ ಶಾಂಘೈ ನಿವಾಸಿಗಳನ್ನು ಮತ್ತಷ್ಟುಹೈರಾಣಾಗಿಸಿದೆ.

ಸೋಂಕು ಹೆಚ್ಚಾಗುತ್ತಿದ್ದಂತೆಯೇ ಶಾಂಘೈನಲ್ಲಿ ಸ್ವಯಂಸೇವಕರು ಮತ್ತು ಕೆಳಸ್ತರದ ಸರ್ಕಾರಿ ನೌಕರರು ಜನರ ಓಡಾಟ ನಿಯಂತ್ರಿಸಲು ಲೋಹದ ತಡೆಗೋಡೆಗಳನ್ನು ನಿರ್ಮಿಸುತ್ತಿದ್ದಾರೆ. ತೆಳುವಾದ ಲೋಹದ ಹಾಳೆಗಳು ಅಥವಾ ಬಲೆಗಳನ್ನು ಬಳಸಿ ಬೇಲಿಗಳನ್ನು ನಿರ್ಮಿಸಲಾಗುತ್ತಿದೆ. ಸೋಂಕು ಕಾಣಿಸಿಕೊಂಡಿರುವ ಕಟ್ಟಡಗಳ ಮುಖ್ಯದ್ವಾರಗಳನ್ನು ಮುಚ್ಚಲಾಗುತ್ತಿದೆ. ಇಂತಹ ಕಟ್ಟಡಗಳಲ್ಲಿ ಸಣ್ಣ ಬಾಗಿಲುಗಳನ್ನು ನಿರ್ಮಿಸಿ ಕೇವಲ ಆರೋಗ್ಯ ಕಾರ್ಯಕರ್ತರಿಗೆ ಮಾತ್ರ ಓಡಾಡಲು ಅವಕಾಶ ನೀಡಲಾಗುತ್ತಿದೆ.

ಚೀನಾದಲ್ಲಿ 21 ಸಾವಿರ ಕೇಸು:
ಚೀನಾದಲ್ಲಿ ಒಂದೇ ದಿನ 21,796 ಕೋವಿಡ್‌ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಅತಿ ಹೆಚ್ಚು ಪ್ರಕರಣಗಳು ಶಾಂಘೈನಲ್ಲೇ ದಾಖಲಾಗಿವೆ. 22 ಹೊಸ ಸಾಮುದಾಯಿಕ ಕೋವಿಡ್‌ ಪ್ರಕರಣಗಳು ಕಾಣಿಸಿಕೊಂಡಿದೆ. ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಚೀನಾ ಆಡಳಿತದ ಹಿರಿಯ ಅಧಿಕಾರಿಗಳು ತುರ್ತು ಸಭೆ ನಡೆಸಿದ್ದಾರೆ. ಶಾಂಘೈ ಅಷ್ಟೇ ಅಲ್ಲದೇ ಜಿಲಿನ್‌ನಲ್ಲಿ 60, ಹೈಲೋಂಗ್‌ಜಿಯಾಂಗ್‌ನಲ್ಲಿ 26, ಬೀಜಿಂಗ್‌ನಲ್ಲಿ 22 ಕೋವಿಡ್‌ ಪ್ರಕರಣಗಳು ದಾಖಲಾಗಿವೆ.