Asianet Suvarna News Asianet Suvarna News

IPL 2024 ಆರ್‌ಸಿಬಿ ಫ್ಯಾನ್ಸ್‌ಗೆ ಗುಡ್ ನ್ಯೂಸ್, ಮಳೆಯಿಂದ ಸ್ಥಗಿತಗೊಂಡ ಪಂದ್ಯ 8.25PMಗೆ ಆರಂಭ!

ಆರ್‌ಸಿಬಿ ಹಾಗೂ ಸಿಎಸ್‌ಕೆ ನಡುವಿನ ರೋಚಕ ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ. ಆದರೆ ಅಭಿಮಾನಿಗಳ ನಿರಾಸೆ ಪಡಬೇಕಿಲ್ಲ. ಮಳೆ ನಿಂತಿದ್ದು, ಕೆಲವೇ ಕ್ಷಣಗಳಲ್ಲಿ ಪಂದ್ಯ ಪುನರ್ ಆರಂಭಗೊಳ್ಳಲಿದೆ. ಆದರೆ ಓವರ್ ಕಡಿತಗೊಳ್ಳುತ್ತಾ?
 

IPL 2024 Rain Interrupt RCB vs CSK match Chinnaswamy Stadium Bengaluru play stopped ckm
Author
First Published May 18, 2024, 8:08 PM IST

ಬೆಂಗಳೂರು(ಮೇ.18) ಆರ್‌ಸಿಬಿ ಹಾಗೂ ಸಿಎಸ್‌ಕೆ ನಡುವಿನ ಪ್ಲೇ ಆಫ್ ಲೆಕ್ಕಾಚಾರದ ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ. ಭಾರಿ ಮಳೆಯಿಂದ ಪಂದ್ಯ ಸ್ಥಗತಿಗೊಂಡಿದೆ. ಸದ್ಯ ಮಳೆಆರ್ಭಟ ನಿಂತಿದೆ. ಚಿನ್ನಸ್ವಾಮಿ ಕ್ರೀಡಾಂಗಣ ಸಬ್ ಏರ್‌ ಸಿಸ್ಟಮ್‌ನಿಂದ ಕೆಲವೇ ಕ್ಷಣಗಳಲ್ಲಿ ಮದಾನ ಆಟಕ್ಕೆ ಸಜ್ಜುಗೊಳ್ಳಲಿದೆ. ಮಳೆಯಿಂದ ಕೆಲಕಾಲ ಪಂದ್ಯ ಸ್ಥಗಿತಗೊಂಡ ಕಾರಣ ಓವರ್ ಕಡಿತ ಆತಂಕ ಎದುರಾಗಿತ್ತು. ಆದರೆ ಹೆಚ್ಚಿನ ಸಮಯ ವ್ಯರ್ಥವಾಗಿಲ್ಲ. ಹೀಗಾಗಿ ಯಾವುದೇ ಓವರ್ ಕಡಿತವಿಲ್ಲದೇ ಪಂದ್ಯ ಪುನರ್ ಆರಂಭಗೊಳ್ಳಲಿದೆ.

ಮಳೆ ವಕ್ಕರಿಸುತ್ತಿದ್ದಂತೆ ಪಿಚ್‌ಗೆ ಕವರ್ ಹಾಕಿ ಮುಚ್ಚಲಾಗಿತ್ತು. ಇದೀಗ ಕವರ್ ತೆಗೆಯಲಾಗಿದೆ. ಕ್ರೀಡಾಂಗಣದಲ್ಲಿ ತುಂಬಿದ್ದ ನೀರು ಸಬ್ ಏರ್ ಸಿಸ್ಟಮ್ ಮೂಲಕ ತೆಗೆಯಲಾಗಿದೆ. ಇದೀಗ ಮ್ಯಾಚ್ ರೆಫ್ರಿ ಮೈದಾನ ಪರೀಶೀಲನೆ ಮಾಡಿದ್ದಾರೆ. ಕೆಲವೇ ಕ್ಷಣಗಳಲ್ಲಿ ಆರ್‌ಸಿಬಿ ಹಾಗೂ ಸಿಎಸ್‌ಕೆ ನಡುವಿನ ಪಂದ್ಯ ಮತ್ತೆ ಆರಂಭಗೊಳ್ಳಲಿದೆ. ರಾತ್ರಿ 8.25ಕ್ಕೆ ಪಂದ್ಯ ಪುನರ್ ಆರಂಭಗೊಳ್ಳುತ್ತಿದೆ.

