ನವದೆಹಲಿ(ಜು.03): ಕಳೆದೊಂದು ತಿಂಗಳಿನಿಂದ ಲಡಾಖ್ ಪ್ರಾಂತ್ಯದಲ್ಲಿನ ಭಾರತ ಚೀನಾ ಗಡಿಯಲ್ಲಿ ಘರ್ಷಣೆ, ಅತಿಕ್ರಮಣ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗಿದೆ. ಭಾರತ ಸೇನೆಯ ಮೇಲೆರಗಿದ ಚೀನಾ ಸೇನೆಗೆ ತಿರುಗೇಟು, 20 ಭಾರತೀಯ ಯೋಧರು ಹುತಾತ್ಮಾರದ ಘಟನೆಗಳು ಗಡಿಯಲ್ಲಿನ ಆತಂಕ ವಾತಾವರಣವನ್ನು ಮತ್ತಷ್ಟು ಹೆಚ್ಚಿಸಿದೆ. ಇದೇ ಸಮಯದಲ್ಲಿ ಪಾಕಿಸ್ತಾನ ಕೂಡ ಗಡಿಯಲ್ಲಿ ಹೆಚ್ಚುವರಿ ಸೇನೆ ನಿಯೋಜಿಸುತ್ತಿದೆ. ಜೊತೆಗೆ ಉಗ್ರರ ಉಪಟಳ ಕೂಡ ಜಮ್ಮ ಕಾಶ್ಮೀರದಲ್ಲಿ ಸದ್ದು ಮಾಡತ್ತಿದೆ. ಚೀನಾ ಹಾಗೂ ಪಾಕಿಸ್ತಾನದ ಮೇಲೆರಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಕೂಡ ಹಲವು ಬಾರಿ ಗಡಿ ನಿಯಮ ಉಲ್ಲಂಘಿಸಿ ಭಾರತದೊಳಕ್ಕೆ ನುಗ್ಗಿದೆ. ಭಾರತೀಯ ಸೇನೆ ಕೂಡ ತಿರುಗೇಟು ನೀಡಿದೆ. 

ಲಡಾಖ್ ಗಡಿಯಲ್ಲಿ ಮೋದಿ ಅಬ್ಬರ, ಭಾರತ ಮಾತೆಯ ವೈರಿಗಳಿಗೆ ಚಳಿಜ್ವರ...

ಕೊರೋನಾ ವೈರಸ್ ಆತಂಕದ ನಡುವೆ ಮೋದಿ ಸರ್ಕಾರಕ್ಕೆ ಚೀನಾ ಹಾಗೂ ಪಾಕಿಸ್ತಾನದ ಗಡಿ ಖ್ಯಾತೆ ತಲೆನೋವಾಗಿ ಪರಿಣಮಿಸಿದೆ. ಕೊರೋನಾ ಹೋರಾಟದ ನಡವೆ ಪ್ರಧಾನಿ ನರೇಂದ್ರ ಮೋದಿ ದಿಢೀರ್ ಲಡಾಖ್ ಗಡಿ ಪ್ರದೇಶಕ್ಕೆ ಭೇಟಿ ನೀಡಿ ಚೀನಾ ಸಂಘರ್ಷದ ಮಾಹಿತಿ ಪಡೆದುಕೊಂಡಿದ್ದಾರೆ. ಇಷ್ಟೇ ಅಲ್ಲ ಯೋಧರಲ್ಲಿ ಆತ್ಮವಿಶ್ವಾಸ ತುಂಬಿದ್ದಾರೆ.

ಚೀನಾಕ್ಕೆ ಭಾರತ ಸಡ್ಡು: ಗಲ್ವಾನ್‌ಗೆ ಭೀಷ್ಮ ಟ್ಯಾಂಕರ್!

1947ರ ಸ್ವಾತಂತ್ರ್ಯ ಬಳಿಕ ಭಾರತ ಪಾಕಿಸ್ತಾನ ಹಾಗೂ ಚೀನಾ  ವಿರುದ್ಧ ಒಟ್ಟು 4 ಯುದ್ಧಗಳನ್ನು ಮಾಡಿದೆ. 1962ರ ಚೀನಾ ವಿರುದ್ಧದ ಯುದ್ಧ ಹೊರತು ಪಡಿಸಿದರೆ, ಇನ್ನುಳಿದ ಎಲ್ಲಾ ಹೋರಾಟದಲ್ಲಿ ಭಾರತ ಮೇಲುಗೈ ಸಾಧಿಸಿದೆ. ಆದರೆ 4 ಯುದ್ಧದ ಬಳಿಕ ಭಾರತ ತನ್ನು ಗಡಿಯನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗಿಲ್ಲ. ಪಾಕಿಸ್ತಾನ ಹಾಗೂ ಚೀನಾ ಅತಿಕ್ರಮಣ ಮಾಡಿ, ಭಾರತದ ಭೂಭಾಗದಲ್ಲಿ ಟೆಂಟ್ ಹಾಕಿಕೊಂಡಿದೆ. ಇದೀಗ ಮತ್ತೆ ಅದೇ ತಂತ್ರಗಾರಿಯನ್ನು ಚೀನಾ ಹಾಗೂ ಪಾಕಿಸ್ತಾನ ಬಳಸಿಕೊಳ್ಳುವ ಯತ್ನಕ್ಕೆ ಮುಂದಾಗಿದೆ.

