News Hour: ‘ಪುಲ್ವಾಮ ದಾಳಿ ಆಗದಿದ್ದರೆ ಮೋದಿ ಪ್ರಧಾನಿ ಆಗ್ತಿರಲಿಲ್ಲ..' ಶಾಸಕ ಎಚ್.ಸಿ ಬಾಲಕೃಷ್ಣ ವಿವಾದ!
ಮಾಗಡಿ ಕಾಂಗ್ರೆಸ್ ಶಾಸಕ ಎಚ್.ಸಿ ಬಾಲಕೃಷ್ಣ ವಿವಾದ ಸೃಷ್ಟಿಸಿದ್ದಾರೆ. ಪುಲ್ವಾಮ ದಾಳಿ ಆಗದಿದ್ದರೆ ಮೋದಿ ಪ್ರಧಾನಿ ಆಗ್ತಿರಲಿಲ್ಲ. ಸೈನಿಕರನ್ನು ಬಲಿ ಕೊಟ್ಟಂತಹ ಕೀರ್ತಿ ಮೋದಿಗೆ ಸಲ್ಲುತ್ತೆ ಎಂದು ಹೇಳಿದ್ದಾರೆ.
ಬೆಂಗಳೂರು (ನ.27): ಮಾಗಡಿಯ ಕಾಂಗ್ರೆಸ್ ಶಾಸಕ ಎಚ್‌ಸಿ ಬಾಲಕೃಷ್ಣ ಹೊಸ ವಿವಾದ ಸೃಷ್ಟಿಸಿದ್ದಾರೆ. ಪುಲ್ವಾಮಾದಲ್ಲಿ ಸೈನಿಕರನ್ನು ಬಲಿ ಕೊಟ್ಟು ಮೋದಿ ಅಧಿಕಾರಕ್ಕೆ ಬಂದರು. ಪಾಪ ಬಲಿದಾನ ಆಗಿದ್ದು ಸೈನಿಕರು,ಮೋದಿಗೆ ಅಧಿಕಾರ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಮೋದಿ ಅಷ್ಟೇ ಅಲ್ಲ, ಬಿಜೆಪಿ ವಿರುದ್ಧವೂ ಬಾಲಕೃಷ್ಣ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ನಾಯಕರು ಬ್ರಿಟಿಷರಿದ್ದಂತೆ.ದೇಶದಲ್ಲಿ ಒಡೆದು ಆಳುವ ನೀತಿ ಬಿಜೆಪಿ ಅನುಸರಿಸ್ತಿದೆ. ಉತ್ತರ ಪ್ರದೇಶದಲ್ಲಿ ಬಿಎಸ್‌ಪಿಗೆ ಆಗಿರುವ ಸ್ಥಿತಿ ಜೆಡಿಎಸ್‌ಗೆ ಬರುತ್ತದೆ ಎಂದು ಹೇಳಿದ್ದಾರೆ. ಯುಪಿಯಲ್ಲಿ BSP ಹೆಸರಿಲ್ಲದಂತೆ ಬಿಜೆಪಿ ಮಾಡಿದ್ದಾರೆ. ನ್ನೂ ಕರ್ನಾಟಕದಲ್ಲಿ ಕುಮಾರಣ್ಣನವರು ಯಾವ ಲೆಕ್ಕ? ಎಂದು ಮಾಗಡಿ ತೂಬಿನಕೆರೆ ಕಾರ್ಯಕ್ರಮದಲ್ಲಿ ಬಾಲಕೃಷ್ಣ ಕಿಡಿ ಕಾರಿದ್ದಾರೆ.
'ದೇಶಭಕ್ತ ಎನಿಸಿಕೊಳ್ಳಲು ನೆರೆಯ ದೇಶವನ್ನು ವಿರೋಧಿಸಲೇಬೇಕು ಅಂತೇನಿಲ್ಲ..', ಬಾಂಬೆ ಹೈಕೋರ್ಟ್ ತೀರ್ಪು!
ಇನ್ನು ಸೋಮವಾರ ಸಿಎಂ ಸಿದ್ಧರಾಮಯ್ಯ ಅವರು ಬರೋಬ್ಬರಿ 7 ಗಂಟೆಗಳ ಕಾಲ ಜನತಾದರ್ಶನ ನಡೆಸಿದ್ದಾರೆ. ನಾಡದೊರೆ ಎದುರು ಕಷ್ಟ ಹೇಳಿಕೊಂಡು ಜನರ ಕಣ್ಣೀರಿಟ್ಟಿದ್ದಾರೆ. ಕೆಲವರಿಗೆ ಸ್ಥಳದಲ್ಲಿಯೇ ಪರಿಹಾರ ನೀಡಲಾಯಿತು. ಈ ವೇಳೆ ಕೆಲ ಅಧಿಕಾರಿಗಳಿಗೆ ಕ್ಲಾಸ್ ಕೂಡ ತೆಗೆದುಕೊಂಡರು.