ದೇಶಕ್ಕಾಗಿ ಕೆಲಸ ಮಾಡಬೇಕು ಅನ್ನೋದಷ್ಟೇ ಇಸ್ರೋ ವಿಜ್ಞಾನಿ ಆರೀಬ್ ಅಹ್ಮದ್ ಕನಸಾಗಿತ್ತು!
ಇಸ್ರೋದ ಚಂದ್ರಯಾನ-3 ಮಿಷನ್‌ನ ಟೀಮ್‌ನಲ್ಲಿದ್ದ ಉತ್ತರ ಪ್ರದೇಶದ ಯುವ ಆರೀಬ್ ಅಹ್ಮದ್ ಅವರ ಮನೆಯಲಲ್ಲೀಗ ಸಂಭ್ರಮ ವಾತಾವರಣ ಮಡುಗಟ್ಟಿದೆ,

ನವದೆಹಲಿ (ಆ.26): ಇಸ್ರೋದ ಚಂದ್ರಯಾನ-3 ಚಂದ್ರನ ಮೇಲೆ ಇಳಿದಿದ್ದು, ಪಶ್ಚಿಮ ಉತ್ತರ ಪ್ರದೇಶದ ಮುಜಾಫರ್‌ನಗರದ ಹೆದ್ದಾರಿ ನಗರವಾದ ಖತೌಲಿ ನಿವಾಸಿಗಳಿಗೆ ಕೇವಲ ಹೆಮ್ಮೆಯ ವಿಷಯವಲ್ಲ. ಚಂದ್ರನ ದಕ್ಷಿಣ ಧ್ರುವಕ್ಕೆ ಇಳಿದ ಮೊದಲ ರಾಷ್ಟ್ರವಾಗಿರುವ ಹಿಂದೆ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳ ತಂಡದಲ್ಲಿ ಮಣ್ಣಿನ ಮಗ ಅರೀಬ್ ಅಹ್ಮದ್ ಕೂಡ ಇದ್ದರು. ನಗರದ ಯುವಕ ಅರೀಬ್ ಅಹ್ಮದ್ ವಿಜ್ಞಾನಿಯಾಗಲು ಮತ್ತು ಚಂದ್ರಯಾನ-3 ಮಿಷನ್‌ಗಾಗಿ ಇಸ್ರೋ ತಂಡದಲ್ಲಿ ಸೇರ್ಪಡೆಗೊಳ್ಳಲು ಅಪಾರ ಪರಿಶ್ರಮ ಪಟ್ಟಿದ್ದರು. ಚಂದ್ರಯಾನ-3 ಚಂದ್ರನ ಮೇಲ್ಮೈಯನ್ನು ಮುಟ್ಟಿದ ತಕ್ಷಣ, ಪ್ರಪಂಚದಾದ್ಯಂತದ ಭಾರತೀಯರು ಸಂತಸದಿಂದ ಸಂಭ್ರಮಿಸಿದ್ದರು. ಖತೌಲಿ ನೆರೆಹೊರೆಯ ಜನರು ಅರೀಬ್ ಅವರ ಕುಟುಂಬವನ್ನು ಅಭಿನಂದಿಸಲು ಮತ್ತು ನಮ್ಮೂರ ಹುಡುಗನ ಯಶಸ್ಸನ್ನು ಆಚರಿಸಲು ಅವರು ಆರೀಬ್‌ನ ಮೂಮ ಮನೆಗೆ ಬಂದಿದ್ದರು.