ಯೋ ಬರ್ಕಯ್ಯ..ಇವತ್ತು ಗೆಲ್ಲೋದು ನಮ್ ಹುಡುಗರೇ, ಭವಿಷ್ಯ ನುಡಿದ ಶಿವ ರಾಜ್‌ಕುಮಾರ್!

ರೋಚಕ ಪಂದ್ಯದಲ್ಲಿ ಟಾಸ್ ಸೋತ ಆರ್‌ಸಿಬಿ ಬ್ಯಾಟಿಂಗ್ ಇಳಿಯಿತು. ನಾಯಕ ಫಾಫ್ ಡುಪ್ಲಸಿಸ್ ಹಾಗೂ ವಿರಾಟ್ ಕೊಹ್ಲಿ ಉತ್ತಮ ಆರಂಭ ನೀಡಿದ್ದರು. ಆದರೆ ಮೂರು ಓವರ್ ಮುಕ್ತಾಯದ ವೇಳೆ ಮಳೆ ಸುರಿಯಿತು. ಬಾರಿ ಮಳೆಯಿಂದಾಗಿ ಪಂದ್ಯ ಸ್ಥಗಿತಗೊಳಿಸಲಾಯಿತು. ಈ ವೇಳೆ ಆರ್‌ಸಿಬಿ 3 ಓವರ್‌ಗೆ 31 ರನ್ ಸಿಡಿಸಿತ್ತು. ಕೊಹ್ಲಿ ಅಜೇಯ 19 ರನ್ ಹಾಗೂ ಡುಪ್ಲೆಸಿಸ್ ಅಜೇಯ 12 ರನ್  ಸಿಡಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.

ಈ ಪಂದ್ಯ ಮಾಡು ಇಲ್ಲವೇ ಮಡಿ. ಚೆನ್ನೈ ಸೂಪರ್ ಕಿಂಗ್ಸ್‌ಗೆ ಗೆದ್ದರೆ ಸಾಕು. ಆದರೆ ಆರ್‌ಸಿಬಿಗೆ ಹಾಗಲ್ಲ. ಗೆಲುವಿನ ಜೊತೆಗೆ ಉತ್ತಮ ರನ್ ರೇಟ್ ಕೂಡ ಬೇಕು. ಹಾಗಂತ ಆರ್‌ಸಿಬಿ ಅಸಾಧ್ಯದ ಮಾತಲ್ಲ. ಸದ್ಯ ಆರ್‌ಸಿಬಿ ಉತ್ತಮ ಫಾರ್ಮ್‌ನಲ್ಲಿದೆ. ಸತತ ಗೆಲುವಿನ ಮೂಲಕ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ. 

ಅಂಕಪಟ್ಟಿಯಲ್ಲಿ ಆರ್‌ಸಿಬಿ 7ನೇ ಸ್ಥಾನದಲ್ಲಿದೆ. ಇತ್ತ ಸಿಎಸ್‌ಕೆ ನಾಲ್ಕನೇ ಸ್ಥಾನದಲ್ಲಿದೆ. ಸಿಎಸ್‌ಕೆ ಈಗಾಗಲೇ 14 ಅಂಕ ಸಂಪಾದಿಸಿದೆ. ಆರ್‌ಸಿಬಿ ಈ ಪಂದ್ಯದಲ್ಲಿ ಗೆಲುವು ಸಾಧಿಸಿದರೆ 14 ಅಂಕ ಸಂಪಾದಿಸಲಿದೆ. ಆದರೆ ಉತ್ತಮ ರನ್‌ರೇಟ್‌ನೊಂದಿಗೆ ಗೆಲುವು ಸಾಧಿಸಿದರೆ ಸಿಎಸ್‌ಕಿ ಹಿಂದಿಕ್ಕಿ 4ನೇ ಸ್ಥಾನಕ್ಕೇರಲಿದೆ. ಇತ್ತ ಸಿಎಸ್‌ಕೆ 5ಸ್ಥಾನಕ್ಕೆ ಕುಸಿಯಲಿದೆ. ಇನ್ನು ಕೆಕೆಆರ್, ರಾಜಸ್ಥಾನ ರಾಯಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ಈಗಾಗಲೇ ಪ್ಲೇ ಆಪ್ ಪ್ರವೇಶಿಸಿದೆ.


ಮಗನ ಜರ್ಸಿ ಬಿಡುಗಡೆ ಮೂಲಕ ನಾಮಕರಣ ಮಾಡಿದ ಆರ್‌ಸಿಬಿ ಅಭಿಮಾನಿ, ವಿಡಿಯೋ ವೈರಲ್!

Latest Videos
Follow Us:
Download App:
  • android
  • ios