ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ಹನುಮಾನ್ ದೇವಾಲಯದಲ್ಲಿ ನಾಯಿಯೊಂದು 48 ಗಂಟೆಗಳಿಂದ ನಿರಂತರವಾಗಿ ದೇವರ ವಿಗ್ರಹಕ್ಕೆ ಪ್ರದಕ್ಷಿಣೆ ಹಾಕುತ್ತಿದೆ. ಈ ಅಚ್ಚರಿಯ ಘಟನೆಯನ್ನು ನೋಡಲು ಜನರು ದೂರದೂರುಗಳಿಂದ ಆಗಮಿಸುತ್ತಿದ್ದಾರೆ.
ಪ್ರಾಣಿಗಳಿಗೂ ದೇವರ ಮೇಲೆ ಭಕ್ತಿ ಇದೆ ಎಂಬುದನ್ನು ಸಾಬೀತು ಮಾಡುವ ಹಲವು ಘಟನೆಗಳು ಈ ಹಿಂದೆಯೂ ನಡೆದಿವೆ. ಕೆಲ ಸಮಯದ ಹಿಂದೆ ಮಹಾರಾಷ್ಟ್ರದಲ್ಲಿರುವ ಶನಿ ಮಹಾತ್ಮನ ದೇಗುಲದಲ್ಲಿ ಬೆಕ್ಕೊಂದು ದೇವರ ವಿಗ್ರಹಕ್ಕೆ ಪ್ರದಕ್ಷಿಣೆ ಹಾಕುತ್ತಿರುವ ವೀಡಿಯೋವೊಂದು ವೈರಲ್ ಆಗಿತ್ತು. ಈಗ ಇಂತಹದ್ದೇ ಘಟನೆಯೊಂದು ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ದೇವಾಲಯವೊಂದರಲ್ಲಿ ನಡೆದಿದೆ.
ಬಿಜ್ನೋರ್‌ನ ನಗೀನಾ ತೆಹಸಿಲ್ ಪ್ರದೇಶದಲ್ಲಿರುವ ನಂದಪುರ ಗ್ರಾಮದಲ್ಲಿರುವ ಪ್ರಾಚೀನ ಹನುಮಾನ್ ದೇವಾಲಯದಲ್ಲಿ ನಾಯಿಯೊಂದು ಕಳೆದ 48 ಗಂಟೆಗಳಿಂದ ನಿರಂತರವಾಗಿ ಹನುಮಂತನ ವಿಗ್ರಹಕ್ಕೆ ಸುತ್ತು ಬರುತ್ತಿದ್ದು, ಇದು ನೋಡುಗರನ್ನು ಅಲ್ಲಿಗೆ ಭೇಟಿ ನೀಡುತ್ತಿರುವ ಭಕ್ತರನ್ನು ಅಚ್ಚರಿಗೊಳಿಸಿದೆ. ಸೋಮವಾರ ಬೆಳಗಿನ ಜಾವ 4 ಗಂಟೆಯಿಂದಲೂ ನಾಯಿ ಯಾವುದೇ ದಣಿವರಿಯಿಲ್ಲದೆ ಹನುಮಂತನ ವಿಗ್ರಹಕ್ಕೆ ಸುತ್ತು ಬರುತ್ತಿದ್ದು, ಈ ದೃಶ್ಯ ಎಲ್ಲರನ್ನೂ ಅಚ್ಚರಿಗೊಳಿಸುತ್ತಿದೆ. ಈ ಘಟನೆಗೆ ಕಾರಣವೇನಿರಬಹುದು, ನಾಯಿಯ ಬೇಡಿಕೆ ಪ್ರಾರ್ಥನ ಏನಿರಬಹುದು ಎಂದು ಜನ ವಿವಿಧ ರೀತಿಯಲ್ಲಿ ಚರ್ಚೆ ಮಾಡುತ್ತಿದ್ದಾರೆ. ಈ ಈ ವಿಶಿಷ್ಟ ಮತ್ತು ದೈವಿಕ ದೃಶ್ಯವು ಈ ಪ್ರದೇಶದಲ್ಲಿ ಈಗ ಆಕರ್ಷಣೆ ಮತ್ತು ಚರ್ಚೆಯ ವಿಚಾರವಾಗಿದೆ.
