Asianet Suvarna News Asianet Suvarna News

ಮಹಿಳೆಗೆ ಬಹು ಗಂಡಂದಿರನ್ನು ಮದ್ವೆಯಾಗಲು ಅವಕಾಶ; ಪ್ರಸ್ತಾವನೆ ಮುಂದಿಟ್ಟ SA ಗೃಹ ಇಲಾಖೆ!

  • ಮಹಿಳೆಯರಿಗೆ ಒಂದಕ್ಕಿಂತ ಹೆಚ್ಚು ಮದುವೆಯಾಗಲು ಅವಕಾಶ
  • ಹೊಸ ಕಾನೂನು ಜಾರಿಗೆ ತರಲು ಗೃಹ ವ್ಯವಹಾರ ಇಲಾಖೆ ಸಜ್ಜು
  • ಮಹಿಳೆಯರಿಗೆ ಪುರುಷರಷ್ಟೆ ಸಮಾನತೆ ಬೇಕು ಎಂಬ ವಾದಕ್ಕೆ ಈ ಕಾನೂನು
South Africa will be allowed to marry more than one husband for equality ckm
Author
Benggaulu, First Published Jun 29, 2021, 5:36 PM IST

ಪ್ರೆಟೋರಿಯಾ(ಜೂ.29): ಪುರಷರಿಗಿರುವ ಸವಲತ್ತುಗಳು, ಸೌಲಭ್ಯಗಳೂ ಮಹಿಳೆಯರಿಗೂ ಬೇಕು, ಲಿಂಗ ತಾರತಮ್ಯ ಇರಲೇಬಾರದು, ಸಮಾನತೆ ಇರಬೇಕು ಅನ್ನೋ ವಾದ ಎಲ್ಲಾದೇಶಗಳಲ್ಲೂ ಇದೆ. ಇದೀಗ ಸೌತ್ ಆಫ್ರಿಕಾ ತಮ್ಮ ದೇಶದಲ್ಲಿ ಪುರುಷರಿಗಿರುವ ಕೆಲ ವಿಶೇಷತ ಸವಲತ್ತುಗಳನ್ನು ಇದೀಗ ಮಹಿಳೆಯರಿಗೂ ನೀಡಲು ಗೃಹ ವ್ಯವಹಾರ ಇಲಾಖೆ ಮುಂದಾಗಿದೆ. ಇದರ ಪರಿಣಾಮ ಮಹಿಳೆಯರು ಒಂದಕ್ಕಿಂತ ಹೆಚ್ಚು ಮದುವೆಯಾಗಲು, ಅಥವಾ ಪುರುಷನೊಂದಿಗೆ ಜೀವನ ನಡೆಸಲು ಅವಕಾಶ ನೀಡಲು ಮುಂದಾಗಿದೆ.

ಹಾರ ಹಾಕಲು ಎತ್ತಿದಾತನಿಗೆ ಕೂಡಲೇ ಕಪಾಳ ಮೋಕ್ಷ ಮಾಡಿದ ವಧು!.

ಸೌತ್ ಆಫ್ರಿಕಾದ ಮ್ಯಾರೇಜ್ ಆ್ಯಕ್ಟ್‌ನಲ್ಲಿ ಸಮಾನತೆ ಇಲ್ಲ ಎಂದು ಹಲವು ಹೋರಾಟ, ಪ್ರತಿಭಟನೆಗಳು ನಡೆದಿದೆ. ಸೌತ್ ಆಫ್ರಿಕಾದಲ್ಲಿ ಪುರುಷರಿಗೆ ಒಂದಕ್ಕಿಂತ ಹೆಚ್ಚು ಮದುವೆಯಾಗಲು ಅವಕಾಶಗಳಿವೆ. ಆದರೆ ಮಹಿಳೆಗಿಲ್ಲ.  ಹಲವು ದಶಗಳಿಂದ ನಡೆಯುತ್ತಿದ್ದ ಈ ಹೋರಾಟಕ್ಕೆ ಸೌತ್ ಆಫ್ರಿಕಾ ಗೃಹ ಇಲಾಖೆ ಸ್ಪಂದಿಸಿದೆ. ಆದರೆ ಸ್ಪಂದನೆ ಕೊಂಚ ಡಿಫ್ರೆಂಟ್ ಆಗಿದೆ. ಕಾರಣ ಹೋರಾಟಗಾರರು ಒಂದಕ್ಕಿಂತ ಹೆಚ್ಚು ಮದುವೆಯಾಗುವ ನಿಯಮವನ್ನು ತೆಗೆದುಹಾಕಬೇಕು ಅನ್ನೋ ವಾದವನ್ನು ಬದಿಗಿಟ್ಟು, ಸಮಾನತೆ ತರಲು ಇದೀಗ ಇದೇ ಅಧಿಕಾರವನ್ನು ಮಹಿಳೆಯರಿಗೂ ನೀಡಲಾಗಿದೆ.  ಪರಿಣಾಮ ಮಹಿಳೆಯರಿಗೂ ಒಂದಕ್ಕಿಂತ ಹೆಚ್ಚು ಪುರಷರ ಜೊತೆ ಏಕಕಾಲದಲ್ಲಿ ಜೀವನ ನಡೆಸಲು ಅವಕಾಶ ನೀಡಲು ಮ್ಯಾರೇಜ್ ಆ್ಯಕ್ಟ್‌ಗೆ ತಿದ್ದುಪಡಿ ತಂದಿದೆ.

ಫೇಸ್‌ಬುಕ್‌ನಲ್ಲೇ ಲವ್‌: ಬಾಲಕನನ್ನ ವರಿಸಿದ 20 ವರ್ಷದ ಯುವತಿ..!.

ಈ ಹೊಸ ಪ್ರಸ್ತಾವನೆಯನ್ನು ಗೃಹ ವ್ಯವಾಹರ ಇಲಾಖೆ ಮುಂದಿಟ್ಟಿದೆ. ಈ ಪ್ರಸ್ತಾವನೆಗೂ ಭಾರಿ ವಿರೋಧ ವ್ಯಕ್ತವಾಗಿದೆ. ಇದರಿಂದ ಸಂಬಂಧಗಳು ಹೆಚ್ಚು ದಿನ ಇರುವುದಿಲ್ಲ. ಇದು ಆಫ್ರಿಕಾ ಸಂಸ್ಕೃತಿಯಲ್ಲ ಎಂದು ಆಫ್ರಿಕನ್ ಕ್ರಿಸ್ಟಿಯನ್ ಡಮೋಕ್ರಟಿಕ್ ಪಾರ್ಟಿ ನಾಯಕ ಕೆನ್ನೆತ್ ಮೆಶೋ ಹೇಳಿದ್ದಾರೆ.

ಈ ರೀತಿಯ ಏಕಕಾಲಕ್ಕೆ ಹಲವು ಪುರಷರನ್ನು ವಿವಾಹವಾಗಿ ಜೀವನ ನಡೆಸಲು ಅವಕಾಶ ನೀಡುವುದರಿಂದ ಅವರ ಮಕ್ಕಳ ತಂದೆ ಯಾರನ್ನು ತಂದೆ ಎಂದು ಕರೆಯುತ್ತಾರೆ? ಮಕ್ಕಳ ಮಾನಸಿಕ ಸಮಸ್ಯೆ ಕುರಿತು ಆಲೋಚನೆ ಮಾಡದೆ ಈ ರೀತಿಯ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತವಲ್ಲ ಎಂದು ಕೆನ್ನೆತ್ ಹೇಳಿದ್ದಾರೆ.
 

Follow Us:
Download App:
  • android
  • ios