Asianet Suvarna News Asianet Suvarna News

ಬಟ್ಟೆ ಬಿಚ್ಚಿ ವಿಮಾನದ ಸಿಬ್ಬಂದಿ ಮೇಲೆ ಉಗಿದು ಹಲ್ಲೆ: ಇಟಾಲಿಯನ್ ಮಹಿಳೆಯ ಬಂಧನ

ಮಾನದಲ್ಲಿ ಪ್ರಯಾಣ ಬೆಳೆಸುವವರು ತಮ್ಮ ಘನತೆ ಮರೆತು ಅಸಭ್ಯವಾಗಿ ವರ್ತಿಸುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದು, ಗಗನಸಖಿ ಅಥವಾ ವಿಮಾನದ ಪರಿಚಾರಿಕೆಯರನ್ನು ಮನುಷ್ಯರೆಂದು ಕಾಣದೇ ಅವರ ಜೊತೆ ಅಸಭ್ಯವಾಗಿ ವರ್ತಿಸಿದ ಹಲವು ಪ್ರಕರಣಗಳು ಈಗಾಗಲೇ ನಡೆದಿವೆ.

Italian woman passenger arrested for hitting cabin crew and spat another in Air vistara flight akb
Author
First Published Jan 31, 2023, 12:03 PM IST

ಮುಂಬೈ: ವಿಮಾನದಲ್ಲಿ ಪ್ರಯಾಣ ಬೆಳೆಸುವವರು ತಮ್ಮ ಘನತೆ ಮರೆತು ಅಸಭ್ಯವಾಗಿ ವರ್ತಿಸುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದು, ಗಗನಸಖಿ ಅಥವಾ ವಿಮಾನದ ಪರಿಚಾರಿಕೆಯರನ್ನು ಮನುಷ್ಯರೆಂದು ಕಾಣದೇ ಅವರ ಜೊತೆ ಅಸಭ್ಯವಾಗಿ ವರ್ತಿಸಿದ ಹಲವು ಪ್ರಕರಣಗಳು ಈಗಾಗಲೇ ನಡೆದಿದ್ದು,  ಈಗ ಮತ್ತೆ ಅಂತಹದ್ದೇ ಪ್ರಕರಣವೊಂದು ಬೆಳಕಿಗೆ ಬಂದಿದೆ.  ಸೋಮವಾರ ಬೆಳಗ್ಗೆ ಈ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ 45 ವರ್ಷದ ಇಟಾಲಿಯನ್ ಮಹಿಳೆಯನ್ನು ಬಂಧಿಸಲಾಗಿದೆ. 

ವಿಮಾನದಲ್ಲಿದ್ದ ಪರಿಚಾರಿಕೆಯೊಬ್ಬಳಿಗೆ ಥಳಿಸಿ ಮತ್ತೊಬ್ಬರ ಮೇಲೆ ಉಗಿದ ಹಿನ್ನೆಲೆಯಲ್ಲಿ ಮಹಿಳೆಯನ್ನು ಬಂಧಿಸಲಾಗಿದೆ.  ಅಬುಧಾಬಿಯಿಂದ ಮುಂಬೈಗೆ ಹೊರಟಿದ್ದ  ವಿಸ್ತಾರ ಏರ್‌ಲೈನ್ಸ್‌ನ (ಯುಕೆ256) (vistara airline flight) ವಿಮಾನದಲ್ಲಿ ಈ ನಾಚಿಕೆಗೇಡಿನ ಘಟನೆ ನಡೆದಿದೆ.  ಘಟನೆಗೆ ಸಂಬಂಧಿಸಿದಂತೆ ವಿಮಾನದ ಸಿಬ್ಬಂದಿ ನೀಡಿದ ದೂರಿನ ಮೇರೆಗೆ ಮುಂಬೈನ ಸಹರಾ ಪೊಲೀಸರು ಇಟಾಲಿಯನ್ ಪ್ರಯಾಣಿಕಳೊಬ್ಬಳ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.  ಹೀಗೆ ವಿಮಾನದಲ್ಲಿ ಅಸಭ್ಯವಾಗಿ ವರ್ತಿಸಿದ್ದ ಮಹಿಳೆಯನ್ನು ಪಾವೊಲಾ ಪೆರುಸಿಯೊ (Paola Perruccio) ಎಂದು ಗುರುತಿಸಲಾಗಿದ್ದು, ಈಕೆ ಪಾನಮತ್ತಳಾಗಿದ್ದು, ಇಕಾನಾಮಿಕ್ ಕ್ಲಾಸ್‌ನಲ್ಲಿ (Economy class)ಸೀಟು ಬುಕ್ ಮಾಡಿದ್ದ ಆಕೆ ಬ್ಯುಸಿನೆಸ್ ಕ್ಲಾಸ್‌ನಲ್ಲಿ (Business class)ಕುಳಿತಿದ್ದಳು ಇದನ್ನು ವಿಮಾನದ ಸಿಬ್ಬಂದಿ ಆಕ್ಷೇಪಿಸಿದಾಗ ಆಕೆ ಅವರ ಮೇಲೆ ಹಲ್ಲೆ ಮಾಡಿ ಅವರ ಮೇಲೆ ಎಂಜಲು ಉಗಿದ್ದಿದ್ದಾಳೆ. 

