ಬಿಹಾರದ ಸ್ಕೂಟರ್ ಸವಾರನೋರ್ವನಿಗೆ ಸೀಟ್ ಬೆಲ್ಟ್ ಧರಿಸಿಲ್ಲ ಎಂದು ದಂಡ ಪಾವತಿಗೆ ಪೊಲೀಸರು ಚಲನ್ ಕಳುಹಿಸಿದ್ದು, ಇದರಿಂದ ಸ್ಕೂಟರ್ ಸವಾರ ದಂಗಾಗಿದ್ದಾನೆ.
ಸ್ಕೂಟರ್‌ಗೆ ಸೀಟ್ ಬೆಲ್ಟ್ ಇದ್ಯಾ. ಇಲ್ವಲ್ಲಾ ಹೀಗ್ಯಾಕೆ ಕೇಳ್ತಿದ್ದೀರಾ ಅಂತ ನೀವು ಗೊಂದಲಕ್ಕೊಳಗಾಗ್ಬಹುದು. ಅದೇ ರೀತಿಯ ಗೊಂದಲಕ್ಕೆ ಒಳಗಾಗಿರೋದು ಬಿಹಾರದ ಸ್ಕೂಟರ್ ಸವಾರ. ಹೌದು ಬಿಹಾರದ ಸ್ಕೂಟರ್ ಸವಾರನೋರ್ವನಿಗೆ ಸೀಟ್ ಬೆಲ್ಟ್ ಧರಿಸಿಲ್ಲ ಎಂದು ದಂಡ ಪಾವತಿಗೆ ಪೊಲೀಸರು ಚಲನ್ ಕಳುಹಿಸಿದ್ದು, ಇದರಿಂದ ಸ್ಕೂಟರ್ ಸವಾರ ದಂಗಾಗಿದ್ದಾನೆ.
ಕಾರುಗಳಲ್ಲಿ ಪ್ರಯಾಣಿಸುವವರಿಗೆ ಸೀಟ್ ಬೆಲ್ಟ್ ಧರಿಸಿಲ್ಲ ಅಂತ ದಂಡ ಪಾವತಿಗೆ ಚಲನ್ ಬರುವುದು ಸಾಮಾನ್ಯ. ಆದರೆ ಸ್ಕೂಟರ್ ಸವಾರನಿಗೆ ಹೀಗೆ ದಂಡ ಪಾವತಿಸುವಂತೆ ಬಂದ್ರೆ ಏನು ಮಾಡೋದು. ಅಂದಹಾಗೆ ಈ ಘಟನೆ ನಡೆದಿರೋದು ಬಿಹಾರದಲ್ಲಿ, ಸ್ಕೂಟರ್ ಹೊಂದಿರುವಬಿಹಾರದ ಕೃಷ್ಣ ಕುಮಾರ್ ಝಾ ಎಂಬುವವರಿಗೆ ಹೀಗೆ ದಂಡ ಪಾವತಿಸುವಂತೆ ನೋಟೀಸ್ ಬಂದಿದೆ. 2020ರಲ್ಲಿಸೀಟ್ ಬೆಲ್ಟ್ ಧರಿಸದೇ ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕಾಗಿ ಅವರಿಗೆ ಒಂದು ಸಾವಿರ ರೂಪಾಯಿ ದಂಡ ಪಾವತಿಸುವಂತೆ ಚಲನ್ ಬಂದಿದೆ. ಈಗಾಗಲೇ ಚಲನ್ ಪಾವತಿಯಾಗಿದೆ ಎಂದು ತಿಳಿದು ಬಂದಿದೆ ಎಂದು ಕೃಷ್ಣಕುಮಾರ್ ಝಾ ಹೇಳಿದ್ದಾರೆ.
