ಮಹಾರಾಣಿ ಕಾಲೇಜಿನ ಆವರಣದಲ್ಲಿರುವ ಮೂರು ಸಮಾಧಿಗಳನ್ನು ತೆರವುಗೊಳಿಸುವಂತೆ ಆಗ್ರಹಿಸಿ ಧರೋಹರ್ ಬಚಾವೊ ಸಮಿತಿ ಹನುಮಾನ್ ಚಾಲೀಸ ಪಠಣ ಮಾಡಿದೆ.
ಜೈಪುರ: ಕಾಲೇಜು ಆವರಣದಲ್ಲಿಯ ಮೂರು ಗೋರಿಗಳನ್ನು ತೆರವುಗೊಳಿಸುವಂತೆ ಆಗ್ರಹಿಸಿ ಧರೋಹರ್ ಬಚಾವೊ ಸಮಿತಿ ಒಂದು ಗಂಟೆಗಳ ಕಾಲ ಹನುಮಾನ್ ಚಾಲೀಸ ಪಠಣ ಮಾಡಲಾಗಿದೆ. ಕಳೆದ ಒಂದು ತಿಂಗಳಿನಿಂದ ಜೈಪುರದ ಮಹಾರಾಣಿ ಕಾಲೇಜಿನ ಮೈದಾನದ ಭಾಗದಲ್ಲಿರುವ ಮೂರು ಸಮಾಧಿಗಳು ತೀವ್ರ ಚರ್ಚೆಗೆ ಗ್ರಾಸವಾಗಿವೆ. ಜೈಪುರ ಯುನಿವರ್ಸಿಟಿ ಆಡಳಿತ ಮಂಡಳಿಗೆ ದೇವರು ಸದ್ಭುದ್ಧಿ ನೀಡಲೆಂದು ಪ್ರಾರ್ಥಿಸಿ ಒಂದು ಗಂಟೆಗಳ ಕಾಲ ಹನುಮಾನ್ ಚಾಲೀಸ ಪಠಿಸಲಾಗಿದೆ.
ಮುಂಜಾಗ್ರತ ಕ್ರಮವಾಗಿ ಪೊಲೀಸರ ನಿಯೋಜನೆ
ಸುಮಾರು ಒಂದು ಗಂಟೆಗಳ ಕಾಲ ಹನುಮಾನ್ ಚಾಲೀಸ ಪಠಿಸಲಾಗಿದ್ದು, ಮುಂಜಾಗ್ರತ ಕ್ರಮವಾಗಿ ಕಾಲೇಜು ಆವರಣದಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಧರೋಹರ್ ಬಚಾವೊ ಸಮಿತಿಯ ಸದಸ್ಯರು ಮೂರು ಸಮಾಧಿಗಳಿರುವ ಸ್ಥಳದಲ್ಲಿಯೇ ಕುಳಿತು ಪ್ರತಿಭಟಿಸಲು ನಿರ್ಧರಿಸಿದ್ದರು. ಆದ್ರೆ ಪೊಲೀಸರು ಕಾಲೇಜ್ ಗೇಟ್ ಬಳಿ ಮುಂದೆ ಪ್ರವೇಶಿಸಲು ಅನುಮತಿ ನೀಡಿರಲಿಲ್ಲ. ಈ ಹಿನ್ನೆಲೆ ಪೊಲೀಸರು ಸೂಚಿಸಿದ ಸ್ಥಳದಲ್ಲಿಯೇ ಸಮಿತಿ ಸದಸ್ಯರು ಪ್ರತಿಟನೆಯನ್ನು ನಡೆಸಿದರು.
