Asianet Suvarna News Asianet Suvarna News

ಮಹಾರಾಷ್ಟ್ರ ಗಡಿ ವಿವಾದದ ಕುರಿತು ರಾಜ್ಯದಲ್ಲೂ ತುರ್ತು ಸಭೆ

ಮಹಾರಾಷ್ಟ್ರ ಕರ್ನಾಟಕ ಗಡಿ ವಿವಾದ ಕುರಿತಂತೆ ನ.23ರಂದು ಸುಪ್ರೀಂ ಕೋರ್ಟ್ ವಿಚಾರಣೆಯಿದೆ. ಈ ಬಗ್ಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಸರ್ವಪಕ್ಷಗಳ ನಿಯೋಗ ಕರೆದು ಉನ್ನತ ಮಟ್ಟದ ಸಭೆಯೊಂದನ್ನು ಮಾಡಿದ್ದಾರೆ.ನ ಈ ಸಭೆಯ ಬೆನ್ನಲ್ಲೇ ಎಚ್ಚೆತ್ತುಕೊಂಡ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾತ್ರಿ ಸಭೆ ನಡೆಸಿ ಮುಂದಿನ ನಡೆಯ ಬಗ್ಗೆ ತಜ್ಞರೊಂದಿಗೆ ಚರ್ಚೆ ಮಾಡಿದ್ದಾರೆ.

Emergency meeting on the Maharashtra border dispute
Author
First Published Nov 21, 2022, 10:56 PM IST

ಬೆಂಗಳೂರು (ನ.21) : ಮಹಾರಾಷ್ಟ್ರ ಕರ್ನಾಟಕ ಗಡಿ ವಿವಾದ ಕುರಿತಂತೆ ನ.23ರಂದು ಸುಪ್ರೀಂ ಕೋರ್ಟ್ ವಿಚಾರಣೆಯಿದೆ. ಈ ಬಗ್ಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಸರ್ವಪಕ್ಷಗಳ ನಿಯೋಗ ಕರೆದು ಉನ್ನತ ಮಟ್ಟದ ಸಭೆಯೊಂದನ್ನು ಮಾಡಿದ್ದಾರೆ.ನ ಈ ಸಭೆಯ ಬೆನ್ನಲ್ಲೇ ಎಚ್ಚೆತ್ತುಕೊಂಡ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾತ್ರಿ ಸಭೆ ನಡೆಸಿ ಮುಂದಿನ ನಡೆಯ ಬಗ್ಗೆ ತಜ್ಞರೊಂದಿಗೆ ಚರ್ಚೆ ಮಾಡಿದ್ದಾರೆ. ಈ ಮೂಲಕ ಕನ್ನಡಪರ ಹೋರಾಟಗಾರರು ಮತ್ತು ವಿಪಕ್ಷ ನಾಯಕರಿಂದ ವಾಗ್ದಾಳಿಗೆ ತುತ್ತಾಗುವುದನ್ನು ತಪ್ಪಿಸಿಕೊಂಡಿದ್ದಾರೆ.

ರಾಜ್ಯದ ಗಡಿ ವಿವಾದದ ಕುರಿತು ಸಭೆಯ ನಂತರ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai), ನಿರಂತರವಾಗಿ ಗಡಿ ವಿವಾದದ ಬಗ್ಗೆ ಸಭೆ ಮಾಡುತ್ತಾ ಬಂದಿದ್ದೇವೆ. ಇಂದು ಕೂಡ ಹಿರಿಯ ವಕೀಲರು ಮತ್ತು ಸಚಿವರೊಂದಿಗೆ ಸಭೆ ಮಾಡಲಾಗಿದೆ. ಸುಪ್ರೀಂ ಕೋರ್ಟ್ ನಲ್ಲಿ ಪ್ರಕರಣ ವಿಚಾರಣೆ (Case hearing) ಬರುವ ವೇಳೆ ರಾಜ್ಯದ ಪರ ವಾದ ಮಂಡಿಸಲು ಹಿರಿಯ ವಕೀಲರ (Senior Advocates) ತಂಡವನ್ನು ರಚನೆ ಮಾಡಲಾಗಿದೆ. ಮುಖುಲ್ ರೋಟಗಿ, ಶ್ಯಾಂ ದಿವಾನ್ , ಉದಯ್ ಹೊಳ್ಳಾ ಸೇರಿದಂತೆ ಹಲವರು ಈ ತಂಡದಲ್ಲಿದ್ದಾರೆ. ಹಿರಿಯರ ತಂಡವು ಈಗಾಗಲೇ ಎರಡು ಮೂರು ಬಾರಿ ಸಭೆ ನಡೆಸಿದ್ದು, ನ್ಯಾಯಾಲಯದಲ್ಲಿ ಏನು ವಾದ ಮಾಡಬೇಕು ಎನ್ನುವುದರ ಬಗ್ಗೆ ಚರ್ಚೆ (Discussion) ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.

