ನವ​ದೆ​ಹ​ಲಿ(ಸೆ.21):  ಸೋಮ​ವಾ​ರ​ದಿಂದ 40 ‘ತ​ದ್ರೂಪಿ ರೈಲು’ (ಕ್ಲೋನ್‌ ಟ್ರೇನ್‌) ಸಂಚಾರ ಆರಂಭಿ​ಸಲಿವೆ. ವೇಟಿಂಗ್‌ ಲಿಸ್ಟ್‌ನಲ್ಲಿ​ರುವ ಪ್ರಯಾ​ಣಿ​ಕರು ಹಾಗೂ ಕೊನೇ ಕ್ಷಣ​ದಲ್ಲಿ ಪ್ರಯಾ​ಣದ ಪ್ಲ್ಯಾನ್‌ ಮಾಡಿ​ಕೊ​ಳ್ಳು​ವ​ವ​ರಿಗೆ ಇದ​ರಿಂದ ನೆರ​ವಾ​ಗ​ಲಿ​ದೆ.

ಅಧಿವೇಶನ: ಕಡ್ಡಾಯ ಟೆಸ್ಟ್‌ನಲ್ಲಿ ಸಚಿವ ಸರೇಶ್‌ ಅಂಗಡಿಗೆ ಕೊರೋನಾ ದೃಢ

ಮೂಲ ರೈಲಿನ ನಿಗ​ದಿತ ಸಮ​ಯದ ಮುನ್ನ ಹಾಗೂ ಮೂಲ ರೈಲಿ​ನ ಸಂಖ್ಯೆ​ಯಲ್ಲೇ ತದ್ರೂಪಿ ರೈಲು ಸಂಚಾರ ಆರಂಭಿ​ಸು​ತ್ತದೆ. ಮೂಲ ರೈಲು ತಲು​ಪುವ ನಿಗದಿತ ಸಮ​ಯದ 2-3 ತಾಸು ಮೊದಲೇ ಇದು ಗಮ್ಯ ಸ್ಥಳ ತಲು​ಪು​ತ್ತದೆ. ಮೂಲ ರೈಲಿ​ಗಿಂತ ಕಡಿಮೆ ನಿಲು​ಗಡೆ ಹಾಗೂ ಹೆಚ್ಚು ವೇಗ ಹೊಂದಿ​ರು​ತ್ತದೆ. ಇವುಗ​ಳಲ್ಲಿ ಹೆಚ್ಚಿನವು 3 ಟಯರ್‌ ಎಸಿ ಕೋಚ್‌ ಹೊಂದಿ​ರುವ ರೈಲುಗ​ಳಾ​ಗಿ​ವೆ ಎಂದು ರೈಲ್ವೆ ಅಧಿ​ಕಾ​ರಿ​ಗಳು ತಿಳಿ​ಸಿ​ದ್ದಾ​ರೆ. ಕ್ಲೋನ್‌ ರೈಲು​ಗ​ಳಿಗೆ ರೈಲು ಸಂಚ​ರಿ​ಸುವ 10 ದಿನದ ಮುನ್ನ ಟಿಕೆಟ್‌ ಬುಕ್‌ ಮಾಡಲು ಅವ​ಕಾ​ಶ​ವಿ​ದೆ. ಬುಕ್ಕಿಂಗ್‌ ಸೆ.19ರಿಂದಲೇ ಆರಂಭ​ವಾ​ಗಿ​ದೆ.