ಬಿಜ್ನೋರ್‌ನ ನಗೀನಾ ತೆಹಸಿಲ್ ಪ್ರದೇಶದಲ್ಲಿರುವ ನಂದಪುರ ಗ್ರಾಮದಲ್ಲಿರುವ ಪ್ರಾಚೀನ ಹನುಮಾನ್ ದೇವಾಲಯದಲ್ಲಿ ಈ ಘಟನೆ ನಡೆದಿದೆ. ಸೋಮವಾರ ಬೆಳಗಿನ ಜಾವ 4 ಗಂಟೆಯಿಂದ ದೇವಾಲಯದ ಆವರಣದಲ್ಲಿರುವ ಹನುಮಾನ್ ವಿಗ್ರಹದ ಸುತ್ತ ನಾಯಿಯೊಂದು ನಿರಂತರವಾಗಿ ಸುತ್ತುತ್ತಿರುವುದು ಕಂಡುಬಂದಿದೆ. ನಾಯಿಯ ಈ ನಡವಳಿಕೆಯೂ ಗ್ರಾಮದಲ್ಲಿ ದಿನವಿಡೀ ಚರ್ಚೆಯ ವಿಷಯವಾಗಿದೆ ಮತ್ತು ಜನರು ಇದನ್ನು ಧಾರ್ಮಿಕ ನಂಬಿಕೆಯೊಂದಿಗೆ ಸಂಯೋಜಿಸುತ್ತಿದ್ದಾರೆ. ಹೀಗೆ ದೇವರಿಗೆ ಸುತ್ತು ಬರುತ್ತಿರುವ ಶ್ವಾನವೂ ಯಾರಿಗೂ ಹಾನಿ ಮಾಡಿಲ್ಲ ಹಾಗೂ ಇದು ದೇವಾಲಯದ ಆವರಣವನ್ನು ತೊರೆದು ಹೋಗುವುದು ಕೂಡ ಕಾಣುತ್ತಿಲ್ಲ ಎಂದು ಅಲ್ಲಿನ ನಿವಾಸಿಗಳು ಹೇಳುತ್ತಿದ್ದಾರೆ.
ಹಿಂದೂ ಪುರಾಣಗಳಲ್ಲಿ ಪ್ರತಿ ಸೃಷ್ಟಿಗೂ ದೇವರ ಸ್ಥಾನವಿದೆ. ಬೆಕ್ಕು, ನಾಯಿ, ಹಂದಿ, ಹಸು ಎಲ್ಲವನ್ನೂ ದೇವರ ಸ್ವರೂಪಗಳೆಂಬ ನಂಬಿಕೆ ಇದ ಹೀಗಿರುವಾಗ ಶ್ವಾನವನ್ನು ಕಾಲ ಭೈರವ ಎಂದು ಪೂಜೆ ಮಾಡಲಾಗುತ್ತದೆ. ಹಾಗೆಯೇ ಇಲ್ಲಿ ಶ್ವಾನದ ಈ ಪ್ರದಕ್ಷಿಣೆಯನ್ನು ಜನ ಭಕ್ತಿಗೆ ಹೋಲಿಸುತ್ತಿದ್ದಾರೆ. ಈ ಶ್ವಾನವೂ ಶಾಂತ ನಡವಳಿಕೆಯಿಂದ ಪ್ರದಕ್ಷಿಣೆ ಹಾಕುತ್ತಿದ್ದು, ಅಲ್ಲಿಗೆ ಬರುವ ಭಕ್ತರನ್ನು ಅಚ್ಚರಿಗೀಡು ಮಾಡಿದೆ. ಈ ವಿಚಾರ ಈಗ ಆ ಪ್ರದೇಶದ ಸುತ್ತಮುತ್ತ ಸಾಕಷ್ಟು ಸುದ್ದಿಯಾಗುತ್ತಿದ್ದು, ಅನೇಕರು ಇದನ್ನು ನೋಡುವುದಕ್ಕೆ ದೂರ ದೂರದಿಂದ ಆಗಮಿಸುತ್ತಿದ್ದಾರೆ. ಅಲ್ಲದೇ ಈ ದೃಶ್ಯವನ್ನು ಅದ್ಭುತ ಪವಾಡ ಎಂದು ಪರಿಗಣಿಸಿದ ಹೆಚ್ಚಿನ ಸಂಖ್ಯೆಯ ಭಕ್ತರು ಹನುಮಂತನ ಭಜನೆಗಳನ್ನು ಅಲ್ಲಿ ಪಠಿಸುವುದು ಕಂಡುಬಂದಿದೆ. ಅನೇಕರು ಭೈರವನಾಥ ನಾಯಿಯ ರೂಪದಲ್ಲಿ ಹನುಮನನ್ನು ಪೂಜಿಸುತ್ತಿದ್ದಾನೆ ಎಂದು ಈ ಘಟನೆಯನ್ನು ಬಣ್ಣಿಸಿದ್ದಾರೆ.
