ಛತ್ರಪತಿ ಶಿವಾಜಿ ಅವರ ಕುರಿತಾಗಿ ಮಹಾರಾಷ್ಟ್ರ ರಾಜ್ಯಪಾಲರಾದ ಭಗತ್ ಸಿಂಗ್ ಕೋಶ್ಯಾರಿ ಇತ್ತೀಚಿಗೆ ನೀಡಿರುವ ಹೇಳಿಕೆಗೆ ಸಂಬಂಧಿಸಿದಂತೆ ಅವರನ್ನು ವಜಾ ಮಾಡಬೇಕು ಎಂದು ಮುಖ್ಯಮಂತ್ರಿ ಏಕನಾಥ ಶಿಂಧೆ ಬಣದ ಶಾಸಕ ಸಂಜಯ್ ಗಾಯಕ್ವಾಡ್ ಆಗ್ರಹಿಸಿದ್ದಾರೆ.
ಮುಂಬೈ: ಛತ್ರಪತಿ ಶಿವಾಜಿ ಅವರ ಕುರಿತಾಗಿ ಮಹಾರಾಷ್ಟ್ರ ರಾಜ್ಯಪಾಲರಾದ ಭಗತ್ ಸಿಂಗ್ ಕೋಶ್ಯಾರಿ ಇತ್ತೀಚಿಗೆ ನೀಡಿರುವ ಹೇಳಿಕೆಗೆ ಸಂಬಂಧಿಸಿದಂತೆ ಅವರನ್ನು ವಜಾ ಮಾಡಬೇಕು ಎಂದು ಮುಖ್ಯಮಂತ್ರಿ ಏಕನಾಥ ಶಿಂಧೆ ಬಣದ ಶಾಸಕ ಸಂಜಯ್ ಗಾಯಕ್ವಾಡ್ ಆಗ್ರಹಿಸಿದ್ದಾರೆ.
ಬುಲ್ದಾನ ವಿಧಾನಸಭಾ ಕ್ಷೇತ್ರದ (Buldana Assembly Constituency) ಶಾಸಕರಾಗಿರುವ ಸಂಜಯ್, ‘ಛತ್ರಪತಿ ಶಿವಾಜಿ (Chhatrapati Shivaji) ಎಂದಿಗೂ ಹಳತಾಗುವುದಿಲ್ಲ ಮತ್ತು ಅವರನ್ನು ಇತರರೊಂದಿಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ ಎಂಬುದನ್ನು ರಾಜ್ಯಪಾಲ ಕೋಶ್ಯಾರಿ ಅವರು ಅರ್ಥ ಮಾಡಿಕೊಳ್ಳಬೇಕು. ರಾಜ್ಯದ ಪ್ರಮುಖ ವ್ಯಕ್ತಿಗಳ ಇತಿಹಾಸ ಗೊತ್ತಿಲ್ಲದ ಈ ವ್ಯಕ್ತಿಯನ್ನು ರಾಜ್ಯದಿಂದ ಹೊರದೂಡಬೇಕು ಎಂದು ಕೇಂದ್ರದಲ್ಲಿರುವ ಬಿಜೆಪಿ ನಾಯಕರಿಗೆ ಮನವಿ ಮಾಡುತ್ತೇನೆ’ ಎಂದು ಹೇಳಿದ್ದಾರೆ.
‘ಛತ್ರಪತಿ ಶಿವಾಜಿ ಅವರನ್ನು ಐಕಾನ್ ಎಂದು ಮಹಾರಾಷ್ಟ್ರದ (Maharashtra) ಜನರು ಹೇಳುವುದನ್ನು ಇನ್ನಾದರೂ ಬಿಡಬೇಕು. ಅವರು ಹಳಬರಾಗಿದ್ದಾರೆ. ಶಿವಾಜಿ ಬದಲು ಅಂಬೇಡ್ಕರ್ ಅಥವಾ ನಿತಿನ್ ಗಡ್ಕರಿ (Nitin Gadkari) ಅವರ ಹೆಸರನ್ನು ಐಕಾನ್ ಹೇಳಬಹುದು’ ಎಂದು ಕೋಶ್ಯಾರಿ ಶನಿವಾರ ಹೇಳಿದ್ದರು.
ಛತ್ರಪತಿ ಶಿವಾಜಿ ಹಳೆಯ ಕಾಲದ ಐಕಾನ್: ಮಹಾ ರಾಜ್ಯಪಾಲ ಕೋಶ್ಯಾರಿ
ಮಹಾರಾಷ್ಟ್ರ ಗಡಿ ವಿವಾದದ ಕುರಿತು ರಾಜ್ಯದಲ್ಲೂ ತುರ್ತು ಸಭೆ
ಗಡಿ ವಿವಾದಕ್ಕೆ ಮತ್ತೆ ಮಹಾರಾಷ್ಟ್ರದ ಕಿಚ್ಚು: ನಿಗಾಕ್ಕೆ ಇಬ್ಬರು ಸಚಿವರ ನೇಮಕ!