IndiGo ವಿಮಾನ ತುರ್ತು ನಿರ್ಗಮನ ದ್ವಾರ ತೆಗೆಯಲು ಹೋದ ಪ್ರಯಾಣಿಕನ ಮೇಲೆ ಕೇಸ್ ದಾಖಲು..!
ಇಂದು ನಾಗ್ಪುರದಿಂದ ಮುಂಬೈ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ಈ ರೀತಿ ಮಾಡಲು ಯತ್ನಿಸಿದ್ದು, ಬಳಿಕ ವಿಮಾನದಲ್ಲಿದ್ದ ಸಿಬ್ಬಂದಿ ಕ್ಯಾಪ್ಟನ್‌ಗೆ ಈ ಬಗ್ಗೆ ಮಾಹಿತಿ ನೀಡಿದರು. ನಂತರ, ಕ್ಯಾಪ್ಟನ್ ಪ್ರಯಾಣಿಕರಿಗೆ ಸೂಕ್ತವಾಗಿ ಎಚ್ಚರಿಕೆ ನೀಡಿದ್ದಾರೆ ಎಂದೂ ತಿಳಿದುಬಂದಿದೆ.
ನವದೆಹಲಿ (ಜನವರಿ 29, 2023): ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ತುರ್ತು ನಿರ್ಗಮನದ ದ್ವಾರ ತೆಗೆಯಲು ಯತ್ನ ನಡೆಸಿರುವ ಮತ್ತೊಂದು ಘಟನೆ ವರದಿಯಾಗಿದೆ. ಇಂಡಿಗೋ ವಿಮಾನದಲ್ಲಿ ಈ ಘಟನೆ ನಡೆದಿದ್ದು, ವಿಮಾನವು ಹಾರಾಟ ನಡೆಸುತ್ತಿದ್ದಾಗಲೇ ಹಾಗೂ ಲ್ಯಾಂಡಿಂಗ್‌ಗೆ ಸಮೀಪಿಸುತ್ತಿದ್ದಾಗ ತುರ್ತು ನಿರ್ಗಮನದ ಕವರ್ ತೆಗೆದುಹಾಕಲು ಪ್ರಯತ್ನಿಸಿದ್ದಾರೆ ಎಂದು ತೆಗೆದುಹಾಕಲು ಪ್ರಯತ್ನಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ತಿಳಿಸಿದೆ. ಇಂದು ನಾಗ್ಪುರದಿಂದ ಮುಂಬೈ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ಈ ರೀತಿ ಮಾಡಲು ಯತ್ನಿಸಿದ್ದು, ಬಳಿಕ ವಿಮಾನದಲ್ಲಿದ್ದ ಸಿಬ್ಬಂದಿ ಕ್ಯಾಪ್ಟನ್‌ಗೆ ಈ ಬಗ್ಗೆ ಮಾಹಿತಿ ನೀಡಿದರು. ನಂತರ, ಕ್ಯಾಪ್ಟನ್ ಪ್ರಯಾಣಿಕರಿಗೆ ಸೂಕ್ತವಾಗಿ ಎಚ್ಚರಿಕೆ ನೀಡಿದ್ದಾರೆ ಎಂದೂ ತಿಳಿದುಬಂದಿದೆ.
ಇನ್ನು, ವಿಮಾನದ ಸುರಕ್ಷಿತ ಕಾರ್ಯಾಚರಣೆಯಲ್ಲಿ ಯಾವುದೇ ರಾಜಿ ಇಲ್ಲ ಎಂದು ಇಂಡಿಗೋ ಹೇಳಿಕೊಂಡಿದ್ದು, ಮತ್ತು ತುರ್ತು ನಿರ್ಗಮನ ದ್ವಾರವನ್ನು ಅನಧಿಕೃತವಾಗಿ ಟ್ಯಾಂಪರಿಂಗ್ ಮಾಡಿದ್ದಕ್ಕಾಗಿ ಪ್ರಯಾಣಿಕರ ವಿರುದ್ಧ ಪ್ರಥಮ ಮಾಹಿತಿ ವರದಿ ಅಥವಾ ಎಫ್‌ಐಆರ್ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಕಳೆದ ವರ್ಷ ಡಿಸೆಂಬರ್ 10 ರಂದು ಇಂಡಿಗೋ, ಚೆನ್ನೈ-ತಿರುಚಿರಾಪಳ್ಳಿ ವಿಮಾನದಲ್ಲಿ ಪ್ರಯಾಣಿಕರೊಬ್ಬರು ತುರ್ತು ಬಾಗಿಲು ತೆರೆದಿದ್ದಾರೆ ಎಂದು ರಾಷ್ಟ್ರೀಯ ವಿಮಾನಯಾನ ನಿಯಂತ್ರಕ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಬಹಿರಂಗಪಡಿಸಿದ ಒಂದು ತಿಂಗಳ ನಂತರ ಮತ್ತೊಂದು ಘಟನೆ ನಡೆದಿದೆ. ಆದರೆ, ಆ ಘಟನೆಯಲ್ಲಿ ವಿಮಾನ ಇನ್ನೂ ಟೇಕಾಫ್ ಆಗದ ಕಾರಣ ಯಾವುದೇ ಅಹಿತಕರ ಘಟನೆ ನಡೆದಿದಿರಲಿಲ್ಲ.
