Asianet Suvarna News Asianet Suvarna News

ಗಡಿ ವಿವಾದಕ್ಕೆ ಮತ್ತೆ ಮಹಾರಾಷ್ಟ್ರದ ಕಿಚ್ಚು: ನಿಗಾಕ್ಕೆ ಇಬ್ಬರು ಸಚಿವರ ನೇಮಕ!

  • ಕರ್ನಾಟಕದ ಜೊತೆ ಕಾನೂನು ಹೋರಾಟಕ್ಕೆ ಇಬ್ಬರು ಸಚಿವರ ತಂಡ
  • ಕರ್ನಾಟಕದ ಮರಾಠಿ ಭಾಷಿಕ ಪ್ರದೇಶಗಳಿಗೆ ವಿವಿಧ ಕೊಡುಗೆ ಪ್ರಕಟ
  • ಕನ್ನಡ ನಾಡಿನಲ್ಲಿರುವ ಮರಾಠಿಗರಿಗೆ ಫುಲೆ ಆರೋಗ್ಯ ವಿಮೆ ಕಾರ್ಡ್‌
  • ಕರ್ನಾಟಕದ ಮರಾಠಿಗ ಸ್ವಾತಂತ್ರ್ಯ ಹೋರಾಟಗಾರರಿಗೆ ಪಿಂಚಣಿ
  • ಶೀಘ್ರ ಮೋದಿ, ಅಮಿತ್‌ ಶಾ ಭೇಟಿ ಮಾಡುತ್ತೇವೆ: ಸಿಎಂ ಶಿಂಧೆ
     
Maharashtra puts fire in Border dispute, Appoints two ministers for monitoring akb
Author
First Published Nov 22, 2022, 6:38 AM IST

ಮುಂಬೈ: ಮಹಾರಾಷ್ಟ್ರದಲ್ಲಿ ಮಹಾ ಅಘಾಡಿ ಸರ್ಕಾರ ಪತನಗೊಳಿಸಿ ಅಧಿಕಾರಕ್ಕೆ ಬಂದ ಬಳಿಕ ಹಲವು ತಿಂಗಳಿನಿಂದ ತಣ್ಣಗಿದ್ದ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ನೇತೃತ್ವದ ಶಿವಸೇನೆ ಸರ್ಕಾರ ಇದೀಗ ಕರ್ನಾಟಕದೊಂದಿಗೆ ಗಡಿ ವಿವಾದಕ್ಕೆ ಮತ್ತಷ್ಟುಬೆಂಕಿ ಸುರಿಯುವ ಯತ್ನ ಮಾಡಿದೆ. ಕಾನೂನು ಹೋರಾಟಕ್ಕೆ ಸಚಿವರ ತಂಡ ರಚಿಸುವ ಜತೆಗೆ, ಕರ್ನಾಟಕದ ಮರಾಠಿ ಭಾಷಿಕ ಪ್ರದೇಶದ ಜನರಿಗೆ ‘ಫುಲೆ ಆರೋಗ್ಯ ವಿಮಾ ಕಾರ್ಡ್‌’ ಹಾಗೂ ಸ್ವಾತಂತ್ರ್ಯ ಯೋಧರಿಗೆ ಪಿಂಚಣಿ ಘೋಷಣೆ ಮಾಡಿದೆ.

ಬೆಳಗಾವಿ, ನಿಪ್ಪಾಣಿ, ಕಾರವಾರ ಸೇರಿದಂತೆ ಕರ್ನಾಟಕದ ಹಲವು ಭೂಭಾಗಗಳು ತನ್ನದೆಂದು ವಾದಿಸಿ ಕಾನೂನು ಹೋರಾಟ ನಡೆಸುತ್ತಿರುವ ಮಹಾರಾಷ್ಟ್ರ ಸರ್ಕಾರ(Maharashtra government), ಈ ನಿಟ್ಟಿನಲ್ಲಿ ಕಾನೂನು ತಂಡಕ್ಕೆ ಸಹಕಾರ ನೀಡಲು ಮತ್ತು ಸರ್ಕಾರದೊಂದಿಗೆ ಸಮನ್ವಯ ಸಾಧಿಸಲು ಸಚಿವರಾದ ಚಂದ್ರಕಾಂತ್‌ ಪಾಟೀಲ್‌ (Chandrakant Patil)ಮತ್ತು ಶಂಭುರಾಜ್‌ ದೇಸಾಯಿ (Shambhuraj Desai) ಅವರನ್ನು ನೇಮಕ ಮಾಡಿದೆ. ಮುಖ್ಯಮಂತ್ರಿ (Chief Minister)ಏಕನಾಥ್‌ ಶಿಂಧೆ (Eknath Shinde) ಈ ಘೋಷಣೆ ಮಾಡಿದ್ದಾರೆ.

