Asianet Suvarna News Asianet Suvarna News

ಇಸ್ರೋ ಚಂದ್ರಯಾನ-3 ಟೀಮ್‌ನಲ್ಲಿದ್ರು ಜಾಮಿಯಾ ಮಿಲ್ಲಿಯಾ ವಿವಿಯ ಮೂವರು ಮಾಜಿ ವಿದ್ಯಾರ್ಥಿಗಳು!

ಚಂದ್ರಯಾನ-3 ಯಶಸ್ಸು ಇಡೀ ಭಾರತದ ಹರ್ಷಕ್ಕೆ ಕಾರಣವಾಗಿದೆ. ಇಸ್ರೋದ ಈ ಪ್ರಾಜೆಕ್ಟ್‌ ಟೀಮ್‌ನಲ್ಲಿದ್ದ ವಿಜ್ಞಾನಿಗಳಿಗೆ ದೇಶದ ಎಲ್ಲಡೆಯಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ತಮ್ಮ ತಮ್ಮ ರಾಜ್ಯ, ವಿಶ್ವವಿದ್ಯಾಲಗಳ ಮೂಲ ಹೊಂದಿರುವ ವಿಜ್ಞಾನಿಗಳನ್ನು ಗುರುತಿಸಿ ಅಭಿನಂದಿಸುತ್ತಿದ್ದಾರೆ.

Isro Moon Mission Chandrayaan 3 team Jamia Milia Islamia University jubilant three students rocks san
Author
First Published Aug 25, 2023, 4:58 PM IST

ನವದೆಹಲಿ (ಆ.25): ಭಾರತದ ಬಹುನಿರೀಕ್ಷಿತ  ಚಂದ್ರಯಾನ-3 ಉಡಾವಣಾ ತಂಡದಲ್ಲಿದ್ದ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾನಿಲಯದ ಮೂವರು ಮಾಜಿ ವಿದ್ಯಾರ್ಥಿಗಳಾದ ಅರೀಬ್, ಅಮಿತ್ ಮತ್ತು ಕಾಶಿಫ್‌ಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಇವರನ್ನು ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಹಾಗೂ ಮಾಜಿ ವಿದ್ಯಾರ್ಥಿಗಳು ಇವರು ಇತರರಿಗೆ ಸ್ಫೂರ್ತಿಯ ಮೂಲ ಎಂದಿದ್ದಾರೆ. ದೇಶದ ಯಶಸ್ವಿ ಮಿಷನ್‌ಗೆ ಜಾಮಿಯಾ ಮಿಲಿಯಾ ವಿವಿ ಕೂಡ ಭಾಗವಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಅರೀಬ್ ಅವರ 78 ವರ್ಷದ ಅಜ್ಜ, ಖಾಜಿ ಜುಬೈರ್ ಈ ಬಗ್ಗೆ ಮಾತನಾಡಿದ್ದು, “ಇದು ಕುಟುಂಬಕ್ಕೆ ಮಾತ್ರವಲ್ಲ, ಇಡೀ ದೇಶಕ್ಕೆ ಸಂತೋಷದ ಕ್ಷಣವಾಗಿದೆ. ಆತ ತುಂಬಾ ವಿಭಿನ್ನ ಹುಡುಗನಾಗಿದ್ದ. ಆತ ತನ್ನ ಅಧ್ಯಯನಕ್ಕೆ ಬಿಟ್ಟು ಮತ್ತೇನನ್ನೂ ಯೋಚನೆ ಮಾಡುತ್ತಿರಲಿಲ್ಲ, ಆತನ ಒಡಹುಟ್ಟಿದವರಿಗಿಂತ ಭಿನ್ನವಾಗಿದ್ದ. ಆತನ ಬಗ್ಗೆ ತುಂಬಾ ಹೆಮ್ಮೆಪಡುತ್ತೇನೆ' ಎಂದು ಎಂದಿದ್ದಾರೆ.ಆರೀಬ್ ಪಶ್ಚಿಮ ಯುಪಿಯ ಮುಜಾಫರ್‌ನಗರದ ಖತೌಲಿಯಿಂದ ಸಾಂಪ್ರದಾಯಿಕ ಮುಸ್ಲಿಂ ಕುಟುಂಬಕ್ಕೆ ಸೇರಿದವರಾಗಿದ್ದಾರೆ.

