ಶಿವಮೊಗ್ಗ ಜಿಲ್ಲೆಯ ಸಿಗಂದೂರು ಸೇತುವೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಈಡಿಗ ಸಂಸ್ಥಾನದ ಪ್ರಣವಾನಂದ ಸ್ವಾಮೀಜಿ ಅವರಿಗೆ ಬಿಜೆಪಿ ನಾಯಕರು ಅಪಮಾನ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಊಟದ ವ್ಯವಸ್ಥೆ ಮತ್ತು ಸ್ಥಳೀಯ ನಾಯಕರ ವರ್ತನೆಯ ಬಗ್ಗೆ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರ ಕ್ಷೇತ್ರದ ಸಿಗಂದೂರು ಸೇತುವೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಈಡಿಗ ಸಂಸ್ಥಾನದ ಪ್ರಣವಾನಂದ ಸ್ವಾಮೀಜಿ ಅವರಿಗೆ ಬಿಜೆಪಿ ನಾಯಕರು ಅಪಮಾನ ಮಾಡಿದ್ದಾರೆ ಎಂಬ ಆರೋಪ ವಿವಾದಕ್ಕೆ ಕಾರಣವಾಗಿದೆ. ಸಿಗಂದೂರಿನಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮಕ್ಕೆ ಹಾಜರಾದ ಸ್ವಾಮೀಜಿ, ಸ್ಥಳೀಯ ಬಿಜೆಪಿ ನಾಯಕರು ತನ್ನನ್ನು ಅವಮಾನಿಸಿದರೆಂದು ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣರಿಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.
ಸ್ವಾಮೀಜಿಯವರ ಆಕ್ಷೇಪಗಳು ಹೀಗಿವೆ:
ಸಿಗಂದೂರಿನಲ್ಲಿ ಬ್ರಾಹ್ಮಣರು, ಲಿಂಗಾಯತರು ಎಲ್ಲರೂ ಊಟ ಮಾಡಿಕೊಂಡರು. ಆದರೆ ನನ್ನನ್ನು ಒಂದು ಗಂಟೆ ಕಾಯಿಸುತ್ತಾ, ಊಟ ಮಾಡಿ, ಬಾಯಲ್ಲಿ ಕಣ್ಣೀ ಇಟ್ಟುಕೊಂಡು ಹೋಗುವಾಗ ಮಾತ್ರ ಮಾತನಾಡಿಸಿದರು.” ಎಂದು ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರು, “ಹಾಲಪ್ಪ ಇದ್ನಲ್ಲ, ಅವನೇನು ಬಾಯಲ್ಲಿ ಕಡುಬು ಹಾಕಿಕೊಂಡಿದ್ದಾನಾ? ಎಂದು ಪ್ರಶ್ನಿಸಿದರೆಂದು ಸ್ವಾಮೀಜಿ ತಿಳಿಸಿದರು.
ಅಂಕೋಲದ ಬಳಿಯ ಶಿರೂರು ಗುಡ್ಡ ಕುಸಿತ ಸಂತ್ರಸ್ತರನ್ನು ಕರೆದುಕೊಂಡು ಹೋಗಿ, ಅವರಿಗೆ ಪರಿಹಾರ ನೀಡುವಂತೆ ಕೇಳಲು ಹೋಗಿದ್ದೆ. ನನ್ನ ಮಠಕ್ಕೆ ಹಣ ಕೇಳಲು ಹೋಗಿರಲಿಲ್ಲ. ಸಮಾಜದ ಕೆಲಸಕ್ಕಾಗಿ ಮಾತ್ರ ಆಗಮಿಸಿದ್ದೆ ಎಂದು ಸ್ವಾಮೀಜಿ ಸ್ಪಷ್ಟಪಡಿಸಿದರು.
ಮೂರು ದಿನಗಳ ಹಿಂದೆ ರಾಘವೇಂದ್ರ ನನ್ನನ್ನು ಕಾರ್ಯಕ್ರಮಕ್ಕೆ ಬರಲು ಹೇಳಿದರು. ಆದರೆ ನಮ್ಮನ್ನು ನಾಯಿ ಕೂಲಿ ಕೂರುವಂತೆ ಕೂಲಿಗೆ ಕೂರುವಂತೆ ಕುಳ್ಳಿರಿಸಿದ್ರು. ಅದನ್ನು ಬೇಳೂರುಗೋಪಾಲಕೃಷ್ಣ ಅವರಿಗೆ ಮೊಬೈಲ್‌ನಲ್ಲಿ ದೃಶ್ಯ ತೋರಿಸಿದೆ ಎಂದರು.
ಉಟ ಮುಗಿಸಿ ಹೋಗುವಾಗ ಮಾತ್ರ ನನ್ನ ಮನವಿಯನ್ನು ಸ್ವೀಕರಿಸಿದರು. ಇದಕ್ಕೆನೂ ಬೇಕಿತ್ತಾ ನನಗೆ? 500 ಕಿಲೋಮೀಟರ್ ದೂರದಿಂದ ಬಂದಿದ್ದೆ. ನನ್ನ ಗುರಿ ನನ್ನ ಪರಿಗಣನೆಗಾಗಿ ಅಲ್ಲ, ಸಂತ್ರಸ್ತ ಕುಟುಂಬಗಳಿಗೆ ನೆರವು ಒದಗಿಸಲು ಕಂಪನಿಯಿಂದ ಸಹಾಯ ಪಡೆಯಲು ಹೋಗಿದ್ದೆ.” ಎಂದು ಸ್ವಾಮೀಜಿ ಬೋಧಿಸಿದರು. ಈಡಿಗ ಸಂಸ್ಥಾನದ ಪ್ರಣವಾನಂದ ಸ್ವಾಮೀಜಿ, ತಮ್ಮ ಅನುಭವವನ್ನು ಪತ್ರಿಕಾಗೋಷ್ಠಿಯಲ್ಲಿ ತಿಳಿಸುವುದಾಗಿ ಹೇಳಿದ್ದರು. ಆದರೆ ನಂತರ ಪತ್ರಿಕಾಗೋಷ್ಠಿ ನಡೆಸದೇ ತೆರಳಿದರು.