ಅಯ್ಯೋ ಶಿವನೇ..! ದುಬೈನಿಂದ ಟೇಕಾಫ್‌ ಆದ ವಿಮಾನ 13 ಗಂಟೆ ಹಾರಾಡಿ ಮತ್ತೆ ಅಲ್ಲೇ ಲ್ಯಾಂಡ್‌ ಆಯ್ತು..!

ಕೇವಲ ಅಷ್ಟೇ ಅಲ್ಲದೇ  ತನ್ನ ಬಟ್ಟೆಯನ್ನು ಕೂಡ ಬಿಚ್ಚಿದ ಆಕೆ ವಿಮಾನದಲ್ಲಿರುವ ಖಾಲಿ ಜಾಗದಲ್ಲೆಲ್ಲಾ ಓಡಾಡಲು ಶುರು ಮಾಡಿದ್ದಾಳೆ. ಅಲ್ಲದೇ ಜೋರಾಗಿ ಬೈದಾಡಲು ಶುರು ಮಾಡಿದ್ದಾಳೆ. ಆಕೆಯ ಉಪಟಳ ತಡೆಯಲಾಗದೇ ವಿಮಾನದ ಸಿಬ್ಬಂದಿ ವಿಮಾನದ ಕ್ಯಾಪ್ಟನ್ ಸೂಚನೆಯಂತೆ ಆಕೆಗೆ ಮತ್ತೆ ಬಟ್ಟೆ ತೊಡಿಸಿ ವಿಮಾನದ ಕೊನೆಯಲ್ಲಿ ಸೀಟೊಂದಕ್ಕೆ ಆಕೆಯನ್ನು ಕಟ್ಟಿದ್ದಾರೆ. ಮುಂಜಾನೆ 5 ಗಂಟೆಗೆ ವಿಮಾನ ಮುಂಬೈನ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Mumbai International Airport) ಇಳಿದ ನಂತರ ಪೊಲೀಸರು ಆಗಮಿಸಿ ಆಕೆಯನ್ನು ಬಂಧಿಸಿದ್ದು, ಬಳಿಕ ಆಕೆಯ ಪಾಸ್‌ಪೋರ್ಟ್ ಸೀಜ್ ಮಾಡಿದ್ದಾರೆ. ನಂತರ ಮುಂಬೈನ ಅಂಧೇರಿ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಆಕೆಯನ್ನು ಹಾಜರುಪಡಿಸಿ ಆಕೆಯ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದಾರೆ. ನಂತರ ಜಾಮೀನು ಮೇಲೆ ಕೋರ್ಟ್ ಆಕೆಯನ್ನು ಬಿಡುಗಡೆಗೊಳಿಸಿತು. 

IndiGo ವಿಮಾನ ತುರ್ತು ನಿರ್ಗಮನ ದ್ವಾರ ತೆಗೆಯಲು ಹೋದ ಪ್ರಯಾಣಿಕನ ಮೇಲೆ ಕೇಸ್‌ ದಾಖಲು..!