ಜಾಮಿಯಾ ವಿಸಿ ನಜ್ಮಾ ಅಖ್ತರ್ ಕೂಡ ಮಾತನಾಡಿದ್ದು “ಚಂದ್ರಯಾನ್ ನೆ ಚಂದ್ ಚೂ ಲಿಯಾ- ಆಜ್ ಈದ್ ಹೋ ಗಯಿ (ಈ ಮಿಷನ್‌ನ ಯಶಸ್ಸು ನಮಗೆ ಈದ್‌ನಂತಿದೆ). ಚಂದ್ರಯಾನ-3ರ ಯಶಸ್ಸು ರಾಷ್ಟ್ರೀಯ ಸಂಭ್ರಮದ ಸಂದರ್ಭವಾಗಿದೆ. ಚಂದ್ರನ ಮೇಲೆ ವಿಕ್ರಮ್‌ ಲ್ಯಾಂಡರ್‌ ಇಳಿಯುವ ಮುನ್ನ ಜಾಮಿಯಾ ಜಂಟಿ ಪ್ರಾರ್ಥನೆಯನ್ನು ಆಯೋಜನೆ ಮಾಡಿತ್ತು' ಎಂದಿದ್ದಾರೆ.
ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-3 ರ ಸಾಫ್ಟ್ ಲ್ಯಾಂಡಿಂಗ್ ಅನ್ನು ಆಚರಿಸಲು ಕ್ಯಾಂಪಸ್‌ನಲ್ಲಿ ವಂದೇ ಮಾತರಂ ಕೂಡ ಹಾಡಲಾಗಿದೆ. ಅರೀಬ್, ಅಮಿತ್ ಮತ್ತು ಕಾಶಿಫ್ ಎಂಬ ಮೂವರು ವಿದ್ಯಾರ್ಥಿಗಳು ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ವಿಭಾಗದ (2019 ಬ್ಯಾಚ್) ಹಳೆಯ ವಿದ್ಯಾರ್ಥಿಗಳು. ಇಸ್ರೋ ಕೇಂದ್ರೀಕೃತ ನೇಮಕಾತಿ ಮಂಡಳಿ - 2019 SC ಮಟ್ಟದ ವಿಜ್ಞಾನಿಗಳ ಆಯ್ಕೆಗಾಗಿ ಜನವರಿ 2020 ರಲ್ಲಿ ಲಿಖಿತ ಪರೀಕ್ಷೆಯನ್ನು ನಡೆಸಿತು ಮತ್ತು ಅಭ್ಯರ್ಥಿಗಳ ಸಂದರ್ಶನವನ್ನು ಜುಲೈ 2021 ರಲ್ಲಿ ನಡೆಸಲಾಗಿತ್ತು ಎಂದಿದ್ದಾರೆ.

