ಜೈಪುರದಲ್ಲಿ, ಟ್ರಾಫಿಕ್ ಚಲನ್ ನೀಡದೆ ವಾಹನ ಸವಾರರಿಂದ ಲಂಚ ವಸೂಲಿ ಮಾಡಲು ಸ್ವಂತ ಕ್ಯೂಆರ್ ಕೋಡ್ ಬಳಸುತ್ತಿದ್ದ ಟ್ರಾಫಿಕ್ ಕಾನ್ಸ್‌ಟೇಬಲ್‌ನನ್ನು ಬಂಧಿಸಲಾಗಿದೆ. ಈತನ ಜೊತೆ ಇನ್ನಿಬ್ಬರನ್ನು ಬಂಧಿಸಿದ್ದು ಇವರು ಸಿಕ್ಕಿಬಿದ್ದಿದ್ದು ಹೇಗೆ ಎಂಬ ಡಿಟೇಲ್ ಸ್ಟೋರಿ ಇಲ್ಲಿದೆ…
ಸ್ವಂತ ಕ್ಯೂ ಆರ್ ಕೋಡ್ ಇಟ್ಕೊಂಡು ವಸೂಲಿಗಿಳಿದ ಟ್ರಾಫಿಕ್ ಕಾನ್ಸ್‌ಟೇಬಲ್ ಅಂದರ್
ಪಂಕ್ಚರ್ ಶಾಪ್ ಕ್ಯೂ ಆರ್ ಕೋಡ್ ಬಳಸಿ ಹಾಗೂ ಸ್ವಂತ ಕ್ಯೂ ಆರ್ ಕೋಡ್ ಇರಿಸಿಕೊಂಡು ವಸೂಲಿ ದಂಧೆಗಿಳಿದಿದ್ದ ಪೊಲೀಸ್ ಕಾನ್ಸ್‌ಟೇಬಲ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಟ್ರಾಫಿಕ್ ಪೊಲೀಸ್ ಜೊತೆಗೆ ಗೃಹರಕ್ಷಕ ಸಿಬ್ಬಂದಿ ಹಾಗೂ ಪಂಕ್ಚರ್ ಶಾಪ್ ಮಾಲೀಕನನ್ನು ಬಂಧಿಸಲಾಗಿದೆ. ಟ್ರಾಫಿಕ್ ಚಲನ್‌ಗಳನ್ನು ನೀಡದೇ ಇರುವುದಕ್ಕೆ ಪ್ರತಿಯಾಗಿ ವಾಹನ ಸವಾರರಿಂದ ಹಣ ವಸೂಲಿ ಮಾಡಲು ಈ ಟ್ರಾಫಿಕ್ ಕಾನ್ಸ್‌ಟೇಬಲ್ ಸ್ವಂತ ಕ್ಯೂ ಆರ್ ಕೋಡ್ ಇಟ್ಕೊಂಡಿದ್ದ ಜೊತೆಗೆ ಪಕ್ಕದ ಪಂಕ್ಚರ್ ಶಾಪ್‌ನಲ್ಲಿ ಹಣ ಪಾವತಿ ಮಾಡುವಂತೆ ಒತ್ತಾಯಿಸಿದ್ದರು. ಆರೋಪಿಗಳನ್ನು ಬಂಧಿಸಿದ ಪೊಲೀಸರು ಬಂಧಿತರಿಂದ , ಆನ್‌ಲೈನ್ ಪಾವತಿ ಸ್ಕ್ಯಾನರ್ ಅನ್ನು ವಶಪಡಿಸಿಕೊಂಡಿದ್ದಾರೆ. ರಾಜಸ್ತಾನದ ಜೈಪುರದಲ್ಲಿ ಈ ಘಟನೆ ನಡೆದಿದೆ.
ಟ್ರಾಫಿಕ್ ಕಾನ್ಸ್‌ಟೇಬಲ್ ಭವಾನಿ ಸಿಂಗ್ , ಗೃಹರಕ್ಷಕ ದಳದ ವಕಾರ್ ಅಹ್ಮದ್ ಮತ್ತು ಪಂಕ್ಚರ್ ಅಂಗಡಿ ಮಾಲೀಕ ಮೊಹಮ್ಮದ್ ಮುಸ್ತಾಕ್ ಬಂಧಿತ ಆರೋಪಿಗಳು. ಬಂಧಿತರಾದ ಮೂವರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಿ 3 ದಿನಗಳ ಕಸ್ಟಡಿಗೆ ಕಳುಹಿಸಲಾಗಿದೆ. ಅಕ್ರಮ ಸುಲಿಗೆ ಪ್ರಕರಣದಲ್ಲಿ ಟ್ರಾಫಿಕ್ ಕಾನ್ಸ್‌ಟೇಬಲ್ ಭವಾನಿ ಸಿಂಗ್ , ಗೃಹರಕ್ಷಕ ದಳದ ವಕಾರ್ ಅಹ್ಮದ್ ಮತ್ತು ಪಂಕ್ಚರ್ ಅಂಗಡಿ ಮಾಲೀಕ ಮೊಹಮ್ಮದ್ ಮುಸ್ತಾಕ್ ಅವರನ್ನು ಬಂಧಿಸಲಾಗಿದೆ ಎಂದು ಬಜಾಜ್ ನಗರ ಎಸ್‌ಎಚ್‌ಒ ಪೂನಂ ಚೌಧರಿ ತಿಳಿಸಿದ್ದಾರೆ. 3ನೇ ಆರೋಪಿ ಮೊಹಮ್ಮದ್ ಮುಸ್ತಾಕ್, ತ್ರಿವೇಣಿ ಚೌರಾಹಾ ಬಳಿ ಪಂಕ್ಚರ್ ಅಂಗಡಿ ನಡೆಸುತ್ತಿದ್ದ.