ನೆಲ, ಜಲ, ಗಡಿ ವಿಚಾರದಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ?: ಹೆಚ್ಚಿದ ಜನಾಕ್ರೋಶ

ಮಹಾರಾಷ್ಟ್ರದ ಅರ್ಜಿಗೆ ಮಾನ್ಯತೆ ಸಿಕ್ಕಿಲ್ಲ: ಮಹಾರಾಷ್ಟ್ರದ (Maharashtra) ಗಡಿ ಕ್ಯಾತೆಯ ಬಗ್ಗೆ ನಮ್ಮ ರಾಜ್ಯದಲ್ಲಿ ಪಕ್ಷಾತೀತವಾಗಿ (Non-partisan) ಅಭಿಪ್ರಾಯ ಕೈಗೊಳ್ಳಲಾಗುತ್ತದೆ. ನ್ಯಾಯಾಲಯದಲ್ಲಿ ವಿಚಾರಣೆ ಇದ್ದು, ಅದರ ನಂತರ ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದರ ಬಗ್ಗೆ ವಿಪಕ್ಷ (Opposition) ನಾಯಕರೊಂದಿಗೂ ಚರ್ಚೆ ಮಾಡಲಾಗುತ್ತದೆ. ಈ ಬಗ್ಗೆ ವಿರೋಧ ಪಕ್ಷದ ನಾಯಕರಿಗೂ ನಾಳೆ ಪತ್ರ (letter) ಕಳುಹಿಸಿಕೊಡುತ್ತೇನೆ. ಆದರೆ, ಗಡಿ  ವಿಚಾರವಾಗಿ ಮಹಾರಾಷ್ಟ್ರದಿಂದ ಸಲ್ಲಿಸಲಾದ ಅರ್ಜಿಗೆ (Application) ಇನ್ನೂ ಮಾನ್ಯತೆ ಸಿಕ್ಕಿಲ್ಲ. ಇದನ್ನು ಪರಿಗಣಿಸಬಾರದು ಎಂದು ನ್ಯಾಯಾಲಯದಲ್ಲಿ ವಾದ ಮಾಡಲು ನಮ್ಮ ವಕೀಲರ ತಂಡ ಸಿದ್ದವಾಗಿದೆ. ಎಲ್ಲ ಆಯಾಮದಲ್ಲೂ ಚರ್ಚೆ ಮಾಡಲಾಗಿದೆ ಎಂದು ತಿಳಿಸಿದರು.