“ಜೆಎಂಐ ವಿದ್ಯಾರ್ಥಿಯಾಗಿ ಚಂದ್ರಯಾನ -3 ರ ಯಶಸ್ಸು ನನಗೆ ಅಪಾರ ಹೆಮ್ಮೆ ಮತ್ತು ಸ್ಫೂರ್ತಿಯನ್ನು ತುಂಬಿದೆ. ಈ ಯಶಸ್ಸು ಪ್ರತಿಯೊಬ್ಬ ಭಾರತೀಯ ವಿದ್ಯಾರ್ಥಿಯಲ್ಲಿ ರಾಷ್ಟ್ರೀಯ ಹೆಮ್ಮೆಯ ಭಾವವನ್ನು ತುಂಬುತ್ತದೆ, ನಮ್ಮ ಕನಸುಗಳನ್ನು ಮುಂದುವರಿಸಲು ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಉತ್ಕೃಷ್ಟತೆಗಾಗಿ ಶ್ರಮಿಸುವಂತೆ ಉತ್ತೇಜಿಸುತ್ತದೆ' ಎಂದು ಜೆಎಂಐನ ಭೌತಶಾಸ್ತ್ರ ವಿಭಾಗದ ವಿದ್ಯಾರ್ಥಿ ಮೊಹಮ್ಮದ್ ಉವೈಶ್ ರಜಪೂತ್‌ ಹೇಳಿದ್ದಾರೆ.

ಮಾಜಿ ಜೆಎಂಐ ವಿದ್ಯಾರ್ಥಿನಿ ಆನ್ ಅಫ್ರೀನ್ ಮಾತನಾಡಿದ್ದು “ಬಾಹ್ಯಾಕಾಶವನ್ನು ಅನ್ವೇಷಿಸುವ ಚಂದ್ರಯಾನ-3 ಮಿಷನ್‌ನಿಂದ ನಾನು ನಿಜವಾಗಿಯೂ ಸ್ಫೂರ್ತಿ ಪಡೆದಿದ್ದೇನೆ. ಬಾಹ್ಯಾಕಾಶ ಪರಿಶೋಧನೆಯ ಭವಿಷ್ಯದ ಬಗ್ಗೆ ಭರವಸೆ ಮತ್ತು ಕುತೂಹಲವನ್ನು ಉತ್ತೇಜಿಸುವ ಮೂಲಕ ಹೊಸ ಎತ್ತರಗಳನ್ನು ತಲುಪಲು ಮಾನವೀಯತೆಯ ಮಣಿಯದ ಚೈತನ್ಯವನ್ನು ಈ ಪ್ರಯತ್ನವು ನಮಗೆ ನೆನಪಿಸುತ್ತದೆ' ಎಂದಿದ್ದಾರೆ.

Moon Mission: ಜಪಾನ್‌ನ ಸ್ಲಿಮ್‌ ಚಂದ್ರಯಾನ ಮುಂದೂಡಿಕೆ, ಏನು ಕಾರಣ?

“ಚಂದ್ರಯಾನ ತಂಡದಲ್ಲಿ ನಮ್ಮ ವಿಶ್ವವಿದ್ಯಾಲಯದ ಮೂವರು ವಿದ್ಯಾರ್ಥಿಗಳು ಇರುವ ಬಗ್ಗೆ ನಮಗೆ ತಿಳಿದಾಗ, ನಾವು ಖುಷಿಪಟ್ಟೆವು. ಅವರ ಯಶಸ್ಸು ದೃಢನಿರ್ಧಾರಿತ ಮುಸ್ಲಿಂ ವಿದ್ಯಾರ್ಥಿಗಳಿಗೆ ಅವಕಾಶವನ್ನು ಪಡೆಯುತ್ತದೆ ಮತ್ತು ಅವರು ಉತ್ತಮ ಕೆಲಸಗಳನ್ನು ಮಾಡಬಹುದು ಎಂಬುದನ್ನು ತೋರಿಸುತ್ತದೆ ಎಂದು ಜೆಎಂಐನ ಏರೋನಾಟಿಕಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ಹುಮಾಯೂನ್ ರಶೀದ್ ಹೇಳಿದ್ದಾರೆ. 

Moon Mission: ಭಾರತವಾಯ್ತು ಈಗ ಜಪಾನ್‌ನ ಸರದಿ, ಆ.26ಕ್ಕೆ 'ಸ್ಲಿಮ್‌' ಉಡಾವಣೆ ಮಾಡಲಿರುವ ಜಾಕ್ಸಾ! 

Follow Us:
Download App:
  • android
  • ios