ಪಂಕ್ಚರ್ ಅಂಗಡಿಯವನೊಂದಿಗೆ ಟ್ರಾಫಿಕ್ ಪೊಲೀಸ್ ಡೀಲ್
ಜೈಪುರ ಸಂಚಾರ ಪೊಲೀಸ್ ಇಲಾಖೆಯಲ್ಲಿ ನಿಯೋಜಿತನಾಗಿದ್ದ ಕಾನ್‌ಸ್ಟೆಬಲ್ ಭವಾನಿ ಸಿಂಗ್, ಗೃಹರಕ್ಷಕ ದಳದ ವಕಾರ್ ಅಹ್ಮದ್ ಜೊತೆ ತ್ರಿವೇಣಿ ಚೌರಾಹಾದಲ್ಲಿ ಕೆಲಸ ಮಾಡುತ್ತಿದ್ದ. ಅಲ್ಲೇ ಪಕ್ಕದಲ್ಲಿ ಮುಸ್ತಾಕ್ ತನ್ನ ಪಂಕ್ಚರ್ ಅಂಗಡಿ ನಡೆಸುತ್ತಿದ್ದು, ಈತ ಅಂಗಡಿಯಲ್ಲಿ ಗ್ರಾಹಕರಿಂದ ಹಣ ಪಡೆಯುವುದಕ್ಕೆ ಆನ್‌ಲೈನ್ ಪಾವತಿ ಸ್ಕ್ಯಾನರ್ ಅನ್ನು ಅಳವಡಿಸಿದ್ದನು. ಈತನ ಜೊತೆ ಟ್ರಾಫಿಕ್ ಕಾನ್ಸ್‌ಟೇಬಲ್ ಡೀಲ್ ಮಾಡಿಕೊಂಡಿದ್ದು, ಇದೇ ಅಂಗಡಿಯಲ್ಲಿ ತನ್ನ ಸ್ವಂತ ಖಾತೆಯ ಕ್ಯೂ ಅರ್ ಕೋಡ್ ಅಳವಡಿಸಿದ್ದನ್ನು. ನಂತ ಸಂಚಾರಿ ನಿಯಮ ಮೀರಿ ಸಿಕ್ಕಿಬೀಳುತ್ತಿದ್ದ ವಾಹನ ಸವಾರರಿಗೆ ಟ್ರಾಫಿಕ್ ಚಲನ್‌ಗಳನ್ನು ನೀಡದಿರಲು ಲಂಚ ಕೇಳುತ್ತಿದ್ದರು. ಆ ಹಣವನ್ನು ಈ ಅಂಗಡಿಯ ಕ್ಯೂ ಆರ್ ಕೋಡ್‌ಗೆ ಪಾವತಿ ಮಾಡುವಂತೆ ಹೇಳುತ್ತಿದ್ದರು.
ಚಲನ್ ನೀಡದಿರಲು ಲಂಚ ಪಡೆಯುತ್ತಿದ್ದ ಕಾನ್ಸ್ಟೇಬಲ್
ಸಂಚಾರ ನಿಯಮಗಳನ್ನು ಉಲ್ಲಂಘಿಸುವವರಿಗೆ ಕಾನ್‌ಸ್ಟೆಬಲ್ ಭವಾನಿ ಸಿಂಗ್ ಮತ್ತು ಗೃಹರಕ್ಷಕ ದಳದ ವಕಾರ್ ಅಹ್ಮದ್ ಚಲನ್ ರೂಪದಲ್ಲಿ ದಂಡ ವಿಧಿಸುತ್ತಿದ್ದರು. ಈ ಚಲನ್ ನೀಡದಿರಲು ಪ್ರತಿಯಾಗಿ, ಅವರು ಪಂಕ್ಚರ್ ಅಂಗಡಿಯಲ್ಲಿರುವ ಸ್ಕ್ಯಾನರ್‌ಗೆ ಹಣವನ್ನು ವರ್ಗಾಯಿಸುವಂತೆ ಜನರನ್ನು ಒತ್ತಾಯಿಸುತ್ತಿದ್ದರು.
