ಚೀನಾಕ್ಕೆ ಭಾರತ ಸಡ್ಡು: ಗಲ್ವಾನ್‌ಗೆ ಭೀಷ್ಮ ಟ್ಯಾಂಕರ್!
ಚೀನಾಕ್ಕೆ ಭಾರತ ಸಡ್ಡು: ಗಲ್ವಾನ್‌ಗೆ ಭೀಷ್ಮ ಟ್ಯಾಂಕರ್| 6 ಟಿ-90 ಫಿರಂಗಿಗಳ ನಿಯೋಜಿಸಿದ ಸೇನೆ| ಆಯಕಟ್ಟಿನ ಸ್ಥಳಗಳಲ್ಲಿ ಯೋಧರು ಸನ್ನದ್ಧ
ನವದೆಹಲಿ(ಜು.01): ಪೂರ್ವ ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ಯುದ್ಧೋನ್ಮಾದ ತೋರುತ್ತಿರುವ ಚೀನಾಕ್ಕೆ ಭಾರತ ಮತ್ತೊಂದು ಪ್ರತ್ಯುತ್ತರ ನೀಡಿದೆ. 6 ಟಿ-90 ಭೀಷ್ಮ ಕ್ಷಿಪಣಿ ದಾಳಿ ಟ್ಯಾಂಕ್‌ಗಳು ಹಾಗೂ ಹೆಗಲ ಮೇಲೆ ಇಟ್ಟುಕೊಂಡು ಟ್ಯಾಂಕ್‌ಗಳ ಮೇಲೆ ದಾಳಿ ಮಾಡುವ ಕ್ಷಿಪಣಿ ದಾಳಿ ವ್ಯವಸ್ಥೆಯನ್ನು ನಿಯೋಜನೆ ಮಾಡಿದೆ.
59 ಆ್ಯಪ್ ಬ್ಯಾನ್ ಮಾಡಿದ ಬೆನ್ನಲ್ಲೇ ತುರ್ತು ಸಭೆ ನಡೆಸಿದ ಚೀನಾ ವಿದೇಶಾಂಗ ಇಲಾಖೆ!
ಚೀನಾಕ್ಕೆ ಹೋಲಿಸಿದರೆ ನೈಜ ಗಡಿ ನಿಯಂತ್ರಣ ರೇಖೆ (ಎಲ್‌ಎಸಿ)ಯಲ್ಲಿ ಭಾರತೀಯ ಸೇನೆ ಎತ್ತರದ ಸ್ಥಳದಲ್ಲಿ ನಿಯೋಜನೆಗೊಂಡಿದೆ. ಸೇನೆಯ ಪದಾತಿದಳದ ದಾಳಿ ವಾಹನಗಳ ಜತೆಗೆ 155 ಎಂಎಂ ಹೌವಿಟ್ಜರ್ ಗನ್‌ಗಳನ್ನು ಕೂಡ ಪೂರ್ವ ಲಡಾಖ್‌ನಲ್ಲಿ ನಿಯೋಜನೆ ಮಾಡಲಾಗಿದೆ. ಇದಲ್ಲದೆ ಎರಡು ಟ್ಯಾಂಕ್ ರೆಜಿಮೆಂಟ್‌ಗಳನ್ನೂ ರವಾನಿಸಲಾಗಿದೆ. ತಾನು ತೆಗೆದ ಗಡಿ ಕ್ಯಾತೆಗೆ ಭಾರತ ಹಿಂದೆಂದೂ ನೀಡದಷ್ಟುಪ್ರತಿಕ್ರಿಯೆ ನೀಡುತ್ತಿರುವುದು ಸಹಜವಾಗಿಯೇ ಚೀನಾ ಕಳವಳಕ್ಕೆ ಕಾರಣವಾಗಿರುವ ಸಾಧ್ಯತೆ ಇದೆ.
ಗಡಿಯಲ್ಲಿ ಭಾರಿ ಪ್ರಮಾಣದ ಸೇನೆ ಜಮಾವಣೆ ಮಾಡುವ ಮೂಲಕ ಚೌಕಾಸಿಗೆ ಬರುವ ಒಳ ಸಂಚು ಚೀನಾದ್ದಾಗಿತ್ತು. ಆದರೆ ಒಂದಿಂಚೂ ಜಾಗ ನೀಡುವುದಿಲ್ಲ ಎಂದು ಭಾರತ ಸೇನೆ ನಿಯೋಜನೆ ಮಾಡಿದೆ ಎಂದು ಹೇಳಲಾಗಿದೆ.
59 ಆ್ಯಪ್ ನಿಷೇಧದ ನಂತರ ಚೀನಾಕ್ಕೆ ಕೇಂದ್ರದ ಮತ್ತೊಂದು ಶಾಕ್!
ಚೀನಿಯರಿಗೆ ಸಂಕಷ್ಟ?:
ಚೀನಾಕ್ಕೆ ಹೋಲಿಸಿದರೆ ಗಲ್ವಾನ್ ಕಣಿವೆಯ ಎತ್ತರದ ಭಾಗಗಳಲ್ಲಿ ಭಾರತೀಯ ಯೋಧರು ನಿಯೋಜನೆಗೊಂಡಿದ್ದಾರೆ. ಗಲ್ವಾನ್ ನದಿಯ ಬಳಿ ಚೀನಿಯರು ಟೆಂಟ್ ಹಾಕಿದ್ದಾರೆ. ಈಗಾಗಲೇ ಗಲ್ವಾನ್ ನದಿಯಲ್ಲಿ ನೀರಿನ ಉಷ್ಣಾಂಶ ಮೈನಸ್ 10 ಡಿಗ್ರಿಗೆ ಇಳಿದಿದೆ. ಚಳಿಗಾಲ ಆರಂಭವಾದರೆ ಅಲ್ಲಿ ಚೀನಿಯರು ನೆಲೆಸುವುದೇ ಕಷ್ಟವಾಗುತ್ತದೆ ಎಂದು ಹೇಳಲಾಗಿದೆ.