ಇದನ್ನು ಓದಿ: ಹಾರಾಟದ ವೇಳೆ ದ್ವಾರ ತೆರೆದು ವಿಮಾನದ ರೆಕ್ಕೆ ಮೇಲೆ ನಡೆದ!
ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಸಹ ಈ ಬಗ್ಗೆ ಮಾಹಿತಿ ನೀಡಿದ್ದರು ಮತ್ತು ಪ್ರಯಾಣಿಕರು ತಪ್ಪಾಗಿ ಬಾಗಿಲು ತೆರೆದರು ಮತ್ತು ಅದಕ್ಕಾಗಿ ಕ್ಷಮೆಯಾಚಿಸಿದ್ದಾರೆ ಎಂದೂ ಹೇಳಿದರು. ಇನ್ನು, ಅವರು ಬಾಗಿಲಿನ ಮೇಲೆ ತನ್ನ ಕೈಗಳನ್ನು ವಿಶ್ರಮಿಸಿದರು ಹಾಗೂ ನಿರ್ಗಮನ ದ್ವಾರವನ್ನು ಅನ್ಲಾಕ್ ಮಾಡಿದರು ಮತ್ತು ಈ ಘಟನೆಯಿಂದ ವಿಮಾನವು ತನ್ನ ಡೆಸ್ಟಿನೇಷನ್‌ಗೆ ಹೋಗಲು ಎರಡು ಗಂಟೆಗಳ ಕಾಲ ವಿಳಂಬವಾಯಿತು ಎಂದೂ ಅಧಿಕಾರಿಗಳು ಹೇಳಿದರು.
ಆರಂಭದಲ್ಲಿ ಗಾಳಿಯ ಮಧ್ಯದಲ್ಲಿ ಹಲವಾರು ಯಾಂತ್ರಿಕ ವೈಫಲ್ಯಗಳಿಂದಾಗಿ ಮತ್ತು ಇತ್ತೀಚೆಗೆ ಅಶಿಸ್ತಿನ ಪ್ರಯಾಣಿಕರನ್ನು ಸಿಬ್ಬಂದಿ ನಿರ್ವಹಿಸುವ ಕಾರಣದಿಂದಾಗಿ ಕಳೆದ ವರ್ಷದಿಂದ ವಿಮಾನಯಾನ ಸಂಸ್ಥೆಗಳು ಹೆಚ್ಚುವರಿ ಪರಿಶೀಲನೆಗೆ ಒಳಪಟ್ಟಿವೆ. ಕುಡಿದು ಪ್ರಯಾಣಿಕರನ್ನು ಒಳಗೊಂಡ ಘಟನೆಗಳ ಕುರಿತು ಎರಡು ಏರ್ ಇಂಡಿಯಾ ವಿಮಾನಗಳು ಸಹ ಪರಿಶೀಲನೆಯಲ್ಲಿವೆ. ಈ ಸಂಬಂಧ ಇತ್ತೀಚೆಗೆ ಏರ್ ಇಂಡಿಯಾಗೆ ಲಕ್ಷಾಂತರ ರೂ. ದಂಡವನ್ನೂ ವಿಧಿಸಿದೆ.
ಇದನ್ನೂ ಓದಿ: ಮಧ್ಯ ಪ್ರದೇಶದ ಮೊರೆನಾ ಬಳಿ 2 ಯುದ್ಧ ವಿಮಾನ ಪತನ; ಓರ್ವ ಪೈಲಟ್ ಸಾವು
ಕುಡಿದ ಅಮಲಿನಲ್ಲಿ ಉದ್ಯಮಿಯೊಬ್ಬರು ವೃದ್ಧ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ ನಂತರ ನ್ಯೂಯಾರ್ಕ್-ದೆಹಲಿ ವಿಮಾನದ ಸಿಬ್ಬಂದಿ ಮೇಲೆ ಕ್ರಮ ತೆಗೆದುಕೊಳ್ಳಲಾಗಿದೆ. ಹಾಗೆ, ಪ್ಯಾರಿಸ್-ದೆಹಲಿ ನಡುವಿನ ಮತ್ತೊಂದು ಏರ್ ಇಂಡಿಯಾ ವಿಮಾನದಲ್ಲಿ ಪಾನಮತ್ತ ಪ್ರಯಾಣಿಕರೊಬ್ಬರು ಮಹಿಳಾ ಪ್ರಯಾಣಿಕರೊಬ್ಬರ ಖಾಲಿ ಸೀಟು ಮತ್ತು ಹೊದಿಕೆ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದರು. ಮತ್ತೋರ್ವ ಪ್ರಯಾಣಿಕರು, ಮದ್ಯ ಸೇವಿಸಿ, ಶೌಚಾಲಯದಲ್ಲಿ ಧೂಮಪಾನ ಮಾಡುತ್ತಿದ್ದು ಮತ್ತು ಕ್ಯಾಬಿನ್ ಸಿಬ್ಬಂದಿಯ ಸೂಚನೆಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದ ಘಟನೆಯೂ ವರದಿಯಾಗಿತ್ತು.
ಇದನ್ನೂ ಓದಿ: ಗಗನಸಖಿ ಜೊತೆ ಅಸಭ್ಯ ವರ್ತನೆ: ಪ್ರಯಾಣಿಕನನ್ನು ಕೆಳಗಿಸಿ ಹೊರಟ ಸ್ಪೈಸ್ ಜೆಟ್