ಮಗನ ಶಾಲೆಯ ಮುಂದೆ ಸ್ಕೂಟರ್ ನಿಲ್ಲಿಸಿದ ತಂದೆ ಮಗನನ್ನು ಇಳಿಸಿ ಶಾಲೆ ಗೇಟ್‌ನ ಬಳಿ ಕರೆದುಕೊಂಡು ಹೋಗಿದ್ದಾರೆ. ಅಷ್ಟರಲ್ಲಿ ಸ್ಕೂಟರ್‌ನ ಹಿಂದೆ ಕುಳಿತಿದ್ದ ಮಗಳು ಸ್ಕೂಟರ್‌ನ ಡ್ರೈವಿಂಗ್ ಸೀಟ್‌ಗೆ ಬಂದು ಇದಕ್ಕಿದ್ದಂತೆ ಸ್ಕೂಟರ್‌ನ ಅಕ್ಸಿಲರೇಟ್‌ನ್ನು ಒತ್ತಿದ್ದಾಳೆ. ಆಮೇಲೇನಾಯ್ತು ನೋಡಿ..

ಸಣ್ಣ ಮಕ್ಕಳನ್ನು ವಾಹನಗಳಲ್ಲಿ ಕೂರಿಸುವುದು ಎಷ್ಟು ಡೇಂಜರ್ ಎಂಬುದಕ್ಕೆ ಇಲ್ಲೊಂದು ಘಟನೆ ಸಾಕ್ಷಿಯಾಗಿದೆ. ತಂದೆಯೊಬ್ಬರು ತಮ್ಮ ಮಕ್ಕಳನ್ನು ಶಾಲೆಗೆ ಬಿಡುವುದಕ್ಕಾಗಿ ಸ್ಕೂಟರ್‌ನಲ್ಲಿ ಕರೆದುಕೊಂಡು ಹೋಗಿದ್ದಾರೆ. ಮಗನ ಶಾಲೆಯ ಮುಂದೆ ಸ್ಕೂಟರ್ ನಿಲ್ಲಿಸಿದ ತಂದೆ ಮಗನನ್ನು ಇಳಿಸಿ ಶಾಲೆ ಗೇಟ್‌ನ ಬಳಿ ಕರೆದುಕೊಂಡು ಹೋಗಿದ್ದಾರೆ. ಅಷ್ಟರಲ್ಲಿ ಸ್ಕೂಟರ್‌ನ ಹಿಂದೆ ಕುಳಿತಿದ್ದ ಮಗಳು ಸ್ಕೂಟರ್‌ನ ಡ್ರೈವಿಂಗ್ ಸೀಟ್‌ಗೆ ಬಂದು ಇದಕ್ಕಿದ್ದಂತೆ ಸ್ಕೂಟರ್‌ನ ಅಕ್ಸಿಲರೇಟ್‌ನ್ನು ಒತ್ತಿದ್ದಾಳೆ. ಪರಿಣಾಮ ಸ್ಕೂಟರ್ ರಣವೇಗದಲ್ಲಿ ಮುಂದೆ ಹೋಗಿ ರಸ್ತೆಯಿಂದ ಪಕ್ಕಕ್ಕೆ ಇಳಿದು ಅಲ್ಲಿದ್ದ ಸೆಗಣಿ ರಾಶಿಗೆ ಡಿಕ್ಕಿ ಹೊಡೆದು ಮಗುಚಿದ್ದು,ಬಾಲಕಿ ಮತ್ತೊಂದು ಪಕ್ಕಕ್ಕೆ ಎಸೆಯಲ್ಪಟ್ಟಿದ್ದಾಳೆ. ಆದರೆ ಅದೃಷ್ಟವಶಾತ್ ದೊಡ್ಡ ಅನಾಹುತ ಸಂಭವಿಸದೇ ಸಣ್ಣಪುಟ್ಟ ಗಾಯಗಳಿಂದ ಬಾಲಕಿ ಪಾರಾಗಿದ್ದಾಳೆ.

ಈ ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ರಾಜಸ್ಥಾನದ ಜೋಧ್‌ಪುರದಲ್ಲಿ ಈ ಘಟನೆ ನಡೆದಿದೆ. ವೈರಲ್ ಆದ ವೀಡಿಯೋದಲ್ಲಿ ತಂದೆ ಶಾಲೆಯ ಮುಂದೆ ಸ್ಕೂಟರ್ ನಿಲ್ಲಿಸಿ ಮಗನನ್ನು ಇಳಿಸಿ ಶಾಲೆಯ ಗೇಟ್‌ ಬಳಿ ಹೋಗಿದ್ದಾರೆ. ಅಷ್ಟರಲ್ಲಿ ಸ್ಕೂಟರ್‌ನಲ್ಲಿದ್ದ ಬಾಲಕಿ ಅಕ್ಸಿಲರೇಟ್ ಒತ್ತಿದ್ದು, ಸ್ಕೂಟರ್ ವೇಗವಾಗಿ ಓಡುವುದನ್ನು ನೋಡಿದ ತಂದೆ ತಮ್ಮ ಕೈಯಲ್ಲಿರುವುದನ್ನೆಲ್ಲಾ ರಸ್ತೆಯಲ್ಲೇ ಎಸೆದು ಮಗಳ ರಕ್ಷಣೆಗೆ ಓಡಿ ಹೋಗಿದ್ದಾರೆ. ಅಷ್ಟರಲ್ಲಿ ಆ ಸ್ಕೂಟರ್ ರಸ್ತೆ ಪಕ್ಕಕ್ಕೆ ಸಾಗಿ ಸೆಗಣಿಯ ರಾಶಿಗೆ ಡಿಕ್ಕಿ ಹೊಡೆದು ಮಗುಚಿದ್ದು, ಬಾಲಕಿ ಮತ್ತೊಂದು ಕಡೆಗೆ ಬಿದ್ದಿದ್ದಾಳೆ. ಬಹುಶಃ ಅದೇ ಸಮಯದಲ್ಲಿ ಬೇರೆ ವಾಹನಗಳು ಆ ರಸ್ತೆಯಲ್ಲಿ ಬಂದಿದ್ದರೆ ದೊಡ್ಡ ಅನಾಹುತ ಸಂಭವಿಸುವುದರಲಿತ್ತು. ಆದರೆ ಹಾಗೇನೂ ಆಗದೇ ಬಾಲಕಿ ಪವಾಡವೆಂಬಂತೆ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದು, ತಂದೆಯ ಜೀವ ಮಾತ್ರ ಬಾಯಿಗೆ ಬಂದಂತಾಗಿದೆ.