ಭಾರತದ ಗಡಿಯಲ್ಲಿ 20,000 ಪಾಕ್‌ ಸೈನಿಕರ ನಿಯೋಜನೆ!...

ಚೀನಾ ಹಾಗೂ ಪಾಕಿಸ್ತಾನದ ನರಿ ಬುದ್ದಿ ಅರಿತಿರುವ ಭಾರತೀಯ ಸೇನೆ, ಎರಡೂ ಗಡಿಯಲ್ಲಿ ಸನ್ನದ್ಧವಾಗಿದೆ. ಏಕಕಾಲದಲ್ಲಿ ಚೀನಾ ಹಾಗೂ ಪಾಕಿಸ್ತಾನ ದಾಳಿಯನ್ನು ಎದುರಿಸಲು ಸಿದ್ಧವಾಗಿದೆ. ಈ ಕುರಿತು ಸೇನಾ ಮುಖ್ಯಸ್ಥ ಜನರಲ್ ಮುಕುಂದ್ ನರವಾನೆ ಈ ಹಿಂದೆ ಎರಡೂ ಗಡಿಯನ್ನು ರಕ್ಷಿಸಲು ಭಾರತೀಯ ಸೇನೆ ಸಿದ್ಧ ಎಂದಿದ್ದರು. ಇಷ್ಟೇ ಅಲ್ಲ, ಭಾರತ ಕೇವಲ ಸೇನೆ ಮೂಲಕ ಯುದ್ಧವಲ್ಲ, ರಾಜತಾಂತ್ರಿಕತೆ ಸೇರಿದಂತೆ ಇತರ ವಿಚಾರಗಳು ಯುದ್ಧದಲ್ಲಿ ಪ್ರಮುಖವಾಗುತ್ತದೆ. ಭಾರತ ಎರಡೂ ಗಡಿಯಲ್ಲಿನ ಆಕ್ರಮಣ, ದಾಳಿಯನ್ನು ಸಂಪೂರ್ಣ ಸಾಮರ್ಥ್ಯದೊಂದಿಗೆ ಎದುರಿಸಲು ರೆಡಿ ಎಂದಿದ್ದಾರೆ. 

CRPF ಯೋಧ ಹಾಗೂ ಬಾಲಕನ ಸಾವಿಗೆ ಕಾರಣರಾದ ಉಗ್ರರ ಹತ್ಯೆ; ಸೇಡು ತೀರಿಸಿಕೊಂಡ ಸೇನೆ!...

ಚೀನಾ ಗಡಿ ಸಂಘರ್ಷಕ್ಕೆ ಉತ್ತರ ನೀಡಲು ಭಾರತೀಯ ಸೇನೆ ಸಜ್ಜಾಗಿ ನಿಂತಿದೆ. ಇತ್ತ ಮಾತುಕತೆ ಯತ್ನಗಳು ನಡೆಯುತ್ತಿದೆ. ಇದರ ಜೊತೆಗೆ ರಾಜತಾಂತ್ರಿಕ ಒತ್ತಡಗಳು, ವಿಶ್ವ ಸಮುದಾಯದಲ್ಲಿನ ಕೆಲ ವಿಚಾರಗಳು ಮಹತ್ವದ ಪಾತ್ರ ನಿರ್ವಹಿಸುತ್ತದೆ. ಈ ವಿಚಾರದಲ್ಲಿ ಭಾರತ ಸರ್ಕಾರ ಎಲ್ಲಾ ಮಾರ್ಗಗಳನ್ನು ಅನುಸರಿಸಲಿದೆ. 

