ಅಧಿವೇಶನ ಆರಂಭಕ್ಕೆ ಎರಡು ದಿನಗಳ ಮುನ್ನವೇ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್​ ಅಂಗಡಿ ಅವರಿಗೆ ಕೊರೋನಾ ಸೋಂಕು ತಗುಲಿದೆ.

ಬೆಂಗಳೂರು, (ಸೆ.11): ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್​ ಅಂಗಡಿ ಅವರಿಗೂ ಕೊರೋನಾ ಸೋಂಕು ದೃಢಪಟ್ಟಿದೆ. 

ಸೆಪ್ಟೆಂಬರ್‌ 14ರಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭಗೊಳ್ಳಲಿದ್ದು, ಹಾಜರಾಗುವ ಸಂಸದರಿಗೆ, ಸಚಿವರಿಗೆ ಕೊರೋನಾ ಟೆಸ್ಟ್ ಕಡ್ಡಾಯಗೊಳಿಸಿದ್ದ ಸ್ಪೀಕರ್ ಆದೇಶಿಸಿದ್ದರು.

ಅದರಂತೆ ಇಂದು ಪರೀಕ್ಷೆ ಮಾಡಿಕೊಂಡ ಸುರೇಶ್ ಅಂಗಡಿ ಅವರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, ದೆಹಲಿಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಸಿಎಂ ರಾಜಕೀಯ ಕಾರ್ಯದರ್ಶಿಗೆ ಕೊರೋನಾ: ಬಿಎಸ್‌ವೈ ಸೇರಿದಂತೆ ಹಲವು ಸಚಿವರಿಗೆ ಆತಂಕ

ಈ ಬಗ್ಗೆ ಟ್ವೀಟ್ ಮಾಡಿರುವ ಸುರೇಶ್ ಅಂಗಡಿ, ನಾನು ಕೊವಿಡ್​-19 ತಪಾಸಣೆಗೆ ಒಳಗಾಗಿದ್ದೇನೆ. ನನಗೆ ರೋಗದ ಯಾವುದೇ ಲಕ್ಷಣಗಳೂ ಇಲ್ಲ. ಆದರೂ ವೈದ್ಯರ ಸಲಹೆ ಪಡೆಯುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಅಷ್ಟೇ ಅಲ್ಲ, ಇತ್ತೀಚೆಗೆ ನನ್ನ ಸಂಪರ್ಕದಲ್ಲಿರುವವರು ಕೊವಿಡ್​ ಪರೀಕ್ಷೆ ಮಾಡಿಸಿಕೊಳ್ಳಿ. ನಿಮ್ಮ ಆರೋಗ್ಯದ ಬಗ್ಗೆ ನಿಗಾ ವಹಿಸಲು ವಿನಂತಿಸಿಕೊಳ್ಳುತ್ತೇನೆ ಎಂದಿದ್ದಾರೆ. ಹಾಗೇ ಪ್ರಧಾನಮಂತ್ರಿ ಕಚೇರಿಯನ್ನೂ ಟ್ಯಾಗ್​ ಮಾಡಿದ್ದಾರೆ.

Scroll to load tweet…