ಮೂರು ಸಮಾಧಿ ತೆರವುಗೊಳಿಸಲು ಆಗ್ರಹ
ಈ ವೇಳೆ ಮಾತನಾಡಿದ ಧರೋಹರ್ ಬಚಾವೊ ಸಮಿತಿಯ ಅಧ್ಯಕ್ಷ, ವಕೀಲ ಭರತ್ ಭೂಷಣ್, ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮೂರು ಸಮಾಧಿಗಳನ್ನು ತೆರವುಗೊಳಿಸಬೇಕು. ಈ ಪ್ರಕರಣ ಸಂಬಂಧ ಜಿಲ್ಲಾಧಿಕಾರಿಗಳು ರಚಿಸಿದ್ದ ಸಮಿತಿ ತನಿಖೆಯನ್ನು ಪೂರ್ಣಗೊಳಿಸಿ ವರದಿಯನ್ನು ಸಹ ಸಲ್ಲಿಕೆ ಮಾಡಿದೆ ಎಂದು ಹೇಳಿದ್ದಾರೆ. ಕಳೆದ ಎರಡು ವಾರಗಳಿಂದ ಜೈಪುರ ಮಹಾರಾಣಿ ಬಾಲಕಿಯರ ಕಾಲೇಜಿನಲ್ಲಿ ಮೂರು ಸಮಾಧಿಗಳ ವಿಷಯ ಸುದ್ದಿಯಲ್ಲಿದೆ.
ಎರಡು ಅಕ್ಕ-ಪಕ್ಕ, ಮತ್ತೊಂದು ದೂರ!
ಕಾಲೇಜಿನ ಕ್ರೀಡಾ ಮೈದಾನದ ಹಿಂಭಾಗದಲ್ಲಿ ಈ ಮೂರು ಸಮಾಧಿಗಳಿಗವೆ. ಕೆಲವರ ಪ್ರಕಾರ, ಹಲವು ವರ್ಷಗಳಿಂದ ಮೂರು ಸಮಾಧಿಗಳಿದ್ದವು. ಅದ್ರೆ ಇತ್ತೀಚೆಗೆ ಈ ಸಮಾಧಿಗಳ ಅಡಿಪಾಯವನ್ನು ಸರಿ ಮಾಡಿ, ಸುಣ್ಣ-ಬಣ್ಣ ಬಳಿಯಲಾಗಿದೆ. ಹಾಗೆಯೇ ಇಲ್ಲಿಗೆ ಜನರು ಬಂದು ಹೋಗುತ್ತಿದ್ದಾರೆ. ಮೂರು ಸಮಾಧಿಗಳಿಗೆ ಬಟ್ಟೆಗಳಿಂದ ಕವರ್ ಮಾಡಲಾಗಿದೆ. ಸುತ್ತಲಿನ ಮರಗಳ ಮೇಲೆ ಕೆಲವು ಹಾಳೆಗಳನ್ನು ಹಾಕಿದೆ. ಹಾಗೆ ಧೂಪದ್ರವ್ಯವನ್ನು ಸಹ ಹಾಕಲಾಗಿದೆ. ಸಮಾಧಿ ಪಕ್ಕ ದೇಣಿಗೆ ಪೆಟ್ಟಿಗೆಯನ್ನು ಸಹ ಇರಿಸಲಾಗಿದೆ. ಈ ಎಲ್ಲಾ ಅಂಶಗಳನ್ನು ಗಮನಿಸಿದ್ರೆ ಇಲ್ಲಿ ನಿರಂತರವಾಗಿ ಪ್ರಾರ್ಥನೆ ನಡೆದಿರೋದು ಖಚಿತವಾಗಿದೆ.
ಕಾಲೇಜಿನ ಪ್ರಾಂಶುಪಾಲರು ಹೇಳಿದ್ದೇನು?
ನಾನು ಈ ಕಾಲೇಜಿಗೆ ಬಂದು ಆರು ತಿಂಗಳಾಗಿದೆ. ಸಮಾಧಿ ವಿಷಯ ಸಹ ಈಗ ಮುನ್ನಲೆಗೆ ಬಂದಿದೆ. ಕಳೆದ 15 ವರ್ಷಗಳಿಂದ ಮೂರು ಸಮಾಧಿಗಳಿವೆ ಎಂದು ಹೇಳುತ್ತಾರೆ. ಇತ್ತೀಚೆಗೆ ವಕೀಲರೊಬ್ಬರು ಮಾಡಿದ ವಿಡಿಯೋದಿಂದ ಪ್ರಕರಣ ಮುನ್ನಲೆಗೆ ಬಂದಿದೆ. ಈ ಸಂಬಂಧ ಕಾಲೇಜು ಆಡಳಿತ ಮಂಡಳಿ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಪ್ರಾಂಶುಪಾಲ ಪಾಯಲ್ ಲೋಧಾ ಹೇಳಿದ್ದರು.