ಇದನ್ನೂ ಓದಿ: ಆಕಸ್ಮಿಕವಾಗಿ ಅಕ್ಸಿಲರೇಟ್ ಒತ್ತಿದ ಬಾಲಕಿ : ಸೆಗಣಿ ರಾಶಿಯಿಂದಾಗಿ ತಪ್ಪಿತ್ತು ದೊಡ್ಡ ಅನಾಹುತ:ವೀಡಿಯೋ
ಈ ಪವಾಡ ಘಟನೆಯ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಮುಖಂಡರಾದ ಅನೂಪ್ ಬಾಲ್ಮಿಕಿ ಅವರು ದೇವಾಲಯಕ್ಕೆ ಆಗಮಿಸಿ ಇಡೀ ಘಟನೆಯನ್ನು ವೀಕ್ಷಿಸಿದರು. ಇದು ನಂಬಿಕೆಯ ವಿಷಯವಾಗಿದ್ದು, ಎಲ್ಲರೂ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಿಕೊಳ್ಳಬೇಕು ಎಂದು ಅವರು ಹೇಳಿದರು. ಆಡಳಿತವು ಘಟನೆಯ ಬಗ್ಗೆಯೂ ತನಿಖೆ ನಡೆಸುತ್ತಿದೆ. ನಂದಪುರ ಗ್ರಾಮದಲ್ಲಿರುವ ಈ ಪ್ರಾಚೀನ ದೇವಾಲಯವು ಬಹಳ ಹಿಂದಿನಿಂದಲೂ ಧಾರ್ಮಿಕ ನಂಬಿಕೆಗಳಿಗೆ ಹೆಸರುವಾಸಿಯಾಗಿದೆ, ಆದರೆ ಇಂತಹ ಘಟನೆ ನಡೆದಿರುವುದು ಇದೇ ಮೊದಲು ಎಂದು ಗ್ರಾಮಸ್ಥರು ಹೇಳುತ್ತಾರೆ.
ಇದನ್ನೂ ಓದಿ: ಇಂಡೋ ಚೀನಾ ಯುದ್ಧದ ವೇಳೆ 600 ಕೇಜಿ ಬಂಗಾರ ದಾನ ಮಾಡಿದ್ದ ದರ್ಬಾಂಗ್‌ನ ಕೊನೆಯ ರಾಣಿ ನಿಧನ
ಉತ್ತರ ಭಾರತದಲ್ಲಿ ಈಗ ದಟ್ಟ ಚಳಿ ಇರುವುದರಿಂದ ದೇವಾಲಯ ಸಮಿತಿ ಮತ್ತು ಸ್ಥಳೀಯ ನಿವಾಸಿಗಳು ನಾಯಿಯನ್ನು ಚಳಿಯಿಂದ ರಕ್ಷಿಸಲು ದೇವಾಲಯದ ಆವರಣದಲ್ಲಿ ಪಾಲಿಥಿನ್ ಹಾಳೆಗಳನ್ನು ಅಳವಡಿಸಿದ್ದಾರೆ. ದೇವಾಲಯಕ್ಕೆ ಭೇಟಿ ನೀಡುವ ಭಕ್ತರಿಗೆ ಪ್ರತ್ಯೇಕ ವ್ಯವಸ್ಥೆಗಳನ್ನು ಸಹ ಮಾಡಲಾಗಿದೆ.
ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ಹನುಮಾನ್ ದೇವಾಲಯದಲ್ಲಿ ನಾಯಿಯೊಂದು 48 ಗಂಟೆಗಳಿಂದ ನಿರಂತರವಾಗಿ ದೇವರ ವಿಗ್ರಹಕ್ಕೆ ಪ್ರದಕ್ಷಿಣೆ ಹಾಕುತ್ತಿದೆ. ಈ ಅಚ್ಚರಿಯ ಘಟನೆಯನ್ನು ನೋಡಲು ಜನರು ದೂರದೂರುಗಳಿಂದ ಆಗಮಿಸುತ್ತಿದ್ದಾರೆ.