ಇದನ್ನೂ ಓದಿ: ಈಗ ಭಾರತ ಮಾತ್ರವಲ್ಲ ಲಂಡನ್ ಬೀದಿಯಲ್ಲೂ ಪಾನ್ ಮಸಾಲಾದ ಮದರಂಗಿ: ಇಲ್ಲಿ ಉಗುಳ್ತಿರೋರು ಭಾರತೀಯರಾ?
ಹಣವನ್ನು ಪಡೆದ ನಂತರ, ವಾಹನ ಸವಾರರನ್ನು ಚಲನ್ ಇಲ್ಲದೆ ಹೋಗಲು ಬಿಡುತ್ತಿದ್ದರು. ಪಂಕ್ಚರ್ ಅಂಗಡಿಯಲ್ಲಿ ಪತ್ತೆಯಾದ ಪೊಲೀಸ್ ಕಾನ್ಸ್‌ಟೇಬಲ್ ಭವಾನಿ ಸಿಂಗ್ ಅವರ ಬ್ಯಾಂಕ್ ಖಾತೆಯ ಸ್ಕ್ಯಾನರ್ ಅನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇಬ್ಬರ ನಡುವಣ ಗಲಾಟೆಯಿಂದಾಗಿ ಪ್ರಕರಣ ಬೆಳಕಿಗೆ ಬಂದಿದೆ ಎಂದು ಎಸ್‌ಎಚ್‌ಒ ಪೂನಂ ಚೌಧರಿ ಹೇಳಿದ್ದಾರೆ.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
ಶುಕ್ರವಾರ ಮಧ್ಯಾಹ್ನ ನಡೆದ ಜಗಳ ಕುರಿತು ಪಂಕ್ಚರ್ ಅಂಗಡಿ ಮಾಲೀಕ ಮೊಹಮ್ಮದ್ ಮುಸ್ತಾಕ್ ಪೊಲೀಸ್ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದರು. ಈ ಜಗಳದ ಕುರಿತು ಮಾಹಿತಿ ಪಡೆದ ಬಜಾಜ್ ನಗರ ಪೊಲೀಸರು ಸ್ಥಳಕ್ಕೆ ತಲುಪಿದದಾಗ ಅಲ್ಲಿ ಮೊಹಮ್ಮದ್ ಮುಸ್ತಾಕ್ ಮತ್ತು ಗೃಹರಕ್ಷಕ ದಳದ ಜವಾನ್ ವಕಾರ್ ಅಹ್ಮದ್ ಅಲ್ಲಿದ್ದರು. ವಿಚಾರಣೆ ವೇಳೆ, ಮೊಹಮ್ಮದ್ ಮುಸ್ತಾಕ್ ಗೃಹರಕ್ಷಕ ದಳದ ಜವಾನ್ ಮೇಲೆ ಅಕ್ರಮ ಸುಲಿಗೆ ಆರೋಪ ಹೊರಿಸಿದ್ದಾರೆ. ಪೊಲೀಸರು ಇಬ್ಬರನ್ನೂಠಾಣೆಗೆ ಕರೆದೊಯ್ದು ವಿಚಾರಿಸಿದಾಗಪಂಕ್ಚರ್ ಅಂಗಡಿಯಲ್ಲಿ ಅಕ್ರಮ ಸುಲಿಗೆಗಾಗಿ ಸ್ಕ್ಯಾನರ್ ಅಳವಡಿಸಲಾಗಿದೆ ಎಂಬುದು ಬೆಳಕಿಗೆ ಬಂದಿದೆ. ಮೊಹಮ್ಮದ್ ಮುಸ್ತಾಕ್ ಅವರ ಖಾತೆಗೂ ಸ್ವಲ್ಪ ಹಣ ಬಂದಿತ್ತು. ಗೃಹರಕ್ಷಕ ದಳದ ಜವಾನ ವಕಾರ್ ಅಹ್ಮದ್ ಅದನ್ನು ಸಂಗ್ರಹಿಸಲು ಅವರ ಬಳಿಗೆ ಬಂದಿದ್ದಈ ವೇಳೆ ಇಬ್ಬರ ಮಧ್ಯೆ ಜಗಳ ನಡೆದಿದ್ದರಿಂದ ಪ್ರಕರಣ ಬೆಳಕಿಗೆ ಬಂಧಿದೆ.
ಇದನ್ನೂ ಓದಿ: 52 ಬಾರಿ ಸಾರಿ ಕೇಳಿ 3ನೇ ಮಹಡಿಯಿಂದ ಜಿಗಿದ 8ನೇ ಕ್ಲಾಸ್ ವಿದ್ಯಾರ್ಥಿ