ಇದನ್ನೂ ಓದಿ: ಇಂಡೋ ಚೀನಾ ಯುದ್ಧದ ವೇಳೆ 600 ಕೇಜಿ ಬಂಗಾರ ದಾನ ಮಾಡಿದ್ದ ದರ್ಬಾಂಗ್‌ನ ಕೊನೆಯ ರಾಣಿ ನಿಧನ

ಶಾಲೆಯ ಮುಂಭಾಗದ ಸಿಸಿ ಕ್ಯಾಮರಾದಲ್ಲಿ ಈ ದೃಶ್ಯ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಬಾಲಕಿ ಸುಮಾರು 25ರಿಂದ 30 ಮೀಟರ್ ದೂರದವರೆಗೆ ಈ ವೇಗದ ಸ್ಕೂಟರ್‌ ಮೇಲೆ ಹೋಗಿದ್ದಾಳೆ. ಸಮೀಪದಲ್ಲೇ ಹಸುವಿನ ಸಗಣಿ ರಾಶಿ ಇದ್ದಿದ್ದರಿಂದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ ಇಲ್ಲದೇ ಹೋಗಿದ್ದರೆ ಸ್ಕೂಟರ್ ಬೇರೆಡೆ ಗೋಡೆಗೋ ಮರಕ್ಕೋ ಡಿಕ್ಕಿ ಹೊಡೆದು ದೊಡ್ಡ ಅನಾಹುತ ಸಂಭವಿಸುವುದರಲ್ಲಿತ್ತು ಎಂದು ಸ್ಥಳೀಯರು ಹೇಳಿದ್ದಾರೆ.

ಇದನ್ನೂ ಓದಿ: ವಿದೇಶಗಳಿಗೆ ಬಾಳೆ ಎಲೆ ರಪ್ತು ಮಾಡಿ ಗಳಿಸಿ ಲಕ್ಷ ಲಕ್ಷ ಆದಾಯ: ಉದ್ಯಮ ಆರಂಭಿಸುವವರಿಗಾಗಿ ಇಲ್ಲಿದೆ ಹಂತ ಹಂತದ ಮಾರ್ಗದರ್ಶನ

ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದ್ದಂತೆ ಅನೇಕರು ಕಳವಳ ವ್ಯಕ್ತಪಡಿಸಿದ್ದು, ಮಕ್ಕಳು ವಾಹನದಲ್ಲಿ ಇರುವ ಸಮಯದಲ್ಲಿ ಗಾಡಿಯನ್ನು ಸರಿಯಾಗಿ ಆಫ್ ಮಾಡಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳುವುದು ಬಹಳ ಅಗತ್ಯ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಎಂಜಿನ್ ಆಫ್ ಆಗದೆ ಸ್ಕೂಟಿಯನ್ನು ಎಂದಿಗೂ ಬಿಡಬೇಡಿ. ಇದು ತುಂಬಾ ಅಪಾಯಕಾರಿ. ಮಗು ಮತ್ತು ಇತರರು ಸುರಕ್ಷಿತವಾಗಿದ್ದಾರೆಂದು ಭಾವಿಸುತ್ತೇನೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಒಬ್ಬರು ತಮ್ಮ ಅನುಭವ ಹೇಳಿದ್ದು, ನಾನು ಚಿಕ್ಕವನಿದ್ದಾಗ ಹೊಸ ಕೈನೆಟಿಕ್ ಸ್ಕೂಟಿಯಲ್ಲಿ ಹೋಗುತ್ತಿದ್ದಾಗ ಅದನ್ನು ಗೋಡೆಗೆ ಡಿಕ್ಕಿ ಹೊಡೆಸಿದ್ದೆ. ನಂತರ ನನ್ನ ತಂದೆ ನನ್ನನ್ನು ಗೋಡೆಗೆ ಡಿಕ್ಕಿ ಹೊಡೆದರು ಎಂದು ಒಬ್ಬರು ತಮ್ಮ ಬಾಲ್ಯದ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ. ಬೇರೆ ವಾಹನಗಳು ಎದುರಿನಿಂದ ಬಂದಿದ್ದರೆ ದೊಡ್ಡ ಅನಾಹುತವಾಗುತ್ತಿತ್ತು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಪುಟ್ಟ ಮಕ್ಕಳು ಜೊತೆಗಿದ್ದಾಗ ಎಷ್ಟು ಜಾಗರೂಕರಾಗಿದ್ದರು ಸಾಲದು.

View post on Instagram