ರಾಜಕೀಯ ಪ್ರೇರಿತ ವಿವಾದ: ಮಹಾರಾಷ್ಟ್ರದಲ್ಲಿ ಗಡಿ ವಿವಾದ (Border Dispute) ಮಾಡುವುದೇ ರಾಜಕೀಯ ಆಗಿದೆ. ಈ ವಿಚಾರದಲ್ಲಿ ಎಲ್ಲ ಪಕ್ಷಗಳು ಅಜೆಂಡಾ ಮಾಡಿಕೊಂಡು ರಾಜಕಾರಣ (Politics) ಮಾಡುತ್ತಿವೆ. ಇದುವರೆಗೂ ಅವರ ರಾಜಕೀಯ ಆಟ ಯಶಸ್ವಿ ಆಗಿಲ್ಲ. ಮುಂದಿನ ದಿನಗಳಲ್ಲಿಯೂ ಯಶಸ್ವಿ ಆಗುವುದಿಲ್ಲ. ಇನ್ನು ರಾಜ್ಯದಲ್ಲಿ ಕನ್ನಡ ನಾಡು, ನುಡಿ, ನೀರಿನ ಬಗ್ಗೆ ನಾವೆಲ್ಲ ಒಗ್ಗಟ್ಟಾಗಿ ಹೋರಾಟ ಮಾಡುತ್ತೇವೆ. ಮುಂದೆಯೂ ನಾವೆಲ್ಲ ಒಗ್ಗಟ್ಟಾಗಿ (Together) ಹೋರಾಟ ಮಾಡಲು ಸಿದ್ಧರಾಗಿದ್ದೇವೆ. ಕನ್ನಡದ ಗಡಿಯನ್ನು ರಕ್ಷಣೆ ಮಾಡೋ ಸಲುವಾಗಿ ಒಗ್ಗಟಾಗಿ ಇರುತ್ತೇವೆ ಎಂದು ಭರವಸೆ ನೀಡಿದರು.

ಗಡಿವಿವಾದ: ಮಹಾರಾಷ್ಟ್ರ ಸಿಎಂ ನೇತೃತ್ವದಲ್ಲಿ ಇಂದು ಉನ್ನತ ಮಟ್ಟದ ಸ‌ಭೆ!

ಉತ್ತರ ಕರ್ನಾಟಕ ಸಚಿವರು ಭಾಗಿ: ಗಡಿ ವಿವಾದದ ಕುರಿತ ಸಭೆಯಲ್ಲಿ ಭಾಗಿಯಾಗಿದ್ದ ಮಾಜಿ ರಾಜ್ಯ ಸಭಾ ಸದಸ್ಯ ಪ್ರಭಾಕರ್ ಕೋರೆ ಮಾತನಾಡಿ, ಮಹಾರಾಷ್ಟ್ರದಿಂದ ಗಡಿ ವಿಚಾರಕ್ಕೆ ನ್ಯಾಯಾಲಯದಲ್ಲಿ ಕೇಸ್ ಹಾಕಿದೆ. ಈ ಕುರಿತು ಉತ್ತರ ಕರ್ನಾಟಕದ ಸಚಿವರ ಜೊತೆ ಸಭೆ ನಡೆಸಲಾಯಿತು. ಮುಖ್ಯಮಂತ್ರಿ ನೇತೃತ್ವದಲ್ಲಿ ಮುರುಗೇಶ್‌ ನಿರಾಣಿ (Murugesh Nirani), ಅರವಿಂದ ಬೆಲ್ಲದ್ (Aravind Bellad),  ಸೇರಿದಂತೆ ಹಲವರು ಭಾಗಿಯಾಗಿದ್ದರು. ಕರ್ನಾಟಕದಲ್ಲಿ ಹೊಳ್ಳ ಹಾಗೂ ಸುಪ್ರಿಂ ಕೋರ್ಟ್ ನಲ್ಲಿ ರೋಟಗಿ ವಾದ ಮಂಡಿಸಲಿದ್ದಾರೆ. ಪ್ರಕರಣ ಇನ್ನೂ ಅಡ್ಮಿಷನ್‌ (Admission) ಹಂತದಲ್ಲಿದ್ದರೂ, ಮಹಾರಾಷ್ಟ್ರದವರು ರಾಜಕೀಯವಾಗಿ ಬಳಸುತ್ತಿದ್ದಾರೆ. ನಾವು ಎಲ್ಲ ಹೋರಾಟಕ್ಕೂ ಸಿದ್ಧರಾಗಿದ್ದೇವೆ ಎಂದು ಹೇಳಿದರು.
 

Follow Us:
Download App:
  • android
  • ios