ಕರ್ನಾಟಕದ ರೈಲುಗಳು:

ವಾಸ್ಕೋ- ಹಜರತ್‌ ನಿಜಾಮುದ್ದೀನ್‌ (ಬೆಳಗಾವಿ ಮೂಲಕ), ಬೆಂಗಳೂರು- ದಾನಾಪುರ, ಯಶವಂತಪುರ- ನಿಜಾಮುದ್ದೀನ್‌

ಬೆಂಗ್ಳೂರು-ಮೈಸೂರು ಸೇರಿ 80 ವಿಶೇಷ ರೈಲು: ಟಿಕೆಟ್ ಬುಕ್ಕಿಂಗ್ ಇಂದಿನಿಂದ ಆರಂಭ

ಕರ್ನಾಟಕದಲ್ಲಿ ಸಂಚರಿಸುವ 6 ಕ್ಲೋನ್‌ ರೈಲು

- ವಾಸ್ಕೋ-ಹಜರತ್‌ ನಿಜಾಮುದ್ದೀನ್‌ (ದಿಲ್ಲಿ) ಗೋವಾ ಎಕ್ಸ್‌ಪ್ರೆಸ್‌ ರೈಲು ಬೆಳಗಾವಿ ಮಾರ್ಗವಾಗಿ ಸಂಚಾರ. ಪ್ರತಿ ಶುಕ್ರವಾರ ಮಧ್ಯಾಹ್ನ 12.30ಕ್ಕೆ ವಾಸ್ಕೋದಿಂದ ಯಾನ. ರೈಲಿನ ಸಂಖ್ಯೆ 07379.

- ಹಜ​ರ​ತ್‌ ನಿಜಾ​ಮು​ದ್ದೀನ್‌-ವಾಸ್ಕೋ ರೈಲು ಪ್ರತಿ ಭಾನುವಾರ ಮಧ್ಯಾಹ್ನ 1ಕ್ಕೆ ನಿಜಾಮುದ್ದೀನ್‌ನಿಂದ ಸಂಚಾ​ರ. ಬೆಳಗಾವಿ ಮಾರ್ಗವಾಗಿ ಯಾನ. ರೈಲಿನ ಸಂಖ್ಯೆ 07380.

- ಬೆಂಗಳೂರು-ದಾನಾಪುರ (ಪಟನಾ) ರೈಲು ಪ್ರತಿ ಸೋಮವಾರ ಬೆಳಗ್ಗೆ 8ಕ್ಕೆ ಬೆಂಗಳೂರಿನಿಂದ ಸಂಚಾ​ರ. ರೈಲು ಸಂಖ್ಯೆ 06509.

- ದಾನಾಪುರ-ಬೆಂಗಳೂರು ರೈಲು ಪ್ರತಿ ಬುಧವಾರ ದಾನಾಪುರದಿಂದ ಮುಂಜಾನೆ ಸಂಜೆ 6.10ಕ್ಕೆ ಸಂಚಾ​ರ. ರೈಲು ಸಂಖ್ಯೆ 06510.

- ಯಶವಂತಪುರ-ನಿಜಾಮುದ್ದೀನ್‌ ಎಕ್ಸ್‌ಪ್ರೆಸ್‌ ಪ್ರತಿ ಬುಧವಾರ ಹಾಗೂ ಶನಿವಾರ ಯಶವಂತಪುರದಿಂದ ಮಧ್ಯಾಹ್ನ 1.55ಕ್ಕೆ ಸಂಚಾ​ರ. ಹುಬ್ಬಳ್ಳಿ, ಬೆಳಗಾವಿಯಲ್ಲಿ ನಿಲುಗಡೆ. . ರೈಲು ಸಂಖ್ಯೆ 06523

- ನಿಜಾಮುದ್ದೀನ್‌-ಯಶವಂತಪುರ ರೈಲು ಪ್ರತಿ ಶನಿವಾರ ಹಾಗೂ ಮಂಗಳವಾರ ಬೆಳಗ್ಗೆ 8.45ಕ್ಕೆ ನಿಜಾಮುದ್ದೀನ್‌ನಿಂದ ಸಂಚಾ​ರ. ಬೆಳಗಾವಿ, ಹುಬ್ಬಳ್ಳಿಯಲ್ಲಿ ನಿಲುಗಡೆ. ರೈಲು ಸಂಖ್ಯೆ 06524.