ಈ ಬಗ್ಗೆ ತನಿಖೆ ಆರಂಭಿಸಿ  ವಿಮಾನದ ಸಿಬ್ಬಂದಿ ಹಾಗೂ ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನು ದಾಖಲುಗೊಳಿಸಿ ದಾಖಲೆಯ ಸಮಯದಲ್ಲಿ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ. ಈ ಪ್ರಯಾಣಿಕಳ ವೈದ್ಯಕೀಯ ತಪಾಸಣೆಯ ವರದಿ ಹಾಗೂ ತಾಂತ್ರಿಕ ಸಾಕ್ಷ್ಯ ಚಾರ್ಜ್‌ಶೀಟ್‌ಗೆ (Chargesheet) ದಾಖಲೆ ಒದಗಿಸಿತ್ತು.ಭಾರತೀಯ ದಂಡ ಸಂಹಿತೆಯ ಹಲವು ಸೆಕ್ಷನ್‌ಗಳಡಿ ಆರೋಪಿ ಮಹಿಳೆ ವಿರುದ್ಧ ಜಾಮೀನು ಸಿಗಬಹುದಾದಂತಹ ಪ್ರಕರಣ ದಾಖಲಿಸಲಾಗಿದೆ. ಪ್ರಯಾಣದ ವೇಳೆ ಆಕೆ ಪಾನಮತ್ತಳಾಗಿದ್ದಳು ಎಂದು ವೈದ್ಯಕೀಯ ವರದಿಯಲ್ಲಿ ಮಾಹಿತಿ ಇದೆ ಎಂದು ಡಿಸಿಪಿ  ದೀಕ್ಷಿತ್ ಗೆದಮ್ ಹೇಳಿದರು. 

ಮೂತ್ರ ಮಾಡಿದ್ದು ಉದ್ಯಮಿ: 30 ಲಕ್ಷ ದಂಡ ಏರ್ ಇಂಡಿಯಾಗೆ

ವಿಮಾನದ ಸಿಬ್ಬಂದಿ 24 ವರ್ಷದ ಎಲ್‌.ಎಸ್ ಖಾನ್ (LS Khan) ಎಂಬುವವರು ನೀಡಿದ ದೂರಿನ ಮೇರೆಗೆ ಈ ಪ್ರಕರಣ ದಾಖಲಿಸಲಾಗಿದೆ. ಇವರ ಮೇಲೆ ಈ ಪಾವೊಲಾ ಪೆರುಸಿಯೊ ಹಲ್ಲೆ ಮಾಡಿದ್ದಳು. ಇಕಾನಾಮಿ ಕ್ಲಾಸ್‌ನ 11c ಸಂಖ್ಯೆಯ ಸೀಟ್‌ನಲ್ಲಿ ಪಾವೊಲಾ ಪೆರುಸಿಯೊ ಆಸನವಿತ್ತು. ಆದರೆ ಆಕೆ ಸೀದಾ ಹೋಗಿ ಬ್ಯುಸಿನೆಸ್ ಕ್ಲಾಸ್‌ನ ಸೀಟ್ ನಂಬರ್ 1 ರಲ್ಲಿ ಕುಳಿತಿದ್ದಳು.  ಆಕೆಯನ್ನು ಆ ಜಾಗದಿಂದ ಎದ್ದೆಳುವಂತೆ ಮನವಿ ಮಾಡಿದಾಗ ಆಕೆ ನನ್ನ ಮುಖಕ್ಕೆ ಗುದ್ದಿದ್ದಳು. ಇದೇ ವೇಳೆ ಮತ್ತೊಬ್ಬ ಕ್ಯಾಬಿನ್ ಸಿಬ್ಬಂದಿ ಅಲ್ಲಿಗೆ ಆಗಮಿಸಿ ಈ ರೀತಿ ವಿಮಾನದಲ್ಲಿ ಅಮಾನವೀಯವಾಗಿ ವರ್ತಿಸುವುದು ಸರಿಯಲ್ಲ ಎಂದಾಗ ಈಕೆ ಆಕೆಯ ಮುಖದ ಮೇಲೆ ಉಗಿದಳು ಎಂದು ಖಾನ್ ಹೇಳಿದ್ದಾರೆ. 

ಮೂತ್ರ ವಿಸರ್ಜನೆ ಬಳಿಕ ಲವ್ ಪ್ರಪೋಸಲ್‌ನಿಂದ ಸುದ್ದಿಯಾದ ಏರ್ ಇಂಡಿಯಾ

Follow Us:
Download App:
  • android
  • ios