Asianet Suvarna News

ಗಡಿ ತೀರದ ಗ್ರಾಮ, ಗಡಿಯಾಚೆಗಿನ ಪ್ರೇಮ; ಮದ್ವೆಯಾದ ನವ ಜೋಡಿ ಅರೆಸ್ಟ್!

  • ಭಾರತದ ಹುಡುಗ, ಬಾಂಗ್ಲಾ ಹುಡುಗಿ, ಆನ್‌ಲೈನ್‌ ಮೂಲಕ ಪ್ರೀತಿ ಆರಂಭ
  • ಮದುವೆಗೆ ನಿರ್ಧರಿಸಿದ ಜೋಡಿಗೆ ಗಡಿಗಳು ಕಾಣಲೇ ಇಲ್ಲ
  • ಬಾಂಗ್ಲಾಗೆ ತೆರಳಿ ಮದುವೆಯಾಗಿ ಭಾರತಕ್ಕೆ ಬಂದಾಗ ಇಬ್ಬರೂ ಅರೆಸ್ಟ್!
Indian youth who married a Bangladeshi girl and cross border illegally both arrested ckm
Author
Bengaluru, First Published Jun 29, 2021, 6:11 PM IST
  • Facebook
  • Twitter
  • Whatsapp

ಪಶ್ಚಿಮ ಬಂಗಾಳ(ಜೂ.28): ಪ್ರೀತಿಗೆ ಮೇಲು ಕೀಳು ಅನ್ನೋ ಭಾವನೆ ಇಲ್ಲ, ಬಡವ ಶ್ರೀಮಂತ ಅನ್ನೋ ಆಂತರವಿಲ್ಲ, ಶತ್ರು ರಾಷ್ಟ್ರ, ಗಡಿ ಅನ್ನೋ ಪರಿಕಲ್ಪನೆ ಇಲ್ಲ. ಹೀಗೆ ಗಡಿ ನೋಡೆದೆ ಸಾಮಾಜಿಕ ಜಾಲತಾಣದಲ್ಲಿ ಪ್ರೀತಿಯಲ್ಲಿ ಮುಳುಗಿದ ಜೋಡಿ   ಹೆಚ್ಚಿನ ಅಡೆ ತಡೆ ಇಲ್ಲದೆ ಮದುವೆಯಾಗಿದೆ. ಆದರೆ ಮದುವೆಯಾಗಿ ಮನೆಗೆ  ಮರಳಿದ ಜೋಡಿ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.

ಮಹಿಳೆಗೆ ಬಹು ಗಂಡಂದಿರನ್ನು ಮದ್ವೆಯಾಗಲು ಅವಕಾಶ; ಪ್ರಸ್ತಾವನೆ ಮುಂದಿಟ್ಟ SA ಗೃಹ ಇಲಾಖೆ!

ಪಶ್ಚಿಮ ಬಂಗಾಳದ ನಾಡಿಯ ಜಿಲ್ಲೆಯ ಹುಡುಗ ಜಯಕಾಂತೋ ಚಂದ್ರ ರೇ. ವಯಸ್ಸು 24. ಲಾಕ್‌ಡೌನ್ ಕಾರಣ ತನ್ನ ಕೂಲಿ ಕೆಲಸಕ್ಕೂ ಕತ್ತರಿ ಬಿತ್ತು  ಹೊರಗಡೆ ಓಡಾಡೋ ಹಾಗಿಲ್ಲ. ಮನೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕಾಲಕಳೆಯುತ್ತಿದ್ದ ಜಯಕಾಂತೋಗೆ, ಒಬ್ಬಳು ಪರಿಚಯವಾಗಿದ್ದಾಳೆ. 

ಚಾಟಿಂಗ್ ಆರಂಭ. ಪರಿಚಯ ಗೆಳೆತನವಾಗಿ, ಸ್ನೇಹವಾಗಿ, ಕೊನೆಗೆ ಮದುವೆ ಅರ್ಥ ಪಡೆಯವ ಮಟ್ಟಕ್ಕೆ ಹೋಯಿತು. ಜಯಕಾಂತೋ ಪ್ರೀತಿಸಿದ ಹುಡುಗಿ ಮನೆ ಹೆಚ್ಚಿನ ದೂರ ಇರಲಿಲ್ಲ. ಆದರೆ ಆಕೆ ಬಾಂಗ್ಲಾದೇಶದ ಪ್ರಜೆ. ಇಬ್ಬರದ್ದೂ ಗಡಿ ತೀರದ ಗ್ರಾಮ. ಆದರೆ ಗಡಿಯಾಚೆಗಿನ ಪ್ರೇಮ.