ಸಂಬಂಧಿಕರು ಮತ್ತು ನೆರೆಹೊರೆಯವರು ಸಂಭ್ರಮಾಚರಣೆಗೆ ಸೇರುತ್ತಿದ್ದಂತೆ, ಮನೆಯವರು ಆರೀಬ್ ಯಾವಾಗಲೂ ದೇಶಕ್ಕಾಗಿ ಏನನ್ನಾದರೂ ಮಾಡಲು ಬಯಸಿದ್ದ. ಅವರ ಬಾಲ್ಯದಲ್ಲಿ ಆಟಿಕೆ ರಾಕೆಟ್‌ಗಳ ಬಗ್ಗೆ ಯಾವ ರೀತಿಯ ಒಲವಿತ್ತು ಅನ್ನೋದನ್ನು ಕುಟುಂಬದವರು ನೆನಪಿಸಿಕೊಂಡಿದ್ದಾರೆ. ಎಲ್ಲಾ ಭಾರತೀಯರಿಗೆ ಸಮಾನ ಅವಕಾಶಗಳನ್ನು ನೀಡುವ ವ್ಯವಸ್ಥೆಯಲ್ಲಿ ಯುವಕರು ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳುತ್ತಾರೆ ಎಂಬುದಕ್ಕೆ ಇಂದು ಅರೀಬ್ ಉದಾಹರಣೆಯಾಗಿ ನಿಲ್ಲುತ್ತಾರೆ. ರಾಕೆಟ್ ಉಡಾವಣೆಗೂ ಮುನ್ನ ಅರೀಬ್ ಸಾಕಷ್ಟು ಆತಂಕಗೊಂಡಿದ್ದರು. ಅವರ ತಾಯಿಯ ಚಿಕ್ಕಪ್ಪ ಎಂ ಅಸದ್ ಫರೋಕಿ ಈ ಬಗ್ಗೆ ಮಾತನಾಡಿದ್ದುಮ “ಉಡಾವಣೆಯ ಮೊದಲು ಅವರು ಸಾಕಷ್ಟು ಆತಂಕದಲ್ಲಿದ್ದರು. ಅವನು ಎಷ್ಟು ತೊಡಗಿಸಿಕೊಂಡಿದ್ದನೆಂದರೆ, ಬೇರೆ ಯಾವ ಕೆಲಸಗಳೂ ಆತನ ಗಮನದಲ್ಲಿ ಇದ್ದಿರಲಿಲ್ಲ' ಎಂದಿದ್ದಾರೆ.
ಹತ್ತನೇ ತರಗತಿಯಲ್ಲಿ ಟಾಪರ್ ಆಗಿದ್ದ ಆರೀಬ್, ಪಿಯುಸಿ ಪರೀಕ್ಷೆಯಲ್ಲಿ ಶೇ.95ರಷ್ಟು ಅಂಕ ಪಡೆದುಕೊಂಡಿದ್ದ ಎಂದು ಅವರ ಕುಟುಂಬ ಹೇಳಿದೆ. ಬಾಹ್ಯಾಕಾಶ ವಿಜ್ಞಾನಿಯಾಗುವ ತಮ್ಮ ಕನಸನ್ನು ಅನುಸರಿಸಿ, ಅವರು ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾದಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದರು. ಆ ಬಳಿಕ ಆರೀಬ್ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಐಐಟಿ ಕಾನ್ಪುರ ಸೇರಿದ್ದರು. ಇವರ ಮೊದಲ ಕೆಲಸ ಭಾರತೀಯ ಆಹಾರ ನಿಗಮದಲ್ಲಿ ಆಗಿತ್ತು. ಈ ನಡುವೆ ಅವರು ವಿಜ್ಞಾನಿ ಹುದ್ದೆಗೆ ಇಸ್ರೋ ನ ಕೇಂದ್ರೀಕೃತ ನೇಮಕಾತಿ ಮಂಡಳಿ 2019 ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದರು. ಆರಂಭದಲ್ಲಿ ಅವರ ಕುಟುಂಬವು ಅವರು ಅಖಿಲ ಭಾರತ ನಾಗರಿಕ ಸೇವೆಗಳಿಗೆ ಹೋಗಬೇಕೆಂದು ಬಯಸಿದ್ದರೂ ಅವರ ಹೃದಯವು ರಾಕೆಟ್ ವಿಜ್ಞಾನದಲ್ಲಿತ್ತು ಮತ್ತು ಅವರು ಬಾಹ್ಯಾಕಾಶ ಪರಿಶೋಧನೆಯನ್ನು ಆರಿಸಿಕೊಂಡರು.