ಲೈನ್‌ಮ್ಯಾನ್‌ಗೆ ₹500 ಟ್ರಾಫಿಕ್ ದಂಡ: ಪೊಲೀಸ್ ಠಾಣೆಯ ವಿದ್ಯುತ್ ಕಟ್
ನನ್ನ ಬಳಿ ಸ್ಕೂಟಿ ಇದೆ. ಏಪ್ರಿಲ್ 27 ರಂದು ನಾನು ಬನಾರಸ್ (ವಾರಣಾಸಿ)ಗೆ ಹೋಗುತ್ತಿದ್ದೆ, ನಾನು ರೈಲಿನಲ್ಲಿದ್ದಾಗ, ನನ್ನ ಹೆಸರಿನಲ್ಲಿ 1,000 ಚಲನ್ ನೀಡಲಾಗಿದೆ ಎಂದು ನನಗೆ ಸಂದೇಶ ಬಂದಿತು. ನಾನು ವಿವರಗಳನ್ನು ನೋಡಿದಾಗ. ಅಕ್ಟೋಬರ್ 2020 ರಲ್ಲಿ ಸೀಟ್ ಬೆಲ್ಟ್ ಧರಿಸದಿದ್ದಕ್ಕಾಗಿ ಎಂದು ಅದರಲ್ಲಿ ಉಲ್ಲೇಖಿಸಲಾಗಿದೆ ಎಂದು ಕೃಷ್ಣಕುಮಾರ್ ಸುದ್ದಿಸಂಸ್ಥೆ ಪಿಟಿಐಗೆ ಹೇಳಿದ್ದಾರೆ. ಇದರ ಜೊತೆ ಅಚ್ಚರಿ ಎಂಬಂತೆದಂಡವನ್ನು ಈಗಾಗಲೇ ಠೇವಣಿ ಮಾಡಲಾಗಿದೆ ಎಂದು ಸಂದೇಶದಲ್ಲಿ ಉಲ್ಲೇಖಿಸಲಾಗಿದೆ. ಆದರೆ ನನ್ನ ನೆನಪಿನಲ್ಲಿರುವಂತೆ ಅಂತಹ ಯಾವುದೇ ಘಟನೆ ಸಂಭವಿಸಿಲ್ಲ ಎಂದು ಅವರು ಹೇಳಿದ್ದಾರೆ.
200 ರೂಪಾಯಿ ಟ್ರಾಫಿಕ್ ಫೈನ್ ಕೇಸ್ ಗೆಲ್ಲಲು 10,000 ರೂಪಾಯಿ ಖರ್ಚು ಮಾಡಿದ ಉದ್ಯಮಿ!
ಈ ಬಗ್ಗೆ ಪೊಲೀಸರನ್ನು ಕೇಳಿದಾಗ, ಬಹುಶಃ ತಾಂತ್ರಿಕ ದೋಷದ ಕಾರಣದಿಂದ ಈ ರೀತಿ ಸಂಭವಿಸಿರಬಹುದು ಎಂದು ಅವರು ಹೇಳಿದ್ದಾರೆ. ಕೃಷ್ಣಕುಮಾರ್ ಝಾ ಸ್ವೀಕರಿಸಿದ ಚಲನ್ ಅನ್ನು ಮ್ಯಾನುವಲ್ (ಕೈಯಿಂದ) ನೀಡಲಾಗಿದೆ. ಈಗ, ನಾವು ಇವೆಲ್ಲವನ್ನೂ ಇ-ಚಲನ್‌ಗಳಾಗಿ ಮುಚ್ಚಿಡುವ ಪ್ರಕ್ರಿಯೆಯಲ್ಲಿದ್ದೇವೆ. ದೋಷ ಎಲ್ಲಿ ಸಂಭವಿಸಿದೆ ಎಂದು ನಾನು ಪರಿಶೀಲಿಸುತ್ತೇನೆ ಎಂದು ಬಿಹಾರ ಟ್ರಾಫಿಕ್ ಪೊಲೀಸ್ ಅಧಿಕಾರಿ ಬಲ್ಬೀರ್ ದಾಸ್ , ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಇದೇ ರೀತಿಯ ಘಟನೆಯೊಂದು ಕಳೆದ ಫೆಬ್ರವರಿಯಲ್ಲಿ ಒಡಿಶಾದಲ್ಲಿ ನಡೆದಿತ್ತು. ದ್ವಿಚಕ್ರ ವಾಹನ ಚಾಲನೆ ಮಾಡುತ್ತಿದ್ದ ಅಭಿಷೇಕ್ (Abhisekh Kar) ಎಂಬುವವರಿಗೆ ಸೀಟ್ ಬೆಲ್ಟ್ ಧರಿಸಿಲ್ಲ ಎಂದು ಒಂದು ಸಾವಿರ ರೂಪಾಯಿ ದಂಡ ವಿಧಿಸಲಾಗಿತ್ತು. ಈ ದೋಷದ ಬಗ್ಗೆ ಎಚ್ಚರಿಸಲು ಅವರು ನಂತರ ಸ್ಥಳೀಯ ಸಾರಿಗೆ ಅಧಿಕಾರಿಗಳು ಮತ್ತು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಅಧಿಕಾರಿಗಳನ್ನು ಸಂಪರ್ಕಿಸಿದ್ದರು. ನಂತರ ಅದು ಬೇರೆಯವರಿಗೆ ಸೇರಿದ್ದು ನಿಮಗೆ ಬಂದಿದೆ ಎಂಬ ಸ್ಪಷ್ಟನೆ ಸಿಕ್ಕಿತ್ತು.