ಫೇಸ್‌ಬುಕ್‌ನಲ್ಲೇ ಲವ್‌: ಬಾಲಕನನ್ನ ವರಿಸಿದ 20 ವರ್ಷದ ಯುವತಿ..!.

ಇಬ್ಬರೂ ಮುದಯಾಗಲು ನಿರ್ಧರಿಸಿದ್ದಾರೆ. ಆದರೆ ಕೂಲಿ ಕೆಲಸ ಮಾಡತ್ತಿರುವ ಜಯಕಾಂತೋ ಬಳಿ ಆಧಾರ ಕಾರ್ಡ್, ಗುರುತಿನ ಚೀಟಿ ಹೊರತು ಪಡಿಸಿದರೆ, ಪಾಸ್‌ಪೋರ್ಟ್ ಸೇರಿದಂತೆ ಯಾವೂದು ಇಲ್ಲ. ಆಕೆಯದ್ದು ಇದೇ ಕತೆ. ಇನ್ನು ಪಾಸ್‌ಪೋರ್ಟ್ ಮಾಡಿ ನಿಯಮ ಪ್ರಕಾರ ಬಾಂಗ್ಲಾದಿಂದ ಆಕೆಯನ್ನು ಭಾರತಕ್ಕೆ ಕರೆತರಲು ಹೆಚ್ಚಿನ ಸಮಯ ಹಿಡಿಯಲಿದೆ. ಜೊತೆಗೆ ಕೊರೋನಾ ಕಾರಣ ಅಂತಾರಾಷ್ಟ್ರೀಯ ಪ್ರಯಾಣ ನಿರ್ಬಂಧವಿದೆ.  

ಇದಕ್ಕಾಗಿ ಬ್ರೋಕರ್ ಒಬ್ಬರನ್ನು ಜಯಕಾಂತೋ ಸಂಪರ್ಕಿಸಿದ್ದಾನೆ. ಈ ಬ್ರೋಕರ್ ಭಾರತದಿಂದ ಬಾಂಗ್ಲಾಗೆ, ಬಾಂಗ್ಲಾದಿಂದ ಭಾರತಕ್ಕೆ ಯಾವುದೇ ದಾಖಲೆಗಳಿಲ್ಲದೆ ಜನರನ್ನು ಕಳುಹಿಸುವಲ್ಲಿ ಪರಿಣಿತ. ಒಂದಷ್ಟ ಹಣ ನೀಡಿದರೆ ಸಾಕು. ಕೆಲಸ ಸುಲಭ. ಹೀಗೆ ಈ ಬ್ರೋಕರ್ ಸಹಾಯದಿಂದ ಜಯಕಾಂತೋ ಯಾವುದೇ ದಾಖಲೆ ಪತ್ರಗಳಿಲ್ಲದೆ ಬಾಂಗ್ಲಾ ಗಡಿ ಪ್ರವೇಶಿಸಿ ಒಳನುಗ್ಗಿದ್ದಾನೆ. ಮಾರ್ಚ್ 8 ರಂದು ಈತ ಬಾಂಗ್ಲಾದೇಶಕ್ಕೆ ತೆರಳಿ, ಆಕೆಯ ಗ್ರಾಮಕ್ಕೆ ತೆರಳಿದ್ದಾನೆ.

ಕನ್ನಡಕ ಧರಿಸದೆ ಪತ್ರಿಕೆ ಓದಲು ಹುಡುಗ ವಿಫಲ; ಮದುವೆ ಕ್ಯಾನ್ಸಲ್ ಮಾಡಿದ ವಧು!.