ಅವರ ತಂದೆ ಖಾಜಿ ಮೆಹ್ತಾಬ್ ಜಿಯಾ ಈ ಬಗ್ಗೆ ಮಾತನಾಡಿದ್ದು “ಸಾಮಾನ್ಯವಾಗಿ ಮಕ್ಕಳು ತಮ್ಮ ಹೆತ್ತವರ ಸಾಧನೆಗಳಿಂದ ಗುರುತಿಸಲ್ಪಡುತ್ತಾರೆ. ಆದರೆ ನನ್ನ ಮಗನ ಸಾಧನೆಯಿಂದ ಗುರುತಿಸಲ್ಪಡುವ ಭಾಗ್ಯಶಾಲಿ ನಾನೇ' ಎಂದು ಹೆಮ್ಮೆಯಿಂದ ಹೇಳಿದ್ದಾರೆ. ಆರೀಬ್ ಮುಂದೊಂದು ದಿನ ಕುಟುಂಬವನ್ನು ಹೆಮ್ಮೆ ಪಡುವಂತೆ ಮಾಡುತ್ತಾನೆ ಎಂಬ ಭಾವನೆಯನ್ನು ಅವರು ಯಾವಾಗಲೂ ಹೊಂದಿದ್ದರು, ಆದರೆ ಅದೃಷ್ಟವಶಾತ್, ಅವರು ಯಶಸ್ವಿ ಕಾರ್ಯಾಚರಣೆಗೆ ಕೊಡುಗೆ ನೀಡುವ ಮೂಲಕ ಇಡೀ ರಾಷ್ಟ್ರವನ್ನು ಹೆಮ್ಮೆಪಡುವಂತೆ ಮಾಡಿದ್ದಾರೆ. "ಈಗ ನನ್ನ ಪ್ರದೇಶದಲ್ಲಿ, ಎಲ್ಲರೂ ನನ್ನನ್ನು ಅಭಿನಂದಿಸುತ್ತಿದ್ದಾರೆ, ನನಗೆ ಗೊತ್ತಿಲ್ಲದವರೂ ನನ್ನನ್ನು ಅರೀಬ್‌ನ ತಂದೆ ಎಂದು ಗುರುತಿಸುತ್ತಿದ್ದಾರೆ" ಎಂದು ಅವರು ಹೇಳಿದರು.
ಇಸ್ರೋ ಚಂದ್ರಯಾನ-3 ಟೀಮ್‌ನಲ್ಲಿದ್ರು ಜಾಮಿಯಾ ಮಿಲ್ಲಿಯಾ ವಿವಿಯ ಮೂವರು ಮಾಜಿ ವಿದ್ಯಾರ್ಥಿಗಳು!
'ನಾನು ಆತನ ಹೋರಾಟ ನೋಡಿದ್ದೆ. ಆತ ದಿನವಿಡೀ ಓದುವುದನ್ನು ನೋಡಿದಾಗ ನಾನು ಅವನ ಆರೋಗ್ಯದ ಬಗ್ಗೆ ಚಿಂತಿತನಾಗಿದ್ದೆ. ಅವರ ಶ್ರಮಕ್ಕೆ ತಕ್ಕ ಫಲ ಸಿಕ್ಕಿದ್ದಕ್ಕೆ ಇಂದು ನನಗೆ ತುಂಬಾ ಸಂತೋಷವಾಗಿದೆ” ಎಂದು ಹೇಳಿದ್ದಾರೆ ಅರೀಬ್‌ನ ತಾಯಿ ನಜ್ನೀನ್.
ಇಮ್ರಾನ್ ಖಾನ್‌ಗೆ ಅಧಿಕಾರ ನಿರಾಕರಿಸಿದರೆ, ಸೇನಾಧಿಕಾರ ಪಾಕಿಸ್ತಾನಕ್ಕೆ ಅನಿವಾರ್ಯ!