ಚೀನಾ ಖ್ಯಾತೆ ಜೊತೆ ಜೊತೆಯಲ್ಲಿ,  ಭಾರತ-ಪಾಕ್ ನಡುವಿನ 742 ಕಿಲೋ ಮೀಟರ್ ಗಡಿಯಲ್ಲೂ ಉದ್ವಿಘ್ನ ವಾತಾವರಣ ನಿರ್ಮಾಣವಾಗಿದೆ.  ಪಾಕಿಸ್ತಾನದ ಅಪ್ರಚೋದಿತ ಗುಂಡಿನ ದಾಳಿಗೆ ಭಾರತ ತಿರುಗೇಟು ನೀಡುತ್ತಲೇ ಇದೆ. ಇದೀಗ ಪಾಕಿಸ್ತಾನ 20,000 ಹೆಚ್ಚುವರಿ ಸೈನಿಕರನ್ನು ಗಡಿಯಲ್ಲಿ ನಿಯೋಜಿಸಿದೆ ಅನ್ನೋ ಮಾಹಿತಿಯೂ ಬಹಿರಂಗವಾಗಿದೆ. 

ಪಾಕಿಸ್ತಾನ ವಿದೇಶಾಂಗ ಇಲಾಖೆ ಭಾರತದ ಮೇಲೆ ಗೂಬೆ ಕೂರಿಸುವ ಯತ್ನ ಮಾಡುತ್ತಿದೆ. ಕಳೆದೊಂದು ವರ್ಷದಲ್ಲಿ ಭಾರತ 1500 ಬಾರಿ ಗಡಿ ನಿಯಮ ಉಲ್ಲಂಘಿಸಿ ಗುಂಡಿ ದಾಳಿ ಮಾಡಿದೆ ಎಂದಿದೆ. ಇದರಿಂದ ಪಾಕ್ ಸೈನಿಕರು, ಪಾಕ್ ನಾಗರೀಕರು ಬಲಿಯಾಗಿದ್ದಾರೆ ಎಂದು ವರದಿ ಬಿಡುಗಡೆ ಮಾಡಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ 6 ತಿಂಗಳಲ್ಲಿ ಭಾರತೀಯ ಸೇನೆ 127 ಉಗ್ರರನ್ನು ಹೊಡೆದುರುಳಿಸಿದೆ. ಪ್ರತಿ ದಿನ ಸರ್ಚ್ ಆಪರೇಶನ್ ಮೂಲಕ ಉಗ್ರರನ್ನು ಹತ್ತಿಕ್ಕುತ್ತಿದೆ. ಗಡಿ ಸಂಘರ್ಷದ ಜೊತೆಗೆ ಭಾರತೀಯ ಸೇನೆ ಉಗ್ರರ ಉಪಟಳವನ್ನು ಎದುರಿಸುತ್ತಿದೆ.

ಪಾಕಿಸ್ತಾನ ಹಾಗೂ ಚೀನಾ ಜಂಟಿಯಾಗಿ ಕಾರ್ಯಚರಣೆ ನಡೆಸಿದರೂ ಆಶ್ಚರ್ಯವಿಲ್ಲ. ಕಾರಣ ಚೀನಾ ಬೆಂಬಲಕ್ಕೆ ನಿಂತಿರುವ ದೇಶಗಲ್ಲಿ ಮುಂಚೂಣಿಯಲ್ಲಿರುವ ಪಾಕಿಸ್ತಾನ ಎಲ್ಲಾ ನೆರವು ನೀಡಲಿದೆ ಅನ್ನೋದು ಬಹಿರಂಗ ಸತ್ಯ. ಭಾರತ ಏಕಾಏಕಿ ಚೀನಾ ಮೇಲೆ ಆಕ್ರಮಣ ಮಾಡುವ ಸಾಧ್ಯತೆಗಳಿಲ್ಲ. ಇಷ್ಟೇ ಅಲ್ಲ ಮಾತುಕತೆ ಮೂಲಕ ಸಮಸ್ಯೆ ಬಗೆ ಹರಿಸಲು ಭಾರತ ಎಲ್ಲಾ ಪ್ರಯತ್ನ ಮಾಡಲಿದೆ. ಆದರೆ ಪಾಕಿಸ್ತಾನ ಗಡಿ ವಿಚಾರ ಹಾಗಲ್ಲ. ಪಾಕ್ ಜೊತೆ ಮಾತುಕತೆ ಸಾಧ್ಯತೆ ಕಡಿಮೆ. ರಾಜತಾಂತ್ರಿಕ ಒತ್ತಡ ಸೇರದಂತೆ ಇತರ ಮಾರ್ಗಗಳನ್ನು ಭಾರತ ಬಳಸಿಕೊಳ್ಳಲಿದೆ. ಚೀನಾ ಹಾಗೂ ಪಾಕಿಸ್ತಾನದ ಗಡಿಯಲ್ಲಿ ಭಾರತಕ್ಕೆ ಸಮಸ್ಯೆ ಎದುರಾಗಿರುವುದು ಆತಂಕಕಾರಿ ವಿಚಾರ ಸ್ಪಷ್ಟ.