ಮಾರ್ಚ್ 10 ರಂದು ಜಯಕಾಂತೋ ಬಾಂಗ್ಲಾ ಹುಡುಗಿಯನ್ನು ಮದುವೆಯಾಗಿದ್ದಾನೆ. ಕೊರೋನಾ ಕಾರಣ ಬಾಂಗ್ಲಾದೇಶದಲ್ಲಿ ಯಾರೂ ಮನೆಯಿಂದ ಹೊರಬರುವಂತಿರಲಿಲ್ಲ. ಹೀಗಾಗಿ ಇದು ಈತನಿಗೆ ವರದಾನವಾಯಿತು. ಮಾರ್ಚ್‌ ನಿಂದ ಜೂನ್ 25ರ ವರೆಗೆ ಯಾರ ಅನುಮಾನಕ್ಕೂ ಬರದೆ, ಯಾರಿಗೂ ತಿಳಿಯದೆ ಬಾಂಗ್ಲಾದೇಶದಲ್ಲಿದ್ದ. ಬಳಿಕ ಜೂನ್ 26ಕ್ಕೆ ಭಾರತ-ಬಾಂಗ್ಲಾ ಗಡಿ ಮೂಲಕ ನವ ಜೋಡಿಗಳು ಮೆಲ್ಲನೆ ಒಳ ನುಸುಳಿದ್ದಾರೆ.

 

ಬಾಂಗ್ಲಾ ಗಡಿ ಗ್ರಾಮದ ಒರ್ವನಿಗೆ 10,000 ಬಾಂಗ್ಲಾದೇಶಿ ಟಾಕಾ ಹಣ ನೀಡಿ ಭಾರತದೊಳಕ್ಕೆ ನುಸುಳಿದ್ದಾರೆ. ಇವರ ಭಾರತ ಪ್ರವೇಶಕ್ಕೆ ಬಾಂಗ್ಲಾ ಗಾಮದ ಓರ್ವ ನೆರವಾಗಿದ್ದಾನೆ. ಈ ಜೋಡಿಗಳು ಬಾರ್ಡರ್ ರಸ್ತೆಯಲ್ಲಿ ನಡೆದುಕೊಂಡು ಗ್ರಾಮ ಸೇರಲು ಧಾವಂತದಲ್ಲಿ ಹೆಜ್ಜೆ ಇಟ್ಟಿದ್ದಾರೆ.  ಆದರೆ ಮಧುಪುರ ಗಡಿಯಲ್ಲಿ ಗಸ್ತು ತಿರುಗುತ್ತಿದ್ದ BSF ಯೋಧರು ಇವರನ್ನು ಗಮನಿಸಿದ್ದಾರೆ.

ತಕ್ಷಣವೇ ವಶಕ್ಕೆ ಪಡೆದ ಜೋಡಿಗಳನ್ನು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಫೇಸ್‌ಬುಕ್ ಮೂಲಕ ಪರಿಚಯವಾದ ಈಕೆಯನ್ನ ವರಿಸಲು ಬಾಂಗ್ಲಾದೇಶಕ್ಕೆ ತೆರಳಿರುವುದಾಗಿ ಹೇಳಿದ್ದಾನೆ. ಇದೀಗ ಅಲ್ಲಿಂದ ಗ್ರಾಮದ ಓರ್ವನ ನೆರವಿನೊಂದಿಗೆ ಭಾರತಕ್ಕೆ ಮರಳಿರುವುದಾಗಿ ಹೇಳಿದ್ದಾನೆ.  ವಿಚಾರಣೆ ಬಳಿಕ  BSF ಯೋಧರು ಭಿಮ್‌ಪುರ್ ಪೊಲೀಸ್ ಠಾಣೆಗೆ ನವ ಜೋಡಿಗಳನ್ನು ಹಸ್ತಾಂತರಿಸಿದ್ದಾರೆ.

ಸರಿಸುಮಾರು 3 ತಿಂಗಳು ಬಾಂಗ್ಲಾದೇಶದಲ್ಲಿ ಯಾವುದೇ ದಾಖಲೆ ಇಲ್ಲದೆ ಸಮಸ್ಯೆಯಾಗಲಿಲ್ಲ. ಆದರೆ ನನ್ನ ದೇಶದಲ್ಲಿ ನನ್ನ ಹಾಗೂ ಪತ್ನಿಯನ್ನು ಬಂಧಿಸಲಾಗಿದೆ. ನಮಗೆ ಬಿಡುಗಡೆ ಭಾಗ್ಯ ನೀಡಿ ಎಂದು ಜಯಕಾಂತೋ ಮನವಿ ಮಾಡಿದ್ದಾನೆ.

Follow Us:
Download App:
  • android
  • ios