ರೈಲ್ವೇ ಇಲಾಖೆ 40 ಜೋಡಿ ರೈಲುಗಳು ಅಂದರೆ ಸುಮಾರು 80 ಹೊಸ ರೈಲುಗಳನ್ನು ಘೋಷಿಸಿತ್ತು. ಆ ರೈಲುಗಳಿಗೆ ಇಂದಿನಿಂದ ಮುಂಗಡ ಟಿಕೆಟ್ ಕಾಯ್ದಿರಿಸುವಿಕೆ ಆರಂಭವಾಗಲಿದೆ. ಈ ವಿಶೇಷ ರೈಲುಗಳು ಸೆ.12ರಿಂದ ಪ್ರಯಾಣ ಆರಂಭಿಸಲಿವೆ. ಇವುಗಳು ಸಂಪೂರ್ಣವಾಗಿ ಕಾಯ್ದಿರಿಸಲಾಗುವ ರೈಲುಗಳಾಗಿವೆ.

ಈಗಾಗಲೇ ಸೇವೆಯಲ್ಲಿರುವ 230 ರೈಲುಗಳಿಗೆ ಹೊಸ 80 ರೈಲು ಸೇರ್ಪಡೆಯಾಗಲಿದೆ ಎಂದು ಇಂಡಿಯನ್ ರೈಲ್ವೇಸ್ ಸಿಇಒ ಯಾದವ್ ತಿಳಿಸಿದ್ದಾರೆ. ಸಾಮಾನ್ಯ ರೈಲುಗಳ ಸಮಯದಂತೆಯೇ ಈ ರೈಲುಗಳ ಸಮಯವಿರಲಿದೆ.

ಡೆಂಘೀ ನಿಯಂತ್ರಣಕ್ಕೆ ವಿಶೇಷ ರೈಲು..! ರೈಲಿನಿಂದಲೇ ರಾಸಾಯನಿಕ ಸಿಂಪಡಣೆ

ನಿಲುಗಡೆಗಳನ್ನು ನಿರ್ಬಂಧಿಸಲಿದ್ದು ಆಯಾ ರಾಜ್ಯ ಸರ್ಕಾರದೊಂದಿಗೆ ಚರ್ಚಿಸಿ ಈ ಬಗ್ಗೆ ನಿರ್ಧರಿಸಲಾಗುತ್ತದೆ. ಮಾರ್ಚ್ 25ರಿಂದ ದೇಶಾದ್ಯಂತ ಲಾಕ್‌ಡೌನ್‌ನಿಂದಾಗಿ ಪ್ರಯಾಣಿಕ ಸೇವಾ ರೈಲುಗಳ ಸೇವೆ ಸ್ಥಗಿತವಾಗಿತ್ತು.

ಮೇ ಒಂದರಿಂದ ಶ್ರಮಿಕ್ ರೈಲುಗಳು ಕಾರ್ಮಿಕರಿಗಾಗಿ ಸೇವೆ ಆರಂಭಿಸಿತ್ತು. ಹೊಸ ರೈಲು ದೆಹಲಿ-ಇಂದೋರ್, ಯಶವಂತಪುರ-ಗೋರಾಕ್‌ಪುರ್, ಪುರಿ-ಅಹಮದಾಬಾದ್, ನವದೆಹಲಿ-ಬೆಂಗಳೂರು ಮಾರ್ಗದಲ್ಲಿ ಸಂಚರಿಸಲಿದೆ.

ಟಿಕೆಟ್ ಬುಕ್ ಮಾಡುವುದು ಹೇಗೆ..?

ಟಿಕೆಟ್‌ ಕಾಯ್ದಿರಿಸಲು ಐಆರ್‌ಸಿಟಿಸಿ ವೆಬ್‌ಸೈಟ್ ಅಥವಾ ಎಪ್ಲಿಕೇಷನ್ ಡೌನ್‌ಲೋಡ್ ಮಾಡಿ. ನಂತರ ರಿಜಿಸ್ಟರ್ ಬಟನ್ ಕ್ಲಿಕ್ ಮಾಡಿ, ಕ್ರಿಯೇಟ್ ಐಆರ್‌ಸಿಟಿಸಿ ಎಕೌಂಟ್ ಆಯ್ಕೆ ಮಾಡಿ.

ಇಂದಿನಿಂದ ಪೂರ್ಣಾವಧಿ ಮೆಟ್ರೋ ರೈಲು ಸಂಚಾರ

ಈಗಾಗಲೇ ಎಕೌಂಟ್ ಇದ್ದರೆ ಲಾಗ್‌ಇನ್ ಆದರೆ ಸಾಕು. ನಂತರ ಒಳಗಿನ ಪುಟದಲ್ಲಿ ಬುಕ್ ನೌ ಆಪ್ಶನ್ ನೋಡಿ ಅಗತ್ಯ ಬದಲಾವಣೆಗಳನ್ನು ಮಾಡಿಕೊಂಡು ಟಿಕೆಟ್ ಬುಕ್ ಮಾಡಿ.