ಕರ್ನಾಟಕ ಮರಾಠಿಗರಿಗೂ ಸ್ವಾತಂತ್ರ್ಯ ಪಿಂಚಣಿ, ವಿಮೆ:

ಜೊತೆಗೆ ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡಲಾಗುವ ಪಿಂಚಣಿ ಹಣವನ್ನು ಮಾಸಿಕ 10 ಸಾವಿರ ರು.ನಿಂದ 20 ಸಾವಿರ ರು.ಗೆ ಏರಿಸುವ ಯೋಜನೆಯನ್ನು ನೆರೆ ರಾಜ್ಯದ ಆಡಳಿತಕ್ಕೆ ಒಳಪಟ್ಟದ ಭಾಗದ ಹೋರಾಟಗಾರರಿಗೂ ವಿಸ್ತರಿಸಲಾಗುವುದು ಎಂದು ಘೋಷಿಸಿದ್ದಾರೆ. ಈ ಮೂಲಕ ಬೆಳಗಾವಿ, ನಿಪ್ಪಾಣಿ, ಕಾರವಾರ ಸೇರಿದಂತೆ ಹಲವು ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಬೇಕೆಂದು ಹೋರಾಟ ನಡೆಸುತ್ತಿರುವ ಈ ಭಾಗದ ಮರಾಠಿಗರಿಗೂ ಯೋಜನೆ ಅನ್ವಯವಾಗಲಿದೆ ಎಂದು ಪ್ರಕಟಿಸಿದ್ದಾರೆ.

Belagavi Border dispute : ಸುಪ್ರೀಂ ಕೋರ್ಟ್‌ನಲ್ಲಿ ನ.23ರಿಂದ ಅಂತಿಮ ವಿಚಾರಣೆ

ಜೊತೆಗೆ ಮಹಾತ್ಮಾ ಫುಲೆ ಜನ ಆರೋಗ್ಯ ಯೋಜನೆಯನ್ನು ಕೂಡಾ ಹಾಲಿ ನೆರೆ ರಾಜ್ಯಗಳ ಆಡಳಿತಕ್ಕೆ ಒಳಪಟ್ಟಪ್ರದೇಶಗಳ ಮರಾಠಿ ಭಾಷಿಕ ಪ್ರದೇಶಗಳ ಜನರಿಗೂ ಅನ್ವಯ ಮಾಡಲಾಗುವುದು ಎಂದು ಘೋಷಿಸಿದ್ದಾರೆ. ಈ ಎರಡೂ ಘೋಷಣೆಗಳ ಮೂಲಕ ಕರ್ನಾಟಕದ ಜೊತೆಗಿನ ಗಡಿ ಬಿಕ್ಕಟ್ಟಿಗೆ ಮತ್ತಷ್ಟು ಕಿಚ್ಚು ಹಬ್ಬಿಸುವ ಯತ್ನವನ್ನು ಮುಖ್ಯಮಂತ್ರಿ ಶಿಂಧೆ ಮಾಡಿದ್ದಾರೆ.

ಠಾಕ್ರೆಯ ಹಕ್ಕೊತ್ತಾಯ ಆಗಿತ್ತು:

ಬಳಿಕ ಮಾತನಾಡಿದ ಶಿಂಧೆ, ‘ಬೆಳಗಾವಿ ಮಹಾರಾಷ್ಟ್ರದ ಭಾಗವಾಗಬೇಕು ಎಂಬುದು ದಿ.ಬಾಳಾಸಾಹೇಬ್‌ ಠಾಕ್ರೆ (Dr. Balasaheb Thackeray) ಅವರ ಹಕ್ಕೊತ್ತಾಯವಾಗಿತ್ತು. ನಾವು ಕೂಡಾ ಈ ವಿಷಯವನ್ನು ಬಗೆಹರಿಸಲು ಗಮನ ಹರಿಸಿದ್ದೇವೆ. ಅಗತ್ಯ ಬಿದ್ದರೆ ಕಾನೂನು ಹೋರಾಟಕ್ಕೆ ಬೇಕಾದ ವಕೀಲರ ಪ್ರಮಾಣ ಹೆಚ್ಚಿಸಲಾಗುವುದು. ಜೊತೆಗೆ ಈ ವಿಷಯದ ಬಗ್ಗೆ ಶೀಘ್ರವೇ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿದ್ದೇವೆ’ ಎಂದು ಹೇಳಿದರು.

Historic Agreement ಏನಿದು 50 ವರ್ಷ ಹಳೆಯ ಅಸ್ಸಾಂ ಮೇಘಾಲಯ ಗಡಿ ವಿವಾದ?

ಇದೇ ವೇಳೆ ವಿವಾದಿತ ಪ್ರದೇಶಗಳಲ್ಲಿ ದಿನನಿತ್ಯದ ಚಟುವಟಿಕೆ, ಆಡಳಿತದಲ್ಲಿ ಮರಾಠಿ ಭಾಷೆಗೆ ಮನ್ನಣೆ ನೀಡುವ ಕುರಿತು ಬೆಳಗಾವಿ ಮತ್ತು ನೆರೆಹೊರೆಯ ಪ್ರದೇಶದ ಜನರ ನಿಯೋಗವು, ಕರ್ನಾಟಕದ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಅಹವಾಲು ಸಲ್ಲಿಸಬೇಕು ಎಂದು ಸಲಹೆ ನೀಡಿದರು.

Follow Us:
Download App:
  • android
  • ios